ಅನುದಿನ ಕವನ-೮೯೭, ಕವಿಯಿತ್ರಿ: ಡಾ.ಸುಜಾತಾ ಚಲವಾದಿ, ವಿಜಯಪುರ

ಹೆಜ್ಜೆ ಇಟ್ಟಾಗೊಮ್ಮೆ ಅದೇ ಅಳುಕು ಅದೇ ಭಯ ಅದೇ ದುಗುಡ ನನ್ನನ್ನು ಆವರಿಸುತ್ತಲೇ ಇರುತ್ತೇ ರವಿಕೆಯ ಒಂದೊಂದು ತೊಳುಗಳನ್ನು ಏರಿಸಿ ಬಿಗಿ ಹಿಡಿತದ ಬಂಧನದಲ್ಲೂ ನಿನ್ನನ್ನು ಮೈಗೆ ಆವರಿಸಿಕೊಂಡಾಗ ಕೈದಿಯ ಕೊಳಗಳನ್ನು ತೊಟ್ಟಂತೆ ಭಾಸವಾಗುತ್ತಿದೆ ಲಂಗದ ಲಾಡಿ ಬಿಗಿದಾಗ ನರನಾಡಿಗಳೆಲ್ಲವನ್ನು ಕಟ್ಟಿ…

ಅನುದಿನ ಕವನ-೮೯೬, ಕವಿಯಿತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕಾವ್ಯ ಪ್ರಕಾರ: ಮಕ್ಕಳ‌ ಪದ್ಯ

ಮಕ್ಕಳ ಪದ್ಯ ನಮ್ಮನೆ ನೋಡಲು ಹಾರಿ ಬಂದ ಹಕ್ಕಿ ಹಿಂಡು ನೋಡು ತಂತಿ ಮೇಲೆ ಸಾಲಾಗ್ ಕೂತು ಹಾಡ್ತಾವವು ಹಾಡು ಟುವ್ವಿ ಟುವ್ವಿ ಹಾಡು… ಆ ಊರ್ನಿಂದ ಈ ಊರ್ನಿಂದ ಎಲ್ಲಾ ಒಟ್ಟು ಸೇರಿ ಪಟ ಪಟ ರೆಕ್ಕೆ ಬಡ್ಕೊಂಡು ಪಿಟಿ…

ಅನುದಿನ ಕವನ-೮೯೫, ಕವಿ: ಮೂಗಪ್ಪ ಗಾಳೇರ, ಮಂಗಳೂರು, ಕವನದ ಶೀರ್ಷಿಕೆ: ಮುಸ್ಸಂಜೆ ಹೊತ್ತಲ್ಲಿ

ಮುಸ್ಸಂಜೆ ಹೊತ್ತಲ್ಲಿ ಸುಮ್ಮನೆ ಬರೆದ ಸಾಲುಗಳೆಲ್ಲಾ ನಿನ್ನ ಯೌವನದ ಶೃಂಗಾರದ ವ್ಯಾಕರಣದ ಪದಗಳಾದವಲ್ಲ…! ಹೆಚ್ಚೇನು ಹೇಳಲಾರೆ ಗೆಳತಿ ಹುಚ್ಚು ಹಿಡಿಸಿದ ದಿನಗಳಿವು ಮತ್ತೇಕೆ ಈ ಪ್ರೀತಿಯ ಮತ್ತು….? ಮುಸ್ಸಂಜೆಯ ಹೊತ್ತಲ್ಲಿ ರವಿ ಕರಗುವ ಸಮಯದಲ್ಲಿ ಚಂದಿರನ ಜೊತೆ ಸೇರಿ ಒಂಚೂರು ದೂರ…

ಅನುದಿನ ಕವನ-೮೯೪, ಕವಿ: ಸಿದ್ಧರಾಮ‌ ಕೂಡ್ಲಿಗಿ, ವಿಜಯನಗರ‌ ಜಿಲ್ಲೆ, ಕಾವ್ಯ‌ಪ್ರಕಾರ: ಗಜಲ್

ಗಜಲ್ ಹೊರಗೆಲ್ಲೋ ಕೋಗಿಲೆ ಕೂಗಿದರೂ ನಿನ್ನ ಪಿಸುಮಾತಿನ ನೆನಪು ತರಗೆಲೆ ಗಿರಕೆಂದರೂ ಸಾಕು ಮಧುರ ಹೆಜ್ಜೆಗಳ ಬರುವಿನ ನೆನಪು ದುಂಬಿ ಝೇಂಕರಿಸುತಿದೆ ನಿನ್ನ ಮುಂಗುರುಳುಗಳ ನೆನಪ ಹೊತ್ತು ಹೂಗಳು ಅರಳಿದರೂ ಸಾಕು ನಿನ್ನ ಚಂದದ ಕಿರು ನಗುವಿನ ನೆನಪು ಸುರಿವ ಪ್ರತಿ…

