ನೀವು ನಡೆಯುತ್ತಿರುವ ದಾರಿಯಲ್ಲಿ ನಿಮಗೇ ಗೊತ್ತಿಲ್ಲದಂತೆ ಒಂದು ಕವಿತೆ ಸಿಗಬಹುದು ಹಾಗೆಯೇ ನಿಂತು ಓದಿಬಿಡಿ ನಂತರ ನೀವು ಏನನ್ನೋ ಯೋಚಿಸಬಹುದು, ಹಾಗಾಗದಿದ್ದಲ್ಲಿ ಸುಮ್ಮನೆ ನಡೆದುಬಿಡಿ ಅದೇ ದಾರಿಯಲ್ಲಿ ಮತ್ತೊಂದು ಕವಿತೆ ಮಾತನಾಡಿಸುತ್ತದೆ ಮಾತನಾಡಿಸಿರಿ, ಈಗಲೂ ಯೋಚನೆಗೆ ಏನೂ ಸಿಗದಿದ್ದಲ್ಲಿ ಮತ್ತೆ ಮುಂದೆ…
Category: ಅನುದಿನ ಕವನ
ಅನುದಿನ ಕವನ-೯೦೦, ಶ್ರೇಷ್ಠ ಕವಿ:ಪದ್ಮಶ್ರೀ, ನಾಡೋಜ ಡಾ.ಸಿದ್ಧಲಿಂಗಯ್ಯ ಅವರು, ಕವನದ ಶೀರ್ಷಿಕೆ: ಸಾವಿರಾರು ನದಿಗಳು
ಎಂಥ ರೊಚ್ಚು, ಆವೇಶದ ಕವಿತೆ. ಪ್ರತಿಯೊಂದು ಶಬ್ದವೂ ಸಿಡಿಗುಂಡಿನಂತೆ. ಕವಿತೆಯಲ್ಲಿ ರೊಚ್ಚು, ಆವೇಶ ತುಂಬುವಲ್ಲಿ ಕವಿ ಡಾ.ಸಿದ್ಧಲಿಂಗಯ್ಯನವರಿಗೆ ಡಾ.ಸಿದ್ಧಲಿಂಗಯ್ಯ ಅವರೇ ಸಾಟಿ! ಭೌತಿಕವಾಗಿ ನಮ್ಮ ಜತೆ ಇರದಿದ್ದರೂ ಇವರ ಸಾಹಿತ್ಯ, ಸಮಾಜಮುಖಿ ಕಾರ್ಯಗಳ ಮೂಲಕ ಕೋಟಿ ಕೋಟಿ ಮನಸುಗಳಲ್ಲಿ ನೆಲೆಸಿದ್ದಾರೆ. …
ಅನುದಿನ ಕವನ-೮೯೯, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ
ನೆನಪುಗಳೇ ಹೀಗೆ ಕಳೆದು ಹೋದುದನ್ನೇ ಮತ್ತೆ ಮತ್ತೆ ಕೆದಕಿ ಗಾಯ ಮಾಡುತ್ತವೆ|| ಭಾವಗಳೇ ಹೀಗೆ ಬೇಡವಾದುದನ್ನೇ ಬೇಡಿ ಬೇಡಿ ದಣಿದು ದುಃಖ ಪಡುತ್ತವೆ|| ಅನುಭಾವಿಗಳ ನುಡಿ ಕೇಳಿ ಮನದ ಕಲ್ಮಶಗಳೆಲ್ಲ ಕ್ಷಣ ಹೊತ್ತು ಕರಗಿ ಬಿಡುತ್ತವೆ| ಕೆಡಕುಗಳೇ ಹೀಗೆ ತೊರೆದುದನ್ನೇ ಅಪ್ಪಿಕೊಂಡು…
ಅನುದಿನ ಕವನ-೮೯೮, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅಪ್ಪ ಅಂದರೆ ಅಪ್ಪ ಅಷ್ಟೆ
