ಅನುದಿನ ಕವನ-೧೨೭, ಕವಿ: ಟಿ.ಕೆ.ಗಂಗಾಧರ ಪತ್ತಾರ, ಕವನದ ಶೀರ್ಷಿಕೆ: ಕೊರೋನಾಸುರಗೆ ಚರಮಗೀತೆ

ಕೊರೋನಾಸುರಗೆ ಚರಮಗೀತೆ ***** ಒಂದು ಹನಿ ಮಸಿಯಿಂದ ಕೋಟಿ ದುರ್ಜನ ಮನಕೆ ಚಾಟಿ ಏಟಿನ ಬಿಸಿಯ ಮುಟ್ಟಿಸುವ ಛಾತಿ ಭಿನ್ನ ಚಿಂತನೆಯಲ್ಲಿ ಹೊಸದೃಷ್ಟಿ ಕೋನದಲಿ ಆ ಕೊರೋನಾಸುರನ ಓಡಿಸುವ ಕ್ರಾಂತಿ ಹೊರಗೆ ಹೋದರೆ ನೋವು ಬರಬಹುದು ಆ ಸಾವು ಹಾಕಿಕೊಳ್ಳುವ ತಪ್ಪದೇ…

ಅನುದಿನ ಕವನ-೧೨೬, ಕವಯತ್ರಿ:ವಿನುತಾ ಎಸ್, ಕವನದ ಶೀರ್ಷಿಕೆ:ಮೂಕ ಪ್ರೇಕ್ಷಕರು..!!

ಮೂಕ ಪ್ರೇಕ್ಷಕರು..!! ಆಸ್ಪತ್ರೆಯ ಗೋಡೆಗಳು ಕೇಳಿಸಿಕೊಂಡಷ್ಟು ಪ್ರಾರ್ಥನೆಗಳನ್ನು, ದೇವಸ್ಥಾನದ ಗೋಡೆಗಳೂ ಕೇಳಿಸಿಕೊಂಡಿರಲು ಸಾಧ್ಯವಿಲ್ಲ… ಆಸ್ಪತ್ರೆಯ ಗೋಡೆಗಳು ಕಂಡಷ್ಟು ಚೀತ್ಕಾರವನ್ನು,    ನರಕದ ಗೋಡೆಗಳೂ ಕಂಡಿರಲು ಸಾಧ್ಯವಿಲ್ಲ… ನೋವನ್ನು, ನರಳಿಕೆಯನ್ನು, ನಿಟ್ಟಿಸಿರನ್ನು, ಅಸಹಾಯಕತೆಯನ್ನು, ಸಾವನ್ನು, ಖುಷಿಯನ್ನು  ಎಲ್ಲವನ್ನೂ ನಿರ್ಲಿಪ್ತತೆಯಿಂದಲೇ ನಿಂತು ನೋಡುವ ಆಸ್ಪತ್ರೆಯ…

ಅನುದಿನ ಕವನ-೧೨೫, ಕವಿ:ಮನಂ(ಎಂ. ನಂಜುಂಡಸ್ವಾಮಿ, ಐಪಿಎಸ್), ಕವನದ ಶೀರ್ಷಿಕೆ:ನಾಮ್ಯಾರೋ ನೀಮ್ಯಾರೋ.

ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ವಿಶೇಷ ಕಾಲಂ ಆರಂಭವಾಗಿ ಇಂದಿಗೆ 125 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ನೂರಾ ಇಪ್ಪತ್ತೈದು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ…

ಅನುದಿನ ಕವನ-೧೨೪, ಕವಿ: ದೇವರಾಜ್ ಹುಣಿಸಿಕಟ್ಟಿ ರಾಣೇಬೆನ್ನೂರು, ಕವನದ ಶೀರ್ಷಿಕೆ: ಕೃಷ್ಣ-ರಾಧೆ(ಗಜಲ್)

ಗಜಲ್ ****** ಕೃಷ್ಣನೆಂದರೆ ತಾನೇ ಎನ್ನುವಷ್ಟು ತನ್ಮಯಳಾದಳು ರಾಧೆ ಅರ್ಪಣೆ ಅಂದರೆ ನಂದಕಿಶೋರನ ಧ್ವನಿಗೆ    ಕೊಳಲಾದಳು ರಾಧೆ ಕೃಷ್ಣನ ಶರಧಿಗೆ ದಡವಾಗಿ ಪ್ರೀತಿಯಲಿ ಕಡಲಾಗಿದ್ದು ದಿಟವಲ್ಲವೇ? ಸೇರದೆಯೂ ಬೆರೆತು ಅವನಾತ್ಮವಾದಳು ರಾಧೆ ಮೋಹನನ ಮೋಹಕೆ ಸಿಲುಕದೆ ಅವಳೇ    ಪ್ರೇಮವಾದದ್ದು…

