ಪ್ರೀತಿಸುವೆ .ನಾ ನಿನ್ನ ಪ್ರೀತಿಸುವೆ ಎಲ್ಲಿ, ಹೇಗೆ, ಯಾವಾಗ ಎಂಬುದನರಿಯದೇ. ನಾನು ಪ್ರೇಮಿಸುವೆ ಸರಳ,ಸಹಜವಾಗಿ ತೊಂದರೆ -ಅಹಮಿಕೆ ಇಲ್ಲದೇ. ನಾನು ನಿನ್ನ ಪ್ರೀತಿಸುವೆ ಇದೊಂದೇ ರೀತಿಯಲಿ ಮತ್ತೊಂದ ಅರಿಯದೆ. ಮೂಲ : ಪ್ಯಾಬ್ಲೊ ನೆರೂಡ ಕನ್ನಡಕ್ಕೆ : ಪ್ರೊ. ಶಾಂತಮೂರ್ತಿ ಕುಲಕರ್ಣಿ,…
Category: ಅನುದಿನ ಕವನ
ಅನುದಿನ ಕವನ-೧೦೭೮, ಕವಿಯಿತ್ರಿ:ರೂಪಾ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಹಂಬಲ
ಹಂಬಲ ಉಸಿರಾಡುತ್ತಿದ್ದೇನೆ ಈಗಲೂ ದಿನವೂ ನೀನು ಉಸಿರಾಡುವ ಗಾಳಿಯನ್ನೇ ನಾನು ಮಧ್ಯೆ ಇರುವ ನೂರಾರು ಮೈಲುಗಳ ಅಂತರ ಕಳೆದು ಹೋದ ರಾತ್ರಿ ಬೆಳಗುಗಳ ಅರಿವಿಲ್ಲ ಈಗಲೂ ಸಿಲುಕಿದ್ದೆನೆ, ನಿನ್ನ ಕಣ್ರೆಪ್ಪಗಳ ಮಧ್ಯೆ ವರ್ಷಗಳಿಂದ ಹೆಪ್ಪುಗಟ್ಟಿದ ನೀರ ಹನಿಯಂತೆ ಅತ್ತ ಒಳಗೂ ಇಂಗದೆ,…
ಅನುದಿನ ಕವನ-೧೦೭೭, ಕವಿ:ಮಹಾದೇವ ಎಸ್.ಪಾಟೀಲ ರಾಯಚೂರು, ಕಾವ್ಯ ಪ್ರಕಾರ:ತರಹಿ ಗಜಲ್
ತರಹಿ ಗಜಲ್ ಕಡಕೊಟ್ಟ ಕನಸುಗಳಾದರೂ ಬಿಟ್ಟುಹೋಗು ಕಾಪಿಡುವೆ ಬಾಡಿದ ಒಲವಿನ ಹೂಗಳಾದರೂ ಬಿಟ್ಟುಹೋಗು ಕಾಪಿಡುವೆ ಸವಿಗನಸು ತುಂಬಿದ ಮಧುಬಟ್ಟಲು ಖಾಲಿಯಾಗಿದೆ ಸಾಕಿ ಮೌನದ ಪಿಸುಮಾತುಗಳಾದರೂ ಬಿಟ್ಟುಹೋಗು ಕಾಪಿಡುವೆ ಎದೆಯ ತೋಟದಲಿ ಮೋಹದ ಬೀಜವ ಬಿತ್ತಿ ಬೆಳೆದವಳು ಪ್ರೇಮದ ಪರಾಗಸ್ಪರ್ಶವಾದರೂ ಬಿಟ್ಟುಹೋಗು ಕಾಪಿಡುವೆ…
ಅನುದಿನ ಕವನ-೧೦೭೬, ಕವಿ: ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ: ಬೆಳಕು
