ತನಗಗಳು ೧ ಸ್ವಾಭಿಮಾನಕೆ ಬಿದ್ದು ಶ್ವಾನನಂತಾಗಬೇಡ ಇರುವ ಭಾಗ್ಯದಲಿ ಸುಖದ ದಾರಿ ನೋಡ ೨ ನಕ್ಕರದು ಷೋಡಸಿ ಹತ್ತು ನೋವಿಗೆ ಮದ್ದು ಹುಡುಗರೆದೆಯಲಿ ನೂರು ನಗಾರಿ ಸದ್ದು ೩ ಅವನು ಅವಳೊಳೋ ಅವಳು ಅವನೊಳೋ ಅವ್ಯಕ್ತ ಅನುಬಂಧ ಪತಿ ಪತ್ನಿ ಸಂಬಂಧ…
Category: ಅನುದಿನ ಕವನ
ಅನುದಿನ ಕವನ-೮೮೬, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ನಿಮ್ಮಂತೆ ನಾವು
🍀🌺💐ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು🍀💐 🌴 ನಿಮ್ಮಂತೆ ನಾವು🌴 ಕೊಡಲೀನs ಹಾಕಬ್ಯಾಡ ಕರುಳಿಗೆ ನಮ್ಮ ಕೊರಳಿಗೆ ಕೊಡಲೀನs ಹಾಕಬ್ಯಾಡ ಕರುಳಿಗೆ ನಮ್ಮ ಕೊರಳಿಗೆ // ನೀ ಕೊಡಲಿ ಹಾಕಿದರ ನಮ್ಮ ಬದುಕಿಗೆ ಉಳಿಗಾಲವೆಲ್ಲಿ !? ಬಳಗವೇ ನಾಶವಾದರೆ ನಿಮ್ಮ ಉಸಿರು…
ಅನುದಿನ ಕವನ-೮೮೫, ಯುವ ಕವಿ: ವಿಶಾಲ್ ಮ್ಯಾಸರ್, ಹೊಸಪೇಟೆ
ಪಕ್ಕೆಲುಬ ಕಟ್ಟು ಬಿಚ್ಚಿ ರೆಕ್ಕೆಮೂಡಿ ಹಾರುವ ಕಾಲಬಂತು ಬಾಯ ಮುಸುಕ ಹರಿದು ದನಿ ಹುಟ್ಟಿ ಹಾಡುವ ಕಾಲಬಂತು ಮುದ್ದೆಗೆ ಮೂಗು ಮೂಡಿ ಹೂವ ಮೂಸುವ ಕಾಲಬಂತು ಬರುಡೆದೆಗೆ ಮೊಲೆ ತುಂಬಿ ಹಾಲು ಉಣಿಸುವ ಕಾಲಬಂತು ಕೈ ಕಾಲು ಬಂತು ಅಡ್ಡಾಡಿ ಚಿತ್ರ…
ಅನುದಿನ ಕವನ-೮೮೪, ಕವಿಯಿತ್ರಿ: ಭಾರತಿ ಹೆಗಡೆ, ಬೆಂಗಳೂರು
ಬರುತ್ತಿದ್ದೇನೆಂದಿದ್ದ ಅವನು ಎಂದಿನ ತುಂಟತನದ ತುಂಬು ನಗೆಯನ್ನು ಹೊರಚೆಲ್ಲುತ್ತಲೇ… ಬಹುಶಃ ಎಂದಿನಂತೆ ಸುಳ್ಳಿರಲಾರದು ಅಂದುಕೊಂಡಿದ್ದೆ ಆಕಾಶವನ್ನೇ ಕಣ್ಣೊಳಗೆ ಒಂದು ಚಾದರದಂತೆ ಹಾಸಿ ಕಾಯುತ್ತಿದ್ದೆ…. ಕಾದಿರುವ ಸಮಯವೆಲ್ಲ ಈ ಸಲ ನನ್ನೊಬ್ಬಳದ್ದೇ ಎಂಬಂತೆ. ನೆಲದ ತುಂಬ ಪಾರಿಜಾತದ ಹೂಗಳು ನಗುತ್ತಿವೆ ಬಹುಶಃ ಇಂದಾದರೂ…
