ಅನುದಿನ‌ ಕವನ-೧೩೧೦, ಕವಿ: ಸಿದ್ದು‌ ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಅಪ್ಪ

ಅಪ್ಪ…. ಅಪ್ಪ ತನ್ನೆಲ್ಲಾ ನೋವುಗಳ ಎದೆಯೊಳು ಸುಟ್ಟುಕೊಂಡು ನಮಗೆ ಬೆಳಕಿನ ಪಂಜಂತೆ ನಿಂತವನು ಅಪ್ಪ… ಹೆಗಲ ಮೇಲೊತ್ತು ಊರ ಜಾತ್ರೆಯ ಉತ್ಸವದಲ್ಲಿ ಮುಗಿಲೆತ್ತರಕ್ಕೆ ಬೆಳೆಸಬೇಕೆಂಬ ಕನಸ ಕಂಡು ತೇರಂತೆ ಹೊತ್ತು ಮೆರೆದವನು ಅಪ್ಪ… ತನ್ನ ಬಡತನವ ಕಾಲಲ್ಲಿ ಹೊಸಕಿ ಸ್ಲೇಟು ಸೀಮೆ…

ಅನುದಿನ ಕವನ-೧೩೦೯, ಕವಿ: ಸುಮಿತ್ ಮೇತ್ರಿ, ವಿಜಯಪುರ, ಕವನದ ಶೀರ್ಷಿಕೆ:ಮೃದ್ಗಂಧ

ಮೃದ್ಗಂಧ ಹುಚ್ಚು ಕವಿಯೊಬ್ಬ ಮಳೆಗಾಲದ ಕೊನೆಯ ಮಳೆಯಲ್ಲಿ ಮಣ್ಣಾಗುವ ಹೊತ್ತು: ಸಖಿ, ಕೊನೆಯ ಬಾರಿ ನೋಡಲು ಬಂದಾಗ ಕೈಕೈ ಹಿಚುಕಿಕೊಂಡು ದೂರ ನಿಲ್ಲಬೇಡ ಮತ್ತು ಹಾಗೆ ಹೋಗಬೇಡ ಕೊನೆಯದಾಗಿ ನನ್ನ ನಿನ್ನ ಮಡಿಲಲ್ಲಿ ಇರಿಸಿಕೊಂಡು ಹಣೆಗೆ ಒಂದು ಮುತ್ತಿಡು ನೀನು ಮುತ್ತಿಟ್ಟ…

ಅನುದಿನ ಕವನ-೧೩೦೮, ಕವಯಿತ್ರಿ: ಮಂಜುಳಾ‌ ಹುಲ್ಲಹಳ್ಳಿ, ಚಿಕ್ಕಮಗಳೂರು, ಕವನದ ಶೀರ್ಷಿಕೆ: ಬದುಕು

ಬದುಕು… ನಿಂತ ನೀರಾದರೆ ಕೆರೆಯಾಗುತ್ತದೆ, ಕೊರೆಯಾಗುತ್ತದೆ, ಕೊಳೆಯಾಗುತ್ತದೆ, ಕಳೆ ತುಂಬುತ್ತದೆ, ಕಷ್ಟಗಳ ಬೇಗೆಗೆ ಆವಿಯಾಗಿ ಕಣ್ಮರೆಯಾಗುತ್ತದೆ. ಹರಿವ ನೀರಾದರೆ ಹಸಿರುಣಿಸುತ್ತದೆ, ಆಸರೆಯಾಗುತ್ತದೆ, ಅರಸಿ ಬಂದವರಿಗೆ ಜೊತೆ ನೀಡಿ ಪಾವನಗಂಗೆಯಾಗುತ್ತದೆ, ಇಬ್ಬನಿ ಒಡೆಯಾ ನಿನ್ನ ಸೇರಿ ಕೃತಾರ್ಥವಾಗುತ್ತದೆ -ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು

