ಮರಳಿ ಬನ್ನಿ ಬಳ್ಳಾರಿಗೆ….. ಜನಿಸಿದರು ಹಳ್ಳಿಯ ಹೈದನಾಗಿ ಗೊಲ್ಲ ಲಿಂಗಮ್ಮನಹಳ್ಳಿಯ ಕಂದನಾಗಿ ಬೆಳೆದರು ಕೂಡು ಕುಟುಂಬದ ಸದಸ್ಯನಾಗಿ ಶಿಸ್ತು ಸಂಯಮಗಳ ಸಾಕಾರ ರೂಪವಾಗಿ ಅಂಗ ಸೌಷ್ಟವದ ಮೋಹನನಾಗಿ ಕಲೆ ಸಾಹಿತ್ಯ ಸಂಗೀತಕ್ಕೆ ಸಮ್ಮೋಹಕನಾಗಿ ಬಾಳಿದರು ಗೆಳೆಯರ ಸ್ನೇಹ ಸೇತುವಾಗಿ ಬಡ ಕಲಾವಿದರ…
Category: ಅನುದಿನ ಕವನ
ಅನುದಿನ ಕವನ-೯೨೦, ಕವಿಯಿತ್ರಿ:ವಿ.ನಿಶಾಗೋಪಿನಾಥ್, ಬೆಂಗಳೂರು, ಕವನದ ಶೀರ್ಷಿಕೆ:ಬೊಗಸೆಯಲ್ಲಿ ನಕ್ಷತ್ರ
ಬೊಗಸೆಯಲ್ಲಿ ನಕ್ಷತ್ರ ನನ್ನ ಬಡತನದ ದಿನಗಳನು ಪ್ರೇಮಿಸುವ ನಾನು ನೋವಿನಲ್ಲಿ ಕರಗುವುದನು ಕಲಿತಿರುವವಳು ಒದ್ದೆ ಕಣ್ಣೀರಿನಲಿ ಅಡಗಿ ಕುಳಿತ ದಿನಗಳು ನೆನಪಾಗುವುವು ದಾರಿ ತೋರಿ ಕೈಹಿಡಿದು ನಡೆಸುವುವು ಅಮ್ಮನ ಜೊತೆ ಬಾವಿ ನೀರು ಸೇದಿ ಅಂಗೈಯಲ್ಲಿ ಬೊಬ್ಬೆಗಳೆದ್ದುದಿದೆ ಬೆಂಕಿ ಒಲೆಗೆ ಮುಖದ…
ಅನುದಿನ ಕವನ-೯೧೯, ಕವಿ:ಎ.ಎನ್.ರಮೇಶ್. ಗುಬ್ಬಿ, ಕಾರವಾರ ಜಿ., ಕವನದ ಶೀರ್ಷಿಕೆ: ಸುದ್ದಿಮನೆಯ ಹನಿಗಳು
“ಜು.1 ರಂದು ಜರುಗಿದ ಪತ್ರಿಕಾ ದಿನಾಚರಣೆಯ ಹಿನ್ನಲೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರ ಪ್ರೀತಿಯ ಆಗ್ರಹಕ್ಕೆ ಮಣಿದು ಕವಿ ಎ.ಎನ್. ರಮೇಶ್ ಗುಬ್ಬಿ ಅವರು ರಚಿಸಿದ ಸುದ್ದಿಮನೆಯ ಹನಿಗಳಿವು. ಪತ್ರಿಕೋದ್ಯಮದ ಅಂತರಾಳದ ನಿತ್ಯ ಸತ್ಯ ಖನಿಗಳು. ಮಾಧ್ಯಮಗಳ ಕುರಿತಾದ ನಮ್ಮ-ನಿಮ್ಮೊಳಗಿನ ಮಾರ್ದನಿಗಳು. ಜನಸಾಮಾನ್ಯರನ್ನು…
ಅನುದಿನ ಕವನ-೯೧೮, ಕವಿ: ರಾಜೇಂದ್ರ ಪಾಟೀಲ ಹುಬ್ಬಳ್ಳಿ, ಕವನದ ಶೀರ್ಷಿಕೆ: ಅವಳು ಪ್ರಕೃತಿ
