ಅನುದಿನ ಕವನ-೯೮೯, ಕವಿಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು

ಕಾವೇರಿ ನೀರಿನಲಿ ಹರಿವ ಕಲರವದಲ್ಲಿ ಇಂಪಾದ ಸವಿಯ ನೆನಪು. ಶ್ರೀರಂಗನೆದುರಲ್ಲಿ ಮಣಿವ ಭವ್ಯತೆಯಲ್ಲಿ ತಂಪಾದ ರಮ್ಯ ನೆನಪು. ಕುಂತಿಯಾ ಬೆಟ್ಟದಲಿ ಸಲುವ ದಿವ್ಯತೆಯಲ್ಲಿ ಸೊಗಸಾದ ಹಸಿರ ನೆನಪು. ಮೇಲುಕೋಟೆ ಚಲುವಯ್ಯನ ನಗೆಯಮೋಹಕತೆಯಲಿ ಹೊಳಪಾದ ಸತ್ವ ನೆನಪು. ಹೊಸಹೊಳಲಿನೊಡಲಿನಲಿ ಕಲೆಯ ತವರಿನುದರದಲಿ ಬೆಂಬಿಡದ…

ಅನುದಿನ‌ ಕವನ-೯೮೮, ಕವಿಯಿತ್ರಿ:ರಂ ಹೊ, ತುಮಕೂರು

ಸುತ್ತ ಮುತ್ತೆಲ್ಲ ಬಂಧಗಳು ಹರಡಿಯೂ ಸದ್ದು ಗದ್ದಲವಿದ್ದೂ ಈ ಬದುಕು ನಿರ್ಜನ ರಸ್ತೆಯಂತೆ ಬಿದ್ದುಕೊಳ್ಳುತ್ತದೆ.. ಕರುಳ ಬಂಧಗಳು ಬೇಲಿ ಬಿಗಿದುಕೊಂಡು ಕಟ್ಟಿಕೊಂಡ ಬಂಧಗಳು ಬಣ್ಣ ಕಳೆದುಕೊಂಡು ರಸ್ತೆಯುದ್ದಕ್ಕೂ ಅನಾಥತನ ನರಳಿ ಹೆಣಗುತ್ತದೆ! ನೀರಿಲ್ಲದ,ನೆರಳಿಲ್ಲದ ಒಣಗಿದ ದಾರಿಯಲ್ಲಿ ಸತ್ತ ಕನಸುಗಳಿಗೆ ಹತಾಶೆಯ ಚರಮಗೀತೆ!…

ಅನುದಿನ ಕವನ-೯೮೭, ಕವಿ: ಮನಂ, ಬೆಂಗಳೂರು,

ಸೌಂದರ್ಯದ ಹಿಂದಿನ ಕುರೂಪ ಸೌಂದರ್ಯದ ಪ್ರತಿಬಿಂಬದ ಕುರೂಪ ಸೌಂದರ್ಯದ ನೆರಳಿನ ಕುರೂಪ ಸೌಂದರ್ಯ ಹುಟ್ಟಿದಪರಿಯ ಕುರೂಪ ಸೌಂದರ್ಯ ಬೀರುವ ಕರಾಳತೆ ಸೌಂದರ್ಯ ತೋರುವ ದುರುಳತೆ ಸೌಂದರ್ಯ ಸೋರುವ ಮರುಳತೆ ಸೌಂದರ್ಯ ಮೀರುವ ಚಾರಿತ್ರ್ಯ ಕಂಡು ಕಂಡೂ ಸೌಂದರ್ಯವ ಆರಾಧಿಸಲದೇನಿದೆ? ಚಾರಿತ್ರ್ಯ ತಂದಿಟ್ಟ…

ಅನುದಿನ ಕವನ-೯೮೬, ಕವಿಯಿತ್ರಿ: ಸುಮತಿ ಕೃಷ್ಣಮೂರ್ತಿ, ತೋರಣಗಲ್ಲು, ಬಳ್ಳಾರಿ ಜಿ., ಕವನದ ಶೀರ್ಷಿಕೆ: ನಿರೀಕ್ಷೆ

