ಪ್ರೀತಿ ಎಂದರೆ ಸಾಕಿ… ಸಾಕಿ.. ಪ್ರೀತಿ ಎಂದರೆ ಗುಟ್ಟಾಗಿ ಗುನುಗುವುದಲ್ಲ ಸುಟ್ಟ ರೊಟ್ಟಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಕಾದು ಕೆನೆಗಟ್ಟುವುದಲ್ಲ ಹೆಪ್ಪುಗಟ್ಟಿ ತುಪ್ಪದಂತಾಗುವುದು ಸಾಕಿ.. ಪ್ರೀತಿ ಎಂದರೆ ಹಾರಾಡುವುದಲ್ಲ ಫೀನಿಕ್ಸ್ ಹಕ್ಕಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಮಥಿಸುವುದಲ್ಲ ಮಾನವೀಯತೆಯ ಸ್ತುತಿಸುವುದು ಸಾಕಿ..…
Category: ಅನುದಿನ ಕವನ
ಅನುದಿನ ಕವನ-೯೫೦, ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ
ಇಂದು ಏಕೋ ನೆನಪಾಗುತಿದೆ ಹಳೆಯ ನೋವಿನ ಅನುಭವ ಮರೆಯಲಾರೆನು ಎಂದೂ ನಾನು ಪಟ್ಟ ಕಷ್ಟನಷ್ಟವ ಮಾಯಲಾರದು ಅಷ್ಟು ಕ್ಷಿಪ್ರದಿ ಹೃದಯದಲಿ ಆದ ಗಾಯವು ನಲಿವೇ ಇಲ್ಲ ನೋವೇ ಎಲ್ಲ ನಿತ್ಯ ಕಂಬನಿ ಧಾರೆಯು ವಿಧಿಯು ಎನ್ನಲೇ, ಸೃಷ್ಟಿ ಎನ್ನಲೇ ತಿಳಿಯಲಾಗದು ಪಡೆದ…
ಅನುದಿನ ಕವನ-೯೪೯, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ (ನಭಾ), ಹುನಗುಂದ, ಕವನದ ಶೀರ್ಷಿಕೆ:ಲೇಪನ, ಚಿತ್ರಕೃಪೆ: ಯಜ್ಞ ಆಚಾರ್ಯ, ಮಂಗಳೂರು
ಲೇಪನ ಮೌನ ಎಂಬ ಚಿನ್ನದೊಳಗಡೆ ಎಷ್ಟು ಕುಲುಮೆಯ ಝಳವಿದೆ ಧರಿಸಿದೆದೆಯಾ ಸುಪ್ತದೊಳಗಡೆ ಅಳೆಯಲಾಗದ ಕೊಳವಿದೆ ಆಡಲಾರದ ಮಾತುಗಳೆಲ್ಲ ಹೆದರಿ ಮುದುರಿ ಕುಳಿತಿವೆ ಯಾವವಕಾಶಕೆ ಕಾಯುತ್ತಿದ್ದವೋ ಹಾರಿ ಹೋಗಿ ಬಿಟ್ಟಿವೆ ಹೇಳಲಾಗದ ಕಥೆಗಳಿಗೆಲ್ಲ ಯಾವ ದೈವ ಒಲಿಯಿತೋ ಯಾವ ಸ್ವರದ ಸ್ನೇಹವಾಯಿತೋ ರಾಗವಾಗಿ…
ಅನುದಿನ ಕವನ-೯೪೮, ಕವಿ: ಆರಿಫ್ ರಾಜಾ, ಇಳಕಲ್ಲು
