ಅನುದಿನ ಕವನ-೨೧೬, ಕವಿ: ಗೀತೇಶ್ (ವಿ.ಆರ್. ಮುರಲೀಧರ್, ಬಳ್ಳಾರಿ) ಕವನದ ಶೀರ್ಷಿಕೆ: ನನ್ನವಳು

  💃ನನ್ನವಳು💃 ಹುಸಿಮುನಿಸೇ ಇರಲಿ ಹಸನ್ಮುಖವೇ ಇರಲಿ ಬಿಡಿಸಲಾರದ ಬಂಧವದು ಎಂದೆಂದು ನನ್ನವಳು. … ಪ್ರೀತಿಸುವುದಾದರೂ ಸರಿಯೇ ಜಗಳವಾಡಿದರೂ ಸರಿಯೇ ಸಂಬಂಧಗಳ ಸೂಕ್ಷ್ಮತೆಯನೆಂದೂ ಬಿಟ್ಟುಕೊಡದವಳು ನನ್ನವಳು. … ಎಲ್ಲಿಂದಲೋ ಬಂದವಳು ಬದುಕಿನಲಿ ಒಂದಾದವಳು, ನಮ್ಮೀರ್ವರಾ ಸಂಬಂಧವನು ಬೆಸೆದವಳು ನನ್ನವಳು. … ಒಬ್ಬಳೇ…

ಅನುದಿನ ಕವನ-೨೧೫, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕಾವ್ಯ ಪ್ರಕಾರ: ಗಜಲ್ ರಾಗ ಸಂಯೋಜನೆ& ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

ಗಝಲ್ ಎನ್ನ ಹೃದಯದಲ್ಲಿ ಪ್ರೀತಿ ಅರಳಿ ಮೂಡಿದಾಗ ಮೊದಲು ಕಂಡ ಕನ್ಯೆಯು ನೀನಲ್ಲವೇ?                      ನನ್ನ ಗೆಳತಿ // ಮನಸ್ಸು – ಮನಸ್ಸುಗಳು ಒಂದಾಗಿ ಸಮ್ಮತಿಸಿ ಎನ್ನ ಕೈಯ…

ಅನುದಿನ ಕವನ-೨೧೪, ಕವಿ:ಡಾ.ಅಶೋಕ ಕುಮಾರ್ .ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ:ಗಾಳಿಗಿಲ್ಲ ಯಾವ ಜಾತಿ, ರಾಗ ಸಂಯೋಜನೆ&ಗಾಯನ: ವಿದ್ವಾನ್ ವಿದ್ಯಾಶಂಕರ, ಮಂಡ್ಯ

ಗಾಳಿಗಿಲ್ಲ ಯಾವ ಜಾತಿ ಬೀಸುವ ಗಾಳಿಗಿಲ್ಲ ಯಾವ ಜಾತಿ ಮನದಲ್ಲೇಕೆ ಜಾತಿ ಭೇದದ ಅನೀತಿ ಮನುಷ್ಯರಲ್ಲೇಕೆ ಮೇಲು ಕೀಳು ಜಾತಿ. ಬೀಸುವ ಗಾಳಿಗಿಲ್ಲ ಯಾವ ಜಾತಿ ಮನಸಿನಲ್ಲೇಕೆ ಮತ್ತೆ ಜಾತಿ ಕಿತಾಪತಿ ಒಬ್ಬನಲ್ಲವೆ ಪರಿಪಾಲಿಸುವ ಲೋಕಕಧಿಪತಿ. ಬೀಸುವ ಗಾಳಿಗಿಲ್ಲ ಯಾವ ಜಾತಿ…