ಅನುದಿನ ಕವನ-೮೯೩, ಕವಿಯಿತ್ರಿ: ಭಾರತಿ ಅಶೋಕ್ ಮೂಲಿಮನಿ, ಹೊಸಪೇಟೆ ಕವನದ ಶೀರ್ಷಿಕೆ:ಆದರೂ ಆಕ್ಷೇಪವೇಕೆ….????

ಆದರೂ ಆಕ್ಷೇಪವೇಕೆ….???? ನಾನಿಲ್ಲಿ ಬಂಧಿಯಾದರೂ ಅನುಕ್ಷಣವೂ ಅಲ್ಲಿಯದೇ ತುಡಿತ. ಧಮನಿಯ ಲಯದಲಿ ಬೆರೆತಿಹೆ ಅನುಭವಿಸೊಮ್ಮೆ ನಾಭಿಯ ಬಳಿ ಹೋಗು ಹೇಳುವುದೆಲ್ಲಾ ಎಲ್ಲಿಹೆನೆಂದು,ಮಿಳಿತವಾಗಿಹೆನೆಂದು ಕಂಗಳ ಬಿಂಬವೂ ಆನೆಂದು ಗುರುತಿಸೊಮ್ಮೆ ಸದಾ ನಿಂದಿಹೆನಲ್ಲೇ….. ಮಾತಿನ ಧ್ವನಿಗೆ ಏನೆಂದೇ ಅದು ಹೇಳದೇ ತಾನೆಂದು ಹೆಜ್ಜೆಯ ಗುರುತೊಮ್ಮೆ…

ಅನುದಿನ ಕವನ-೮೯೨, ಕವಿಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಂಗಳೂರು, ಕವನದ ಶೀರ್ಷಿಕೆ: ಹೆಸರಿಹುದೇ….

ಹೆಸರಿಹುದೇ…. ಮುಂಜಾವದಲಿ ಮಿರುಮಿರುಗಿ ಹೊಳೆದು ಹೊಸರಂಗೀವ ಇಬ್ಬನಿ ಮಣಿಗಳಿಗೇ? ಮೂಡಲ ಮನೆಯಿಂದ ಮುತ್ತಿನ ನೀರಿನ ಎರಕ ತರುವ ರವಿಯ ಕಿರಣಗಳಿಗೆ? ಕೆರೆಯ ಕೆಸರಲಿ ಅರಳಿ ನಲಿವ ಬಯಸುವ ನೈದಿಲೆಗೆ ಮುದವೀವ ಶಶಿಯ ಕದಿರುಗಳಿಗೆ? ವನದಿ ವಿಕಸಿಸಿ ಪರಿಮಳಿಸಿ ಜೇನ ಹರಿಸಿ ದುಂಬಿ…

ಅನುದಿನ‌ ಕವನ-೮೯೧ , ಕವಿ:ಸಿದ್ದು ಜನ್ನೂರು, ಚಾಮರಾಜ ನಗರ ಕವನದ ಶೀರ್ಷಿಕೆ:ಬುದ್ಧನಷ್ಟೆ ಇರುವುದು

ಬುದ್ದನಷ್ಟೆ ಇರುವುದು… ಆ ಬೆಳಕಿನ ಸುಧೀರ್ಘ ಧ್ಯಾನ ಬುದ್ದ… ಓ ಮನವೆ ನಿನೇಷ್ಟು ಸುಖೀಭವ ಗೊತ್ತೆ ಬುದ್ದ ನಿನ್ನೊಳಗೆ ನೆಲೆನಿಂತ ಮೇಲೆ… ಇಲ್ಲಿ ಜಾತಿ ಶೋಷಣೆಯು ಮೇಲುಕೀಳು ಆಚರಣೆಯು ಯಾವುದು ಗೊಡ್ಡು ಸಂಪ್ರದಾಯಗಳಿಲ್ಲ ಇರುವುದೊಂದೆ ಬುದ್ದಹೇಳಿದ ಮಾನವರೆಲ್ಲ ಒಂದೇ ಎಂಬ ಧಮ್ಮದ…

