Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ‌ಕವನ-೯೨೭, ಕವಿಯಿತ್ರಿ: ಸಿಂಧು ಚಂದ್ರ, ಶಿರಸಿ, ಕಾರವಾರ ಜಿ. - Karnataka Kahale

ಅನುದಿನ‌ಕವನ-೯೨೭, ಕವಿಯಿತ್ರಿ: ಸಿಂಧು ಚಂದ್ರ, ಶಿರಸಿ, ಕಾರವಾರ ಜಿ.

ಕೂದಲು ಗುಂಗುರಿದೆಯೆಂದು
ಬುದ್ಧನಾಗಲು ಹೊರಟೆ…ಸುರುಳಿ
ಉರುಳಾಯಿತು
ಬುದ್ದನಷ್ಟೆ ಮಂದಹಾಸಬೀರ-
ಬೇಕೆಂದುಕೊಂಡರೂ ತುಸು
ಹೆಚ್ಚಾಯಿತು ನಕ್ಕಿದ್ದು
ಕಣ್ಣತೆರೆಯಬೇಕೆಂದುಕೊಂಡರೂ
ಅರೆಬಿರಿಯಲೂ ಇಲ್ಲ
ಕನಸಲ್ಲೂ ಭೋಧಿವೃಕ್ಷದ ಸುಳಿವಿಲ್ಲ
ಮಲಗಿರುವ ಮಗಳನ್ನು ಮನದಿನಿಯನನ್ನು
ತೊರೆಯದೇ ತೆರೆದುಕೊಳ್ಳಲಾರೆ …
ಅಶರೀರವಾಣಿಗೆ ಬೆಚ್ಚಿಬಿದ್ದು
ಮುಸುಕೆಳೆದೆ
ಸಿದ್ಧಾರ್ಥನೂ ಹೆಣ್ಣಾಗಿದ್ದರೆ ಬುದ್ದ
-ನಾಗಲು ಹೊರಡುತ್ತಿರಲಿಲ್ಲ
ನಿಟ್ಟುಸಿರು ಪಿಸುನುಡಿಯಿತು


-ಸಿಂಧು ಚಂದ್ರ, ಶಿರಸಿ, ಕಾರವಾರ ಜಿ.
*****