ಜೀವ ಸಂಚಾರ… ಎಷ್ಟೊಂದು ದಿನಗಳಾದವು ನಿನ್ನ ಊರಿನ ದಾರಿ ಮರೆತು ಖುಷಿಯ ಹೆಗಲನ್ನೇರಿದ ಸವಾರಿ ಮರೆತು ಎದೆಯ ಅಂಗಳದಲ್ಲಿ ಹರವಿದ ನಿನ್ನ ಮುಗುಳ್ನಗೆಯ ಮೌನ ಮರೆತು ಅದೆಷ್ಟೊಂದು ನಿರಾಸಕ್ತಿ ಅನಾಸಕ್ತಿಗಳ ಧೂಳಿನ ಕಣಗಳು ಹಾರಾಡುತಿವೆ ಗಾಳಿಗುಂಟ ಮುಸ್ಸಂಜೆಯ ಕೊನೆ ದಿನಪನ ನಡೆಯೂ…
Category: ಅನುದಿನ ಕವನ
ಅನುದಿನ ಕವನ-೯೬೬, ಕವಿ: ಸಿದ್ಧರಾಮಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಎದೆಯಾಳದಲ್ಲೊಂದು ಕಂಬನಿಯಿತ್ತು ನನ್ನ ನಗೆಯಲ್ಲಿ ನೀನದನ್ನು ನೋಡಲೇ ಇಲ್ಲ ಉಸಿರಿನೊಳಗೊಂದು ನಿಟ್ಟುಸಿರಿತ್ತು ನನ್ನ ಮಾತುಗಳ ಸುಳಿಯಲ್ಲಿ ನೀನದ ಕಾಣಲೇ ಇಲ್ಲ ಮನದೊಳಗೊಂದು ದಿಕ್ಕೇಡಿಯಾಗಿ ಅಲೆಯುತಿಹ ಭೋರ್ಗರೆವ ಪ್ರವಾಹ ಅಡಗಿಹುದು ಚಂದದ ಮನೆಯೊಂದು ಕುಸಿದುಬಿತ್ತು ನೆಲ ನಡುಗಿದ ಭರದಲ್ಲಿ ನೀನು ಗುರುತಿಸಲೇ…
ಅನುದಿನ ಕವನ-೯೬೫, ಕವಿ:ಮಹಿಮ, ಬಳ್ಳಾರಿ, ಚಿತ್ರ:ಯಜ್ಞ ಮಂಗಳೂರು
ಬರೆಯುವೆನೆಂಬ ಹಮ್ಮೇಕೆ ಹಳ್ಳಿಗಳಲ್ಲಿವೆ ಓದು ಬರಹ ಬರದ ಅಕ್ಕರೆಯ ಮನಗಳು ನೀನು ಬರೆಯುವುದು ಪೆನ್ನಿನಿಂದ ಅವರು ಬರೆಯುತ್ತಾರೆ ಹೃದಯದಿಂದ ಮಾತನಾಡುತ್ತಾರೆ ಮಮತೆಯಿಂದ ನಿನಗಿರದ ಭಾವನೆಗಳಿವೆ ಅವರಲ್ಲಿ ನಿನಗೆ ಬದುಕುವ ಚಿಂತೆ ಅವರು ನಿನ್ನಂತೆ ಬರೆಯಲಾರರು ಆದರೆ ನಿನ್ನ ಬದುಕಿಸುವವರು ಅವರು ಮೂಗು…
ಅನುದಿನ ಕವನ-೯೬೪, ಕವಿ: ಲೋಕೇಶ್ ಮನ್ವಿತಾ, ಬೆಂಗಳೂರು
ಜಗವ ತೊರೆಯಬೇಕು ನನ್ನ ಜಗದೊಳಗೆ ಉಳಿಯಲು ಬದುಕೆಷ್ಟು ಗಲಾಟೆ ಅದೆಷ್ಟು ನಿರಾಳ ಒಮ್ಮೆ ಸುಂದರ ಗಾಳಿ ಎಂದಿಗೋ ಒಮ್ಮೆ ಸುನಾಮಿ ಮತ್ತೊಮ್ಮೆ ಹಾಗೇ ಶಾಂತ ಸಮುದ್ರ ತನ್ನವರೆಷ್ಟು ಹಿತ ಅಷ್ಟೇ ಸುಡು ಅಗ್ನಿ ಸುಧಾರಿಸಿಕೊಳ್ಳದ ಮನಸ್ಸು ಸಹಿಸಿಕೊಳ್ಳದ ಮನಸ್ಸು ಹೆಸರು ಕೇಳಿದರೆ…