ಅಪ್ಪ ಅಂದರೆ ಅಪ್ಪ ಅಷ್ಟೆ ಹೊಡೆದು ಹೊಡೆದೂ ಮಗ್ಗಿ ಕಲಿಸಿದ ಅಕ್ಷರದ ದಾರಿ ತೋರಲು ಶಾಲೆಗೆ ಕಳಿಸಿದ ತನ್ನೆಲ್ಲ ಕಷ್ಟಗಳ ನುಂಗಿ ಸುಖವನ್ನಷ್ಟೇ ಉಣಿಸಿದ ಆಲದ ಮರದಂತೆ ವಿಶಾಲವಾಗಿ ಹರಡಿ ತನ್ನ ಕುಡಿಯೆಂದು ಬೀಗಿದ ಆಗಸದ ಚುಕ್ಕೆಗಳನ್ನೆಣಿಸಲು ಕಲಿಸುತ್ತಲೇ ನೆಲದ ನಡಿಗೆಯ…
ಅನುದಿನ ಕವನ-೮೯೭, ಕವಿಯಿತ್ರಿ: ಡಾ.ಸುಜಾತಾ ಚಲವಾದಿ, ವಿಜಯಪುರ
ಹೆಜ್ಜೆ ಇಟ್ಟಾಗೊಮ್ಮೆ ಅದೇ ಅಳುಕು ಅದೇ ಭಯ ಅದೇ ದುಗುಡ ನನ್ನನ್ನು ಆವರಿಸುತ್ತಲೇ ಇರುತ್ತೇ ರವಿಕೆಯ ಒಂದೊಂದು ತೊಳುಗಳನ್ನು ಏರಿಸಿ ಬಿಗಿ ಹಿಡಿತದ ಬಂಧನದಲ್ಲೂ ನಿನ್ನನ್ನು ಮೈಗೆ ಆವರಿಸಿಕೊಂಡಾಗ ಕೈದಿಯ ಕೊಳಗಳನ್ನು ತೊಟ್ಟಂತೆ ಭಾಸವಾಗುತ್ತಿದೆ ಲಂಗದ ಲಾಡಿ ಬಿಗಿದಾಗ ನರನಾಡಿಗಳೆಲ್ಲವನ್ನು ಕಟ್ಟಿ…
ಅನುದಿನ ಕವನ-೮೯೬, ಕವಿಯಿತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕಾವ್ಯ ಪ್ರಕಾರ: ಮಕ್ಕಳ ಪದ್ಯ
ಮಕ್ಕಳ ಪದ್ಯ ನಮ್ಮನೆ ನೋಡಲು ಹಾರಿ ಬಂದ ಹಕ್ಕಿ ಹಿಂಡು ನೋಡು ತಂತಿ ಮೇಲೆ ಸಾಲಾಗ್ ಕೂತು ಹಾಡ್ತಾವವು ಹಾಡು ಟುವ್ವಿ ಟುವ್ವಿ ಹಾಡು… ಆ ಊರ್ನಿಂದ ಈ ಊರ್ನಿಂದ ಎಲ್ಲಾ ಒಟ್ಟು ಸೇರಿ ಪಟ ಪಟ ರೆಕ್ಕೆ ಬಡ್ಕೊಂಡು ಪಿಟಿ…
ಅನುದಿನ ಕವನ-೮೯೫, ಕವಿ: ಮೂಗಪ್ಪ ಗಾಳೇರ, ಮಂಗಳೂರು, ಕವನದ ಶೀರ್ಷಿಕೆ: ಮುಸ್ಸಂಜೆ ಹೊತ್ತಲ್ಲಿ
ಮುಸ್ಸಂಜೆ ಹೊತ್ತಲ್ಲಿ ಸುಮ್ಮನೆ ಬರೆದ ಸಾಲುಗಳೆಲ್ಲಾ ನಿನ್ನ ಯೌವನದ ಶೃಂಗಾರದ ವ್ಯಾಕರಣದ ಪದಗಳಾದವಲ್ಲ…! ಹೆಚ್ಚೇನು ಹೇಳಲಾರೆ ಗೆಳತಿ ಹುಚ್ಚು ಹಿಡಿಸಿದ ದಿನಗಳಿವು ಮತ್ತೇಕೆ ಈ ಪ್ರೀತಿಯ ಮತ್ತು….? ಮುಸ್ಸಂಜೆಯ ಹೊತ್ತಲ್ಲಿ ರವಿ ಕರಗುವ ಸಮಯದಲ್ಲಿ ಚಂದಿರನ ಜೊತೆ ಸೇರಿ ಒಂಚೂರು ದೂರ…
