ಅನುದಿನ‌ ಕವನ-೯೩೬, ಕವಿ: ಮಂಜು ಎಂ ದೊಡ್ಡಮನಿ, ಬೆಂಗಳೂರು 

ಹೊಕ್ಕುಳದ ಬುನಾದಿ ಮೇಲೊಂದು ಬಳ್ಳಿಯ ಬೆಳೆಸಿ ಒಲವ ಸುಗಂಧ ಸೂಸುವ ಹೂಗಳ ಅರಳಿಸುವೆ ಕತ್ತಲ ಬಯಕೆಗಳಿಗೊಂದಿಷ್ಟು ಬೆವರು ಹರಿಸು. ಕಾಮ ತೃಷೆ ಎಲ್ಲೇ ಮೀರಲಿ; ಕಡು ಸಂಜೆ ಕೆಂಪಾಗಿ ಮೆಲ್ಲಗೆ ಕಪ್ಪಾಗುವಾಗ ನಗ್ನತೆಯ ಕುಂಚ ಭಾವಭಂಗಿಯ ಚಿತ್ರ ಬಿಡಿಸಲಿ.. ಅದೆಷ್ಟು ಕಣ್ಣುಗಳು…

ಅನುದಿನ‌ ಕವನ-೯೩೫, ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ, [ಡಿಜಿಟಲ್ ಚಿತ್ರ ಕೃಪೆ: ಯಜ್ಞ ಆಚಾರ್ಯ, ಮಂಗಳೂರು]

ಸುಮ್ಮನೆ ನಿಂತು ಎನ್ನೆದೆಯ ಮೇಲೆ ಕೈಯಿಟ್ಟಾಗ ಅಂತರಾಳದ ಬಾಗಿಲು ತೆರೆಯಿತು * * * ಮಳೆ ನಿಂತ ಮೇಲೆ ಎಲೆಗಳ ಮರೆಯಿಂದ ಹನಿ ಉದುರುವಾಗ ನನ್ನ ಭೂತದ ನೆನಪು ಮರುಕಳಿಸಿತು * * * ಬೇಸಿಗೆ ಉರಿಬಿಸಿಲಲ್ಲಿ ಕೋಗಿಲೆಯ ಕುಹೂ ಆಲಿಸಿ…

ಅನುದಿನ ಕವನ-೯೩೪, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ:ಕ್ಷಮಿಸಿ ಸಾಹೇಬ್…

ಕ್ಷಮಿಸಿ ಸಾಹೇಬ್… ನಾವೋ ಪ್ರತಿಷ್ಟೆಗೆ ಬಿದ್ದು ನಿಮ್ಮ ಕನಸುಗಳನ್ನು ಮಾರುತ್ತಿದ್ದೇವೆ ಸಾಹೇಬ್… ಎಷ್ಟೆಂದರೆ ಸಾಹೇಬ್ ಕೋಟಿಕೋಟಿಗೆ ಒಂದು ಟಿಕೆಟಿಗೆ ನಿಮ್ಮ ಕನಸುಗಳು ಗಾಳಿಗೆ ತೂರಿ ನಿಂತಿದ್ದೇವೆ ಸಾಹೇಬ್… ಯಾರ ಹುನ್ನಾರವನ್ನು ಅರಿಯಲಾರದೆ ಜಿದ್ದಿಗೆ ಬಿದ್ದು ಒಬ್ಬರಿಗಿಂತ ಒಬ್ಬರು ನಮ್ಮ ಕಾಲ ನಾವೇ…

ಅನುದಿನ ಕವನ-೯೩೩, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಉಡುಗೊರೆ ಕೊಡಲೇನು

ಉಡುಗೊರೆ ಕೊಡಲೇನು ಭುವಿಯ ಕ್ಷಿತಿಜದಿ ಬಿರಿದ ಗಗನ ಕುಸುಮವು ನೀನು ಅಘವಣಿಯ ತಂದು ಸಿಂಪಡಿಸಲೇನು ಇಂದ್ರಛಾಪದಿ ಸೂಸುತಿರುವ ಸಪ್ತವರ್ಣವು ನೀನು ಕಪ್ಪು ಕಾಡಿಗೆ ದೃಷ್ಟಿ ತೆಗೆಯಲೇನು ಕಡಲ ಸೇರಲು ಹರಿವ ನದಿಯ ಅವಸರ ನೀನು ಹರಿಗೋಲು ಹಿಡಿದು ಸರಿಸಲೇನು ಮಕರಂದ ಹೀರಿ…

