ತುಮಕೂರು ಜಿಲ್ಲೆಯ ಸುಮ ಶ್ರೀನಿವಾಸ್ ವೃತ್ತಿಯಿಂದ ಶಿಕ್ಷಕಿ. ವೃತ್ತಿಯನ್ನು ಗಾಢವಾಗಿ ಪ್ರೀತಿಸುವ ಇವರಿಗೆ ಹಾಡುವುದೇ ಕವಿತೆ! ಆಗಾಗ ಹೀಗೆ ಒಂದೊಂದು ಅಕ್ಷರದ ಕವಿತೆ! ಕರ್ನಾಟಕ ಕಹಳೆಯ ಡಾಟ್ ಕಾಮ್‌ನ ಜನಪ್ರಿಯ ಅನುದಿನ ಕಾಲಂನ ಇವತ್ತಿನ ಕವಿತೆ ಸುಮ ಶ್ರೀನಿವಾಸ್ ಅವರ ಅವನು…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೧೨೬, ಕವಿಯಿತ್ರಿ: ಒಲವು, ಬೆಂಗಳೂರು, ಕವನದ ಶೀರ್ಷಿಕೆ:ಅವಳು
‘ಒಲವು’ ಎಂಬ ಕಾವ್ಯನಾಮದಿಂದ ಬರೆಯುವ ಲಕ್ಷ್ಮೀ ಸಾಗರ್, ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಹಿರಿಯ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರೀತಿ ಸ್ನೇಹಗಳು ವ್ಯವಹಾರವಾಗುತ್ತಿರುವ ಈ ದಿನಗಳಲ್ಲಿ ಒಲವನ್ನೇ ಕವಿತೆಯಾಗಿಸುವ ಇವರ ಹಲವು ಕವಿತೆಗಳಲ್ಲಿ ‘ಅವಳು’ ಕುರಿತ ರಚಿಸಿದ ಸಾಲುಗಳನ್ನು ಕರ್ನಾಟಕ ಕಹಳೆ ಡಾಟ್…
ಅನುದಿನ ಕವನ-೧೧೨೫, ಕವಿಯಿತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ: ನನ್ನವ್ವ
ನನ್ನವ್ವ..❤ ಅವ್ವ ಗಾಂಧಿಯ ಅಹಿಂಸೆಯನ್ನು ಬುದ್ಧನ ಪ್ರೇಮವನ್ನು ಕ್ರಿಸ್ತನ ಕರುಣೆಯನ್ನೂ ಬದುಕಿ ಹೋದಳು! ಅಣ್ಣ-ಅಕ್ಕರ ಪರಿಚಯವೇ ಇರದವಳು ವಚನಗಳನ್ನೇ ಜೀವಿಸಿದಳು! ಕಥೆ-ಕಾವ್ಯಗಳ ಗಂಧವೇ ಅರಿಯದವಳು ಕಥೆಯಾದಳು.. ನಾನೆಂದೂ ಕಟ್ಟಲಾಗದ ಕವಿತೆಯಾದಳು! ಅಕ್ಷರ ಬಲ್ಲ ನಾನು ಗಾಂಧಿ-ಬಸವ-ಬುದ್ಧರನ್ನು ಓದುತ್ತಾ… ಅಕ್ಕನ ವಚನಗಳನ್ನು ಕೇಳುತ್ತಾ…
ಅನುದಿನ ಕವನ-೧೧೨೪, ಕವಿಯಿತ್ರಿ: ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ: ಸಖಿ
ಸಖಿ ನೀಲಾಕಾಶದದುದ್ದಕ್ಕೂ ಹಾರುವ ಬೆಳ್ಳಕ್ಕಿ ಸಾಲು… ಮೋಡ ಕವಿಯುತ್ತಿರುವಂತೆಯೇ ಮನ ಗರಿಗೆದರಿ ನವಿಲು… ಕಪ್ಪನೆಯ ಆಗಸದಲ್ಲಿ ಮಿಂಚಿದ ನಕ್ಷತ್ರ ಕಂಗಳಿನವಳು ಮೆಲ್ಲಗುದುರುವ ಮುಗಿಲಮಳೆ ಅಕ್ಷತೆಯ ಕಾಳಿಗೆ ಹಸಿರತೆನೆ ಬಳುಕಿ ತೊನೆದಾಡಿ ಹುಲ್ಲ ದಳ ದಳದ ತುಂಬೆಲ್ಲಾ ಇಬ್ಬನಿ ಹೂ ಮುಡಿದು ಅರಳಿದವಳು…
ಅನುದಿನ ಕವನ-೧೧೨೩, ಕವಿಯಿತ್ರಿ: ಧರಣೀಪ್ರಿಯೆ, ದಾವಣಗೆರೆ , ಕವನದ ಶೀರ್ಷಿಕೆ: ಭಾವನೆ
ಭಾವನೆ ಮನದಿ ಮೂಡಿದ ಮಾತು ಮೊಗದಿ ಕಾಣುವ ಒನಪು ನೋವು ನಲಿವಿನ ಛಾಪು ಸಂಭ್ರಮ,ಸಂತಸದ ಹುರುಪು| ಅಂತರಾಳವ ಕದಡಿ ಜೀವವನೇ ಹಿಂಡಿ ತೊಳಲಾಡುವಂತೆ ಮಾಡಿ ಹಿಂಸೆಕೊಟ್ಟು ಒಡನಾಡಿ|| ಕೆಲವೊಮ್ಮೆ ಅರಳಿ ಹಲವೊಮ್ಮೆ ಕೆರಳಿ ಇನ್ನೊಮ್ಮೆ ಹೊರಳಿ ಮತ್ತೊಮ್ಮೆ ಮರಳಿ| ಮನುಜನ ಏಳು…