ಅನುದಿನ‌ ಕವನ-೮೯೦, ಹಿಂದಿ ಕವಿಯಿತ್ರಿ: ರತಿ ಸೆಕ್ಸೆನಾ, ಕನ್ನಡ ಅನುವಾದ: ಭುವನಾ ಹಿರೇಮಠ, ಕಿತ್ತೂರು ಕವನದ ಶೀರ್ಷಿಕೆ: ತೊರೆಯುವ ಮುನ್ನ

ತೊರೆಯುವ ಮುನ್ನ ಒಂದೊಂದೇ ಬಾಗಿಲು ಮುಚ್ಚಿಬಿಡು ಅಗುಳಿ ಬಿದ್ದ ಸಪ್ಪಳ ಕೇಳುವಂತೆ ನೂಕಿ ಒತ್ತು ಕದವ ತಪ್ಪಿಯೂ ಮತ್ಯಾವತ್ತೂ ಮರಳದಂತೆ ಶಪತ ಮಾಡು ಮುಂದೆ ಯಾರು ಬಂದು ಹೋಗುವರೊ ಶಂಕೆ ಬೇಡ ಬಾಗಿಲಿಗೇ ಬಿಟ್ಟುಬಿಡುವಾ ಅದನೆಲ್ಲ ತೊರೆಯುವ ಮುನ್ನ ಪ್ರತಿ ಹೆಜ್ಜೆ…

ಅನುದಿನ ಕವನ-೮೮೯, ಕವಿ: ಮಂಜುನಾಥ್ ಗಂಡಿ, ಹಗರಿ ಬೊಮ್ಮನ ಹಳ್ಳಿ, ಕವನದ ಶೀರ್ಷಿಕೆ:ಕಾಯವ ಕಾಯದ ಕಾಯಕ

ಕಾಯವ ಕಾಯದ ಕಾಯಕ ವೃತ್ತಿ ಯಾವುದಾದರೇನು ನಿಷ್ಟೆಯಿಂದ ಇರುನೀನು ಯಾರು ಮೆಚ್ಚದಿದ್ಸರೇನು ಅತ್ಮತೃಪ್ತಿ ಇಲ್ಲವೆನು ಬೆಂದ ಇಂದುಗಳ ನಡುವೆ ನಾಳೆಗಳ ಹುಡುಕದೇನು ಎಲ್ಲೋ ಬಿದ್ದ ಕಬ್ಬಿಣಕೆ ಅಂದದ ಅಕಾರವಿಟ್ಟ ಕಮ್ಮಾರ ತನ್ನ ಬದುಕನೇ ತಿದ್ದಲಾರದಾದ ಸತ್ತೋದ ತೊಗಲಿನಿಂದ ಚೆಂದದ ಚಪ್ಪಲಿಯ ಕೊಟ್ಟ…

ಅನುದಿನ ಕವನ-೮೮೮, ಕವಿಯಿತ್ರಿ: ಅಕ್ಷತಾ ಎನ್ ಗೌಡ, ಬೆಂಗಳೂರು

ಬೆರಳ ದಂಡೆ ಮೊಗ್ಗಾಗಿ ಅರಳುವ ಮುನ್ನ ಕಂಪು ಹಡರುವ ಮುನ್ನ ನಶೆಯೇರಿ ಅವನ ತೋಳ ತೆಕ್ಕೆಗೆ ಬೀಳುವ ತುಸುವೇ ಮುನ್ನ..!! ಪ್ರೀತಿಸ ಬೇಡವೇ ಆರಾಧಿಸಬೇಡವೇ ನಿನ್ನ ಕಂಗಳಲ್ಲಿ ತುಂಬಿಕೊಳ್ಳಬೇಡವೇ ನೋವು ನಿನಗೆ ಬೇಡ ಕಣೇ, ಎಂದವನೇ ಕೈಯನ್ನ ಬಿಗಿಯಾಗಿ ಹಿಡಿದು ಎಚ್ಚರಿಸುತ್ತಾನೆ..!!…