ಅನುದಿನ ಕವನ-೨೨೪, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ: ಬೆಲೆಯಿಲ್ಲ ಸುರಿವ ಬೆವರಿಗೆ….

ಬೆಲೆಯಿಲ್ಲ ಸುರಿವ ಬೆವರಿಗೆ…. ಜಾತಿ ಅನ್ನುವ ಪೆಡಂಭೂತ ತಬ್ಬಿಕೊಂಡಿದೆ ಕಬಂಧ ಬಾಹುಗಳ ಚಾಚಿ ತನ್ನದೇ ಮೇಲು ಕೀಳಿನ ಹಾಸಿಗೆಯ ಹಾಸಿ. ಮನಸುಗಳ ನಡುವೆ ವೈರುಧ್ಯ ಹಸಿಮಾಂಸಕ್ಕೆ ಕಚ್ಚಾಡುವ ಹದ್ದುಗಳು ಹಾಕುತ್ತಿದ್ದಾರೆ ಜಾತಿ ಮರಕ್ಕೆ ತಾರತಮ್ಯದ ಗೊಬ್ಬರ. ಮಿತಿಮೀರಿದ ಶೋಷಣೆಯ ವರ್ತನೆ ಘಾತುಕ…

ಶಾನವಾಸಪುರದಲ್ಲಿ ಶಿಲಾಶಾಸನ ಪ್ರತಿಷ್ಠಾಪನೆ: ಶಿಲೆಯಲ್ಲಿ ಅರಳಿದ ಮನಂ ಅವರ ‘ನಾವೆಲ್ಲಾ ಭಾರತೀಯರು…’ ಘೋಷ ವಾಕ್ಯ!

  (ಸಿ.ಮಂಜುನಾಥ್) ಬಳ್ಳಾರಿ, ಆ.13: “ನಾವೆಲ್ಲಾ ಭಾರತೀಯರು… ನಮ್ಮೆಲ್ಲರ ಧರ್ಮ ಭಾರತೀಯ ಧರ್ಮ….. ನಮ್ಮ ಧರ್ಮಗ್ರಂಥ ಭಾರತದ ಸಂವಿಧಾನ…” ಈ ಮೂರು ಸಾಲುಗಳು ಎಂತಹವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ… ಈ ಉತ್ಕೃಷ್ಟ ಸಾಲುಗಳ ಕತೃ ಸಾಹಿತಿ, ಸಂಶೋಧಕ, ನಾಡಿನ ಉನ್ನತ ಪೊಲೀಸ್ ಅಧಿಕಾರಿ…

ಅನುದಿನ ಕವನ-೨೨೩, ಕವಿ; ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು….

*ಹಾಯ್ಕುಗಳು * ೧ ಕಡುವೈರಿಯ ಕಣ್ಣಲೂ ಕಾಣುತಿದೆ ಪ್ರೀತಿ ಬೆಳಕು. ೨ ಗೆದ್ದಲು ಮನೆ ಸೇರಿದ ಹಾವು; ಗೆದ್ದು ಸಂಭೃಮಿಸಿತು. ೩ ಇಳಿವಯಸ್ಸು ನೆನಪು ಮೈಲುಗಲ್ಲು ಬಣ್ಣ ಮಾಸಿವೆ. ೪ ಮಧುಹೀರುವ ದುಂಬಿ ಚುಂಬನ; ಹೂಗೆ ಹಿತಾನುಭವ. ೫ ಬಣ್ಣದ ಮಾತು…

