ಅನುದಿನ ಕವನ-೭೨೮, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ವಿಶ್ವಮಾನವ

ವಿಶ್ವಮಾನವ

ಕನ್ನಡ ನುಡಿ ತೇರ ಕಟ್ಟಿದವರು
ಕನ್ನಡಕೆ ಜ್ಞಾನ ಪೀಠದ ಕಳಶವಿಟ್ಟವರು
ಕನ್ನಡಮ್ಮನ ರಥವ ಎಳೆದವರು
ಕನ್ನಡದ ರಥಶಿಲ್ಪಿ ನಮ್ಮಕುವೆಂಪು

ತಾಯ್ನೆಲದಲಿ ಮಾತೃಭಾಷೆ ಬಿತ್ತಿದವರು
ಅನ್ಯಭಾಷೆ ವ್ಯಾಮೋಹದ ಕಳೆಕಿತ್ತವರು
ಸಾಹಿತ್ಯ ಬೆಳೆಯನು ಸಮೃದ್ಧಿ ಗೊಳಿಸಿದವರು
ಕನ್ನಡಮ್ಮನ ನೇಗಿಲಯೋಗಿ ನಮ್ಮಕುವೆಂಪು

ಕಾವ್ಯ ಕೊಳಲಿನ ಗಾನ ನುಡಿಸಿದವರು
ರಾಮಾಯಣವ ದರ್ಶಿಸಿದ ದಾರ್ಶನಿಕರು
ಮಲೆನಾಡ ಮಧುಮಗಳ ಸಿಂಗರಿಸಿದವರು
ಕನ್ನಡದ ರಸ ಋಷಿ ರಾಷ್ಟ್ರ ಕವಿ ನಮ್ಮಕುವೆಂಪು

ಜಾತಿ ಮತದ ಹೊಟ್ಟ ತೂರಿದ ಮನುಜ ಮತದವರು
ಧರ್ಮ ತತ್ವದ ಎಲ್ಲೆ ಮೀರಿ ವಿಶ್ವಪಥ ತೋರಿದವರು
ಮೌಡ್ಯಮುರಿದು ವಿಚಾರ ಕ್ರಾಂತಿ ಆಹ್ವಾನಿಸಿದವರು
ನಾಡೋಜ ಪದ್ಮಭೂಷಣಕೆ ಕೀರ್ತಿ ನಮ್ಮ ಕುವೆಂಪು

ಯುಗದ ಕವಿಗೆ ಜಗದ ಕವಿಗೆ ಕರ್ಮಯೋಗಿಗೆ
ವಿಶ್ವಮಾನವನಿಗೆ ಬೆಳಗುವೆ ನುಡಿನಮನ ದೀವಿಗೆ

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.
*****

Leave a Reply

Your email address will not be published. Required fields are marked *