“ಇದು ಬೆಳಕಿನ ಝೇಂಕಾರದ ಕವಿತೆ. ಬದುಕಿನ ಬೆರಗಿನ ಸಾಕಾರದ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರ್ಥಗಳ ವಿಶಾಲ ಹರಿವಿದೆ. ಅರ್ಥೈಸಿದಷ್ಟೂ ಅರಿವಿನ ವಿಸ್ತಾರವಾದ ಹರವಿದೆ” ಅಂತಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು!👇🍀 ಬೆಳಕು..! ದೇವಸ್ಥಾನದ ಜಾಗ ನಿನ್ನಾಸ್ತಿಯಿರಬಹುದು ದೇವಸ್ಥಾನವೂ ನಿನ್ನದೇ ಸ್ವತ್ತಿರಬಹುದು ದೇವಸ್ಥಾನದೊಳಗಿನ…
ಅನುದಿನ ಕವನ-೧೦೭೫, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ., ಕವನದ ಶೀರ್ಷಿಕೆ: ಕಂಗಳ ಸೂರ್ಯ
ಬಾಬಾ ಸಾಹೇಬರ ನೆನಪಿನೊಂದಿಗೆ……… ಕಂಗಳ ಸೂರ್ಯ ಅದೆಷ್ಟೋ ಶತಮಾನಗಳಿಂದ ಆಗಸವನ್ನೇ ನೋಡದೆ ನಡೆಯುತ್ತಿದ್ದರವರು ತಮ್ಮತನವನೆಲ್ಲ ಯಾರದೋ ಪಾದಗಳ ಧೂಳಾಗಿಸಿ ಕಂಬನಿಗಳ ಕಡಲನ್ನೇ ಬಾಯಾರಿಕೆಯ ತಣಿವನ್ನಾಗಿಸಿ ನಡೆಯುತ್ತಲೇ ಇದ್ದರು ಸೂರ್ಯ ಚಂದಿರರನ್ನೂ ನೋಡದಂತೆ ತಮ್ಮ ಮುಖಗಳು ತಮಗೇ ತಿಳಿಯದಂತೆ ಅದೆಷ್ಟು ನೋವುಗಳು ಯಾತನೆಗಳು…
ಅನುದಿನ ಕವನ-೧೦೭೪, ಹಿರಿಯ ಕವಿ:ವೈ ಎಂ.ಯಾಕೊಳ್ಳಿ, ಸವದತ್ತಿ, ಕವನದ ಶೀರ್ಷಿಕೆ: ಕವಿತೆಯೊಡನೆ…
ಕವಿತೆಯೊಡನೆ… ಕವಿತೆಯೊಡನೆ ಸದಾ ನನ್ನದೂ ಕಾದಾಟ ನೀನು ಯಾವಾಗಲೂ ದಿನ ತುಂಬಿ ಬರುವದಿಲ್ಲವೆಂದು.. ಕವಿತೆಗೋ ನನ್ನೊಡನೆ ತಂಟೆ ನೀನು ಅನುಭವಿಸಿ ಹೆರುವುದೆ ಇಲ್ಲವೆಂದು ಹೀಗಾಗಿ ನನ್ನ ಕವಿತೆ ಕೌರವ ಗಣ ಕೆಲವು ಅರೆಬರೆ ಬೆಂದವು ಕೆಲವು ಅವಸರದಲಿ ಬಂದವು ಹೌದೇ ಕವಿತೆ…
ಅನುದಿನ ಕವನ-೧೦೭೩, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಅರವತ್ಮೂರು ಕವಿತೆ!, ರೇಖಾಚಿತ್ರ:ರಾಘವೇಂದ್ರ ನಾಯಕ್
ಅರವತ್ಮೂರು ಕವಿತೆ! ಕವಿ ಮತ್ತು ಕವಿತೆಯ ನಡುವೆ ಚೂರು ಪದ ಹೆಚ್ಚುಕಮ್ಮಿಯಾದವು ಮುನಿಸಿಕೊಂಡು ಮೂವತ್ತಾರಾದವು ಇರ್ವರೂ ವಿಪರಿತ ಸ್ವಾಭಿಮಾನಿಗಳು ಹಟದ ಅಖಾಡಕ್ಕೆ ಇಳಿದೇ ಬಿಟ್ಟವು ಬಗ್ಗಿ ಬದುಕುವುದು ಇಬ್ಬರಿಗೂ ಒಗ್ಗದು ಕವಿಯ ಬಗ್ಗಿಸಬೇಕೆಂದು ಕವಿತೆ ಬಗ್ಗದೇ ಒಗ್ಗಿಸಿಕೊಳ್ಳಬೇಕೆಂದು ಕವಿ ಇಬ್ಬರೂ ಒಬ್ಬರ…
