ಅನುದಿನ‌ ಕವನ-೭೩೦, ಕವಿ:ಉಗಮ ಶ್ರೀನಿವಾಸ್, ತುಮಕೂರು, ಕವನದ ಶೀರ್ಷಿಕೆ:ಅಷ್ಟು ಸುಲಭಕ್ಕೆ ದಕ್ಕುವನೇ ಬುದ್ದ!

ಅನುದಿನ ಕವನ ಕಾಲಂ ಆರಂಭವಾಗಿ ಇಂದಿಗೆ ಎರಡು ವರ್ಷಗಳಾದವು ಎಂದು ತಿಳಿಸಲು ಹರ್ಷಿಸುತ್ತೇನೆ. ಹಿರಿಯ ಕವಿ ಟಿ ಕೆ ಗಂಗಾಧರ ಪತ್ತಾರ ಅವರ ‘ಹೊಸವರ್ಷದ ಹಾಡು’ ಕವಿತೆ ಮೂಲಕ 01-01-2021ರಂದು ಆರಂಭವಾದ ಕಾವ್ಯ ಪಯಣ ಇಂದಿಗೆ(31-12-2022) 730 ದಿನಗಳನ್ನು ಪೂರೈಸಿ ಮೂರನೇ…

ಅನುದಿನ ಕವನ-೭೨೯, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ತೊಳಲಾಟ

ತೊಳಲಾಟ ಹಸೆಮಣಿಯನೇರಿ ಸಪ್ತಪದಿಯ ತುಳಿದು ಪತಿಯ ಮನೆಯ ಹೊಸಲಿನಲ್ಲಿ ಕಣ್ತುಂಬ ಕನಸುಗಳ ಹೊದ್ದು ಬಲಗಾಲಿನಿಂದ ಸೇರನೊದ್ದು ಒಳಬರುವ ಹೆಣ್ಣಿಗೆ ಮನಪೂರ ಹೊಂದಾಣಿಕೆಯ ತೊಳಲಾಟ ! ಬಾಲ್ಯದ ಗೆಳತಿಯರೊಂದಿಗೆ ನಿತ್ಯವೂ ಜೊತೆಗೂಡಿ ಕುಣಿದು ಕುಪ್ಪಳಿಸಿ ಮನದ ತುಂಬ ನಕ್ಕು ನಗಿಸಿ ಅರೆಕ್ಷಣವೂ ಅಗಲಿರದಂತೆ…

ಅನುದಿನ ಕವನ-೭೨೮, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ವಿಶ್ವಮಾನವ

ವಿಶ್ವಮಾನವ ಕನ್ನಡ ನುಡಿ ತೇರ ಕಟ್ಟಿದವರು ಕನ್ನಡಕೆ ಜ್ಞಾನ ಪೀಠದ ಕಳಶವಿಟ್ಟವರು ಕನ್ನಡಮ್ಮನ ರಥವ ಎಳೆದವರು ಕನ್ನಡದ ರಥಶಿಲ್ಪಿ ನಮ್ಮಕುವೆಂಪು ತಾಯ್ನೆಲದಲಿ ಮಾತೃಭಾಷೆ ಬಿತ್ತಿದವರು ಅನ್ಯಭಾಷೆ ವ್ಯಾಮೋಹದ ಕಳೆಕಿತ್ತವರು ಸಾಹಿತ್ಯ ಬೆಳೆಯನು ಸಮೃದ್ಧಿ ಗೊಳಿಸಿದವರು ಕನ್ನಡಮ್ಮನ ನೇಗಿಲಯೋಗಿ ನಮ್ಮಕುವೆಂಪು ಕಾವ್ಯ ಕೊಳಲಿನ…

ಅನುದಿನ ಕವನ-೭೨೭, ಕವಯಿತ್ರಿ: ಭಾರತಿ ಹೆಗಡೆ, ಬೆಂಗಳೂರು, ಕವನದ ಶೀರ್ಷಿಕೆ:ಇದ್ದೆ ಒಬ್ಬಳೇ…!