ಕ್ರಾಂತಿಕಾರಿ, ಜನ ಕವಿ ಗದ್ದರ್ ಅವರು ಇನ್ನೂ ನೆನಪು ಮಾತ್ರ. ತಮ್ಮ ಹೋರಾಟದ ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದವರು. ಭೌತಿಕವಾಗಿ ನಮ್ಮನ್ನಗಲಿದ್ದರೂ ದೇಶದ ಕೋಟ್ಯಾಂತರ ಜನರ ಹೃದಯದಲ್ಲಿ ಸದಾ ಕ್ರಾಂತಿ ಗೀತೆಯ ಕಹಳೆ ಮೊಳಗಿಸುತ್ತಾ ಅಚ್ಚಹಸಿರಾಗಿರುತ್ತಾರೆ. ಕವಿ ಆರಿಫ್ ರಾಜಾ…
ಅನುದಿನ ಕವನ-೯೪೭, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ, ಕವನದ ಶೀರ್ಷಿಕೆ: ಉಸಿರು(ಹೈಕುಗಳು)
ಉಸಿರು (ಹೈಕುಗಳು) ಬಂಧ ಬಿರಿದು ಕಣ್ಣೀರಿನಿಂದ ಕೆನ್ನೆ ಹಸಿಯಾಯಿತು|| ಮನಸ್ಸು ತುಂಬಿ ತುಳುಕಿದ್ದ ಖುಷಿಯು ಹುಸಿಯಾಯಿತು|| ನಾನು ನೀನಾಗಿ ನೀನು ನಾನಾದ ದಿನ ನೆನಪಿಲ್ಲವೆ| ಒಲವಿನಿಂದ ಒಲಿಯದ ನಲಿವು ಮಾಸಿಹೋಯಿತು|| ಕಣ್ಣೋಟ ಭಾಷೆ ಬರೆದ ನೂರು ಕಥೆ ನೆನಪಿಲ್ಲವೆ| ಕನಸು ಕಂಡು…
ಅನುದಿನ ಕವಿತೆ-೯೪೬, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಕಪ್ಪು ಕವಿತೆ
ಕಪ್ಪು ಕವಿತೆ… ನಮ್ಮ ಮೈ ಬಣ್ಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ಸುಟ್ಟುಕರಕಲಾಗಿರುವ ಮನವ ತೊಳೆದು ಶುದ್ದಗೊಳಿಸಿಕೊಳ್ಳಿ… ಹಾಗೆ ಹೃದಯವನ್ನು ಕೂಡ… ತಲೆಯೊಳಗೆ ತುಂಬಿರುವ ಮೌಡ್ಯದ ವಿಷವನ್ನು ಕೂಡ ಕಕ್ಕಿ- ಕಕ್ಕಿ ಮಿದುಳನ್ನು ಕೂಡ ತೊಳೆದು ಶುದ್ದಿಗೊಳಿಸಿಕೊಳ್ಳಿ… ನಾವೋ ಮೊದಲೆ ಈ…
ಅನುದಿನ ಕವನ-೯೪೫, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ:ಗಜಲ್