ಅನುದಿನ‌ ಕವನ-೧೩೦೭, ಕವಿ: ಸುಧನ್ ಹೊಸೂರು (ಮಧುಸೂದನ್ ಹೊಸೂರು), ಮೈಸೂರು

ನಾಲ್ಕು ಕಾಲಿನೆಸರಿನ ಉದ್ದನೆಯ ಜಡೆಗೆ ಹಿತ್ತಲ ಗಿಡದಿಂದ ಅರಳುವ ಮುನ್ನವೇ ಕಿತ್ತ ಮಲ್ಲಿಗೆಯ ಮೊಗ್ಗುಗಳ ಮದ್ಯದಲೊಂದು ಕೆಂಗುಲಾಬಿ ಹೂ ಇರಿಸಿ ಹಣೆಗೆ ಒಂದರಮೇಲೊಂದು ಬಣ್ಣದ ಬೊಟ್ಟಿಟ್ಟು ಇಸ್ತ್ರಿಮಾಡುವಾಗ ಸುಟ್ಟ ಕಾರಣಕೆ ಅಮ್ಮನ ಹಳೆ ರೇಷ್ಮ ಸೀರೆಯ ಕತ್ತರಿಸಿ ಹೋಲಿಸಿದ ಉದ್ದನೆಯ ಹೊಸಲಂಗದ…

ಅನುದಿನ ಕವನ-೧೩೦೬, ಹಿರಿಯ ಕವಿ: ಅರುಣಕುಮಾರ್ ಹಬ್ಬು, ಹುಬ್ಬಳ್ಳಿ

ಕಣ್ಣಿದ್ದೂ ಕಾಣದವರಿಗೆ ಕಾಣುವ ಕಣ್ಣ ಕೊಡಿ ಸುಖವಿದ್ದೂ ದುಃಖಿಸುವವರಿಗೆ ನಿಜ ಸುಖದ ಅರಿವು ನೀಡಿ ಹೃದಯವಿದ್ದೂ ಪ್ರೀತಿಸದವರಿಗೆ ಮಮತೆಯ ಖುಷಿಯ ಅನುಭವ ನೀಡಿ ಎಲ್ಲರಲಿ ದೋಷ ಕಾಣುವವರಿಗೆ ಸರಿ ತಪ್ಪಿನ ಭೇಧದರಿವು ಕಾಣಿಸಿ ಕೋಪವೇ ಜೀವವೆನುವವಗೆ ಪ್ರೀತಿಯ ಕಂಪು ಪಸರಿಸುವ ಹೂವಾಗಿ…

ಅನುದಿನ ಕವನ-೧೩೦೫, ಹಿರಿಯ‌ ಕವಯಿತ್ರಿ:ಎಂ.ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಮಾತನಾಡುತ್ತಲೇ ಇರು   

ಮಾತನಾಡುತ್ತಲೇ ಇರು ನೀನು ಪುಟ್ಟ ಸಸಿಯೊಂದಿಗೆ ಮಾತನಾಡುತ್ತಲೇ ಇರು ಬೇರಿಳಿಸಿ, ರೆಂಬೆ ಚಾಚಿ, ಹೂ,  ಹಣ್ಣು  ಬಿಡುವವರೆಗೂ ನೀನು ನದಿಯೊಂದಿಗೆ ಮಾತನಾಡುತ್ತಲೇ ಇರು ಬಳುಕಿ, ಚಿಮ್ಮಿ, ನಗೆ  ಉಕ್ಕಿ ಕಡಲ ಸೇರುವವರೆಗೂ ನೀನು ಚುಕ್ಕಿಯೊಂದಿಗೆ ಮಾತನಾಡುತ್ತಲೇ ಇರು ಹೊಳೆದು, ಕಣ್ಣು ಹೊಡೆದು…

ಅನುದಿನ‌ ಕವನ-೧೩೦೪, ಕವಯಿತ್ರಿ: ನಿಂಗಮ್ಮ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ:ಎಲ್ಲರಂಥವನಲ್ಲ