ಅವಳು ಪ್ರಕೃತಿ ಬೆಳಗಿನಿಂದ ಬೈಗಿನವರೆಗೆ ನಾವು ಬೇಡಿದ್ದು ಬಯಸಿದ್ದು ಎಲ್ಲ ಕೊಡುತ್ತಾಳೆ ಆದರೂ ನಾವು ಅವಳ ಕಾಡುತ್ತೇವೆ ಪೀಡಿಸುತ್ತೇವೆ ಕಿರುಕುಳ ನೀಡುತ್ತೇವೆ ಮತ್ತೆ ಮತ್ತೆ ಅಮ್ಮನಂತೆ ಸಹಿಸುತ್ತಾಳೆ ನಮ್ಮನ್ನು ಕಾಪಾಡುತ್ತಾಳೆ; ಏಕೆಂದರೆ ಅವಳು ಪ್ರಕೃತಿ. ನೆರಳು ಕೊಡುತ್ತಾಳೆ ವಾಸಕ್ಕೆ ಮನೆ ಕೊಡುತ್ತಾಳೆ…
ಅನುದಿನ ಕವನ-೯೧೭, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ, ಕವನದ ಶೀರ್ಷಿಕೆ:ಅವಳ ಖುಷಿ
ಅವಳ ಖುಷಿ ಚಿತ್ತ ಅತ್ತಿತ್ತ ಹೋಗದಂತೆ ಮುತ್ತಿನ ಮೂಗುತಿ ಮಿನುಗುತ್ತಿತ್ತು ಮುಖದ ತುಂಬ ಖುಷಿ ತುಂಬಿ|| ಹಸಿರು ಬಳೆಗಳು ಹೊಸ ವಸಂತಕ್ಕೆ ಚಪ್ಪರ ಹಾಕಿ ಸೆಳೆಯುತಿತ್ತು ಮನದ ತುಂಬ ಖುಷಿ ತುಂಬಿ|| ಅವಳ ಅಂತರಂಗ ಅರಿಯದು ಎಂದು ಇಂದಿಗೂ ಲೋಕವೇ ಗೊಣಗುತ್ತಿರುವುದು|…
ಅನುದಿನ ಕವನ-೯೧೬, ಕವಿ: ಮಧುಸೂದನ್ ಬೆಳಗುಲಿ, ಮಡಿಕೇರಿ ಕವನದ ಶೀರ್ಷಿಕೆ: ನನಗೆ ಮರೆವು ಹೆಚ್ಚಾಗಿದೆ..
ನನಗೆ ಮರೆವು ಹೆಚ್ಚಾಗಿದೆ.. ‘ನನಗೆ ಇತ್ತೀಚೆಗೆ ಮರೆವು ಹೆಚ್ಚಾಗಿದೆ’ ಎಂದು ನನಗೆ ನಾನೇ ದಿನಕ್ಕೆ ನೂರು ಬಾರಿ ಹೇಳಿಕೊಂಡಿದ್ದೇನೆ. ತುರ್ತಾಗಿದ್ದನ್ನು ಎಡಗೈಲಿ ಎಲ್ಲೋ ಇಟ್ಟು ಊರೆಲ್ಲಾ ಹುಡುಕುವುದು ಯಾರದೋ ಮಾಹಿತಿ ಯಾರಿಗೋ ತಲುಪಿಸಿ ಪೇಚಾಡುವುದು ಇರುವ ವಿಷಯವ ಬಿಟ್ಟು ಮಿಕ್ಕದ್ದನ್ನು ಒದರಿ…
ಅನುದಿನ ಕವನ-೯೧೫, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ. ಕವನದ ಶೀರ್ಷಿಕೆ:ಯಾರಿಗ್ಗೊತ್ತು?