ಅನುದಿನ‌ಕವನ-೧೨೩, ಕವಯತ್ರಿ: ರತ್ನ ಎಂ ಅಂಗಡಿ, ಹುಬ್ಬಳ್ಳಿ, ಕವನದ ಶೀರ್ಷಿಕೆ: ಅವ್ವ- ಗಿಜಗುಡುವ ನೆನಪಿನ ಸಂತೆ!

ಅವ್ವ- ಗಿಜಗುಡುವ ನೆನಪಿನ ಸಂತೆ !! ***** ಅವ್ವ ಒಳಗೊಳಗೆ ಕಷ್ಟಗಳ ನಿಗಿನಿಗಿ ಕೆಂಡ ಮೇಲ್ಗಡೆ ಬೆಳದಿಂಗಳ ನಗುವ ಮುಖವಾಡ ಅವ್ವನ ಎದೆಗೂಡಿಗೆ ಕಷ್ಟಗಳ ಕಾಮೋ೯ಡ ಬದುಕಿನದ್ದುಕ್ಕೂ ಆಗಲಿಲ್ಲಾ ಸುಖದ ಪವಾಡ!! ಕಷ್ಟಗಳ ಕಂಡಾಪಟ್ಟಿ ನುಂಗಿ ಹೊರ ನಕ್ಕವಳು ನೋವುಗಳ ಹೇಳದೆ…

ಅನುದಿನ ಕವನ-೧೨೨, ಕವಿ: ಡಾ. ಶ್ರೀನಿವಾಸ ಮೂರ್ತಿ ಯು, ಕವನದ ಶೀರ್ಷಿಕೆ: ನಾನೇ ಮಹಾತ್ಮನಾಗ ಬೇಕಂತೆ

ನಾನೇ ಮಹಾತ್ಮನಾಗ ಬೇಕಂತೆ 1 ನಾನೀಗ ನೂರರ ಅಜ್ಜಿ ದಲಿತ ಕೇರಿಗೆ ಒಮ್ಮೆ ಗಾಂಧಿ ಬಂದ ಪೊರಕೆ ಹಿಡಿದ: ಕ್ಷಣದಲ್ಲಿ ಹೊಲಸು ಮಾಯ ಗಾಂಧೀ ಹಿಂದೆ ಸಾವಿರದ ಜನ ಗಾಂಧಿಗೆಂದು ಹಾಲು ತಂದೆ……. ಅಷ್ಟರಲ್ಲಿ “ಗಾಂಧಿ” ಜನರಲ್ಲಿ ಮಾಯ. 2 ಮೊನ್ನೆ…

ಅನುದಿನ ಕವನ-೧೨೧, ಕವಯತ್ರಿ: ಡಾ. ಸೌಗಂಧಿಕಾ. ವಿ. ಜೋಯಿಸ್, ನಂಜನಗೂಡು, ಕವನದ ಶೀರ್ಷಿಕೆ: ನಮ್ಮ ಹೆಮ್ಮೆಯ ಕಾರ್ಮಿಕರು

ನಮ್ಮ ಹೆಮ್ಮೆಯ ಕಾರ್ಮಿಕರು…. ಹಗಲು ಇರುಳೆನ್ನದೆ ದಿನಂಪ್ರತಿ ತನುವ ದಣಿಸುತ ದುಡಿಯುವರು ಕಾಯಕದಲಿ ಶ್ರಮವ ವಹಿಸುತ ದೇಶ ಕಾಯುವ ಧೀಮಂತರಿವರು ಎದುರಾಗುವ ಬವಣೆಯ ಸರಿಸಿಯತ್ತ ಛಲದಲಿ ಮುಂದಡಿಯನು ಇಡುತ ತುತ್ತಿಗೊಂದು ಹೊತ್ತು ಗೊತ್ತಿಲ್ಲದೆ ಬಿಸಿಲು ಮಳೆಗೆ ಮೈಯೊಡ್ಡುತಿಹರು ಸಹನೆಯಿಂದ ದುಮ್ಮಾನವ ಸಹಿಸಿ…

ಅನುದಿನ ಕವನ-೧೨೦, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ವಿನಮ್ರ ವಿನಂತಿ!

