ಅನುದಿನ ಕವನ-೭೨೦, ಕವಿ:ಅರಳಿ ನಾಗಭೂಷಣ, ಗಂಗಾವತಿ ಕವನದ ಶೀರ್ಷಿಕೆ: ನಾಗಜಯನ ಚೌಪದಿಗಳು

ನಾಗಜಯನ ಚೌಪದಿಗಳು ನಗು ಬದುಕಿನ ಅವಿರ್ನಾಭಾವ. ನಗುವಿನ ಅತೀಯತೆ ಬಂಧಗಳ ವಿಸಂಗವು ದ್ರೌಪದಿಯ ಎರಡು ನಗುವಿನಂತರದೀ ಮಾನಪಹರಣ , ಊರುಭಂಗವೆ ನೆಡೆದಿತ್ತು ನೋಡಾ ನಾಗಜಯ. ಕಣ್ಣು ಚಲಿಸುವುದಿಲ್ಲ ; ತನ್ನದೇ ಪಥದಲ್ಲದರ ಇರುವು ಸೂರ್ಯನೂ ಚಲಿಸುವುದಿಲ್ಲ ;ತನ್ನದೇ ಪಥದಲ್ಲದರ ಇರುವು ಕಪ್ಪು-…

ಅನುದಿನ‌ ಕವನ-೭೧೯, ಕವಯಿತ್ರಿ: ರೇಣುಕಾ ರಮಾನಂದ, ಅಂಕೋಲ, ಉತ್ತರ ಕನ್ನಡ, ಕವನದ ಶೀರ್ಷಿಕೆ:ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ….?

ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ….? ಯಾರಿಗೆ ಗೊತ್ತು ನಾವಿಬ್ಬರು ಇಂದು ಭೇಟಿಯಾದರೂ ಆಗಬಹುದು ಈ ಹಾಳು ಮಧ್ಯಾಹ್ನಗಳೆಲ್ಲ ಕರಗಿ ಹತ್ತಿಯಷ್ಟು ಹಗುರಾಗಿ ಬೂರುಗದ ಹೂಗಳಂತೆ ನಮ್ಮಿಬ್ಬರ ಮಧ್ಯೆ ಹಾರಾಡಬಹುದು ಇಪ್ಪತ್ತು ವರ್ಷ- ನಾ ನಿನ್ನ ನೋಡದೇ.. ಗಂವ್ ಎನ್ನುವ ಕೆಲವು…

ಅನುದಿನ‌ ಕವನ-೭೧೮, ಕವಿ:ಲೋಕಿ (ಲೋಕೇಶ್ ಮನ್ವಿತಾ) ಬೆಂಗಳೂರು

ಬಿರುಕಿಗದೆಷ್ಟು ಸಲೀಸು ಬೇರ್ಪಡಿಸಲು ಬೆರೆತಿದ್ದ ಭಾವವೂ ಸಡಿಲಗೊಂಡು ಅಂತರ ಕಾಯ್ದುಕೊಳ್ಳುವ ಜವಬ್ದಾರಿಗೆ ಅಣೆ ಸೋಲಲೇ ಬೇಕಾದ ಸಲುವಾಗಿ ಗೆಲ್ಲುವ ನಡೆಯೀಗ ಬೆರಳು ಎಡವಿದೆ ಹಠದ ಆರ್ಭಟಕ್ಕೆ ಉಳಿದೆಲ್ಲವೂ ಗೌಣ ಸಂತಸದ ಜಾಗಕೀಗ ಸಂಕಟವೂ ಸೇರ್ಪಡೆ ಚಡಿ ಏಟು ನಾಲ್ಕು ಬಿದ್ದು ಬಿಡಲಿ…

