Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೪೦೫, ಕವಯತ್ರಿ: ಡಾ. ವಾಣಿ ಸಂದೀಪ್, ಲಂಡನ್, ಯು.ಕೆ, ಕವನದ ಶೀರ್ಷಿಕೆ: ಸಮಯ ಓಡುತ್ತಲಿದೆ.... - Karnataka Kahale

ಅನುದಿನ ಕವನ-೪೦೫, ಕವಯತ್ರಿ: ಡಾ. ವಾಣಿ ಸಂದೀಪ್, ಲಂಡನ್, ಯು.ಕೆ, ಕವನದ ಶೀರ್ಷಿಕೆ: ಸಮಯ ಓಡುತ್ತಲಿದೆ….

ಸಮಯ ಓಡುತ್ತಲಿದೆ….

ಸಮಯ ಓಡುತ್ತಲಿದೆ
ತನ್ನ ಕಾರ್ಯ ನಡೆಸುತ್ತಿದೆ
ಬೀಗ ಬಿದ್ದಿದ್ದು “ಓಘ” ಕ್ಕೆ
ಧಾವಂತಕ್ಕೊಂದು ನೀರವತೆ …

ಪ್ರೀತಿಸಿದವರ ನೋಯಿಸಿದಂತಲ್ಲ
ಪ್ರಕೃತಿಯ ನೋಯಿಸುವುದು
ಸಂಪೂರ್ಣ ಮನುಜ ಕುಲವನ್ನೇ
ಅಲ್ಲಾಡಿಸುವುದು …

ನಾವು ಮಾಡಿದ್ದೆಲ್ಲ ನಮ್ಮ
ಬೆನ್ನ ಹಿಂದಿದೆ, ಬದುಕಿನ
ಪಾಠ ಕಲಿಯಬೇಕಿದೆ, ಮನಸು
ತಿಳಿಯಾಗಬೇಕಿದೆ …

ಮರೆತ ಮೌಲ್ಯಗಳ
ನೆನಪಿಸಿಕೊಳ್ಳಬೇಕಿದೆ …

-ಡಾ. ವಾಣಿ ಸಂದೀಪ್, ಲಂಡನ್ ಕನ್ನಡತಿ