ಇದು ನಿಮ್ಮ ಮನದಲ್ಲೂ ಮೂಡಿರುವ ಸಾಲುಗಳ ಕವಿತೆ. ನಿನ್ನೆ-ಮೊನ್ನೆ ಜನರ ಕೊಳ್ಳುಬಾಕತನದ ಹಪಹಪಿಕೆಯನ್ನು ಕಂಡಾಗ ನಿಮ್ಮಲ್ಲೂ ಉದಿಸಿದ ಭಾವಗಳಿಗೆ ಭಾಷ್ಯವಾಗಿದ್ದೇನೆ. ಅಗತ್ಯಕ್ಕಿಂತ ಹೆಚ್ಚಾಗಿ ಖರೀದಿಸುತ್ತಿರುವ, ಅಕ್ಕ-ಪಕ್ಕದವರ ಪರಿವೆಯಿಲ್ಲದೆ ಎಲ್ಲವೂ ನಮಗೇ ಬೇಕೆನ್ನುವ, ಈ ಲಾಕ್ಡೌನು ಮುಗಿಯುವುದೇ ಇಲ್ಲವೇನೋ ಎಂಬಂತೆ ವರ್ಷಕ್ಕಾಗುವಷ್ಟು ಕೂಡಿಟ್ಟುಕೊಳ್ಳುತ್ತಿರುವವರಿಗೆ…

ಅನುದಿನ ಕವನ-೧೧೯ ಕವಯತ್ರಿ: ಡಾ.ಅಕ್ಕಿ ಸುಜಾತ, ಕವನದ ಶೀರ್ಷಿಕೆ: ನನ್ನಮ್ಮ

ನಮ್ಮಮ್ಮ…. ಕಲ್ಮಶಗಳ ನುಂಗಿ ತಿಳಿಯಾದ ಗಟ್ಟಿ ನೆಲದ ಗಂಗೆ ಹುಟ್ಟು ತಬ್ಬಲಿ ಪ್ಲೇಗು…ಮಾರ್ಕ್…ಬ್ಯಾನ್ಯಾಗ ಬೆಳೆದುಳಿದ ಹಿರಿಯಗೆ ಕಿರಿಪತ್ನಿ ಮೂರು ಮಕ್ಕಳಲಿ ಬದುಕುಳಿದೊಬ್ಬನಿಗಾಗಿ ಬಂಡಿಯನೆಳೆದ ಒಂಟಿ ಎತ್ತು ಸರ ಹೊತ್ತಿನಲ್ಲಿ ಕಚ್ಚೆಹಾಕಿ ಮುಳ್ಳುನೆಲ್ಲಿಗೆ ನೀರಾಸಿ ಎಲೆದೋಡ.ತೊಗರಿ,ಗುರೆಳ್ಳು,ಹೆಸರು, ಸಜ್ಜೆ,ನವಣಿ.ಹುಳ್ಳಿಗಳ ನಿಗಾ ವಹಿಸಿ್ ಒಂಟಿ ಹೆಣ್ಣ…

ಅನುದಿನ ಕವನ-೧೧೮ ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಗಜಲ್(ಬರಬಾರದೆ ಗೆಳತಿ)

ಗಜಲ್ – ಒಲವಿನ ಓಲೆಗಳೆಲ್ಲ ಗರಿಬಿಚ್ಚಿ ನರ್ತಿಸುತಿವೆ ಬರಬಾರದೆ ಗೆಳತಿ ಮೈಮನದ ಸುಳಿಗಳೆಲ್ಲ ವೀಣೆಯಾಗಿ ಹಾಡುತಿವೆ ಬರಬಾರದೆ ಗೆಳತಿ – ನಿನ್ನ ಕಣ್ಣ ಕಂಬನಿಯಗುಂಟ ನನ್ನೊಲವು ಜಾರಿ ಹೋದರೇನಾಯ್ತು ಕಣ್ಣ ಪ್ರತಿ ಹನಿಗಳೂ ಪ್ರೇಮಗೀತೆಯ ಹಾಡುತಿವೆ ಬರಬಾರದೆ ಗೆಳತಿ – ಖಾಲಿಯಾದ…