ಅನುದಿನ‌ ಕವನ-೭೧೭, ಕವಯಿತ್ರಿ:ದೀಪದ ಮಲ್ಲಿ, ಬೆಂಗಳೂರು

ಇನ್ನೊಮ್ಮೆ ರೆಕ್ಕೆಬಡಿದು ಹಾರಿಬಿಡು ಆದದ್ದಾಗಲಿ! ಅವರ ಬಳಿ ಇರುವುದು ಅವವೇ ಸವಕಲು ಹಣೆಪಟ್ಟಿ ಮತ್ತು ಹೊಸ ಗೋಂದು ದೂರಕ್ಕೆ ಬಲು ಎತ್ತರಕ್ಕೆ ಹಾರುವಾಗ ಇಲ್ಯಾರಿಗೂ ನಿನ್ನ ಹಣೆಪಟ್ಟಿ ಕಾಣುವುದೇ ಇಲ್ಲ ತಿಳಿ ಹಣೆಗಿಂತಲೂ ವಿಶಾಲ ಬದುಕು -ದೀಪದ ಮಲ್ಲಿ, ಬೆಂಗಳೂರು *****

ಅನುದಿನ‌ ಕವನ-೭೧೬, ಕವಿ: ಬಷೀರ್ ಬಿ ಎಂ, ಮಂಗಳೂರು, ಕವನದ ಶೀರ್ಷಿಕೆ:ಕಳಚಿಟ್ಟು ಬಾ ಒಳಗೆ…

ಕಳಚಿಟ್ಟು ಬಾ ಒಳಗೆ… ಒಳ ಬರುವ ಮೊದಲು ಗೆಳೆಯ ಕೇಳಿದ ಚಪ್ಪಲಿಯನ್ನು ಕಳಚಿಟ್ಟು ಬರಲೆ? ಹೇಳಿದೆ: ಗೆಳೆಯ ಕಾಲಿನಲ್ಲಿರುವ ಚಪ್ಪಲಿ ಹಾಗೇ ಇರಲಿ ನೀನು ಬಳಸಿ ಸವೆದು ಹೋಗಿರುವ ನಿನ್ನ ಹೆಸರನ್ನು ಕಳಚಿ ಒಳಗೆ ಬಾ… ಗೆಳೆಯಾ, ತಪ್ಪು, ಹೆಸರನ್ನು ಹೊಲಿದ…

ಅನುದಿನ‌ ಕವನ-೭೧೫, ಕವಯಿತ್ರಿ: ಡಾ.ಕೃಷ್ಣವೇಣಿ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಗರಡಿಯ ಜರಡಿ

ಗರಡಿಯ ಜರಡಿ ಜಾರಿ ಬೀಳುತಿದೆ ದುಪ್ಪನೆ ಧರ್ಮ ಸಂಕಟದ ಉಸುಗು, ಇದಕೆ ಕೈ ತಟ್ಟಿ ಕೆರಳಿವೆ ಬೊಟ್ಟು ಭಂಡಾರ…. ಪಾರಂಪರಿಕ ಸ್ಥಿತಿಯ ವ್ಯಂಗ್ಯದ ಕತ್ತಲು ಹಾಸ್ಸ್ಯಗೈಯ್ಯುತಿದೆ…. ಗರಡಿಯಲಿ ಧರ್ಮದ ಜರಡಿ ಮನೋವ್ಯಾಕುಲದ ಮನವ ಹಿಸುಕುತಿದೆ….. ಕಪ್ಪು ಮಸಿಯು ನಗುತಿದೆ ನನ್ನ ನೆತ್ತರು…

ಅನುದಿನ‌ ಕವನ-೭೧೪, ಕವಿ: ಮೇಗರವಳ್ಳಿ ರಮೇಶ್,ಶಿವಮೊಗ್ಗ. ಕಾವ್ಯ ಶೀರ್ಷಿಕೆ:ಸಾಲದು ಕಾಲ ಪ್ರಿಯೆ!

