ಅವನು ಮತ್ತು ಅವಳು ಅವನು ಹಗಲು ಇರುಳಿಗೂ ಸೂರ್ಯ, ಇವಳು ಇರುಳು ಹಗಲಿಗೂ ಚಂದಿರೆ ಅವರಿಬ್ಬರೂ ಒಂದೇ ಗುಡಾರದಿ ಬಿಡಾರ ಹೂಡಿದ, ಹಗಲಿರುಳು ಜೊತೆಗಿರುವ ಸೂರ್ಯ ಚಂದಿರೆಯರು ಅವನು ಆಗಾಗ ಚಂದಿರನಂತೆ ಕಾಣುತ್ತಾನೆ ಇಲ್ಲ ಇವಳು ಹಾಗೆ ಭ್ರನಿಸುತ್ತಾಳೆ ಮೈ ಮನಗಳ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೧೧೭, ಕವಿ: ಕಿರಣ್ ಗಿರ್ಗಿ, ಚಾಮರಾಜ ನಗರ, ಕವನದ ಶೀರ್ಷಿಕೆ: ನಮ್ಮ ಊರಿನ ರಾಮನು
ನಮ್ಮ ಊರಿನ ರಾಮನು ನಮ್ಮ ಊರಿನ ರಾಮನು ಕಟ್ಟಿ ನೊಗವ ಉತ್ತು ಹೊಲವ ಊರಿಗೆಲ್ಲ ಹಂಚುತಿಹನು ತಾನು ಬೆಳೆದ ಫಸಲನು ಭೂಮಿಯನ್ನೇ ದೇವರೆಂದು ನೇಗಿಲು ಹಿಡಿದ ರಾಮನು ನಿತ್ಯ ದುಡಿವ ಶ್ರಮಿಕನು ಗ್ರಾಮ ಮೆಚ್ಚುವ ರೈತನು ಜಗಳವಾಡದ ಜಾಣನು ಜರಿಯಲಾರ ಯಾರನು…
ಅನುದಿನ ಕವನ-೧೧೧೬, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್
ಗಜ಼ಲ್ ಹಂಚುವುದಾದರೆ ಹಂಚು ಎದೆಯೊಳಗಿನ ಪ್ರೀತಿ ಕಕ್ಕಬೇಡ ಹಾವಿನಂತೆ ವಿಷವನ್ನು ಹಚ್ಚುವುದಾದರೆ ಹಚ್ಚು ಒಲವಿನ ಹಣತೆ ಹಂಚಬೇಡ ಅಮವಾಸ್ಯೆ ಕತ್ತಲನ್ನು ಕೈತುತ್ತು ಕೊಟ್ಟವರ ಕೈಹಿಡಿದೆತ್ತಿ ನಡಿಗೆ ಕಲಿಸಿದವರ ನೆನಪಿಸಿಕೋ ಹೇಳುವುದಾದರೆ ಹೇಳು ಎದೆತುಂಬಿ ಧನ್ಯವಾದ ಹೇಳಬೇಡ ಇತರರಿಗೆ ಇಲ್ಲಸಲ್ಲದ್ದನ್ನು ಬದುಕಿದು ಬಹಳಷ್ಟು…
ಅನುದಿನ ಕವನ-೧೧೧೫, ಹಿರಿಯ ಕವಿಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ನಾವು
ನಾವು ನಮ್ಮ ನಮ್ಮ ಮನೆ ದೇವರು ನಮ್ಮ ನಮ್ಮ ಮನದಲ್ಲಿರಲಿ ನಮ್ಮ ನಮ್ಮ ಧರ್ಮ ನಮ್ಮ ನಮ್ಮ ಎದೆಯಲ್ಲಿರಲಿ ನಮ್ಮ ನಮ್ಮ ಆಚರಣೆ ನಮ್ಮ ನಮ್ಮ ಮನೆಯಲ್ಲಿರಲಿ ನಮ್ಮೆಲ್ಲರ ಆಶೆ- ಕನಸು ಶಾಂತಿ ನೆಮ್ಮದಿ ಏಳಿಗೆ ತರತಮವಿಲ್ಲದ ಬಾಳುವೆ ಮಲಗೆದ್ದು ಗೂಡಿನೊಳಗೆ…
ಅನುದಿನ ಕವನ-೧೧೧೪, ಕವಿಯಿತ್ರಿ:ಶ್ರೀ..ಮಂಗಳೂರು
ಅವನು: ಕಡಲ ತೀರದಲಿ ಅದೆಷ್ಟೊಂದು ಅಲೆಗಳು.. ಬಹುಶಃ ನಮ್ಮ ಭೇಟಿಯನ್ನು ನೆನಪಿಸಲು ಬಂದಿರಬಹುದು.. ನಾನು: ಅಲೆಗಳಿಗೂ ಪಾದ ಚುಂಬಿಸೋ ತವಕ.. ನಿನ್ನನ್ನೇ ಅನುಕರಿಸುತ್ತಿವೆ ನೋಡು… ಅವನು: ಸಮಯದ ಮುಳ್ಳುಗಳು ಓಡುತ್ತಲೇ ಇವೆ… ಎದೆಯೊಳಗೆ ನಿನ್ನ ನೆನಪುಗಳನ್ನು ಗೀರುತ್ತ… ನಾನು: ನೆನಪುಗಳ ತಿರುಗಣೆ…
