ಬಿಕ್ಷುಕರು ನಾವು. ಪರಿಸರದ ಸಿರಿಯ ಅಂಗಳದಿ ದುರಾಸೆಯ ಗಂಗಾಳ ಹಿಡಿದ ಬಿಕ್ಷುಕರು ನಾವು ಕಾಮಧೇನುವದುವೆಂದು ಬಗೆದು ಹಾಲು ಮುಗಿದರು ರಕ್ತ ಹಿಂಡುವ ಖೂಳ ರಕ್ಕಸರು ನಾವು ಕಲ್ಪವೃಕ್ಷದ ಹೂ ಹಣ್ಣು ಕಾಯಿ ಎಲೆ ಕಿತ್ತು ಬರಿದಾದರು ಬಿಡದೆ ಬೇರ ಕೀಳುವ ಮಹಾ…
Category: ಅನುದಿನ ಕವನ
ಅನುದಿನ ಕವನ-೬೦೨, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಪ್ರೇಮದ ಪರಿ ಪರಿ…
“ಇದು ಪ್ರೇಮದ ಪರಿ ಪರಿ ಸ್ಫುರಣಗಳ ಸುಂದರ ಕವಿತೆ. ಅನುರಾಗದ ಅನುಪಮ ಸ್ವರಗಳ ಮಧುರ ಭಾವಗೀತೆ. ಓದಿ ನೋಡಿ.. ಮನವರಳಿಸಿ ಮುದನೀಡಿ ಮಾರ್ದನಿಸುತ್ತದೆ. ಏಕೆಂದರೆ ಇಲ್ಲಿ ಸೆಳೆಯುವ ಭಾವಕಿರಣಗಳ ಸೌಂದರ್ಯವಿದೆ. ಕಚಗಳಿಯಿಡುತ ಕುಣಿಸುವ ಜೀವಸಂವೇದನೆಗಳ ಮಾಧುರ್ಯವಿದೆ” ಎಂದು ಹೇಳುತ್ತಾರೆ ಕವಿ ಎ.ಎನ್.ರಮೇಶ್.…
ಅನುದಿನ ಕವನ-೬೦೧, ಹಿರಿಯ ಕವಿ: ಲಿಂಗಾರೆಡ್ಡಿ ಶೇರಿ, ಸೇಡಂ, ಕವನದ ಶೀರ್ಷಿಕೆ: ಇವನು ಅವನಲ್ಲ…..
ಇವನು ಅವನಲ್ಲ ಅಂದು ಕಳೆದು ಹೋದವನು ಇಂದು ಸಿಕ್ಕಿದ್ದಾನೆ. ಆದರೆ ಇವನು ಅವನಲ್ಲ! ಅಂದು ಕಳೆದು ಹೋದವನ ಮುಖದಲ್ಲಿತ್ತು ಇಂದು ಕಳೆ. ಬೆಳ್ಳಗೆ ನಗುತ್ತಿದ್ದ, ಇಂಪಾಗಿ ಹಾಡುತ್ತಿದ್ದ, ಜಿಂಕೆಯಂತೆ ಓಡಾಡುತ್ತಿದ್ದ, ಹಕ್ಕಿಯಂತೆ ಹಾರಾಡುತ್ತಿದ್ದ. ಇವನು ಅವನಲ್ಲ. ಅವನಲ್ಲಿ ಕನಸುಗಳಿದ್ದವು ಹುಡುಕುತ್ತಿದ್ದ ಭರವಸೆಯಿಂದ.…
ಅನುದಿನ ಕವನ-೬೦೦, ಕವಯತ್ರಿ: ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ್, ಬೆಳಗಾವಿ ಕವನದ ಶೀರ್ಷಿಕೆ: ಅಲ್ಲಮನಾಗುವುದಾದರೆ….