ಅನುದಿನ ಕವನ-೮೯೪, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ, ಕಾವ್ಯಪ್ರಕಾರ: ಗಜಲ್
ಗಜಲ್ ಹೊರಗೆಲ್ಲೋ ಕೋಗಿಲೆ ಕೂಗಿದರೂ ನಿನ್ನ ಪಿಸುಮಾತಿನ ನೆನಪು ತರಗೆಲೆ ಗಿರಕೆಂದರೂ ಸಾಕು ಮಧುರ ಹೆಜ್ಜೆಗಳ ಬರುವಿನ ನೆನಪು ದುಂಬಿ ಝೇಂಕರಿಸುತಿದೆ ನಿನ್ನ ಮುಂಗುರುಳುಗಳ ನೆನಪ ಹೊತ್ತು ಹೂಗಳು ಅರಳಿದರೂ ಸಾಕು ನಿನ್ನ ಚಂದದ ಕಿರು ನಗುವಿನ ನೆನಪು ಸುರಿವ ಪ್ರತಿ…
ಅನುದಿನ ಕವನ-೮೯೩, ಕವಿಯಿತ್ರಿ: ಭಾರತಿ ಅಶೋಕ್ ಮೂಲಿಮನಿ, ಹೊಸಪೇಟೆ ಕವನದ ಶೀರ್ಷಿಕೆ:ಆದರೂ ಆಕ್ಷೇಪವೇಕೆ….????
ಆದರೂ ಆಕ್ಷೇಪವೇಕೆ….???? ನಾನಿಲ್ಲಿ ಬಂಧಿಯಾದರೂ ಅನುಕ್ಷಣವೂ ಅಲ್ಲಿಯದೇ ತುಡಿತ. ಧಮನಿಯ ಲಯದಲಿ ಬೆರೆತಿಹೆ ಅನುಭವಿಸೊಮ್ಮೆ ನಾಭಿಯ ಬಳಿ ಹೋಗು ಹೇಳುವುದೆಲ್ಲಾ ಎಲ್ಲಿಹೆನೆಂದು,ಮಿಳಿತವಾಗಿಹೆನೆಂದು ಕಂಗಳ ಬಿಂಬವೂ ಆನೆಂದು ಗುರುತಿಸೊಮ್ಮೆ ಸದಾ ನಿಂದಿಹೆನಲ್ಲೇ….. ಮಾತಿನ ಧ್ವನಿಗೆ ಏನೆಂದೇ ಅದು ಹೇಳದೇ ತಾನೆಂದು ಹೆಜ್ಜೆಯ ಗುರುತೊಮ್ಮೆ…
ಅನುದಿನ ಕವನ-೮೯೨, ಕವಿಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಂಗಳೂರು, ಕವನದ ಶೀರ್ಷಿಕೆ: ಹೆಸರಿಹುದೇ….
ಹೆಸರಿಹುದೇ…. ಮುಂಜಾವದಲಿ ಮಿರುಮಿರುಗಿ ಹೊಳೆದು ಹೊಸರಂಗೀವ ಇಬ್ಬನಿ ಮಣಿಗಳಿಗೇ? ಮೂಡಲ ಮನೆಯಿಂದ ಮುತ್ತಿನ ನೀರಿನ ಎರಕ ತರುವ ರವಿಯ ಕಿರಣಗಳಿಗೆ? ಕೆರೆಯ ಕೆಸರಲಿ ಅರಳಿ ನಲಿವ ಬಯಸುವ ನೈದಿಲೆಗೆ ಮುದವೀವ ಶಶಿಯ ಕದಿರುಗಳಿಗೆ? ವನದಿ ವಿಕಸಿಸಿ ಪರಿಮಳಿಸಿ ಜೇನ ಹರಿಸಿ ದುಂಬಿ…