ಅನುದಿನ ಕವನ-೯೩೨, ಕವಿ: ಡಾ. ಲಕ್ಷ್ಮಣ ವಿ ಎ, ಬೆಂಗಳೂರು, ಕವನದ ಶೀರ್ಷಿಕೆ:ಕಾವಳದ ರಾತ್ರಿಯ ಒಂದು ದಿನ

ಕಾವಳದ ರಾತ್ರಿಯ ಒಂದು ದಿನ ಮೂರು ಕಲ್ಲಿನ ಒಲೆಯ ಮುಂದೆ ಊದಗೊಳವೆ ಹಿಡಿದು ‘ಫೂ’ ಎನ್ನುವ  ಅವ್ವ ಗಾಳಿಯೂದಿದಂತೆಲ್ಲಾ ಏರಿಳಿವ ಪುಪ್ಪುಸ ಅರೆ ತೆರೆದ  ಕುಪ್ಪುಸದ ಕುಣಿಯೊಳಗೆ ಎದ್ದು ಕಾಣುವ ಪಕ್ಕೆಲುಬು ಹೊಗೆಯೊಳಗೆ ಅವಳೊ ಅವಳೊಳಗೆ ಹೊಗೆಯೊ ಹೊಗೆಯಡರಿದ ಕನಸುಗಳು ಒಳಗೊಳಗೆ…

ಅನುದಿನ ಕವನ-೯೩೧, ಕವಿ: ಎ.ಎನ್.ರಮೇಶ್.ಗುಬ್ಬಿ, ಕಾರವಾರ ಜಿ. ಕವನದ ಶೀರ್ಷಿಕರ: ಟೊಮಾಟೊ ಹನಿಗಳು (ಹಾಸ್ಯ ಮಿನಿಗವಿತೆಗಳು)

” ಟೊಮಾಟೊ” ಎಂಬ ಸುಂದರಿಯ ಮೇಲೆ ಆರು ಹಾಸ್ಯದ ಹನಿ ಮಿನಿಗವಿತೆಗಳು ರಚಿಸಿದ್ದಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು. ಗಗನ ಕುಸುಮವಾಗಿರುವ ಅಡುಗೆಮನೆ ಬಂಗಾರಿಯ ಮುಂದೆ ಹಚ್ಚಿಟ್ಟ ನಗೆಪ್ರಣತೆಗಳು. ಸ್ವಲ್ಪ ಉತ್ಪ್ರೇಕ್ಷೆಯಿದೆ, ವಿನೋದವಿದೆ, ವಿಡಂಬನೆಯಿದೆ, ಜೊತೆಜೊತೆಗೆ ಸ್ವಲ್ಪ ವಾಸ್ತವವೂ ಇದೆ. ಬಂಗಾರದ…

ಅನುದಿನ ಕವನ-೯೩೦, ಕವಿ: ರಾಜು ಹೆಗಡೆ, ಶಿರಸಿ, ಕವನದ ಶೀರ್ಷಿಕೆ: ಕಣ್ಣ ಕಾಡಿನಲ್ಲಿ

ಕಣ್ಣ ಕಾಡಿನಲ್ಲಿ ಊರಕಣ್ಣ ಕಾಡೊಳಗೆ ನನ್ನದೂ ಒಂದು ಗಿಡ ನಡುಬಗ್ಗಿಸಿ ಎದೆಯುಬ್ಬಿಸಿ ಏನೆಲ್ಲ ನೋಡಿದೆ ಎಷ್ಟನ್ನು ಕಂಡೆ ಹಂಡೆಯೊಳಗೆ ಕುದಿವ ನೀರು ಹೊಯ್ದಷ್ಟೂ ಹೊಗೆಯಾಡುವ ಬಯಲು ಆಲಯದಲ್ಲೀಗ ಆತಂಕ ಮುಗಿಯುತ್ತ ಬಂತೇ ಮೂರು ದಿನ ಹಾರುವ ಹಗಲು? ವಿಷಾದವೂ ನೆಮ್ಮದಿಯೂ ಇದ್ದಂತಿಲ್ಲ…

ಅನುದಿನ ಕವನ-೯೨೯, ಕವಿ:ದಯಾನಂದ, ಬೆಂಗಳೂರು, ಕವನದ ಶೀರ್ಷಿಕೆ: ಕುಸುಮ ಕವಿಗಳಿಗೆ….

