ಅನುದಿನ‌ ಕವನ-೬೧೨, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಗುರುವೇ ನಮಃ

🌺💐ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು🌺💐

ಗುರುವೇ ನಮಃ

ಶಿಲೆಯನ್ನು ಕಲೆಯಾಗಿಸುವ
ಅದ್ಭುತ ಶಿಲ್ಪಿಗೆ,
ಮರೆಯಲ್ಲಿ ಮಹೋನ್ನತಿ
ಮೆರೆಯುವ ತಮ್ಮ ಚಾಣಾಕ್ಷತನ
ನಿಜಕ್ಕೂ ಅತ್ಯದ್ಭುತ!

ಶಿಕ್ಷಕ ಸಮೂಹಕ್ಕೆ
ನಮೋ ನಮಃ;
ಸರಿಸಾಟಿಯಾರಿಲ್ಲ
ತಮ್ಮ ವಿನಹ!

ಮಗುವಿಗೆ ಹಿರಿತನ ತುಂಬುವ
ಜಾಣ್ಮೆ ತಮ್ಮದು;
ಪರುಷ ಮಣಿ ಶಕ್ತಿ ನೀವು
ಗುರುವಿನ ಹಿರಿಮೆಯದು!

ಮಕ್ಕಳೊಳಗೊಂದಾಗಿ
ಲೀನಗೊಳ್ಳುವ
ತಮ್ಮ ತಲ್ಲೀನತೆಗೆ
ತಾದಾತ್ಮ್ಯ ಎಲ್ಲಿಹುದು,
ಲಿಂಗವೂ ಮೆಚ್ಚಿ ತಾನನ್ನಬೇಕು
“ಅಹುದು ಅಹುದು”
ಚಿಲಿ ಪಿಲಿ ಚಿನ್ನರಿಗೆ
ತುಂಬುವಿರಿ ನೀವು
ಅದಮ್ಯ ಚೈತನ್ಯ!
ತಮ್ಮ ನಿಷ್ಕಳಂಕ ಪ್ರೀತಿಗೆ
ಜಗ ತೋರುವುದು ಮಾನ್ಯ!

ಜ್ಞಾನಿಗಳು ವಿಜ್ಞಾನಿಗಳು
ಅಭಿಯಂತರರು ವೈದ್ಯರು
ತಮ್ಮಿಂದಲೇ ಸೃಷ್ಟಿ ಈ ಜಗದಿ
ಇದೋ ಗುರುವೇ ತಮಗೆ
“ನಮೋ ನಮಃ”


-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ
*****

Leave a Reply

Your email address will not be published. Required fields are marked *