ಅನುದಿನ ಕವನ-೨೧೩. ಕವಯತ್ರಿ:ಹೇಮಾವತಿ, ಬೆಂಗಳೂರು ಕವನದ ಶೀರ್ಷಿಕೆ: ಕಾಫಿ ಮಾಡ್ತೀಯಾ ಹೇಮಾ…

ಕಾಫಿ ಮಾಡ್ತೀಯಾ ಹೇಮಾ ! ಕೈಯಲ್ಲಿ ಮೊಬೈಲ್ ಹಿಡಿದು ಅದರಲ್ಲೇ, ಮುಳುಗಿ ಅದೇನೋ ಓದುತ್ತಾ ಆಗಾಗ ನಸುನಗುತ್ತಾ ಇದ್ದವನ ಮುದ್ದು ಮುಖವ ಕದ್ದು ನೋಡುವ ಆಸೆಯಿಂದ ಬಳಿ ಸಾರಿದರೆ ಅವ ಕೇಳುವುದು ಒಂದೇ ಪ್ರಶ್ನೆ ಕಾಫಿ ಮಾಡ್ತ್ಯಾ ಹೇಮಾ , ಅವನ…

ಅನುದಿನ ಕವನ-೨೧೨, ಕವಿ: ಮಾಲತೇಶ ಎನ್ ಚಳಗೇರಿ, ಬ್ಯಾಡಗಿ ಕವನದ ಶೀರ್ಷಿಕೆ:ಗೆಳೆಯರು-ಗೆಳೆತನ…. ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

ಕವಿ ಪರಿಚಯ: ಕವಿ ಮಾಲತೇಶ ನಾ ಚಳಗೇರಿ ಅವರು ವೃತ್ತಿಯಲ್ಲಿ ಆಂಗ್ಲಭಾಷಾ ಶಿಕ್ಷಕರು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಷಟ್ಪದಿಯಲ್ಲಿ 450, ಭಾಮಿನಿ 25 ತಲ ಷಟ್ಪದಿ 50 ಶರ ಷಟ್ಪದಿಯಲ್ಲಿ ಸಾಹಿತ್ಯ, ಛಂದಸ್ಸಿನಲ್ಲಿ…

ಅನುದಿನ ಕವನ-೨೧೧, ಕವಯತ್ರಿ:ಆಶಾ ದೀಪ, ಬೆಂಗಳೂರು ಕವನದ ಶೀರ್ಷಿಕೆ: ನಿಶಬ್ಧ

ನಿಶಬ್ಧ ಸ್ವಲ್ಪ ಹೊತ್ತು ನಿಶಬ್ಧವಾಗಿರೋಣ ಅಲ್ಲಿ ಯಾರೊ ಬಣ್ಣಗಳನ್ನು ಕಲಿಸುತ್ತಿದ್ದಾರೆ ಆ ಚಿತ್ರವನ್ನು ಪೂರ್ತಿಯಾಗಿಸೋಣ ಸ್ವಲ್ಪ ಹೊತ್ತು ನಿಶಬ್ಧವಾಗಿರೋಣ ಅವನು ಯಾರೋ ಉಳಿಯನ್ನು ಕೈಯಲ್ಲಿ ಹಿಡಿದ್ದಿದ್ದಾನೆ ಬಂಡೆಕಲ್ಲನ್ನು ಶಿಲ್ಪವಾಗಿಸೋಕೆ ಆ ಶಿಲ್ಪವನ್ನು ಕೆತ್ತಿಸೋಣ ಸ್ವಲ್ಪಹೊತ್ತು ನಿಶಬ್ಧವಾಗಿರೋಣ ಆ ಅನಂತ ಸಾಗರವೂ ಆಕಾಶದೊಂದಿಗೆ…