ಎಲ್ಲರಂಥವನಲ್ಲ ತಪ್ಪು ತಡಿ ಬರೀತಾನೆ ಏನಿದು ಎಂದರೆ ತಿದ್ದು ನೀ ಅಂತಾನೆ ರಾಗವಿರದೆ ಹಾಡುತ್ತಾನೆ ಅಯ್ಯೋ ಎಂದರೆ ನೀ ಹಾಡು ಸ್ವರವೇ ಅಂತಾನೆ ಕೂಗಾಡುತಿರುತಾನೆ ಶಾಂತಿ ಮಾರಾಯ ಎಂದರೆ ಯಾರೂ ಬೇಡ ಅಂತಾನೆ ತಪ್ಪನೊಪ್ಪಿಕೋ ಎಂದರೆ ಕಿವಿ ಕೇಳುವುದಿಲ್ಲ ಅಪ್ಪಿಕೊಳ್ತಾನೆ ಹಾಗೇ…

ಅನುದಿನ ಕವನ-೧೩೦೩, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ:ಅವಳೋ ಮರೆವಿಲ್ಲದ ನೆನಪು….

ಅವಳೋ ಮರೆವಿಲ್ಲದ ನೆನಪು…. ಅವಳೋ ನನ್ನೆದೆಗೆ ಆತುಕೊಂಡ ಹೊಂಬೆಳಕು ಅವಳೆನ್ನ ಸವಿ ಸಿಹಿ ಕನಸುಗಳ ಕಣ್ಣ ಬೊಗಸೆಯಲ್ಲಿ ತುಂಬಿ ಮಹೋನ್ನತವಾಗಿ ಬಾಳಿಗೆ ಬಂಗಾರವಾದ ಜೀವನ್ಮುಖಿ… ಅವಳ ನಗುವದು ಸುಕೋಮಲ ಸಂಜೆಗೆ ತಂಪು ಮಳೆಯಂತೆ ತಂಗಾಳಿ ಸ್ವಾದ ಅವಳ ಪಾದ ಮುತ್ತಿದ ಕಡಲೋ…

ಅನುದಿನ ಕವನ-೧೩೦೨, ಹಿರಿಯ ಕವಯಿತ್ರಿ:ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಹೊಳೆ‌ ಮಗಳು, ಹೊಳೆ ಚಿತ್ರ: ಶೇಖರ್ ಗೌಳೇರ್.

ಹೊಳೆ ಮಗಳು ಅವಳು ಹಳ್ಳ ಇವಳು ಹೊಳೆ ಹಳ್ಳದ ಬಳ್ಳಿಯಲಿ ಹರಿದು ಬಂದವಳು ಹೊಳೆ ಮಗಳು ತಾಯಿ- ಹೊಳೆ ಮಗಳ ಹುಬ್ಬನು ತೀಡುವಳು ಸುಳಿ ಮುಂಗುರುಳ ಬಾಚುವಳು ದಿಟ್ಟಿಯ ಬೊಟ್ಟಿಟ್ಟು ಅಕ್ಕರೆಯ ಮುತ್ತಿಟ್ಟು ಮುನ್ನಡೆಸುವಳು…. ಇದು ಬೆಟ್ಟ ಇದು ಗಾಳಿ ಇದು…

ಅನುದಿನ ಕವನ-೧೩೦೧, ಕವಿ: ಲೋಕೇಶ್ ಮನ್ವಿತಾ, ಬೆಂಗಳೂರು

ನೀನಿರುವಷ್ಟು ಹೊತ್ತು ನಾ ಖುಷಿಯಲ್ಲೇ ಇದ್ದೆ. ಈ ಭೇಟಿಯಲ್ಲಿಯೋ ರಹಸ್ಯವೇನೂ ಅಡಗಿರಲಿಲ್ಲ ನಿನ್ನೊಂದಿಗಿನ ಹಲವು ನೆನಪುಗಳಿಗೆ ನಾನಿಂದು ಸಾಕ್ಷಿ ರೋಸಿ ಹೋಗಿದ್ದ ಭಾವಗಳಿಂದು ಭಾರ ಇಳಿಸಿಕೊಳ್ಳಲು ಒಂದಿಷ್ಟಾದರೂ ಹೆಗಲಾಗಿ ಸಿಕ್ಕ ಘಳಿಗೆಗೆ ಧನ್ಯವಾದಗಳು ಎಲ್ಲಾ ಕಟ್ಟಳೆಗಳನ್ನು ಮೀರಿ ನಡೆದುಬಿಟ್ಟರೂ ಪರಿದಿಯೊಳನಿಂದ ಈಚೆ…