ನಿರೀಕ್ಷೆ ಖಾಲಿ ತೂಗುಯ್ಯಾಲೆ ಸುಮ್ಮನೇ ಜೀಕುತಿದೆ ಎದೆ ಹಿಂಡುತಿದೆ ಅದರ ಕಿರ್ರೆನುವ ದನಿಗೆ ಹಿಂದೆಂದೋ ಹಾಡಿದ್ದ ಅದೇ ಪಂಚಮಿ ಹಾಡು ಕಾಡುತಿದೆ ಏಕಿಂದು  ಮಂದ ಕಿವಿಗಳೊಳಗೆ? ಬರಡು ಮನೆಯಂಗಳ ಎದೆಯಂಗಳವೆರಡೂ ನೀನನಗೆ, ನಾನಿನಗೆ  ಗತ ವೈಭವದ ಕುರುಹು ಅಂದೆಂದೋ ಸುರಿದಿದ್ದ ಪಾರಿಜಾತದ…

ಅನುದಿನ ಕವನ-೯೮೫, ಕವಿ: ಡಾ. ಲಕ್ಷ್ಮಣ ವಿಎ, ಬೆಂಗಳೂರು

ಇಂದು ಹಿರಿಯ ಕವಿ ಕೆ.ವಿ ತಿರುಮಲೇಶರ ಜನ್ಮ ದಿನ. ಈ ಹಿನ್ನಲೆಯಲ್ಲಿ ಕವಿ, ವೈದ್ಯ ಡಾ. ಲಕ್ಷ್ಮಣ ವಿಎ ಅವರು ಕಾವ್ಯದ ಮೂಲಕ ಹಿರಿಯರನ್ನು ಸ್ಮರಿಸಿಕೊಂಡು ಶುಭಾಶಯ ಕೋರಿದ್ದಾರೆ. ಕರ್ನಾಟಕ ಕಹಳೆ ಡಾಟ್ ಕಾಮ್ ಕೂಡಾ ಈ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು…

ಅನುದಿನ ಕವನ-೯೮೪, ಕವಿ: ಮುನಿರಾಜ್ ರಾಜ್, ಬೆಂಗಳೂರು, ಕವನದ ಶೀರ್ಷಿಕೆ: ನನ್ನವಳು..!

ನನ್ನವಳು..! ಬಳುಕುವ ಬಳ್ಳಿಯೊ ಅರಳಿ ಮರವೊ ಆನೆಯೊ ಅರಗಿಣಿಯ ಅದ್ಯಾವ ಹೋಲಿಕೆ ಇಲ್ಲದ ಅವಳು… ನನ್ನವಳು..! ಬಣ್ಣ ಹುಣ್ಣಿಮೆ ಬೆಳಕು ತೋಳು ಬಾಳೆಯ ದಿಂಡು ಮಲ್ಲಿಗೆ ಕಣ್ಣು ಸೇಬಿನ ಗಲ್ಲ ಹಾಲ್ಬೆಳಕು ಬೆಳದಿಂಗಳು ಇದ್ಯಾವ ಹೋಲಿಕೆ ಇಲ್ಲದ ಅವಳು… ನನ್ನವಳು..! ತಾಯಿಯ…

ಅನುದಿನ ಕವನ-೯೮೩, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ನಿರೀಕ್ಷೆ ಜಾರಿಯಲ್ಲಿದೆ….

ನಿರೀಕ್ಷೆ ಜಾರಿಯಲ್ಲಿದೆ…. ಈಗೀಗ ಎಲ್ಲದಕ್ಕೂ ಮೌನ ಬೇಲಿಯ ಲಗಾಮು ನೇರ ಎದೆಗೇ ನುಗ್ಗುವ ಮಾತಿನ ಈಟಿಗಳು ಮರಾಮೋಸದ ಮರೆಯಲ್ಲಿ ಹೆಣೆದುಕೊಳ್ಳುವ ಕುತಂತ್ರದ ಜಾಲಗಳು ಹೊಂಚಿ ಕೂತ ಗುಳ್ಳೆ ನರಿಯ ವಂಚನೆಯ ಮಿಂಚುಗಳು ಎಲ್ಲಕ್ಕೂ ಕಿರುನಗೆಯೇ ಉತ್ತರ ಅಂದ ಹಾಗೆ…. ಎಲ್ಲದಕ್ಕೂ ಉತ್ತರಿಸಲೇಬೇಕೆಂದೇನಿಲ್ಲ…

