Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ‌ ಕವನ-೫೨೯, ಕವಿ: ಟಿಪಿ ಉಮೇಶ್, ಹೊಳಲ್ಕೆರೆ ಕವನದ ಶೀರ್ಷಿಕೆ: ನನ್ನ ಹೃದಯ - Karnataka Kahale

ಅನುದಿನ‌ ಕವನ-೫೨೯, ಕವಿ: ಟಿಪಿ ಉಮೇಶ್, ಹೊಳಲ್ಕೆರೆ ಕವನದ ಶೀರ್ಷಿಕೆ: ನನ್ನ ಹೃದಯ

ನನ್ನ ಹೃದಯ

ನಿನ್ನ ವಿರಹದ
ಮರುಭೂಮಿಯಲ್ಲ;
ಪ್ರೀತಿಯ ನೆನಪುಗಳ ಉದ್ಯಾನ
ನನ್ನ ಹೃದಯ!!
*
ಪಾದ ಸೋಕಿಸದಿದ್ದರು ಪರವಾಗಿಲ್ಲ
ಒಮ್ಮೆ ಕಿರುಗಣ್ಣಲಾದರು ನೋಡು
ನನ್ನ ಹೃದಯದ ಉದ್ಯಾನವ
ಇಲ್ಲಿ ಬೆಳೆದಿರುವ ಗುಲಾಬಿಗಳ
*
ನಿನ್ನ ಪ್ರೀತಿ ಸಾಕಷ್ಟು ಕೊಟ್ಟಿದೆ
ನನ್ನ ಬದುಕಿಗೆ;
ನೆನೆಯದಿದ್ದರೆ ಕ್ಷಮಿಸಲಾಗದು
ನನ್ನ ಬದುಕನೆ!
*
ನಿನ್ನ ಮರೆಯುವುದು
ನನ್ನ ಮರೆತಂತೆಯೇ
ಕಾವ್ಯ ನೇಯ್ಗೆಯ ಬಿಟ್ಟಂತೆಯೇ
*
ಪ್ರೀತಿಸದ ಹೃದಯ ಸಿಹಿ;
ಪ್ರೀತಿಸುವ ಹೃದಯ ತುಂಬಾ ಸಿಹಿ!

-ಟಿಪಿ ಉಮೇಶ್, ಹೊಳಲ್ಕೆರೆ
*****