ಅನುದಿನ ಕವನ-೧೦೭೨, ಕವಿಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ
ಅದೇಕೋ ಗೊತ್ತಿಲ್ಲ , ಬುದ್ದನ ಬಗ್ಗೆ ಒಂದು ಪ್ರಬುದ್ಧ ಪದ್ಯ ಬರೆಯಲು ನನಗಿನ್ನೂ ಆಗುತ್ತಿಲ್ಲ…! ಅವನಂತ ಭವ್ಯ ನಗು ಎಲ್ಲೂ ಕಂಡಿಲ್ಲ…! ಪ್ರತಿ ಭಾರಿ ಅವನನ್ನು ಬೆರಗಿನಿಂದ ನೋಡುವೆ ದ್ವಂದ್ವ ಲೆಕ್ಕಾಚಾರದಲ್ಲಿ ಅವನನ್ನು ಅಳೆಯುವೆ…! ಆದರೆ ಅವನದೋ…. ಸದಾ ಅದೇ ಮುಖಭಾವ…
ಅನುದಿನ ಕವನ-೧೦೭೧, ಹಿರಿಯ ಕವಿ: ಪ್ರಕಾಶ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ನಕ್ಷತ್ರಗಳು
ನಕ್ಷತ್ರಗಳು ಹುಂಜದ ಕೂಗಿಗೆ ಮೈ ಮುರಿಯುತ್ತಾ ಏಳುತ್ತಿದ್ದೆವಾಗ ಆಜಾನ್ ಸದ್ದಿಗೆ ಎದ್ದು ಕುಳಿತುನೋಡಿದರೆ ಬಯಲಿನಲ್ಲಿ ಆಗಸ ಗೋಚರ ಕಣ್ಣಿಗೆ ಕಂಡಾಗ’ಬೆಳ್ಳಿ ಚುಕ್ಕಿ’ ನನ್ನಜ್ಜ ಹೇಳುತ್ತಿದ್ದ ಅದು’ಧೃವ ನಕ್ಷತ್ರ’ಎಂದು ಉಳಿದ ನಕ್ಷತ್ರಗಳ ಬಗ್ಗೆ ಕೇಳಿದಾಗ “ಸತ್ತವರೆಲ್ಲಾ ನಕ್ಷತ್ರಗಳಾಗುತ್ತಾರೆ” ಎನ್ನುತ್ತಿದ್ದರು ಬಾಲ್ಯದಲ್ಲಿ “ಅಮ್ಮನ ಸೀರೆ…
ಅನುದಿನ ಕವನ-೧೦೭೦, ಕವಿ:ಲಕ್ಷ್ಮಿಕಾಂತ ಮಿರಜಕರ, ಶಿಗ್ಗಾಂವ, ಕವನದ ಶೀರ್ಷಿಕೆ: ಮಹಾನಾಯಕ (ಗಜಲ್)
ಬಾಬಾ ಸಾಹೇಬರ ನೆನಪಿನೊಂದಿಗೆ……… ಮಹಾನಾಯಕ (ಗಜಲ್) ಶೋಷಿತರ ಬಾಳಿಗೆ ಬೆಳಕು ಬೀರಿದ ಸೂರ್ಯನೇ ಮಹಾನಾಯಕ. ಉರಿದ ಬದುಕಿಗೆ ತಂಪು ನೀಡಿದ ಚಂದ್ರನೇ ಮಹಾನಾಯಕ. ಜಾತಿಸಮುದ್ರಕ್ಕಿಳಿದು ಸಮತೆಯ ಮುತ್ತುರತ್ನ ತರಬಯಸಿದವನು ಏಕತೆಯ ಗ್ರಂಥಕ್ಕೆ ಜನ್ಮ ನೀಡಿದ ಲೇಖಕನೇ ಮಹಾನಾಯಕ. ಮಾತಿಲ್ಲದವರಿಗೆ ಮಾತಾಗಿ ದಿಕ್ಕಿಲ್ಲದವರಿಗೆ…