ಕುಸುಮ ಕವಿಗಳಿಗೆ…. ಪರಾಕೊತ್ತೊತ್ತಿ ಪದ, ಲಯ, ಲಾಸ್ಯ, ವಾಚ್ಯ, ಸೂಚ್ಯ, ವಿದ್ವತ್ತಿನ ಅರ್ಥ ಸೋರಿಸಿಕೊಂಡಿದ್ದು ಸಾಕು ಕವಿತೆ ಕಟ್ಟಿ‌ ಕೋಟೆ ಕೊತ್ತಲ ಮೇಲೇರೇರಿ ನಿಂತು ಝಂಡಾ ಹಾರಿಸಿ ಪುಷ್ಪವೃಷ್ಟಿ ಸುರಿಸಿಕೊಂಡಿದ್ದು ಸಾಕು. ಪ್ರೇಮ, ವಿರಹ, ಮದಿರೆ ಅಮಲಿನ ಪದ್ಯ ಹೊಸೆದು, ಪದ…

ಅನುದಿನ ಕವನ-೯೨೮, ಹಿರಿಯ ಕವಿ: ಭೋಗೇಶ್‌ ಅವಜಿ, ಹಗರಿ ಬೊಮ್ಮನಹಳ್ಳಿ, ಕವನದ ಶೀರ್ಷಿಕೆ: ಬಾ…ಮಳೆಯೆ…ಓ….ಮಳೆಯೆ, ಚಿತ್ರ: ವರ್ಷಾ, ಬೆಂಗಳೂರು

ಬಾ…ಮಳೆಯೆ…ಓ….ಮಳೆಯೆ ಬಾ ಮಳೆಯೆ॥ ಧರೆಗಿಳಿಯೆ ।। ಓ ಮಳೆಯೆ । ಕೆಳಗಿಳಿಯೆ ।। ಜಗವೆಲ್ಲ ಬದುಕಿದೆ  । ನಿನಗಾಗಿ ಕಾದಿದೆ    ।। ನೀರಿಲ್ಲದೆ ನರಳುತಿದೆ । ಕೂಳಿಲ್ಲದೆ ಕೊರಗುತಿದೆ ।। ಹಸಿವು ತೃಷೆಗಳ ಕಾಟ । ರೈತ ನಾಡಿಗೆ ಸಂಕಟ. ।।…

ಅನುದಿನ‌ಕವನ-೯೨೭, ಕವಿಯಿತ್ರಿ: ಸಿಂಧು ಚಂದ್ರ, ಶಿರಸಿ, ಕಾರವಾರ ಜಿ.

ಕೂದಲು ಗುಂಗುರಿದೆಯೆಂದು ಬುದ್ಧನಾಗಲು ಹೊರಟೆ…ಸುರುಳಿ ಉರುಳಾಯಿತು ಬುದ್ದನಷ್ಟೆ ಮಂದಹಾಸಬೀರ- ಬೇಕೆಂದುಕೊಂಡರೂ ತುಸು ಹೆಚ್ಚಾಯಿತು ನಕ್ಕಿದ್ದು ಕಣ್ಣತೆರೆಯಬೇಕೆಂದುಕೊಂಡರೂ ಅರೆಬಿರಿಯಲೂ ಇಲ್ಲ ಕನಸಲ್ಲೂ ಭೋಧಿವೃಕ್ಷದ ಸುಳಿವಿಲ್ಲ ಮಲಗಿರುವ ಮಗಳನ್ನು ಮನದಿನಿಯನನ್ನು ತೊರೆಯದೇ ತೆರೆದುಕೊಳ್ಳಲಾರೆ … ಅಶರೀರವಾಣಿಗೆ ಬೆಚ್ಚಿಬಿದ್ದು ಮುಸುಕೆಳೆದೆ ಸಿದ್ಧಾರ್ಥನೂ ಹೆಣ್ಣಾಗಿದ್ದರೆ ಬುದ್ದ -ನಾಗಲು…