ಯಾರಿಗ್ಗೊತ್ತು ? ಯಾರಿಗ್ಗೊತ್ತು ? ನಾಳೆ ನಾನು ಯಾವುದೋ ಚಿಟ್ಟೆಯ ಮೊಟ್ಟೆಯಾಗಿ ಮರಿ ಕಂಬಳಿಹುಳುವಾಗಿ ರೆಕ್ಕೆಯರಳಿಸಿ ನಿಮ್ಮ ತೋಟದ ಅಂಗಳದಲ್ಲೇ ಹಾರಾಡಬಹುದು ಯಾರಿಗ್ಗೊತ್ತು ? ನಾಳೆ ನಾನು ಹನಿಯಾಗಿ ಮೋಡದೊಳಗೆ ಸೇರಿ ಮಳೆ ಹನಿಯಾಗಿ ನಿಮ್ಮನ್ನು ತೋಯಿಸಿ ಹಿತ ನೀಡಬಹುದು ಯಾರಿಗ್ಗೊತ್ತು…
ಅನುದಿನ ಕವನ-೯೧೪, ಕವಿಯಿತ್ರಿ: ನಾಗರತ್ನ, ಹೂವಿನ ಹಡಗಲಿ, ಕವನದ ಶೀರ್ಷಿಕೆ:ನನ್ನ ಕವಿತೆ
ನನ್ನ ಕವಿತೆ ಮೆಚ್ಚುಗೆ ಪಡೆಯಲಾರದು ನನ್ನ ಕವಿತೆ ಹಸಿದವರ ಒಡಲಲ್ಲಿ ಕಣ್ಣೀರಿಡುತ್ತಿದೆ ನನ್ನ ಕವಿತೆ ಸಮ ಸಮಾಜದ ಜೊತೆಗಿದೆ ನನ್ನ ಕವಿತೆ ಪ್ರಚಾರದ ಹಂಗಿಲ್ಲ ನನ್ನ ಕವಿತೆಗೆ ಈಗಿನ್ನೂ ಅಂಬೆಗಲಾಡುತ್ತಿದೆ ನನ್ನ ಕವಿತೆ ಕೇಳುವ ಮನಗಳಿದ್ದರೆ ಸಾಕು ನನ್ನ ಕವಿತೆಗೆ ಸಮಾಜ…
ಅನುದಿನ ಕವನ-೯೧೩, ಕವಿಯಿತ್ರಿ- ಮಾನಸಗಂಗೆ, ತಿಪಟೂರು
ಬೆಳದಿಂಗಳ ಊಟ ಮಾಡಬಹುದಷ್ಟೇ; ನಿಮ್ಮಲ್ಲಿ ಯಾರೊಬ್ಬರೂ ಚಂದ್ರನ ತಟ್ಟೆಗೆ ಕೈ ಹಾಕಲಾಗದು!! *** ಮುಡಿದರು, ಬಾಡಿದರೂ ಈ ಮಲ್ಲಿಗೆ ಅವನಿಗಷ್ಟೇ ಮೀಸಲು; ನಿಮಗೆ ಸುವಾಸನೆಯೂ ಬೀರುವುದಿಲ್ಲ!! *** ಕತ್ತಲಿದೆ ಎಂದ ಮಾತ್ರಕ್ಕೆ ದಿಕ್ಕು ತಪ್ಪಿಸುವ ವ್ಯರ್ಥ ಪ್ರಯತ್ನ ಮಾಡಬೇಡಿ; ನಾನು ಹರ(ಅವ)ನಿಗಷ್ಟೇ…
ಅನುದಿನ ಕವನ-೯೧೨, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ, ದಾವಣಗೆರೆ
ಬೈತಲೆಯ ಆಚೀಚೆ ಹೆರಳು ಸರಿಯುವಂತೆ ಮೋಡ ಸರಿದವು ಸಂಜೆ ಡ್ರಮ್ಮಿನಲಿ ಕೆಂಡವುರುಬಿ ಸರಳಿಗೆ ಸರ ಪೋಣಿಸಿದ ಖಾರ ಮೆತ್ತಿದ ಮಾಂಸ ಅರಳುತ್ತಿದೆ ಬೆಂಕಿಯಲಿ ಹೂವಾಗಿ ಲಾಫ್ಟಿನಲಿ ಎತ್ತಿಟ್ಟ ಪುರಾತನ ಮದಿರೆಯ ಕುಡಿಕೆಗೆ ಸುರಿಯುವ ಕಾಲಕ್ಕೆ ಚದುರಿದ ಮೋಡ ಒಗ್ಗೂಡಿ ಮಳೆ ಈಗ…