ಅನುದಿನ ಕವನ-೯೮೨, ಕವಿ: ಮಹಿಮ, ಬಳ್ಳಾರಿ

ಪ್ರಶಾಂತವಾಗಿ ಹರಿವ ನದಿಯ ಒಳಗಿನ ರಭಸದಂತೆ ನೀನು ಮುನ್ನುಗ್ಗಿ ಮುನ್ನುಗ್ಗಿ ಓಡಿ ನನ್ನೆದೆಯಲ್ಲಿ ಅವಿತು ಗುಪ್ತಗಾಮಿನಿಯಾದೆ ಎದೆಯೊಳಗೆ ಅವಿತು‌ ಪಿಸುದನಿಯಲ್ಲಿ ಹೆಸರಿಡಿದು ಕರೆದು ಕೆಣಕುವೆಯಲ್ಲ ಎದೆಯಾಳದಿಂದ ಹೊರಗೆದ್ದು ಬಾ ಕಣ್ತುಂಬ ನೋಡಬೇಕು ನಿನ್ನ ಬರಸೆಳೆದು ಅಪ್ಪಬೇಕು ಮನಸಾರೆ ಮಾತನಾಡಬೇಕು ತಗ್ಗಿಗೆ ಹರಿಯುವ…

ಅನುದಿನ‌ ಕವನ-೯೮೧, ಕವಿ:ಎಸ್.ಕೌಸ್ತುಭ ಭಾರದ್ವಾಜ್, ಬಳ್ಳಾರಿ, ಕವನದ ಶೀರ್ಷಿಕೆ: ನಾಡು-ನುಡಿ

ನಾಡು–ನುಡಿ ಕನ್ನಡ ತಾಯಿಯ ಪುತ್ರರು ನಾವು ನಮ್ಮೀ ಭಾಷೆಯ ಬೆಳೆಸೋಣ ಜಾತಿಯ ಮರೆತು ಭಾಷೆಯ ನೆನೆದು ಕನ್ನಡ ಆಸ್ತಿಯ ಬೆಳೆಸೋಣ ಸ್ವಾಭಿಮಾನ ಮೆರೆದು ನನ್ನೀ ನಾಡು ಬೆಳೆಯಬೇಕೆಂಬಂತೆ ಕನ್ನಡ ಜಾಗೃತಿ ಮಾಡೋಣ ಭಾಷೆಯು ನಮ್ಮದು ಬೆಳೆಯಲೆಂದು, ಕನ್ನಡ ಬಳಸಿ ಕನ್ನಡ ಉಳಿಸಿ…

ಅನುದಿನ ಕವನ-೯೮೦, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಬುದ್ಧ…

ಬುದ್ದ… ಬುದ್ದ ನಮ್ಮ ನಿದ್ದೆಯನ್ನು ಕದ್ದ ಬದುಕನ್ನು ಗೆದ್ದ… ಸದಾ ಚಲನಶೀಲ ಲವಲವಿಕೆ ನಮ್ಮ ಇರುವಿಕೆ ಗುರುತಿಸುವಿಕೆ ಬುದ್ದ… ಎಲ್ಲವೂ ಶೂನ್ಯ ನಗಣ್ಯ ನಮಗೆ ನಾವೇ ಧನ್ಯ- -ರಾಗಬೇಕಾದರೆ ಬೇಕು ನಿತ್ಯಸತ್ಯದ ದಾರಿಗೆ ಬುದ್ದ… ಕಾರುಣ್ಯ ಹೃದಯ, ತೇಜಸ್ಸು ಮೊಗ, ಹೊಳೆಯುವ…