ಗಾಂಧಿ ಜಯಂತಿ ವಿಶೇಷ-೦೨, ಕವಿ: ಗೋಸಿಂಹಾ (ಎಲ್. ಹಾಲ್ಯಾನಾಯ್ಕ ), ಕಮಲಾಪುರ, ಕವನದ ಶೀರ್ಷಿಕೆ: ಬಾಪೂಜಿ

ಬಾಪೂಜಿ

ಓ! ರಾಷ್ಟ್ರಪಿತ,ಅವತಾರ ಪುರುಷ,ವಿಶ್ವಮಾನ್ಯ
ಮೋಹನದಾಸ ಕರಮಚಂದ ಗಾಂಧಿ ಬಾಪೂಜಿ
ಜಗವೇ ಭಕ್ತಿಯಿಂ ಗೈಯುತಿಹುದಿಂದು ನಿಮ್ಮ ಪೂಜಿ
ತಾವು ದೇವಲೋಕದಿ ಧರೆಗವತರಿಸಿದ ದೇವದೂತ
ಭಾರತಾಂಬೆಯ ಬಂಧನ ಕಳಚಿದ ಹೆಮ್ಮೆಯ ಸುತ

ಕೋಟ್ಯಾನುಕೋಟಿ ಜನತೆ ಪ್ರಶ್ನಾತೀತ ನಾಯಕ
ಸಂಯಮದಿ ಆಂಗ್ಲರ ವಿರುದ್ಧ ಹೋರಾಟದ ಕಾಯಕ
ಮಾಡಿದಿರಿ ಅಸಹಕಾರ,ಚಲೇಜಾವ್ ಚಳುವಳಿ
ನೀಡಿದಿರಿ ತಾವು ದೇಶಕ್ಕೆ ಸ್ವಾತಂತ್ರ್ಯದ ಬಳುವಳಿ
ಜಾರಿಗೆ ತರಲ್ಹೇಳಿದ್ರಿ ಮೂಲ ಶಿಕ್ಷಣ ಪ್ರಭಾವಳಿ

”ರಾಮ-ರಹೀಮ ಏಕಹೈ” ಎಂದು ಸಾರಿದಿರಿ
ಸಹಬಾಳ್ವೆಯ ಜೀವನ ಮಾರ್ಗ ತೋರಿದಿರಿ
ನುಡಿದಂತೆ ನಡೆದು ಸತ್ಯ,ನೀತಿ,ಧರ್ಮದಿ ಬಾಳಿದಿರಿ
‘ಖಾದಿ ಸುಖದ ಹಾದಿ’ಯೆಂದು ಪ್ರತಿಪಾದಿಸಿದಿರಿ
ಸಪ್ತ ಸಾಮಾಜಿಕ ಪಾಪಗಳಾಚರಿಸದಿರಲು ಹೇಳಿದಿರಿ

ಪ್ರತಿಭಟಿಸಲು ಪ್ರಯೋಗಿಸಿದಿರಿ ಸತ್ಯಾಗ್ರಹ ಅಸ್ತ್ರ
ಸ್ವಾತಂತ್ರ್ಯ ತಂದುಕೊಟ್ಟಿರಿ;ಹಿಡಿಯದೇ ಶಸ್ತ್ರಾಸ್ತ್ರ
ಪಾಲಿಸಿದ್ರಿ ಶ್ರವಣ ಪಿತೃಭಕ್ತಿ,ಹರಿಶ್ಚಂದ್ರನ ಸತ್ಯದ ಶಕ್ತಿ
ಸತ್ಯ,ಶಾಂತಿ,ಅಹಿಂಸೆ ಪ್ರತೀಕದಿ ಲೋಕಕ್ಕೆ ಮಹಾತ್ಮ
ಈಗ್ಲೂ ದೇಶಕ್ಕಾಗಿ ಬಡಿದುಕೊಳ್ಳುತ್ತಿಹುದು ನಿಮ್ಮಾತ್ಮ

✍️ ಗೋಸಿಂಹಾ (ಎಲ್. ಹಾಲ್ಯಾನಾಯ್ಕ )
ಸಹಶಿಕ್ಷಕರು ಹಾಗೂ ಜಿಲ್ಲಾಧ್ಯಕ್ಷರು
ಕಚುಸಾಪ , ವಿಜಯನಗರ ಜಿಲ್ಲೆ.

—–

ರೇಖಾ ಚಿತ್ರ: ಸಿದ್ಧರಾಮ ಕೂಡ್ಲಿಗಿ
*****

Leave a Reply

Your email address will not be published. Required fields are marked *