ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ವರಮಹಾಲಕ್ಷ್ಮಿ ಅವರು ಚಿಕ್ಕನಾಯಕನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿಯಾಗಿ, ಮಹಿಳಾ ಒಕ್ಕೂಟದ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದಾ ಮಹಿಳೆಯರ ಪ್ರಗತಿಯ ಬಗ್ಗೆ ತುಡಿಯುವ ಹಾಗೂ ಸುಂದರ ಆಶಯಗಳಿರುವ ಇವರ ಬಹುತೇಕ ಕವಿತೆಗಳಲ್ಲಿ ಮಹಿಳೆಯ ಬದುಕೇ ಕೇಂದ್ರಬಿಂದು. …
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೧೩೩, ಕವಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್
ಗಝಲ್ ಕಡಲ ಒಡಲಲಿ ಮೀಯುವದ ತಡೆದು ಒಡಲನೆ ಕಡಲಾಗಿಸಿ ಮೀಯುತಿರುವೆಯಲ್ಲ ಸರಸಿ ಸರೋವರದಿ ಸರಸಕ್ಕೆ ಕರೆಯುತಲಿರಲು ವಿರಹದ ಬಿಸಿಯನೇರಿಸಿ ಖುಷಿ ಪಡುವೆಯಲ್ಲ ಅರ್ಪಣಾ ತರ್ಪಣದಿ ಒಪ್ಪ ಓರಣದಿಂದ ಅರ್ಪಿಸಲು ಅವಸರದಿ ಕಾಯುತಿರುವೆಯೇಕೆ ಅಪ್ಪಿ ತಪ್ಪಿಯು ಅಪ್ಪಲಾರದೆ ಅನುಮಾನಿಸಿ ಅರಸಿ ಐಸಿರಿಯ ಅಸಡ್ಡೆಯಲಿ…
ಮಹತ್ವವನ್ನು ಸೃಷ್ಟಿಸುವ ಸಾಹಿತ್ಯ ಬರೀ ಭಾಷಾ ನಿಕಾಯಗಳಿಗೆ ಸೀಮಿತವಲ್ಲ -ಸಾಹಿತಿ ಚಿದಾನಂದ ಸಾಲಿ
ಬಳ್ಳಾರಿ,ಫೆ 6: ಸಾಹಿತ್ಯ ಬರೀ ಭಾಷಾ ನಿಕಾಯಗಳಿಗೆ ಸೀಮಿತವಲ್ಲ, ವಿಜ್ಞಾನ, ವಾಣಿಜ್ಯ ಸೇರಿದಂತೆ ಎಲ್ಲಾ ವಿಭಾಗಗಳನ್ನು ಒಳಗೊಂಡಿರುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿಯ ಸದಸ್ಯ ಡಾ. ಚಿದಾನಂದ ಸಾಲಿ ಅವರು ಹೇಳಿದರು. ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್…
ಅನುದಿನ ಕವನ-೧೧೩೨, ಕವಿ:ಡಾ. ವೆಂಕಟೇಶ್ ನೆಲ್ಲುಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಹೊಡೆಯಬೇಡಯ್ಯ ಮೊಳೆಯ ಮರದ ಎದೆಗೆ
ಹೊಡೆಯಬೇಡಯ್ಯ ಮೊಳೆಯ ಮರದ ಎದೆಗೆ ಇದು ಮಾಗಿ ಕಾಲ ಕರಗಿ ನೆಲಕ್ಕಿಳಿಯುತ್ತವೆ ಎಲೆ ಕೊರಗಿ ಮುಗಿಲ ಮೇಲಿಂದ ಒಣಗಿ ಒರಗುವುದೇನು ಸಂಭ್ರಮದ ಸಂಗತಿಯೆ? ಸುಡು ಮಂಜು ಕೆಡು ಕೆಂಡ ಹೃದಯಕ್ಕೆ ಉಳಿ ಬಡಿವ ದೆವ್ವ ಗಾಳಿ ಬೋಳು ಮರ; ಒಡಲೊಳಗೆ ಬಿಸೀ…
ಅನುದಿನ ಕವನ-೧೧೩೧, ಹಿರಿಯ ಕವಿ: ಡಾ. ನಟರಾಜ್ ಹುಳಿಯಾರ್, ಬೆಂಗಳೂರು, ಕವನದ ಶೀರ್ಷಿಕೆ: ನೀಲು,….