ಸಾಲದು ಕಾಲ ಪ್ರಿಯೆ! ಸಾಲದು ಕಾಲ ಪ್ರಿಯೆ, ನಿನ್ನನ್ನು ಅಖ೦ಡವಾಗಿ ಪ್ರೀತಿಸಲು ಸಾಲದು ಕಾಲ ಪ್ರಿಯೆ ನಿನ್ನ ಚೆಲುವನ್ನೆಲ್ಲ ನನ್ನೊಳಗೆ ಸ೦ಪೂರ್ಣ ತು೦ಬಿ ಕೊಳ್ಳಲು. ಸಾಲದು ಕಾಲ ಪ್ರಿಯೆ ನನ್ನ ವೈರಿಗಳನ್ನು ಕಟುವಾಗಿ ದ್ವೇಷಿಸಲು ಮತ್ತವರ ಕುಹಕಗಳನ್ನು ಹತ್ತಿಕ್ಕಲು. ಸಾಲದು ಕಾಲ…

ಅನುದಿನ ಕವನ-೭೧೩, ಕವಿ:ಬಸೂ, ಗದಗ, ಕವನದ ಶೀರ್ಷಿಕೆ: ಅವ್ವ

ಅವ್ವ ಸುಡು ಬಿಸಿಲಿನ ಟಾಯರನ್ನೇ ಕಾಲಿಗೆ ಚಪ್ಪಲಿಯಾಗಿಸಿ ಅಡವಿ ಅಪ್ಪನಿಗೆ ಬುತ್ತಿ ಒಯ್ವಳು ಅವ್ವ ಹುರುಪಳಿಸುವ ಹುಡಿ ಮಣ್ಣ ಹಾಯ್ದು ಬಗಲಕೂಸಿಗೆ ಹೊಡಮರಳಿ ಹಾಲೂಡಿಸಿದವಳು ಅವ್ವ ಪಿಸಿದ ಸೀರೆಯನ್ನೇ ತಿರುತಿರುಗಿ ದಿಂಡು ಹಾಕುತ ಬದುಕ ಚಳಿಗೆ ಕೌದಿಯಾದವಳು ಅವ್ವ ತಿರಸೆಟ್ಟಿ ಗಂಡನ…

ಅನುದಿನ‌ ಕವನ-೭೧೨, ಕವಯಿತ್ರಿ: ಕೆ. ಪಿ. ಮಹಾದೇವಿ. ಅರಸೀಕೆರೆ, ಕವನದ ಶೀರ್ಷಿಕೆ: ಅವಳೆಂದೂ ಕವಿತೆ ಬರೆಯಲಿಲ್ಲ

ಅವಳೆಂದೂ ಕವಿತೆ ಬರೆಯಲಿಲ್ಲ ಅವಳೆಂದೂ ಕವಿತೆ ಬರೆಯಲಿಲ್ಲ ಪದಗಳಿಗಾಗಿ ಅಕ್ಷರಗಳ ಹಿಂದೆ ಜೋತು ಬೀಳಲಿಲ್ಲ. ದುಃಖ ಉಮ್ಮಳಿಸಿದಾಗೆಲ್ಲಾ ಏರುದಿಬ್ಬದ ಗಿಡಗಳಿಗಾಗಿ ಜೋಡಿ ಕೊಡಗಳ ಹೊತ್ತಳು ಎದೆಯ ಭಾರ ಇಳಿವವರೆಗೂ ಕಷ್ಟಗಳಿಗೆ ಶರಣು ಮಾಡಿ ಸುಖದ ಹೆಸರ ಹೇಳಿ ನೆಟ್ಟ ಸಾಲು ಸಾಲು…

ಅನುದಿನ ಕವನ-೭೧೧, ಹಿರಿಯ ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ನಮ್ಮ ಕನ್ನಡ

ನಮ್ಮ ಕನ್ನಡ ಕನ್ನಡ ಕನ್ನಡ ಕನ್ನಡ ನಮ್ಮ ಹೆಮ್ಮೆಯ ಕನ್ನಡ ನುಡಿಯಲು ಚಂದ ಸುಂದರ ಕನ್ನಡ ಕೇಳಲು ಚಂದ ಅಂದದ ಕನ್ನಡ ಕಾಡಲಿ ನಡೆಯಲು ಸಿರಿಗಂಧದ ಕನ್ನಡ ತೋಟ ಪಟ್ಟೆಗಳಲಿ ಸೌಗಂಧದ ಕನ್ನಡ ದಾರಿಯ ನಡುವೆ ಹರಿದಾಡುವ ಕನ್ನಡ ವೇದಿಕೆ ಮೇಲೆ…