ಅನುದಿನ‌ ಕವನ-೨೨೨, ಕವಯತ್ರಿ: ನಾಗರೇಖಾ ಗಾಂವಕಾರ್, ಕವನದ ಶೀರ್ಷಿಕೆ: ಪ್ರಮಾದಗಳು

ಕವಯತ್ರಿ ಪರಿಚಯ: ಕವಯತ್ರಿ ನಾಗರೇಖಾ ಗಾಂವಕರ ಅವರು ವೃತ್ತಿಯಲ್ಲಿ ಉಪನ್ಯಾಸಕರು. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಏಣಿ ಪದಗಳೊಂದಿಗೆ ನಾನು ಬರ್ಫದ ಬೆಂಕಿ ಕವನ ಸಂಕಲನಗಳು. ಪಾಶ್ಚಿಮಾತ್ಯ ಸಾಹಿತ್ಯಲೋಕ, ಆಂಗ್ಲ ಸಾಹಿತ್ಯಲೋಕ…

ಅನುದಿನ ಕವನ-೨೨೧, ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ನೀನಾದ್ರೂ ಹೇಳಪ್ಪಾ…(ಶಿಶು ಕಾವ್ಯ)

ನೀನಾದ್ರೂ ಹೇಳಪ್ಪಾ…(ಶಿಶು ಕಾವ್ಯ) ಅಪ್ಪಾ – ಅಪ್ಪಾ ಅಮ್ಮನಿಗೆ ನೀನಾದ್ರೂ ಹೇಳಪ್ಪ ! ಬರೀ ಸುಳ್ಳೇ ಹೇಳ್ತಾಳೆ, ಭಾರಿ ತರಲೆ ಮಾಡ್ತಾಳೆ! ನೀನೇ ನೋಡಪ್ಪ ಗೆಳೆಯರ ಕೂಡ ನನ್ನನು ಬಿಟ್ಬಿಟ್ಟು “ಆಡುಮರಿ – ಆಡುಮರಿ ” ಅಂತಾಳೆ ಸುತ್ತೆಲ್ಲಾ ಹುಡುಕಾಡೀದ್ರೂ ‘ಆಡೂನೂ…

ಅನುದಿನ ಕವನ-೨೨೦, ಕವಿ: ಎ.ಎನ್. ರಮೇಶ್ ಗುಬ್ಬಿ, ಕೈಗಾ, ಕವನದ ಶೀರ್ಷಿಕೆ: ಅನುಭಾವ….

ಕವಿ ಎ.‌ಎನ್ ರಮೇಶ್ ಅವರ ಅತ್ಯಂತ ಇಷ್ಟದ ಕವಿತೆ ‘ಅನುಭಾವ’. ದಿವ್ಯಾನುಭೂತಿ ನೀಡುವ ಆಂತರ್ಯದ ಭಾವಗೀತೆ. ಅಂತರಂಗದ ಅದ್ಭುತ ಸೌಂದರ್ಯವನ್ನು, ಅನನ್ಯ ಮಾಧುರ್ಯವನ್ನು ಆಸ್ವಾಧಿಸಬೇಕೆಂದರೆ ಅಂತರ್ಮುಖಿಯಾಗಬೇಕು. ನಮ್ಮೊಳಗೆ ನಾವೇ ಮುಖಾಮುಖಿಯಾಗಬೇಕು ಅಂತಾರೆ…..ಕವಿ ಎ.ಎನ್.ರಮೇಶ್. ಗುಬ್ಬಿ ಅವರು…..!👇 ಅನುಭಾವ..! ಮಾತುಗಳಿಲ್ಲದ ಮೌನ ಮೌನವಲ್ಲ..!…

ಅನುದಿನ ಕವನ-೨೧೯, ಕವಿ: ಮಾಲತೇಶ ಎನ್ ಚಳಗೇರಿ ಬ್ಯಾಡಗಿ, ಕವನದ ಶೀರ್ಷಿಕೆ: ನೀರಜ ಕನಕ

ನೀರಜ ಕನಕ ಕಷ್ಟದ ಕೆಸರಲಿ ಅರಳಿದ ಹೂವಿದು ಇಷ್ಟವೆ ಆದನು ನೀರಜನು। ಶಿಷ್ಟನೆ ನಡೆಯಲಿ ಗೆದ್ದನು ಜಗವನು ಪುಷ್ಟಿಯ ನೀಡಿದ ಸೈನಿಕನು॥ ೧ ಹಗಲಲಿ ಇರುಳಲಿ ಕನಸಲಿ ಮನಸಲಿ ಬಗ್ಗಿಸಿ ಬಳಲಿಸಿ ದೇಹವನು। ಜಗ್ಗದೆ ನೋವಿಗೆ ಕುಗ್ಗದೆ ಬಾಧೆಗೆ ನುಗ್ಗುತ ಸಾಗಿದ…

