ಅನುದಿನ‌ಕವನ-೩೧೮, ಕವಿ:ಡಾ.ಸದಾಶಿವ ದೊಡ್ಡಮನಿ, ಇಳಕಲ್, ಕವನದ ಶೀರ್ಷಿಕೆ: ಮತ್ತೇ ಹೋಗುವುದಾದರೆ…

ಮತ್ತೇ ಹೋಗುವುದಾದರೆ…..

ಮತ್ತೇ ಹೋಗುವುದಾದರೆ
ಹೇಳಿ ಹೋಗು
ಎದೆಯ ಗಾಯಗಳೆಲ್ಲ ಮಾಯಲಿ
ಒಮ್ಮೆ ನಕ್ಕು ಹೋಗು

ಹೋಳು ಹೋಳಾದ ಮನಸು
ಹೋರಾಡುತ್ತಲೇ ಇದೆ ಒಳ ಹೊರಗು
ಇರುವುದು ಒಂದೇ ಜನುಮ
ತುಸು ನೋವು ಮರೆಸು

ಕಾರಣಗಳು ಏನೇ ಇರಲಿ
ಕೊಲ್ಲದಿರು ಕನಸು
ಕಾಡ ದಾರಿಯ ಪಯಣ ಹೈರಾಣ!
ನಿನ್ನನೇ ಅರಸಿ ಬರುತ್ತಿದೆ ಮನ್ನಿಸು

-ಡಾ. ಸದಾಶಿವ ದೊಡಮನಿ, ಇಳಕಲ್
*****

Leave a Reply

Your email address will not be published. Required fields are marked *