ಅನುದಿನ ಕವನ-೯೬೩, ಕವಿಯಿತ್ರಿ: ವಿನಿಶಾಗೋಪಿನಾಥ್ ಬೆಂಗಳೂರು
ನನ್ನ ಒರಟುತನ ನಿನ್ನನ್ನು ಘಾಸಿಗೊಳಿಸುವುದು, ಗೊತ್ತು ನಿನ್ನ ಗುಣವೇ ನನಗೂ ಬಂದಿರುವುದು, ಮರೆಯಬೇಡ ನಿನಗೇನು ಗೊತ್ತು ಕಡಲಿನಷ್ಟು ಪ್ರೀತಿಯನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿರುವೆ ಹೃದಯದ ಮಾತುಗಳನ್ನು ಮೌನದಲಿ ಪೋಣಿಸಿಟ್ಟಿರುವೆ ಎಲ್ಲಿದ್ದರೂ ಈಗಲೇ ಬಂದುಬಿಡು ಅನುರಾಗದ ಅಲೆಗಳ ಮೇಲೆ ತೇಲಿ ತಂಗಾಳಿಯ ಜೊತೆಗೂಡಿ ಬಿಡದೆ…
ಅನುದಿನ ಕವನ-೯೬೨, ಕವಿ:ನಾಗೇಶ ನಾಯಕ್, ಸವದತ್ತಿ, ಕಾವ್ಯ ಪ್ರಕಾರ:ಗಜಲ್
ಗಜ಼ಲ್ ಇದಿರಾದಾಗ ಮುಗುಳ್ನಕ್ಕು ಕೈಕುಲುಕುತ್ತವೆ ಮರೆಯಾದಾಗ ಕಾಲೆಳೆಯುತ್ತವೆ ಪರಿಚಿತ ಮುಖಗಳು ಸಾಮೀಪ್ಯದಲ್ಲಿ ಹೊಗಳಿ ಮೇಲಕ್ಕೇರಿಸುತ್ತವೆ ಇಲ್ಲವಾದಾಗ ವಿಷ ಕಕ್ಕುತ್ತವೆ ಪರಿಚಿತ ಮುಖಗಳು ಹೇಗೆ ಕಲಿಸುವುದು ಹೇಳಿ ಇವುಗಳಿಗೆ ಮನುಷ್ಯಪ್ರೀತಿ ಮಾನವೀಯತೆ ಪಾಠ ಹತ್ತಿರವಿದ್ದಾಗ ಖುಷಿಪಟ್ಟು ಸಂಭ್ರಮಿಸುತ್ತವೆ ಕಣ್ಮರೆಯಾದಾಗ ಹೊಟ್ಟೆ ಕಿಚ್ಚಾಗುತ್ತವೆ ಪರಿಚಿತ…
ಅನುದಿನ ಕವನ-೯೬೧, ಪ್ರಸಿದ್ಧ ಕವಿ: ಗುಲ್ಜಾರ್, ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ
ತುಂಬಾ ಕಾಡಿಸುತ್ತಾಳೆ ಈ ಮುದುಕಿ ಇರುಳೆಲ್ಲಾ ಕೆಮ್ಮುತ್ತಾಳೆ ಔಷಧಿ ಕುಡಿಯುತ್ತಾಳೆ ಮತ್ತೆ ನನ್ನ ಕೈ ಹಿಡಿದು ಮಲಗುತ್ತಾಳೆ.. ಹೊತ್ತಲ್ಲದ ಹೊತ್ತಿನಲ್ಲಿ ಹೊದಿಕೆ ತಾನೇ ತೆಗೆದೆಸೆದು ಹೇಳುತ್ತಾಳೆ ಚಳಿಯಾಗುತ್ತಿದೆ ಎಂದು..! ನಾನೇ ನನ್ನ ಕೈಗಳಲ್ಲಿ ನಿನ್ನ ಹೊತ್ತು ಹೋಗಿ ಚಿತೆಯಲ್ಲಿಟ್ಟು ಬಂದಿದ್ದೆ ಈಗಲೂ…