ಅನುದಿನ ಕವನ-೮೮೩, ಕವಿಯಿತ್ರಿ: ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ, ಕವನದ ಶೀರ್ಷಿಕೆ: ಪ್ರೀತಿಯ ಜೀವನ
ಪ್ರೀತಿಯ ಜೀವನ ಚೆಲುವಿನ ಚಿಲುಮೆ ಎನ್ನರಸಿ ಬಂದಿರುವೆ ನಾನು ನಿನ್ನರಸಿ ಮನದ ತುಂಬೆಲ್ಲಾ ತುಂಬಿರುವೆ ಎಂದಿಗೂ ನಿನ್ನ ಜೊತೆ ಇರುವೆ ನೀನಾಡೋ ಮಾತುಗಳೆಲ್ಲ ಸುಂದರ ನಿನ್ನ ನಗುವು ಹುಣ್ಣಿಮೆಯ ಚಂದಿರ ನೀ ಬಂದು ನನ್ನ ಬದುಕು ಬಂಗಾರ ನಿನ್ನಿಂದ ನನ್ನ ಜೀವನ…
ಅನುದಿನ ಕವನ-೮೮೨, ಕವಿಯಿತ್ರಿ: ದಾಕ್ಷಾಯಿಣಿ ಶಂಕರ್, ಮಹಾಲಿಂಗಪುರ
ಬದುಕನ್ನು ಮತ್ತಷ್ಟು ಆಸ್ವಾದಿಸಲು ತೀರದಡಿಯಲಿ ನಿಂತುಕೊಂಡಿದ್ದೆ ಎಲ್ಲವೂ ಕೊಚ್ಚಿಕೊಂಡು ಹೋಗಿತ್ತು…. ಜೀವನವನ್ನು ಹಿಂತಿರುಗಿ ನೋಡುತ್ತಾ ಕೆಲವು ಸಮಯ ಕಳೆದು ಹೋಗಿದ್ದೆ ಕಣ್ಣುಗಳೆಲ್ಲಾ ತಂತಾನೇ ತೇವವಾಗಿದ್ದವು… ನಾವು ಕಂಡುಂಡ ನೋವುಗಳನ್ನೆಲ್ಲಾ ಲೆಕ್ಕ ಹಾಕುತ್ತಾ ಕುಳಿತಿದ್ದೆ ಚುಕ್ಕಿಗಳಂತೆ ಲೆಕ್ಕವೇ ಸಿಗುತ್ತಿಲ್ಲಾ… ನೀನು ಕೊಟ್ಟಿರುವ ಪ್ರೀತಿಯನ್ನೆಲ್ಲಾ…
ಅನುದಿನ ಕವನ-೮೮೧, ಕವಿ: ದುಡ್ಡನಹಳ್ಳಿ ಮಂಜುನಾಥ್, ತುಮಕೂರು
ಸಾಕು ಈಗಷ್ಟೇ ಆಡಿ ಬಂದಂತಿದೆ ಹೊಂಗೆಬಯಲಿನಲ್ಲಿ ಕಣ್ಣಾಮುಚ್ಚೆ ಕಾಡೇಗೂಡೆ ಪದ ಹೇಳುತ್ತಿದ್ದ ಅಜ್ಜಿ ಕಾಡು ಸೇರಿದ್ದಾಳೆ ಇನ್ನೂ ಮುಗಿದಿಲ್ಲ ರತ್ತೋರತ್ತೋ ಹಾಡು ಕೈಕೈ ಹಿಡಿದು ಸುತ್ತುತ್ತಿದ್ದ ಗೆಳತಿ ಮೂಲೆ ಸೇರಿದ್ದಾಳೆ ಪೂರಾ ಜೋಡಿಸೇ ಇಲ್ಲ ಲಗೋರಿ ಕಲ್ಲುಗಳ ಜೊತೆಗಾರರೆಲ್ಲ ಓಡಿದ್ದಾರೆ ದೂರ…
