ಕನಸುಗಳು ವಾಪಸು ನೆನಪಾಗುವುದಿಲ್ಲ ಎಚ್ಚರಗೊಂಡ ಮೇಲೆ ಎಚ್ಚತ್ತಗೊಂಡ ಮೇಲೆ ಎಂತಹುದೋ ಬಹು ಮುಖ್ಯದ್ದು ಜೊತೆ ಇಲ್ಲವಾಗುತ್ತದೆ ಜೊತೆ ಇಲ್ಲವಾದ ಮೇಲೂ ಜೊತೆಗಿದ್ದದ್ದುರ ಜೊತೆ ಹೆಜ್ಜೆಗಳು ಸಾವಾಗಿರುತ್ತವೆ ನಡೆಯುತ್ತ ನಡೆಯುತ್ತಾ ಬದುಕು ಅಲೆಯುತ್ತಿರುತ್ತದೆ ಉಸಿರಲ್ಲೀಗ ನಿರ್ಜೀವ ಭಾವಗಳು ಮತ್ತೇ ಮತ್ತೇ ಜೀವಂತಗೊಳಿಸಲು ಉಸಿರನೂದಿ…
Category: ಅನುದಿನ ಕವನ
ಅನುದಿನ ಕವನ-೧೦೬೮, ಕವಿಯಿತ್ರಿ: ಭಾರತಿ ಹೆಗಡೆ, ಬೆಂಗಳೂರು
ನೀನು ನನ್ನ ನಗುವನ್ನು ಕಿತ್ತುಕೊಳ್ಳ ಬಯಸಿದೆ ಎಳೆಯ ಹೊರಟಿದ್ದೆ ನನ್ನ ತುಟಿಗಳ ಮೇಲೆ ನಿನ್ನದೇ ನೋವಿನ ಗೆರೆಯನ್ನು ಹಿಂಡಬೇಕೆಂದಿದ್ದೆ ನಿನ್ನ ಮುಷ್ಟಿಯಲ್ಲಿ ಹಿಡಿದು ನರಳಿಸಿ ನೇಯ ಬೇಕೆಂದಿದ್ದೆ ನನ್ನ ಬದುಕ ಕೌದಿಯನ್ನು ಎಲೆ ಮರುಳೇ.. ನನ್ನ ಖುಷಿ ಈ ಚೌಕಟ್ಟಿನಾಚೆಯದ್ದು ಹೊದ್ದಿರುವೆ…
ಅನುದಿನ ಕವನ-೧೦೬೭, ಕವಿಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಒಂದು ಸಂಜೆ
ಒಂದು ಸಂಜೆ ಮುಗಿಲಿನ ಬಯಲಾಗ ಬಣ್ಣದ ಓಕುಳಿ ಸುsರೀsದ ಹರಡಿತ್ತ ಎದೆಯ ಗೂಡಿನ ಸಂದಿಯೊಳಗ ಜೀಕಳಿ ತಾ ಛಲ್ಲಂತ ಚಿಮ್ಮಿತ್ತ ॥ ಬಾನ ರಂಗಿನ ಗುಂಗಿನ್ಯಾಗ ಮತ್ತ ಸಂಜಿಯ ಮಬ್ಬಿನ್ಯಾಗ ಅತ್ತ ಇತ್ತ ಹಾರಿ ಜಿಗಿದು ಮನ ಸಂಚಾರ ಹೊರಟಿತ್ತ॥ ನೆನಪು…
ಅನುದಿನ ಕವನ-೧೦೬೬, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ . ಹುನಗುಂದ, ಕಾವ್ಯ ಪ್ರಕಾರ: ಟಂಕಾಗಳು
