ಶಿಕ್ಷಕನ ಆತಂಕ! ವರ್ಗದೊಳಗೆ ವರ್ಣಭೇದವಿರುವಾಗ ಪೂರ್ಣತೆಯನ್ಹೇಗೆ ವರ್ಣಿಸಲಿ? ಮೂರ್ತವನ್ನಷ್ಟೇ ಅರಗಿಸಿಕೊಳ್ಳುವವರಿಗೆ ಅಮೂರ್ತವನ್ಹೇಗೆ ಅರ್ಥೈಸಲಿ? ಸುರಕ್ಷತೆಯನ್ನರಸಿ ಬಂದಿರುವವರ ಮುಂದೆ ಹೋರಾಟವನ್ಹೇಗೆ ಚಿತ್ರಿಸಲಿ? ಮಿಥ್ಯವನ್ನಷ್ಟೇ ಒಪ್ಪಿಕೊಂಡವರೆದಿರು ಸತ್ಯದ ಪಾಠವನ್ಹೇಗೆ ಮಾಡಲಿ? ಒಡೆಯುವ ವಾರಸುದಾರರಿಗೆ ಕಟ್ಟುವದನ್ಹೇಗೆ ಕಟ್ಟಿಕೊಡಲಿ? ಚಾಡಿಯ ಬುತ್ತಿ ತಂದವರಿಗೆ ಎದೆಯ ಹಾಡನ್ಹೇಗೆ ಉಣಿಸಲಿ?…
Category: ಅನುದಿನ ಕವನ
ಅನುದಿನ ಕವನ-೯೭೭, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ, ಕವನದ ಶೀರ್ಷಿಕೆ: ಗುರು
ಗುರು ಅರಿಯಲಾರದ್ದನ್ನೆಲ್ಲ ಅರ್ಥೈಸಿ ಹೇಳಿದ ಗುರು ಉಳಿದರು ಎಲ್ಲರ ಮನದಲ್ಲಿ|| ಕಲಿಯಲಾರದವರನ್ನೆಲ್ಲ ಕಲಿಕೆಗೆ ತಂದ ಗುರು ಉಳಿದರು ಎಲ್ಲರ ಮನದಲ್ಲಿ|| ಇಂದಿಗೂ ಅಳಿಯದೇ ಉಳಿದಿವೆ ಮೇಲು ಕೀಳು ಎಂಬ ವಿಷಕಾರುವ ಮನಗಳು| ಬಡವ ಬಲ್ಲಿದರೆಂದು ಭೇದ ಮಾಡದ ಗುರು ಉಳಿದರು ಎಲ್ಲರ…
ಅನುದಿನ ಕವನ-೯೭೬, ಕವಿಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು
ತಾಯಿ, ತಂದೆ, ಗುರು ಋಣಗಳು ಬದುಕಿನಲಿ ತೀರಿಸಲಾರದ ಋಣಗಳು ಇಬ್ಬನಿಯ ಒಡೆಯಾ. ತಾಯಿಪ್ರೀತಿಗೆ ಕೊಡಲೇನೂ ಇಲ್ಲ. ಮುಗುಳುನಗುವಿಗೇ ಆಕೆ ಸಂತೃಪ್ತೆ. ಮಕ್ಕಳು ಸುಖದಲಿರುವರೆಂಬ ಭಾವವೇ ತಂದೆಗೆ ಪರಮಸುಖ. ಶಿಷ್ಯರು ತನ್ನನು ಮೀರಿ ಬೆಳೆದರೆ ಸಾಕು. ಗುರುವಿಗೆ ಅದೇ ಕಾಣಿಕೆ. ಈ ಮೂವರ…
ಅನುದಿನ ಕವನ-೯೭೫, ಕವಿ: ಚಾಮರಾಜ ಸವಡಿ, ಕೊಪ್ಪಳ, ಕವನದ ಶೀರ್ಷಿಕೆ: ಮರೆಯಬೇಕಿದೆ ಎಲ್ಲಾ…
