ಪ್ರೇಕ್ಷಕರನ್ನು ರಂಜಿಸಿದ ನೇಗಿಲಯೋಗಿ ನಾಟಕ: ವಿಶ್ವಕ್ಕೆ ಅನ್ನದಾತರು ರೈತರು -ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನ ರೆಡ್ಡಿ

ಬಳ್ಳಾರಿ, ಅ.11: ವಿಶ್ವಕ್ಕೆ ಅನ್ನದಾತರು ರೈತರು
ಎಂದು ಪ್ರಗತಿಪರ ರೈತ ಸಂಘದ ಅಧ್ಯಕ್ಷ, ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನ ರೆಡ್ಡಿ ಅವರು ಹೇಳಿದರು.
ಅವರು ಸೋಮವಾರ ರಾತ್ರಿ ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಹೊಂಗಿರಣ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಮರಾಪುರದ ವೈ.ಎನ್.ಆರ್.ಕಲಾ ಸಾಂಸ್ಕೃತಿಕ ಟ್ರಸ್ಟ್ ಸಹಯೊಗದಲ್ಲಿ ಜರುಗಿದ ದಸರಾ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನೇಗಿಲಯೋಗಿ ನಾಟಕ ಸಂದೇಶಾತ್ಮಕವಾಗಿದೆ. ಇಂಥ ನಾಟಕಗಳು ಸಮಾಜ ಬದಲಾವಣೆಗೆ ಕಾರಣವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರೈತರ ಇತ್ತೀಚಿನ ಪರಿಸ್ಥಿತಿಗಳನ್ನು ಅದ್ಭುತವಾಗಿ ಪ್ರದರ್ಶನ ಮಾಡಿದ್ದಾರೆ ಎಂದು ಕಲಾಕಾರರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಆದರ್ಶ, ಪ್ರಗತಿ ಪರ ರೈತರು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷರು ನಾಗರಾಜ್ ಗೌಡ್ರು ಲಕ್ಷ್ಮಿ ,ಉಮಾಪತಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಎರ್ರಿ ಗೌಡ, ಹನುಮಂತಪ್ಪ ,ರಾಮಚಂದ್ರ, ನಾಗಭೂಷಣ ,ಮುಜಾವರ್ ನಾಗನಗೌಡ, ಚಾಂದ್ ಭಾಷಾ ,ರವಿ ಚಳುಗುರ್ಕಿ, ಲತಾಶ್ರೀ ರಂಗಾರೆಡ್ಡಿ ,ಮಲ್ಲೇಶ್ ಕುಮಾರ್ ,ಎಸ್‌ಜಿಟಿ ನಾಗರಾಜ್ ,ಡೊಂಗಿ ಹನುಮಂತಪ್ಪ ಮತ್ತಿತರರು ಇದ್ದರು.
*****

Leave a Reply

Your email address will not be published. Required fields are marked *