ಹಂಪಾಪಟ್ಟಣ ಶರಣ ಬಂಧು‌ ಬಳಗ ಸಂಸ್ಥೆಯಿಂದ ವೀರ ಯೋಧ ಸುನೀಲ್ ವಿಭೂತಿಗೆ ಭಾವಪೂರ್ಣ ಶ್ರದ್ಧಾಂಜಲಿ

ಹಗರಿಬೊಮ್ಮನಹಳ್ಳಿ, ಮೇ ೨೦: ತಾಲೂಕಿನ ಹಂಪಾಪಟ್ಟಣ ಗ್ರಾಮದ ಶರಣ ಬಂಧುಬಳಗ ಸಂಸ್ಥೆಯ ‌ಸದಸ್ಯರು, ಪದಾಧಿಕಾರಿಗಳು ಈಚೆಗೆ ರಸ್ತೆ ಅಪಘಾತದಲ್ಲಿ ಮೃತರಾದ ವಿಜಯಪುರ ಜಿಲ್ಲೆಯ ವೀರಯೋಧ ಸುನೀಲ್ ಭೂಪತಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಸಂತಾಪ‌ ಸಭೆಯಲ್ಲಿ ಮಾತನಾಡಿದ ಸಂಸ್ಥೆಯ‌ ಸಂಚಾಲಕ ನಾಗರಾಜ್ ಗಂಟಿ ಮಾತನಾಡಿ, ಯೋಧ ಸುನಿಲ್ ವಿಭೂತಿ ಯವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವುದು ದುರದೃಷ್ಟಕರ. ಯುವ ಯೋಧನ ಅಕಾಲಿಕ ಆಕಸ್ಮಿಕ ಸಾವು ದೇಶಕ್ಕೆ, ನಾಡಿಗೆ ತುಂಬಲಾರದ ನಷ್ಟ ಎಂದು ದುಃಖಿಸಿದರು.
ಸುನಿಲ್ ವಿಭೂತಿ ಅವರ ದೇಶ ಪ್ರೇಮ, ರಾಷ್ಟ್ರಭಕ್ತಿ ಯುವ ಸಮೂಹಕ್ಕೆ ಸ್ಪೂರ್ಥಿ. ಪ್ರೇರಣೆ ಎಂದರು.
ಯುವ ಚೇತನ ವಿಭೂತಿ ಅವರನ್ನು ಕಳೆದುಕೊಂಡ ಸಮಾಜಕ್ಕೂ ತುಂಬಲಾರದ ನಷ್ಟವಾಗಿದೆ, ಯೋಧನನ್ನು ಕಳೆದುಕೊಂಡ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸಿದರು,
ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು,
ಬಳಿಕ ಮಕ್ಕಳು, ನಾಗರಿಕ ಬಂಧುಗಳು, ದೇಶಭಕ್ತಿಯ ಜೈ ಕಾರಗಳನ್ನು ಕೂಗಿದರು,
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ, ಪೂಜಾರಿ ಮದ್ದಿ ಮಾಯಪ್ಪ, ಬೆಲ್ಲದ ಮಾಯಪ್ಪ, ಗಂಟಿ ಸಣ್ಣ ಮಂಜುನಾಥ, ಪತ್ರಿ ಈರಣ್ಣ, ಎಸ್, ಎಂ, ನಾಗರಾಜ, ಹುಲುಗಪ್ಪ ಮದ್ದಿ, ಎಲ್ಲಪ್ಪ ಮದ್ದಿ, ಎಸ್,ಎಂ ,ವಿಠಲ್. ಸಂತೋಷ್ ಗಂಟಿ, ರಮೇಶ್ ಬೆಲ್ಲದ್, ಎಂ ಸುನಿಲ್, ಮುಸ್ಲಿಂ ಬಾಂಧವರು ಸೇರಿದಂತೆ ಗ್ರಾಮದ ನಾಗರಿಕ ಬಂಧುಗಳು, ಚಿನ್ನರ ಬಳಗ ಚಿಣ್ಣರು ಪಾಲ್ಗೊಂಡಿದ್ದರು.

[ವರದಿ: ನಾಗರಾಜ್ ಗಂಟಿ, ಪತ್ರಿಕೋದ್ಯಮ ವಿದ್ಯಾರ್ಥಿ,
ಹಂಪಾಪಟ್ಟಣ]

Leave a Reply

Your email address will not be published. Required fields are marked *