ಮರೆಯಬೇಕಿದೆ ಎಲ್ಲಾ… ಎಲ್ಲಾ ಮರೆಯಬೇಕಿದೆ ಹಾಗಂತ ಪದೆ ಪದೆ ನೆನಪಿಸಿಕೊಳ್ಳುತ್ತೇನೆ ಅಲಾರಾಂ ಅದುಮಿದ್ದೇನೆ ಕರೆಗಂಟೆ ಕಿತ್ತಿದ್ದೇನೆ ಗೇಟಿಗೆ ಹಾಕಿದ್ದ ಪತ್ರದ ಡಬ್ಬವನ್ನೂ ಬಿಚ್ಚಿಟ್ಟಾಗಿದೆ ಯಾರೂ ಬರಬೇಡಿ ನಾನು ಒಳಗಿಲ್ಲ ಮುಚ್ಚಿದ ಬಾಗಿಲೊಳಗಿನ ಮನೆಯಲ್ಲಿ ಬೆಳಕಿಲ್ಲ; ದೀಪ ಹಾಕುವಂತಿಲ್ಲ ಫ್ಯಾನು, ಫೋನು, ಕುಕ್ಕರ್…
ಅನುದಿನ ಕವನ-೯೭೪, ಕವಿ: ಡಾ. ಆನಂದ್ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ: ಏಸೊಂದು ರಾಧೆಯರಿಲ್ಲಿ. ….!?
ಏಸೊಂದು ರಾಧೆಯರಿಲ್ಲಿ. ….!? 1. ಮತ್ತೆ ಮತ್ತೆ ಬದಲಾಗುವ ಋತು ಬೀಸಿ ಸುಯ್ಯುವ ಗಾಳಿ ಗಿಡ ಗಂಟೆ ತೂಗಿ ನಿನಾದ ಹೊಮ್ಮಿ ಜುಳು ಜುಳು ಹರಿವ ಯಮುನೆಯ ಈ ದಿನನಿತ್ಯ – ವರ್ತಮಾನದ ಹಾಗೆ ಹಿಂದೆಂದೂ ಗೋಕುಲವಿರಲಿಲ್ಲ! ಇಲ್ಲಿಗೆ ಒಳ ಬಂದ…
ಅನುದಿನ ಕವನ-೯೭೩, ಪ್ರಸಿದ್ಧ ಕವಿಯಿತ್ರಿ: ಅಮೃತಾ ಪ್ರಿತಮ್, ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ
ಪ್ರಸಿದ್ಧ ಕವಿಯಿತ್ರಿ ಅಮೃತಾ ಪ್ರಿತಮ್ ಅವರ ಜನುಮದಿನ ಇಂದು(ಆ.31). ಈ ಹಿನ್ನಲೆಯಲ್ಲಿ ಅವರ ಕವಿತೆಯನ್ನು ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಅವರಿಗೆ ಗೌರವ ಪೂರ್ವಕವಾಗಿ ಶುಭಾಶಯಗಳನ್ನು ತಿಳಿಸುತ್ತಿದೆ!🍀🎂💐👇🌸 ಅವ ಹೇಳುತ್ತಿದ್ದ ಇವಳು ಕೇಳುತ್ತಿದ್ದಳು ಜಾರಿಯಲ್ಲಿತ್ತು ಆಟ ಹೇಳು, ಕೇಳುವುದು…
ಅನುದಿನ ಕವನ-೯೭೨, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಐದು ‘ಹನಿ’ಗಳು….!