ಗಜಲ್ ಬೆಳದಿಂಗಳು ನಿನ್ನ ಕನಸುಗಳಿಗೆ ದಾರಿ ಬೆಳಕಾಗುವುದು ಮಲಗು ಒಲವೆ ಮಿಂಚುಹುಳು ನಿನ್ನಂದದ ನಿದಿರೆಗೆ ಸಾರಥಿಯಾಗುವುದು ಮಲಗು ಒಲವೆ ತಂಗಾಳಿ ಎಲ್ಲೆಡೆ ಸುಳಿದಾಡಿ ನಿನ್ನ ಮುಂಗುರುಳಲಿ ಗಿರಕಿ ಹೊಡೆದಿಹುದು ಇರುಳಿನ ಕಪ್ಪು ನಿನ್ನ ಚಂದದ ರೆಪ್ಪೆಗಳ ನೇವರಿಸುವುದು ಮಲಗು ಒಲವೆ ಆಗಸದಲೆಲ್ಲೋ…
ಅನುದಿನ ಕವನ-೯೪೪, ಕವಿಯಿತ್ರಿ:ಶ್ರೀ, ಮಂಗಳೂರು, ಕಾವ್ಯ ಪ್ರಕಾರ: ಗಜಲ್
ಗಜಲ್ ಕಳೆದು ಹೋಗಿರುವ ನಿದ್ದೆಗೂ ಕನಸುಗಳ ಸುಂಕ ಕಟ್ಟಬೇಕಿದೆ ಇಲ್ಲಿ ಗೀರುವ ಮುಳ್ಳುಗಳ ನಡುವೆಯೇ ಗುಲಾಬಿಯನ್ನು ಹುಡುಕಬೇಕಿದೆ ಇಲ್ಲಿ ಕಂಡ ಕಂಡಲೆಲ್ಲಾ ಬಯಲ ಬಿಸಿಲ ಮಾಯಾಜಾಲ ಕಣ್ಮುಂದಿನ ಮರೀಚಿಕೆ ಕಣ್ಕುಕ್ಕುವ ಬೆಳಕಿನ ನಡುವೆಯೇ ಪ್ರೇಮದ ನಿಜ ಬಣ್ಣವ ಕಾಣಬೇಕಿದೆ ಇಲ್ಲಿ ಉನ್ಮಾದದ…
ಅನುದಿನ ಕವನ-೯೪೩, ಕವಿ: ಮಧುಸೂಧನ್ ಬೆಳಗುಲಿ, ಮಡಿಕೇರಿ, ಕವನದ ಶೀರ್ಷಿಕೆ: ಮರಕ್ಕೆ ಸಿಕ್ಕ ಪಟ
ಮರಕ್ಕೆ ಸಿಕ್ಕ ಪಟ ಆ ರಸ್ತೆ ಬದಿಯ ಮರದ ಕೊಂಬೆಯಲ್ಲಿ ಸಿಕ್ಕಿ ನೇತಾಡುತ್ತಿದ್ದ ಗಾಳಿಪಟ ಪುಟ್ಟ ಕಂದನ ಕೈಬಿಟ್ಟು ತನ್ನ ಸೂತ್ರದೊಂದಿಗೇ ಪತರುಗುಟ್ಟಿತ್ತಿದೆ ಪಟ ಹಸಿರು ಬಣ್ಣದ್ದೇ ಆದರೂ ಹೊಂದಲೊಲ್ಲದು ಹಸಿಗೂ ಹಸಿವಿಗೂ ನಲಿವ ಮಾತೆಲ್ಲಿಯದು ಸೂತ್ರ ಹರಿದ ಮೇಲೆ ಗಾಳಿ…
ಅನುದಿನ ಕವನ-೯೪೨, ಕವಿ:ಮೂಗಪ್ಪ ಗಾಳೇರ, ಮಂಗಳೂರು, ಕವನದ ಶೀರ್ಷಿಕೆ:ಕಣ್ಣೀರು ಸಾಲುತ್ತಿಲ್ಲ
ಕಣ್ಣೀರು ಸಾಲುತ್ತಿಲ್ಲ ಅದೆಷ್ಟೋ ನಿನ್ನ ನೆನಪುಗಳು ನನ್ನೆದೆಯಲಿ ಕಲ್ಲು ಬಂಡೆಗಳಂತೆ ಹಾಸುಹೊಕ್ಕಾಗಿದೆ ತುಸು ಪಿಸು ಮಾತನಾಡದೆ ಹಿಂದುರುಗಿ ನೋಡದೆ ಹೊರಟ ಗೆಳತಿಯೇ ಕಣ್ಣ ರೆಪ್ಪೆಗೆ ತಗುಲಿದ ಕಸವನೊಮ್ಮೆ ಸರಿಸಿ ನೋಡು ಪವಿತ್ರವಾದ ಭಾವನೆಗಳಲ್ಲಿ ಬೆಳದಿಂಗಳು ಬೇರೂರಿ ಕುಳಿತಿದೆ……!! ಆಸೆ ಕನಸುಗಳಿಲ್ಲದ ನನ್ನೆದೆಯ…