ಅಲ್ಲಮನಾಗುವುದಾದರೆ……… ಅಂತರಂಗದ ಕತ್ತಲೆಗೆ ಬೆಳಕ ಶಬ್ದ ಬಿತ್ತುವ ದೇವಗುರು. ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ. ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹದ ತಾಪ. ಪ್ರಕಾಶದ ಮಹಾ ಶರೀರ ಕಣ್ಣ ಬೆಳಕಿನ ಜ್ಯೋತಿರ್ಲಿಂಗ . ಅನಂತದಲ್ಲಿನ ಆತ್ಮ, ಬಯಲ ಬೆಸುಗೆಗೆ…
ಅನುದಿನ ಕವನ-೫೯೯, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶಿಲಾಬಾಲಿಕೆ
ಶಿಲಾಬಾಲಿಕೆ ಏನೆಂದು ವರ್ಣಿಸಲಿ ! ನಿನ್ನ……. ಗೆಳತಿ ಯಾವ ಸೌಂದರ್ಯದ ಹೋಲಿಕೆ ಮಾಡಲಿ ! ನಿನ್ನ ಸುಂದರ ಮೊಗವನ್ನು ಬೆಳದಿಂಗಳ ಚಂದ್ರನಿಗೆ ಹೋಲಿಸಲೇ……? ಚಂದ್ರ ರಾತ್ರಿ ಕಳೆದು ಬೆಳಗು ಸರಿದು ಹೋಗುವುದು // ನಿನ್ನ ಸುಂದರ ನಗುವನ್ನು ಅರಳಿದ ಹೂಗಳಿಗೆ ಹೋಲಿಸಲೇ…..?…
ಅನುದಿನ ಕವನ-೫೯೮, ಕವಿ:ಸಖ, ಶಿಡ್ಲಘಟ್ಟ, ಕವನದ ಶೀರ್ಷಿಕೆ: ಆಸೆ
ಆಸೆ ತೆಪ್ಪಗೆ ನಾನು ನನ್ನ ಪಾಡಿಗೆ ಯಾರ ಆಸರೆಗೂ ಹಾತೊರೆಯದೇ ಯಾರ ನಿರ್ಲಕ್ಷ್ಯಕೂ ನೋಯದೇ ಅವರ ಪಾಡಿಗೆ ಅವರ ಬಿಟ್ಟು ನನ್ನ ಹಾಡಿಗೆ ನಾನು ತಲೆದೂಗಬೇಕು ಅಟ್ಟಹಾಸಗಳಿಗೆ ಕಿವುಡಾಗಿ ಅಹಂಕಾರಗಳಿಗೆ ಕುರುಡಾಗಿ ಅಸೂಯೆಗಳಿಗೆ ಕಣ್ಣು ಹೊಡೆದು ನನ್ನ ಮನದ ಮಾತುಗಳಿಗೆ ಮೌನ…
ಅನುದಿನ ಕವನ-೫೯೭, ಕವಿ:ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಸಂಗಾತಿಯ ಗುರುತು
ಸಂಗಾತಿಯ ಗುರುತು ಕಾರ್ತೀಕದ ಹಸಿರು ಪಸಲಿನ ಅಕ್ಕಡಿ ಸಾಲಿನಲ್ಲಿ ಅರಳಿ ನಗುವ ಹಚ್ಚೆಳ್ಳು ಹೂವೇ ! ಸೀಳುಕ್ಕೆಯ ದೋಣಿ ಗೆರೆಯಲ್ಲಿ ಅನಂತ ನೆರಿಗೆ ಸೀರೆಯನುಟ್ಟು ಬೆಳ್ಳಗೆ ನಕ್ಷತ್ರದಂತೆ ನಗುವ ಹೆದ್ದಣಬೆಯೇ ! ಉರಿಬಿಸಿಲ ನೆತ್ತಿ ಬಂಪಿಗೆ ಅರಳೆಲೆ ಆಸರೆ ಮೇಲುಮುಸುಗಿನ ತಣ್ಣನೆಯ…