ಇದ್ದೆ ಒಬ್ಬಳೇ…! ಇದ್ದೆ ಒಬ್ಬಳೇ… ಬಿಡುಬೀಸಾಗಿ ಚಂಗನೆ ಜಿಗಿಯುವ ಆಶ್ರಮದ ಜಿಂಕೆಯ ಹಾಗೆ ಚಿಗುರು ಎಲೆಗಳ ಪರಿಮಳದ ಹಾಗೆ ಈ ಬೆಳಗು ನನ್ನ ಮುಷ್ಟಿಯೊಳಗೇ ಇವೆಯೆಂಬಂತೆ ಇದ್ದೆ ಒಬ್ಬಳೇ… ಕಾಡೊಳಗಿನ ಸೀತಾಳೆಯಂತೆ ಬಣ್ಣವನರಳಿಸಿ ಹೂವ ಕಂಪಿಸಿ ಯಾರೋ ದಂಡೆಯ ನೇಯ್ದಹಾಗೆ ಮೌನದೊಳಗಿನ…

ಅನುದಿನ‌ ಕವನ-೭೨೬, ಯುವ ಕವಿ: ದಾದಾಪೀರ್ ಜೈಮನ್, ಹಗರಿಬೊಮ್ಮನಹಳ್ಳಿ

ನಿನ್ನ ಪ್ರೀತಿಸುವುದಿಲ್ಲ ಮೋಹ ಮೊದಲಿಗೆ ಇಲ್ಲ ಕೂಗಿ ಕರೆಯಲಾಗುವುದಿಲ್ಲ ನಿನ್ನ ವೇಷ ತೊಡಲು ಕಷ್ಟವಾಗುತ್ತದೆ ನಿನ್ನ ಸೇಡು ಸಾಮ್ರಾಜ್ಯಗಳನ್ನೇ ಮುಳುಗಿಸುತ್ತದೆ ನೀನು ಪ್ರಾಮಾಣಿಕರಿಗೆ ಮಾತ್ರ ಒಲಿಯುವ ದಿವ್ಯ ಔಷಧ ದೇವರಿದ್ದಾನೋ ಇಲ್ಲವೋ ನನಗೆ ಮುಗಿಯದ ಗೊಂದಲ ಆದರೆ ಕಂಬನಿಯೇ ನೀನೊಂದಿಲ್ಲದಿದ್ದರೆ ಭಾಷೆಯೂ…

ಅನುದಿನ‌ ಕವನ-೭೨೫, ಕವಿ:ಕುಮಾರ ರೈತ, ಬೆಂಗಳೂರು ಕವನದ ಶೀರ್ಷಿಕೆ:ಮುಕ್ತಿಗಾಗಿ ಕಾಯುವ ಅಟ್ಟ!

ಮುಕ್ತಿಗಾಗಿ ಕಾಯುವ ಅಟ್ಟ! ಹಿರಿಯರು ಹೇಳುತ್ತಾರೆ ಹಳೆಯ ಸಾಮಗ್ರಿಗಳನ್ನೆಲ್ಲ ಅಟ್ಟಕ್ಕೆ ಹಾಕಿ ಅವುಗಳ್ಯಾವುವೂ ಎಂದೂ ಕೆಳಗೆ ಬರುವುದಿಲ್ಲ, ಮತ್ಯಾಕೆ ಅಟ್ಟಕ್ಕೆ ಎಂದರೂ ಕೇಳುವುದಿಲ್ಲ ಮೊದಲು ಜಿರಳೆ, ಹಲ್ಲಿ, ಇಲಿ ಹೆಗ್ಗಣ ನಂತರ ಹಾವು ಆದರೂ ಅಟ್ಟ ಸ್ವಚ್ಚವಾಗುವುದಿಲ್ಲ ತೊಲೆಯಲ್ಲಿ ಬಳ್ಳಿ ನೇತಾಡುತ್ತಿದೆ…

ಅನುದಿನ ಕವನ-೭೨೪, ಕವಿ: ಎ.ಎನ್.ರಮೇಶ್.ಗುಬ್ಬಿ, ಕವನದ ಶೀರ್ಷಿಕೆ: ಬೆಳಕೆ ನಿನಗಿದೋ ನಮನ…!

“ನಿಮಗಿದೋ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ ಕಾವ್ಯ ಕಾಣಿಕೆ. ಹೃದ್ಯಭಾವ ತರಂಗಗಳ ಪದಮಾಲಿಕೆ. ಧನ್ಯ ಜೀವಸಂವೇದನೆಗಳ ಸ್ವರಮಾಲಿಕೆ. ಯೇಸುಕ್ರಿಸ್ತನ ದಿವ್ಯಗಾರುಡಿಗಳ ಚಿರಸ್ಮರಣಿಕೆ. ಒಪ್ಪಿಸಿಕೊಳ್ಳಿ..” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. 🙏ಬೆಳಕೆ ನಿನಗಿದೋ ನಮನ.!🙏 ಶಿಲುಬೆಗೇರಿಸಿದವರನ್ನೂ ಕ್ಷಮಿಸಿದೆ ಮೊಳೆ ಜಡಿದವರನ್ನೂ ಮನ್ನಿಸಿದೆ ಕಲ್ಲು ಹೊಡೆದವರನ್ನೂ…