ಅನುದಿನ ಕವನ-೨೧೮, ಕವಿ: ಹೆಚ್ ಎಂ ಮಹೇಂದ್ರ ಕುಮಾರ್, ಬಳ್ಳಾರಿ, ಕವನದ ಶೀರ್ಷಿಕೆ:ತಣಿಸಲಾರೆ ನಿನ್ನ ಹಸಿವು….

ತಣಿಸಲಾರೆ ನಿನ್ನ ಹಸಿವು…. ನಸುಕಿನಲ್ಲೇ `ಕಾವ್ ಕಾವ್’ಗುಟ್ಟುವ ಓ, ನನ್ನ ಕಪ್ಪುಕಾಗೇ ಕಡಲಬ್ಬರದ ಏರಿಳಿತಗಳಲ್ಲಿ ಮರೆಯಾಗಿ ಥಟ್ಟನೆ ಕಣ್ಣೆದುರು ನಿಲ್ಲುವ ನೀನು – ನಾನು ಭೇಟಿ ಆಗಿದ್ದು ಹಸಿವು ; ನೀರಡಿಕೆಗೆ ಮಾತ್ರ ಹಾರಾಡಿ ಹಸಿದು ದಣಿದ ನೀನು ಆಕಾಶದಲಿ, ದುಡಿದು…

ಡಾ. ಕೆ.ಎಂ ಮೇತ್ರಿ, ಕಮಲಮ್ಮ ರಿಗೆ ನಾಡೋಜ ಬುರ್ರಕಥಾ ಈರಮ್ಮ ಪ್ರಶಸ್ತಿ

👆ಡಾ. ಕೆ ಎಂ ಮೇತ್ರಿ .  👆ಬುರ್ರಕಥಾ ಕಮಲಮ್ಮ ಬಳ್ಳಾರಿ, ಆ. 7: 2021ನೇ ಸಾಲಿನ ‘ನಾಡೋಜ ಬುರ್ರಕಥಾ ಈರಮ್ಮ ಪ್ರಶಸ್ತಿ-೨೦೨೧’ ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ ಕೆ ಎಂ ಮೇತ್ರಿ ಹಾಗೂ ರಾಯಚೂರಿನ…

ಅನುದಿನ ಕವನ-೨೧೭, ಕವಿ:ಡಾ. ಸದಾಶಿವ ದೊಡಮನಿ, ಇಳಕಲ್, ಕವನದ ಶೀರ್ಷಿಕೆ: ಕವಿ-ಕವಿತೆ

ಕವಿ-ಕವಿತೆ ಕವಿತೆ ಇಷ್ಟವಾದರೆ ಎದೆಯ ಮೇಲೆ ಹರವಿಕೊಳ್ಳಿ ಇಲ್ಲವಾದರೆ ತುಳಿಯದೇ ದಾಟಿ ಬಿಡಿ ಕನಸುಗಳ ಬಿತ್ತುವುದಾದರೆ ಎಡ-ಬಲ ನೋಡದೇ ಬಿತ್ತಿ ಕೀಳುವ ಕೈ ಹೂವಾಗಿರಲಿ ನೋವು ಹೃದಯಕ್ಕಾಗದಿರಲಿ ಪ್ರೀತಿ ಹೆಚ್ಚಾದರೆ ಕನಸುಗಳ ಚಿಗುರಲು ಬಿಡಿ ದ್ವೇಷ ದಳ್ಳುರಿಯಲಿ ಮಾನವತೆಯ ಸುಡುವುದು ಬಿಡಿ…