ಅನುದಿನ‌ ಕವನ-೬೪೯, ಕವಿ: ಜಿ ಟಿ ಆರ್ ದುರ್ಗ ಜಿ ಹೆಚ್ ಎಲ್ ಬಂಗಾರಪೇಟೆ, ಕವನದ ಶೀರ್ಷಿಕೆ: ಹೇಳುವಿರಾ?!

ಹೇಳುವಿರಾ?!

ದೇಶಕ್ಕೆ ದುಡಿದವರು ಯಾರು
ದೇಶಕ್ಕೆ ದುಡಿಯುತ್ತಿರುವವರು ಯಾರು
ಹೇಳುವಿರಾ ನೀವು ಹೇಳುವಿರ

ದೇಶಕ್ಕಾಗಿ ಪ್ರಾಣ ಕೊಟ್ಟವರಾರು
ದೇಶಕ್ಕಾಗಿ ಪ್ರಾಣ ಕೊಡಬೇಕೆನ್ನುವರು ಯಾರು
ಹೇಳುವಿರಾ ನೀವು ಹೇಳುವಿರಾ

ವಿಶ್ವವೆ ಮೆಚ್ಚುವಂತವರು ಯಾರು
ವಿಶ್ವವೆ ಮೆಚ್ಚಿಕೊಳ್ಳಬೇಕಾದವರು ಯಾರು
ಹೇಳುವಿರಾ ನೀವು ಹೇಳುವಿರಾ

ಬಡತನದಲಿ ನೊಂದವರು ಯಾರು
ಬಡವರಿಗಾಗಿ ನೊಂದು ಬೆಂದವರು ಯಾರು
ಹೇಳುವಿರಾ ನೀವು ಹೇಳುವಿರಾ

ದೇಶಕ್ಕಾಗಿ ಸಮಾನತೆ ಕೊಟ್ಟವರು ಯಾರು
ದೇಶದಲ್ಲಿ ಶೋಷಣೆಯಲ್ಲಿ ಬೆಂದವರು ಯಾರು
ಹೇಳುವಿರಾ ನೀವು ಹೇಳುವಿರಾ

-ಜಿ ಟಿ ಆರ್ ದುರ್ಗ, ಜಿ ಹೆಚ್ ಎಲ್, ಬಂಗಾರಪೇಟೆ
*****

Leave a Reply

Your email address will not be published. Required fields are marked *