ಅನುದಿನ ಕವನ-೭೨೩, ಕವಿ: ಎಲ್ವಿ(ಡಾ. ಲಕ್ಷ್ಮಣ ವಿ ಎ), ಬೆಂಗಳೂರು ಕವನದ ಶೀರ್ಷಿಕೆ: ಹ್ಯಾಪೀ ನ್ಯೂ ಈಯರ್

ಹ್ಯಾಪೀ ನ್ಯೂ ಈಯರ್ ಹೊಸ ವರುಷದ ಹಿಂದಿನ ದಿನ ಪ್ರತಿ ಬಾರಿ ನೆನಪಾಗುತ್ತಾರೆ ಹಳೆಯ ಗೆಳೆಯ ಗೆಳತಿಯರು ಹೈಸ್ಕೂಲಿನ ಗ್ರುಪ್ ಫೋಟೊದ ಹಿಂದಿನ ಬಯಲಿನಲಿ ಮೂಡಿದ ಕಪ್ಪು ಬಿಳುಪಿನ ಕಾಮನಬಿಲ್ಲು ಕೆಲ ಮುಖಗಳ ಮೇಲೆ ಮೆತ್ತಿದ ಫಂಗಸ್ಸು ಮತ್ತೆ ಬಿತ್ತಲಾಗದೇ ಆ…

ಅನುದಿನ ಕವನ-೭೨೨, ಕವಯಿತ್ರಿ: ನಳಿನ ಡಿ, ಚಿಕ್ಕಮಗಳೂರು

ನೀರಿಗಾಗಿ ನೆತ್ತರು ಬಗೆದವನು ಬಾಯಾರಿಕೆ ತೀರಿಸಿದವನು ನನ್ನಪ್ಪ ಅನ್ನಕ್ಕಾಗಿ ಆಕಾಶಕೆ ಜಿಗಿದು ಹಾರಿ ಉಲ್ಕೆಗಳೊಡನೆ ಬಡಿದಾಡಿ ಹಸಿವು ನೀಗಿಸಿದವನು ನನ್ನಪ್ಪ ಹುಟ್ಟಿನಿಂದ ಬೆಳೆದು ನಿಲ್ಲುವವರೆಗೆ ಬೆವರಿಳಿಸಿದನು ನನ್ನಪ್ಪ, ಹಬ್ಬಿದ ಬಳ್ಳಿಗೆ ಆಸರೆಯಾಗಿ ನೆರಳಾಗಿ ನನ್ನ ಕಾಯ್ದವನು ನನ್ನಪ್ಪ ಬೆಳಗುವುದ ನೋಡಿ ಸೂರ್ಯ…

ಅನುದಿನ‌ ಕವನ-೭೨೧, ಕವಿ:ಡಾ.ನಿಂಗಪ್ಪ‌ ಮುದೆನೂರು, ಧಾರವಾಡ ಕವನದ ಶೀರ್ಷಿಕೆ:ದಾಂಪತ್ಯ ಗೀತೆ

ದಾಂಪತ್ಯ ಗೀತೆ ಬೆಳಕ ಬಿತ್ತಿ ಬೆಳಕ ಉಣ್ಣಲು ಹೋದೆವು ನಿಧಾನವಾಗಿ ಕತ್ತಲು ಆವರಿಸಿತು ಮತ್ತೆ ಆಕಾಶವನ್ನೊಮ್ಮೆ ನೋಡಿದೆವು ಇದ್ದಷ್ಟು ಚುಕ್ಕೆಗಳೂ ಮೋಡದೊಳಗೆ ಕುಳಿತು ಬೆಳಕಿಗಾಗಿ ಹಂಬಲಿಸುತ್ತಿದ್ದವು! ಬಾಲ್ಯದಲ್ಲಿ ಕಂಡ ಹುಣ್ಣಿಮೆ ಚಂದಿರನ ಅಂಗಳ ಇನ್ನಷ್ಟು ಧೂಳಾಗಿತ್ತು ಆದರೂ ಬಾಳನ್ನು ಪ್ರೀತಿಸಿ ಗೆಲ್ಲು…