ಅನುದಿನ ಕವನ-೫೯೬, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಕೇಡುಗಾಲಕ್ಕೆ
ಕೇಡುಗಾಲಕ್ಕೆ…. ಕೇಡುಗಾಲಕ್ಕೆ ಜನ ಏನೇನು ಪೂಜೆ ಮಾಡ್ತಾರೆ ಅಂತ ಗೊತ್ತಾಗಲ್ಲ. ಕೇಡುಗಾಲಕ್ಕೆ ಜನ ಏನೇನು ಅಪವಿತ್ರ ಗೊಳಿಸ್ತಾರೆ ಅಂತಾನೂ ಗೊತ್ತಾಗಲ್ಲ. ಕೇಡುಗಾಲಕ್ಕೆ ಜನ ಯಾರ್ಯಾರನ್ನ ಹೊಗಳ್ತಾರೆ ಅಂತ ಗೊತ್ತಾಗಲ್ಲ. ಕೇಡುಗಾಲಕ್ಕೆ ಜನ ಯಾರ್ಯಾರನ್ನ ತೆಗಳ್ತಾರೆ ಅಂತಾನೂ ಗೊತ್ತಾಗಲ್ಲ. ಕೇಡುಗಾಲಕ್ಕೆ ಜನ ಯಾರ್ಯಾರನ್ನ…
ಅನುದಿನ ಕವನ-೫೯೫, ಕವಿ:ಮೇಗರವಳ್ಳಿ ರಮೇಶ್, ಶಿವಮೊಗ್ಗ, ಕವನದ ಶೀರ್ಷಿಕೆ: ಯಯಾತಿ
ಯಯಾತಿ ಅಲ್ಲಿ – ಬ್ಯಾ೦ಕಿನ ಕೌ೦ಟರಿನಾಚೆ ನಿ೦ತ ದಾಳಿ೦ಬೆ ದ೦ತಗಳ ಆ ಡಿ೦ಪಲ್ ಹುಡುಗಿ ಕೌ೦ಟರಿನೊಳಗೆ ಕುಳಿತ ಪೊದೆಗೂದಲ ಹುಡುಗನ ಮೇಲೆ ಜೀವನೋತ್ಸಾಹದ ನಗೆಯನ್ನ ಕುಲುಕುಲು ತುಳುಕಿಸುತ್ತಿರುವಾಗ ಇಲ್ಲಿ – “ಕಡಲ ಕುದಿತ” ದ ಈ ಗಾಜಿನ ಛೇ೦ಬರಿನಲ್ಲಿ ತಿರುಗುವ ಸೀಲಿ೦ಗ್…
ಅನುದಿನ ಕವನ-೫೯೪, ಕವಯತ್ರಿ: ಸುಧಾ ಚಿ ಗೌಡ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ:ಎದ್ದಿದ್ದೆ, ಎಚ್ಚರಿರಲಿಲ್ಲ
ಎದ್ದಿದ್ದೆ, ಎಚ್ಚರಿರಲಿಲ್ಲ ಚುಮುಚುಮು ನಸುಕು ಹರಿವಾಗ ಹಚ್ಚಡದಲಿ ಕನಸ ಮಿಸುಕಾಟ ಎದ್ದಿದ್ದೆ ಎಚ್ಚರಿರಲಿಲ್ಲ ಬಿದ್ದಿದ್ದೆ ಕಾಲುಜಾರಿ, ಪೆಟ್ಟು ತಿಳಿಯಲಿಲ್ಲ ದಿನದ ಕಾಯಕಕೆ ಕೈಯಾದೆ ಬಳೆನಾದವಾಗದೆ ಬಿಸಿಚಹಕೆ ಸಕ್ಕರ ಬೆರೆಸಿ ಹಾದಿಕಾದೆ ಸಿಹಿಯಾಗದೆ ಚಹಾ ತುಳುಕಿತು ಕೈ ನಡುಗಿ ನೀನಿಲ್ಲದೆ ಗಂಟಲಿಗಿಳಿಯದೆ ರುಚಿಗೆಟ್ಟು…