ಅನುದಿನ ಕವನ-೧೧೧೩, ಕವಿಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಇಲ್ಲ ಬಿಡುಗಡೆ
ಇಲ್ಲ ಬಿಡುಗಡೆ ಸುದೀರ್ಘ ಆಲೋಚನೆ ಗವ್ವೆನ್ನೊ ಮೌನ ಅಂತೂ ಇಂತೂ ಕೊನೆಗೊಂಡ ಆ ಚಣ ಬುದ್ಧಿ ಮನ ಒಂದನೊಂದು ನೋಡಿ ನಿಡಿದಾದ ಉಸಿರ ದಬ್ಬಿ ನಿಸೂರಾಗಿ ಮೈಮುರಿದು ನೇರವಾದವು ಏನೋ ನಿರೀಕ್ಷಿಸಿ ನಿಜವೇ ನನ್ನದೇ ತುಣುಕುಗಳಲ್ಲವೆ ಅವು ಹೊಳೆದಿತ್ತು ಇಬ್ಬರಲ್ಲೂ ಒಮ್ಮೆಗೆ…
ಅನುದಿನ ಕವನ-೧೧೧೨, ಕವಿ: ಡಾ.ಅಕ್ಕಿ ಬಸವೇಶ, ಹಗರಿಬೊಮ್ಮನಹಳ್ಳಿ
ಎಷ್ಟೊಂದು ಹೂವುಗಳನ್ನಿಟ್ಟಿರಿ ನೀವು ಸಿಕ್ಕಸಿಕ್ಕವರ ಕಿವಿಗಳಲ್ಲಿ ನೀವಿಟ್ಟ…
ಅನುದಿನ ಕವನ-೧೧೧೧, ಕವಿಯಿತ್ರಿ: ಸುಹಾಸಿನಿ ಶ್ರೀ, ಬೆಂಗಳೂರು
ತಪ್ಪುಗಳಿಗೆಲ್ಲ ಶಿಕ್ಷೆಯಾಗುವಂತಿದ್ದರೆ ಭಾವನೆಗಳ ಕತ್ತು ಹಿಸುಕಿದ್ದಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಗಲ್ಲು ಶಿಕ್ಷೆ ವಿಧಿಸಬೇಕಾಗಿತ್ತು. ಎಲ್ಲವನ್ನು ಕ್ಷಮೆಯಾಚಿಸಿ ಸರಿಪಡಿಸಿಕೊಳ್ಳುವಂತಿದ್ದರೆ ದಿನವೆಲ್ಲ ಕ್ಷಮಿಸುವುದರಲ್ಲೇ ಕಳೆದುಹೋಗುತ್ತಿತ್ತು. ನಿಂತ ಮನದಲ್ಲಿ ಗಟ್ಟಿತನವಿದ್ದಿದ್ದರೆ ಕಾಲಿನಡಿಯ ಹುಸಿಮಣ್ಣು ಸಹ ಜಾರದಂತೆ ನೋಡಿಕೊಳ್ಳುತ್ತಿತ್ತು. ಮಂಕು ಕವಿದ ಬೆಳಕಿನಲ್ಲಿ ದಾರಿ ಕಾಣುವ ತ್ರಾಣವಿದ್ದಿದ್ದರೆ…
ಅನುದಿನ ಕವನ-೧೧೧೦, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ:ಕನಸುಗಳ ಕೋಟೆ ಉರುಳಿಸಿ…
ಕನಸುಗಳ ಕೋಟೆ ಉರುಳಿಸಿ… ಬಡವನೆದೆಯಲ್ಲಿ ನಗುವರಳಿಸಿದ ಹೂವೆ ನಿಮ್ಮ ಕನಸುಗಳೆ ಈಗಾ ಬಲಿತವರಿಂದ ಬಾಡುತ್ತಿವೆ… ಸಿಕ್ಕಿದ ಅಧಿಕಾರವ ಅನ್ಯರ ಕಾಲಕೆಳಗಿಟ್ಟು ನೆಪಮಾತ್ರ ನಿಮ್ಮ ಪೂಜಿಪ ಮೀಸಲು ಫಲಾನುಭವಿಗಳೆ ನಿಮ್ಮ ಕನಸುಗಳ ಕೋಟೆ ಉರುಳಿಸಿ ಮಹಲ ಮೇಲೆ ಮಹಲು ಕಟ್ಟಿ ಮೆರೆಯುತ್ತ ಗುಲಾಮಗಿರಿಗೆ…
ಅನುದಿನ ಕವನ-೧೧೦೯, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ, ಕವನದ ಶೀರ್ಷಿಕೆ: ಬಟ್ಟೆಯೇಕೆ ಬಯಲಿಗೆ!?
ಬಟ್ಟೆಯೇಕೆ ಬಯಲಿಗೆ!? ಬತ್ತಲನುಟ್ಟು ಬಟ್ಟೆದೋರಿದೆ ಬಟ್ಟೆಯನುಟ್ಟು ಬತ್ತಲಾದೆ ಇದು ಕಾರಣವಾಗಿ ನೆಲಕೆ ಮರುಳು ಕೈತುಂಬ ಕೆಸರು ಬತ್ತಲ ಮುಂದೆ ಬಟ್ಟೆ ಕುಣಿತ ಊರ ತುಂಬಾ ನೆತ್ತರು ದೊರೆಯ ಮೈಗೆ ಅತ್ತರು ಹಸಿದ ಕರುಳಿನ ಮುಂದೆ ಚಿನ್ನದಂಗಡಿ ಮಿಥುನಕೊಡ್ಡುವ ಹಾಸುಗೆ ಮೇಲೆ ಅರಗಿನ…