ಟಂಕಾಗಳು ಪಕ್ಕದಲ್ಲಿದ್ದ ಆ ಕಡತ ಮುಂದಿನ ಮೇಜು ಸೇರಲು ವಾರ, ತಿಂಗಳು, ವರ್ಷ ಸಾವಿರ ಲಕ್ಷಗಳು *** ಮೂರ್ತಿಯಾಗಿಸೋ ಪೆಟ್ಟುಗಳ ಯಾತನೆ ಸಂಕಟಗಳ ಸಹಿಸಿಕೊಂಡರೇನೇ ನೀ ಪೂಜಿಸಲ್ಪಡುವೆ *** ʼಟಂಕಾʼ ಎಂಬುದು ಪರ್ಷಿಯನ್ ಜಪಾನೀ ಕಾವ್ಯ ಪ್ರಕಾರ ಮೂವತ್ತೊಂದು ಅಕ್ಷರ ಚಲುವೆಯ…
ಅನುದಿನ ಕವನ-೧೦೬೫, ಕವಿಯಿತ್ರಿ: ರೇಣುಕಾ ರಮಾನಂದ, ಅಂಕೋಲಾ, ಕವನದ ಶೀರ್ಷಿಕೆ: ಪದ್ಯ ಬರೆಯುವುದನ್ನು ಬಿಟ್ಟುಬಿಟ್ಟೆ
ಪದ್ಯ ಬರೆಯುವುದನ್ನು ಬಿಟ್ಟುಬಿಟ್ಟೆ ಸತ್ಯ ಸುಳ್ಳು ಎರಡನ್ನೂ ಬೆರೆಸಿ ಒಂದಿಷ್ಟು ಪದ್ಯ ಬರೆದೆ ನಿನ್ನ ಬಗ್ಗೆ….. ನೀನಾಗ ಊರುಬಿಟ್ಟು ಓಡಿಹೋಗಿದ್ದೆ ಚಿನ್ನಿದಾಂಡು ಮರಕೋತಿ ಕಣ್ಣುಮುಚ್ಚಾಲೆ ಆಡುವಾಗ ಇಲ್ಲದ ಪ್ರೀತಿ ನೀನೆಲ್ಲೋ ದೇಶಾಂತರಕ್ಕೆ ಹೋದಮೇಲೆ ಅಂಕುರಿಸಿ ಚಂದ್ರ ತಾರೆ ಎಂದೆಲ್ಲ ಕನವರಿಸುವಂತೆ ಮಾಡಿ…
ಅನುದಿನ ಕವನ-೧೦೬೪, ಕವಿ:ಬಿ.ಪೀರ್ ಬಾಷ, ಹೊಸಪೇಟೆ, ಕವನದ ಶೀರ್ಷಿಕೆ:ಕಿಂಡ್ಯಾಗೇನು ಕಂಡೀ ಕನಕ
ಕಿಂಡ್ಯಾಗೇನು ಕಂಡೀ ಕನಕ ಕನಕ ನಿನಗ್ಯಾಕೋ ಹರಿಯ ಗೊಡವಿ ಇರವ ಅರಿಯದೆ ಹೋಗಿ ಉರಿಯ ಹಿಡದಿ ಅರಮನಿ ಇಳಿದು ಗುರುಮನಿ ಏರಿದಿ ಗುರಿಯ ಹಂಬಲದಾಗ ಗುಡಿಯ ಮೈಲಿಗಿ ಆದಿ ನಾನೆಂಬುದ ಮರತಿ ಮಳ್ಳ ಮುರಾರಿಯ ಬೆನ್ನ ಬಿದ್ದಿ ಗಿಂಡ್ಯಾನ ಬ್ರಹ್ಮಾಂಡ ಬಿಟ್ಟು…
ಅನುದಿನ ಕವನ-೧೦೬೩, ಕವಿಯಿತ್ರಿ: ಭವ್ಯ ಕಬ್ಬಳಿ, ಬೆಂಗಳೂರು
ಸೋತು ನೋವನುಂಡವರೇ ಗೆಲುವಿನ ಬಗ್ಗೆ ಹೆಚ್ಚು ಬರೆದದ್ದು ಸುಡು ಬೆಂಕಿಯನ್ನು ಎದೆಯಲ್ಲಿ ಇಟ್ಟುಕೊಂಡವರೇ ಬೆಳದಿಂಗಳ ಬಗ್ಗೆ ಹೆಚ್ಚು ಮಾತನಾಡಿದ್ದು ಬಿದ್ದು ಗಾಯಗೊಂಡವರೇ ಮುಲಾಮುಗಳ ಬಗ್ಗೆ ಹೆಚ್ಚು ವಿಚಾರ ತಿಳಿಸಿದ್ದು ಬಾಡಿದ ಮನಸ್ಸಿನವರೇ ಸುತ್ತಲಿನವರ ಮುಖದಲ್ಲಿ ಹೆಚ್ಚು ನಗುವ ಅರಳಿಸಿದ್ದು ಇಲ್ಲಿ, ಹೂವ…