ಅನುದಿನ ಕವನ-೮೮೦, ಹಿರಿಯ ಕವಿ:ಚಂದ್ರಶೇಖರ ನಂಗಲಿ, ಹೊಸಕೋಟೆ, ಕವನದ ಶೀರ್ಷಿಕೆ: ಎರಡು ಕೊಂಬುಗಳು
ಎರಡು ಕೊಂಬುಗಳು ಮಾಂಸದ ಕಣ್ಣುಗಳಿದ್ದರೆ ಸಾಲದು ! ಹೃದಯವಂತಿಕೆಯ ಕಣ್ಣುಗಳಿರಬೇಕು ! ಮೃದ್ವಸ್ಥಿಯ ಕಿವಿಗಳಿದ್ದರೆ ಸಾಲದು ! ಸಹಸ್ಪಂದನದ ಕಿವಿಗಳಿರಬೇಕು ! ಮಾತಿಗೆ ಮಾತು ಕುಟ್ಟುವ ಬಾಯಿದ್ದರೆ ಸಾಲದು ! ಮೌನದ ಬೆಲೆ ಏನೆಂದು ಗೊತ್ತಿರಬೇಕು ! ಭಾಷೆಯ ವಾಗ್ ವಿಲಾಸವಿದ್ದರೆ…
ಅನುದಿನ ಕವನ-೮೭೯, ಕವಿಯಿತ್ರಿ: ಕೆ. ಪಿ. ಮಹಾದೇವಿ. ಅರಸೀಕೆರೆ
ತುಂಬಿದ ಹಡಗೊಂದು ಮುಳುಗುವಾಗ…. ಮುಗಿಲ ಚುಂಬಿಸುವಂತ ಅದರೆತ್ತರ, ಸಾಗರವೇ ತನ್ನೊಳಗೆ ಇರುವಂತಾ ವಿಸ್ತಾರ ಪರ್ವತವೇ ತೇಲಿತೆಂಬಂತಾ ತೂಕ ನಿಂತಂತೆ ಗಂಭೀರಘನತೆಯಲಿ ರಾಜ ಯಾವುದೂ ಗಣನೆಗೆ ಬರುವುದೇ ಇಲ್ಲ ಕಾಲ ಸನ್ನಿಹಿತವಾಗಿ ಅರಿವಾಗದ ಕಾರಣವು ನಿಮಿತ್ತವಾಗುವುದು ತುಂಬಿದ ಹಡಗೊಂದು ಮುಳುಗುವಾಗ… ದೇಶದಿಂದೇಶಕ್ಕೆ ಕಾಲ…
ಅನುದಿನ ಕವನ-೮೭೮, ಕವಿ: ಕವಿರಾಜ್, ಬೆಂಗಳೂರು
ಅವಳು ಆಗಷ್ಟೇ ಸ್ನಾನ ಮುಗಿಸಿ ಬಂದು ಹನಿ ಒಸರುವ ಹೆರಳುಗಳನ್ನು ಎಳೆಬಿಸಿಲಿಗೆ ಒಡ್ಡುತ್ತಾಳೆ ಆಗಾಗ ಅಂಗೈ ತೂರಿಸಿ ಅದೇನೋ ಲಾಲಿತ್ಯದಲ್ಲಿ ಹೆರಳ ರಾಶಿಯನ್ನ ಅಲೆಅಲೆಯಾಗಿ ಜಾಡಿಸುತ್ತಾಳೆ ಚಿಮ್ಮಿದ ಹನಿಗಳಲ್ಲಿ ಸಾವಿರ ಕಾಮನಬಿಲ್ಲು ಅದೇ ನೆಪದಲ್ಲಿ ಎದುರು ಮನೆಯ ಮಹಡಿಯತ್ತ ಒಂದು ಓರೆನೋಟ…