ನೀಲು… ಎಲ್ಲೊ ಕಡಲಿನ ಮುತ್ತಾಗಿ ಮೂಡಿ ಇನ್ನೆಲ್ಲೊ ತೊರೆಯಾಗಿ ಹರಿದು ಮತ್ತೆಲ್ಲೊ ಗಿಳಿಯಾಗಿ ಕೂಗಿ ಅವಳು ನೂರು ಅವತಾರವನ್ನೆತ್ತಿದಳು. ಅವಳು ದ್ರೌಪದಿಯ ಶ್ರೀಮುಡಿ, ವೈದೇಹಿಯ ವಿರಹ; ಕಾಳಿದಾಸನ ವನದ ಸಖಿಯರ ತುರುಬಿನಲ್ಲಿ ಮಲ್ಲಿಗೆಯ ದಂಡೆ. ಅವಳು ಅಕ್ಕಮಹಾದೇವಿಯ ಆತ್ಮ ಹೆಲೆನ್ನಳ ನಖ,…
ಹಂಪಿ ಉತ್ಸವಕ್ಕೆ ಸಂಭ್ರಮದ ತೆರೆ: ಮೂರು ದಿನಗಳಲ್ಲಿ ಉತ್ಸವದಲ್ಲಿ 12 ಲಕ್ಷಕ್ಕೂ ಹೆಚ್ಚಿನ ಜನರು ಭಾಗಿ
ಹಂಪಿ(ವಿಜಯನಗರ).ಫೆ.4: ಮೂರು ದಿನಗಳ ಹಂಪಿ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಕಂಡಿತು. ಉತ್ಸವದಲ್ಲಿ 12 ಲಕ್ಷ ಜನರು ಭಾಗಿಯಾಗಿ ಉತ್ಸವವನ್ನು ಅಭೂತಪೂರ್ವವಾಗಿ ಬೆಂಬಲಿಸಿದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ…
ಅನುದಿನ ಕವನ-೧೧೩೦, ಕವಿ:ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ, ಕಾವ್ಯ ಪ್ರಕಾರ: ಗಜಲ್
ಗಜಲ್ ಸಂಸಾರದ ಒಳಿತಿಗಾಗಿಯೇ ಉರುಳು ಸೇವೆ ಮಾಡುವುದ ಕಲಿತೆವು ನೊಂದವರಿಗೆಲ್ಲ ಒಳಿತಾಗಲೆಂದು ಪ್ರಾರ್ಥಿಸುವುದ ಕಲಿಯಲೇ ಇಲ್ಲ ನಮ್ಮ ನೋವುಗಳನ್ನೇ ದೊಡ್ಡದಾಗಿಸಿ ಹಂಚಿಕೊಳ್ಳಲು ಕಲಿತೆವು ಪ್ರತಿದಿನವೂ ಕುದಿವವರ ನೋವುಗಳ ಅರಿಯುವುದ ಕಲಿಯಲೇ ಇಲ್ಲ ದೇಗುಲಗಳಿಗೆಲ್ಲ ಚಿನ್ನದ ಹೊದಿಕೆಯ ಹೊದಿಸುವುದ ಕಲಿತೆವು ನಮ್ಮ ಮನಸುಗಳಿಗೆ…
ಅನುದಿನ ಕವನ-೧೧೨೯, ಕವಯಿತ್ರಿ: ಡಾ.ಕೆ.ಎಸ್ ಗಿರಿಜಾ, ತುಮಕೂರು, ಕವನದ ಶೀರ್ಷಿಕೆ: ನಮ್ಮ ದನಿ….
ತುಮಕೂರು ವಿ ವಿ ಯ ಕಲಾ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಕೆ.ಎಸ್ ಗಿರಿಜಾ ಅವರ ಕವಿತೆಗಳಲ್ಲಿ ಹೋರಾಟದ ದನಿ ಮಾತ್ರವಲ್ಲ ಜೀವಪ್ರೇಮವೂ ಇದೆ. ಮೌನವನ್ನು ಧ್ಯಾನಿಸುವ, ಸಮಸಮಾನತೆಗೆ ಹಂಬಲಿಸುವ ಡಾ. ಗಿರಿಜಾರವರ ‘ನಮ್ಮ ದನಿ’ ಕವಿತೆ ಇಂದಿನ ‘ಅನುದಿನ ಕವನ’ ಕಾಲಂನಲ್ಲಿ!…
ಅನುದಿನ ಕವನ-೧೧೨೮, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ: ಎಂಥ ಕಾಲವು
ಎಂಥ ಕಾಲವು ಎಂಥ ಕಾಲ ಎಂಥ ಕಾಲ ಎಂಥ ಕಾಲವು ಎಂಥವರನೂ ಯಾಮಾರಿಸುವ ಜಾಣ ಕಾಲವು. ಹೊಗಳು ಭಟರ ತಂಡ ಕಟ್ಟಿ ಪೊರೆವ ಕಾಲವು ಆಗದವರ ಮರೆಗೆ ಸರಿಸಿ ಮೆರೆವ ಕಾಲವು. ಒಳ್ಳೆತನಕೆ ಕಾಲವಲ್ಲ ಎನುವ ಕಾಲವು ಮಳ್ಳತನವೆ ನಮ್ಮ ದೈವ…
ಹಂಪಿ ಉತ್ಸವ ನಾಡಿನ ಸಾಂಸ್ಕೃತಿಕ ಉತ್ಸವ -ಮುಖ್ಯಮಂತ್ರಿ ಸಿದ್ಧರಾಮಯ್ಯ
ಹಂಪಿ(ವಿಜಯನಗರ).ಫೆ.2: ಜನರಿಗಾಗಿ ಹಾಗೂ ಕಲಾವಿದರ ಹಿತರಕ್ಷಣೆಗಾಗಿ ಉತ್ಸವಗಳನ್ನು ಮಾಡುತ್ತಿದ್ದೇವೆ. ಹಂಪಿ ಉತ್ಸವವು ಒಂದು ಸಾಂಸ್ಕೃತಿಕ ಉತ್ಸವವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು. ಶುಕ್ರವಾರ ಹಂಪಿ ಉತ್ಸವದಲ್ಲಿ ಪಾಲ್ಗೊಳ್ಳಲು ಕನ್ನಡವಿವಿ ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.…