ಅನುದಿನ ಕವನ-೨೧೦, ಕವಿ: ಎ ಎನ್ ರಮೇಶ್ ಗುಬ್ಬಿ, ಕೈಗಾ ಕವನದ ಶೀರ್ಷಿಕೆ: ವಿಪರ್ಯಾಸ

“ದೀಪವೆಂದರೆ ದಹಿಸಿಕೊಂಡು ಬೆಳಕ ನೀಡುವ ಬತ್ತಿಯ ತ್ಯಾಗದ ನಿದರ್ಶನ. ಬೆಳಕಿಗಾಗಿ ಬಲಿದಾನವಾಗುವ ತೈಲದ ಅರ್ಪಣೆಯ ಪ್ರದರ್ಶನ. ದೀಪದ ಬೆಳಕಿನ ಹಿಂದಿರುವ ಬತ್ತಿ, ತೈಲಗಳ ತ್ಯಾಗ ಬಲಿದಾನಗಳು ಹೇಗೆ ಕಾಣುವುದಿಲ್ಲವೋ, ಹಾಗೆ ಬೆಳಕ ಹರಡುವವರ, ಬೆಳಕಾಗಿ ಬೆಳಗುವವರ ಬದುಕಿನ ಕಷ್ಟಾನಷ್ಟಗಳು ಜಗತ್ತಿಗೆ ತಿಳಿಯುವುದೇ…

ಅನುದಿನ‌ಕವನ-೨೦೯, ಕವಿ:ಸಂಜಯ್ ಹೊಯ್ಸಳ, ಕವನದ ಶೀರ್ಷಿಕೆ: ಹುಲಿ

ಪ್ರತಿ ವರ್ಷ ಜು.29 ರಂದು ವಿಶ್ವದಾದ್ಯಂತ ಹುಲಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಹುಲಿ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹುಲಿ ದಿನಾಚರಣೆಯ ವಿಶೇಷ. ವಿಶ್ವದ ಹುಲಿ ಸಂಖ್ಯೆಯಲ್ಲಿ ಶೇ. 70ರಷ್ಟು ಭಾರತದಲ್ಲಿವೆ. ಇದರಲ್ಲಿ 524 ಸಂಖ್ಯೆಯ ಹುಲಿಗಳೊಂದಿಗೆ ಕರ್ನಾಟಕ, ದೇಶದಲ್ಲಿ 2ನೇ…

ಅನುದಿನ ಕವನ-೨೦೮, ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ತಾಯಿ ತುಂಗಭದ್ರೆ

ತಾಯಿ ತುಂಗಭದ್ರೆ (ಭಾಮಿನಿ ಷಟ್ಪದಿಯಲ್ಲಿ) ತಾಯಿ ತುಂಗಾ ಭದ್ರೆ ಹರಿದಳು ಬಾಯಿ ಬಿಡುತಲಿ ನಿಂದು ನೋಡಲು ಮಾಯಿ ಸುಂದರವಾಗಿ ಹರಿದಳು ದೃಶ್ಯ ಕಣ್ತುಂಬಿ| ತಾಯಿ ಗಂಗೆಯ ಪೂಜೆ ಮಾಡಲು ಕಾಯುತಿರುವಳು ನಮ್ಮ ನಾಡನು ಜಾಯಮಾನಕು ಜನರು ಕುಡಿಯಲು ಜಲವ ದೊರಕಿಸುತ|| ವರುಷಧಾರೆಗೆ…

ಅನುದಿನ ಕವನ-೨೦೭, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ. ಕವನದ ಶೀರ್ಷಿಕೆ: ಬಾಳುವಂತ ಹೂವೇ….ಬಾಡುವಾಸೆಯೇ!?

ಬಾಳುವಂತ ಹೂವೇ….ಬಾಡುವಾಸೆಯೇ!? ಮುಂಜಾನೆ ಮುಸುಕೊದ್ದು ಮಲಗಿ ಬೆಚ್ಚನೆಯ ಅವ್ವನ ಎದೆಗೂಡಿನಲಿ ಉಸಿರಾಡಬೇಕಾದ ಎಳೆ ಕರುಳಿಗೆ ಸಂಸಾರದ ನೊಗ ಹೊರುವ ಹೊರೆಯ ಬರೆ..! ಸಲಹುವ ಅಪ್ಪ ಕೂಡಾ ಜೀವವ ಕೈ ಬಿಟ್ಟು ಹೋದನೆ? ದಿನ ತುತ್ತಿನ ಚೀಲ ತುಂಬಿಸುವ ಧಾವಂತದಲಿ ಶಿಕ್ಷಣದ ಅರಿವೇ…