ಅನುದಿನ ಕವನ-೧೧೨೨, ಕವಿ: ಡಾ. ಗೋವಿಂದರಾಜ ಆಲ್ದಾಳ, ಕವನದ ಶೀರ್ಷಿಕೆ:ಭಾವ ಭೃಂಗದ ಬೆನ್ನೇರಿ
ಭಾವ ಭೃಂಗದ ಬೆನ್ನೇರಿ ಹುಣ್ಣಿಮೆಯ ಕುಡಿಯ ಎಸಳಿನ ತಂಗಾಳಿ ಭಾವದ ಬೆನ್ನೇರಿ ಸೂಸುತಿತ್ತು ! ನೆನವಿನ ಅಂಗಳದಿ ನೂರೊಂದು ಚಿತ್ತಾರ ಕನಸಿನ ಕದ ತಟ್ಟಿ ನುಲಿಯುತಿತ್ತು! -೧- ಮುಂಜಾವು ಸಿಹಿಗನಸು ಶೃತಿಯ ಮ್ಯಾಲೇರಿ ಮೋಹ ಭಂಗಿ ತಾಳ ಹಾಕುತ್ತಿತ್ತು! ಗೋಧೂಳಿಯ ಗಾಳ್ಯಾಗ…
ಅನುದಿನ ಕವನ-೧೧೨೧, ಕವಿಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ
ಜನರ ಟೀಕೆ ಟಿಪ್ಪಣಿಗಳು ಈಗೀಗ ಗೌಣ ನನ್ನತನವೇ… ಮಾನ್ಯ ! ಸಮಜಾಯಿಷಿ ಕೊಡುವ ಗೋಜಿಗೂ ಹೋಗದ ನಾನು , ಅವರ ಕಣ್ಣಿಗೆ ಸುಖಿಯೋ ದುಃಖಿಯೋ… ಬಲ್ಲವರಾರು ?! ಮೌನದ ಪರದೆಯ ಎಳೆದಾಗ ಚಡಪಡಿಸುವ ಅವರು , ಇತರರ ಜೀವನ ರಂಜನೆಯ ಸಿನಿಮಾ…
ಅನುದಿನ ಕವನ-೧೧೨೦, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ:ಅನಿಶ್ಚಿತ ಪ್ರೇಮ
ಅನಿಶ್ಚಿತ ಪ್ರೇಮ…. ಕೈ ಹಿಡಿದು ನಡೆಸುತ್ತಾನೆ ಹೃದಯಕ್ಕೆ ಜೋತು ಬಿದ್ದವನು ಎನ್ನ ಪ್ರೀತಿಗೆ ಕಟ್ಟಿಬದ್ದನಾಗಿ ಕಾವಲಾಗಿ ಎಲ್ಲ ಪುಕ್ಕಲು ತನಗಳ ಬಿಟ್ಟು ಪ್ರೇಮದನಂತದೆಡೆಗೆ ಸಾಗುತ್ತಾನೆ… ನಾನೋ ಮೊದಲೆ ಅವನ ನಂಬಿಕಸ್ಥೆ ಅವನು ಹಾಗೆ ತನ್ನ ಪ್ರೇಮದ ಧಾರಾಳತನದಲ್ಲಿ ಒಂಚೂರು ಕೊರತೆ ಮಾಡದ…
ಅನುದಿನ ಕವನ-೧೧೧೯, ಹಿರಿಯ ಕವಿಯತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ನಾನೊಂದು ಮಿಂಚುಹುಳ
ನಾನೊಂದು ಮಿಂಚುಹುಳ ನಾನೊಂದು ಮಿಂಚುಹುಳ ಬೆನ್ನಲ್ಲಿ ಬೆಳಕನ್ನು ಕಟ್ಟಿಕೊಂಡೇ ತಿರುಗುತ್ತೇನೆ ಕತ್ತಲೆಯಿದ್ದ ಕಡೆಯೆಲ್ಲ ಹಣುಕುತ್ತೇನೆ ನನಗೆ ಗೊತ್ತು, ನಾನಿಲ್ಲಿರುವುದು ಇನ್ನು ಕೆಲವೇ ಹೊತ್ತು ಬೆಳಕೊಂದು ಬೆಳಕು ಸೇರುವ ಮುನ್ನ ಇಲ್ಲೊಂದಿಷ್ಟು ಬದುಕುಗಳಿಗೆ ಹೊಳಪು ಹಂಚಬೇಕಿದೆ ಕತ್ತಲೆಯು ಮುತ್ತಿದಾಗೆಲ್ಲ ನೆರಳುಗಳು ಸುತ್ತಿದಾಗೆಲ್ಲ ನನ್ನ…
ಅನುದಿನ ಕವನ-೧೧೧೮, ಕವಿಯಿತ್ರಿ: ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ: ಅವನು ಮತ್ತು ಅವಳು
ಅವನು ಮತ್ತು ಅವಳು ಅವನು ಹಗಲು ಇರುಳಿಗೂ ಸೂರ್ಯ, ಇವಳು ಇರುಳು ಹಗಲಿಗೂ ಚಂದಿರೆ ಅವರಿಬ್ಬರೂ ಒಂದೇ ಗುಡಾರದಿ ಬಿಡಾರ ಹೂಡಿದ, ಹಗಲಿರುಳು ಜೊತೆಗಿರುವ ಸೂರ್ಯ ಚಂದಿರೆಯರು ಅವನು ಆಗಾಗ ಚಂದಿರನಂತೆ ಕಾಣುತ್ತಾನೆ ಇಲ್ಲ ಇವಳು ಹಾಗೆ ಭ್ರನಿಸುತ್ತಾಳೆ ಮೈ ಮನಗಳ…