ಅನುದಿನ ಕವನ-೧೦೬೨ , ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ನಾಲ್ಕು ಹನಿಗವನಗಳು
ನಾಲ್ಕು ಹನಿಗವನಗಳು ೧. ಉಚಿತ ನಿಮ್ಮ ನಡೆಯಲ್ಲೇ ನನ್ನೀ ನಡಿಗೆ ಎನ್ನುತ್ತಿದ್ದವಳು ಆಗ ; ಸರಕಾರದಿಂದ ಸೌಲಭ್ಯ ಭರಪೂರ ಸಿಗುವಾಗ ಅವಳೆ ಯಜಮಾನಿ ಮನೆಗೀಗ. ೨. ಪರಿಣಾಮ ಕುಡಿದು ತೂರಾಡುತ್ತ ಮನೆಗೆ ಬಂದರೂ ಮೌನ ವಹಿಸುತ್ತಿದ್ದ ನನ್ನಾಕೆ ; ಮೂರು ಹೊತ್ತು…
ಅನುದಿನ ಕವನ-೧೦೬೧, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಮಹಾಮಹಿಮರು
ಮಹಾಮಹಿಮರು ಹರಿದ ಬಟ್ಟೆ ಸುರಿದ ಜೊಲ್ಲು ಸಿಕ್ಕುಗಟ್ಟಿದ ಕೂದಲು ಪಿಚ್ಚುಗಟ್ಟಿದ ಕಣ್ಣು ತುರಿಕೆಯಾ ಚರ್ಮದವರೇ ದೇವರೆನುವ ಮತಯಾಚಕರಿವರು ತುಂಬಿದ ಚೀಲ ಹರಿದರೂ ಒತ್ತಿ ಒತ್ತಿ ಮತ್ತೆ ತುಂಬಿ ಮೆತ್ತೆಗೆ ಮೈ ಕೊಡವಿ ಎದ್ದು ಬೆಣ್ಣೆ ತಿಂದ ಕೈಯ ಮತ್ತೊಬ್ಬರ ಬಾಯಿಗೆ ಒರಸೊ…
ಅನುದಿನ ಕವನ-೧೦೬೦, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ, ಕವನದ ಶೀರ್ಷಿಕೆ: ಅಪ್ಪ ಮತ್ತು ಹಗ್ಗ
ಒಂದು ಮಾರು ಹಗ್ಗ ಹೇಗೆಲ್ಲ ಬಳಸಬಹುದೆಂದು ಅಪ್ಪನಿಗೆ ಮಾತ್ರ ಗೊತ್ತಿತ್ತು ಅಪ್ಪನ ಕೈಯಲ್ಲಿ ಸದಾ ಹಗ್ಗ ಇದ್ದಿರುತ್ತಿತ್ತು ಅಪ್ಪ ಮತ್ತು ಹಗ್ಗ ಎಂದಿಗೂ ನನ್ನ ಪಾಲಿಗೆ ಬೇರೆ ಬೇರೆ ಪದಗಳಲ್ಲ ಗದ್ದೆ ಕೆಲಸ ಮುಗಿಸಿ ಮನೆಯಲ್ಲಿನ ದನಕ್ಕೆ ಹುಲ್ಲು ತರಲು ಮಕ್ಕಳು…