ಐದು ‘ಹನಿ’ಗಳು….! ೧. ಅದಮ್ಯ ಪ್ರೀತಿ ಪತಿ – ಪತ್ನಿ – ಯರೀರ್ವರಲ್ಲಿ ಇರಬೇಕು ಅದಮ್ಯ ಪ್ರೀತಿ ; ಪ್ರೀತಿ ಇಲ್ಲದಿರೆ ಬದುಕು ದಿನವೂ ಯುದ್ಧದ ರೀತಿ. ೨.ನನ್ನ ಅಹವಾಲು ಬೇಕಿಲ್ಲ ಮಹಲು ಸುಖ ಪಡಲು ನಿನ್ನ ಪ್ರೀತಿಯ ಹೊನಲು…
ಅನುದಿನ ಕವನ-೯೭೧, ಕವಿಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ, ಕವನದ ಶೀರ್ಷಿಕೆ: ಕೊಡೆಗಳು (ಶಿಶು ಗೀತೆ)
ಕೊಡೆಗಳು (ಶಿಶುಗೀತೆ) ಬರುತಿದೆ ಇಳೆಗೆ ಮಳೆ.. ಬಣ್ಣ ಬಣ್ಣದ ಛತ್ರಿಗಳೆ ಎಲ್ಲೆಡೆ ಈಗ ಅರಳಿವೆ.. ಮುದುಡಿ ಮಲಗಿದ್ದ ಕೊಡೆಗಳಿಗೆ ಬಂದಿದೆ ಈಗ ಭಾರಿ ಬೆಲೆ ಎಲ್ಲೆಡೆ ಈಗ ಮೆರೆದಿವೆ… ಕೆಂಪು, ಹಳದಿ , ನೀಲಿ ಹಸಿರು, ಕಪ್ಪು ಜೊತೆಯಲಿ.. ಇನ್ನೂ ಹಲವು…
ಅನುದಿನ ಕವನ-೯೭೦, ಕವಿ:ಡಾ.ನಿಂಗಪ್ಪ ಮುದೇನೂರು, ಧಾರವಾಡ
ಈಗ ತಾನೇ ಮಿನುಗಿ ಹೋದ ಮಿಂಚುಹುಳು ಪುಟ್ಟ ಪ್ಲೇನು ನಭಕ್ಕೆ ಏರಿದಂತೆ ಕಾಲದ ವೈಪರೀತ್ಯಕ್ಕೆ ನಲುಗಿ ಇಳೆಗಿಳಿದಂತೆ ಮತ್ತೆ ಕತ್ತಲಿಗೆ ಬೆಳಕು ಮೂಡಿಸಿ ಮಿಂಚಿ ಮರೆಯಾದಂತೆ ಕಣ್ಣ ಮುಂದೆಯೇ ಮರೆಯಾಯಿತು ಕತ್ತಲೆಂದರೆ ಬೆಳಕಿಗೆ ವ್ಯಮೋಹ ಬೆಳಕೆಂದರೆ ಕತ್ತಲಿಗೆ ಗಾಢ ಮರೆವು ನಮಗೆಷ್ಟು…
ಅನುದಿನ ಕವನ-೮೬೯, ಕವಿ:ಅಶ್ವತ್ಥನಾರಾಯಣ, ಮೈಸೂರು, ಕವನದ ಶೀರ್ಷಿಕೆ: ಬಣ್ಣದ ಶುಕ್ತಿ(ಶಿಶು ಗೀತೆ)
ಬಣ್ಣದ ಶುಕ್ತಿ(ಶಿಶುಗೀತೆ) ಇತ್ತ ನೋಡು ಪುಟ್ಟ ಕಂದ ಕಪ್ಪೆಚಿಪ್ಪು ಇರುವುದು| ಮುತ್ತು ಕೂಡ ಅದರ ಒಳಗೆ ಜನಕೆ ಸಿಗುತಲಿರುವುದು|| ಬಣ್ಣಬಣ್ಣ ಚಿಪ್ಪು ತಂದು ಜೋಡಿಸುತ್ತಲಿಟ್ಟರು| ಕಣ್ಣ ಸೆಳೆವ ಹೆಣ್ಣರೂಪ ತಂದು ಮುದವ ಕೊಟ್ಟರು|| ಹಲವು ಬಣ್ಣ ಶುಕ್ತಿ ತಂದು ನಿನಗೆ ನಾನು…