ಅನುದಿನ ಕವನ-೯೬೦, ಕವಿ:ಈರಣ್ಣ ಬೆಂಗಾಲಿ, ರಾಯಚೂರು, ಕವನದ ಶೀರ್ಷಿಕೆ: ವೀರ ಯೋಧರು
ವೀರ ಯೋಧರು ದೇಶದ ಹಿತಕ್ಕಾಗಿ, ಸದೃಢತೆಗಾಗಿ ಹಗಲಿರುಳು ದುಡಿಯುವರು ಸೈನಿಕರು, ವರ್ಷಾನುಗಟ್ಟಲೆ ತಮ್ಮವರನು ಬಿಟ್ಟು ಗಡಿಕಾಯುವರು ವೀರ ಯೋಧರು ದೇಶ ಸ್ಪೋಟಿಸುವವರ ಉಸಿರ ನಿಲ್ಲಿಸಲು ತಮ್ಮ ಪ್ರಾಣವನ್ನೇ ಲೆಕ್ಕಿಸರು ಶತ್ರುಗಳ ಎದೆಗೆ ಗುಂಡಿಡುವ ಅವರ ಪರಾಕ್ರಮದ ಗುಂಡಿಗೆಯನು ಎಷ್ಟು ಬಣ್ಣಿಸಿದರೂ ಸಾಲದು…
ಅನುದಿನ ಕವನ-೯೫೯, ಕವಿ:ಎ.ಎನ್.ರಮೇಶ್ ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ: ಅರ್ಪಣೆ!
‘ಅರ್ಪಣೆ’ ರಾಧೆಯ ಮಾಧವನಾರಾದನೆಯ ಕವಿತೆಯಷ್ಟೆ ಅಲ್ಲ. ರಾಧೆಯಂತಹ ಚಿರಪ್ರೇಮಿಗಳ ಪ್ರೇಮಾರ್ಪಣೆಯ ಚಿರ ಭಾವಗೀತೆ. ಇಲ್ಲಿ ಪ್ರೇಮದ ಪರಾಕಾಷ್ಟೆಯಿದೆ. ಪ್ರೀತಿಯ ಪೂರ್ಣ ಶರಣಾಗತಿಯಿದೆ. ನೀವು ರಾಧೆಯಾಗಿ ಓದಿದರೆ ಇದು ಪ್ರೇಮ ಸಮರ್ಪಣೆ ಅನುರಾಗ ಗೀತೆ. ಭಕ್ತನಾಗಿ ಓದಿದರೆ ಆತ್ಮ ಸಮರ್ಪಣೆ ಅನುಭಾವಗೀತೆ. ಒಲವಿನ…
ಅನುದಿನ ಕವನ-೯೫೮, ಕವಿ:ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಬೇಕಾಗಿದ್ದಾರೆ [ಚಿತ್ರ: ಯಜ್ಞ ಮಂಗಳೂರು]
ಬೇಕಾಗಿದ್ದಾರೆ ಬಾಯಲ್ಲಿ ತಮ್ಮ ಬೆರಳಿಟ್ಟುಕೊಂಡು ಚೀಪುತ್ತಾ ತಲೆಯಲ್ಲಾಡಿಸಬಲ್ಲ ಸುಳ್ಳುಕೋರರ ಹಿತೈಸಿಗಳು ಬೇಕಾಗಿದ್ದಾರೆ. ಸುಳ್ಳು ಕತೆಗಳ ಕೇಳುತ್ತಾ ಸುಮ್ಮನೆ ಹೂಂಗುಟ್ಟುತ್ತಾ ಕುಳಿತು ಕೊಳ್ಳಬಲ್ಲವರು ಬೇಕಾಗಿದ್ದಾರೆ. ತಮ್ಮ ಹಣೆಗೆ ತಾವೇ ನಾಮ ಹಾಕಿಕೊಳ್ಳ ಬಲ್ಲ ಅತೀ ದೊಡ್ಡ ದೊಡ್ಡ ಕುಳಗಳು ಬೇಕಾಗಿದ್ದಾರೆ. ಹೇಳಿಕೊಟ್ಟದ್ದನ್ನು ಸುಳ್ಳೊ…
