ಹೊಸ ಹಾದಿಯಲ್ಲೂ… ಎಷ್ಟೊಂದು ಪರಿಚಿತ ಮುಖಗಳ ನಡುವೆ ಅಪರಿಚಿತವೂ ಸೇರಿ ಹೋಗುತ್ತಿದೆ ಕೆಲವರು ಸದ್ದಿರದೆ ವಿದಾಯ ಹೇಳಿದ್ದಾರೆ ಹಲವರು ಸುಮ್ಮನೆ ಗದ್ದಲವೆಬ್ಬಿಸುತ್ತಿದ್ದಾರೆ ಇಲ್ಲೊಂದು ಕನಸಿನ ಮನೆ ಏಳುತ್ತಿದೆ ಅಲ್ಲೊಂದು ಆಗಲೋ ಈಗಲೋ ಎನ್ನುತ್ತಿದೆ ದಾರಿಯ ಕೊನೆಯೇ ಮೊದಲೆನ್ನುವವರು ಮೊದಲನ್ನೇ ಕೊನೆಯೆನ್ನುವವರ ಗೋಜಲು…
Category: ಅನುದಿನ ಕವನ
ಅನುದಿನ ಕವನ-೧೪೭೪, ಹಿರಿಯ ಕವಿ:ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ:ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ?
ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ? ಅವಳ ಮುಗುಳ್ನಗೆ ನನ್ನ ಬದುಕಿಗೆ ಬರೆದ ಮುನ್ನುಡಿಯಂತಿತ್ತು. ಅಲ್ಲಿ ನಾನಿದ್ದೆ, ಅವಳಿದ್ದಳು ಪದ್ಯ ಇತ್ತು, ರಸ್ತೆ ಬದಿಯ ಮರಗಳಿದಗದ್ದವು, ನೀವೂ ಇದ್ದಿರಿ… ಈಗ ಅವಳ ಹುಬ್ಬು ಗಂಟಿಕ್ಕಿವೆ. ಹೂದಾನಿಯಲ್ಲಿನ ಹೂವಿನ- ಹಾಗೆ, ಸಾಯುತ್ತಿದೆ ಪ್ರೀತಿ ಉಸಿರುಕಟ್ಟಿ.…
ಅನುದಿನ ಕವನ-೧೪೭೩, ಕವಿ: ಜಬೀವುಲ್ಲಾ ಎಂ. ಅಸದ್, ಬೆಂಗಳೂರು , ಕವನದ ಶೀರ್ಷಿಕೆ: ಬರಿದಾಗುವ ಅಚ್ಚರಿ
ಬರಿದಾಗುವ ಅಚ್ಚರಿ ನಿಂತಲ್ಲೇ ಬಯಲು ಕೊನೆಗೊಳ್ಳದು ಗೆಳೆಯ ನಡೆಯಬೇಕು ನೀನೇ ಖುದ್ದು ಭವದ ಬೇಲಿಗಳ ದಾಟುತ್ತ ಸಾವಿರ ಹೆಜ್ಜೆಗಳ ಮಿಡಿದು ಈ ಸಮಯ ಜಗ ಹುಚ್ಚನೆಂದರೂ ಸರಿಯೇ ಹತ್ತು ಮುಳ್ಳುಗಳ ಮಧ್ಯೆ ಹೂವೊಂದು ಬಿರಿವಂತೆ ನೂರು ಕಷ್ಟಗಳ ನಡುವೆ ನಲುಗದೆ ನಗಬೇಕು…
ಅನುದಿನ ಕವನ-೧೪೭೨, ಕವಿ: ರಘೋತ್ತಮ ಹೊ ಬ, ಮೈಸೂರು, ಕವನದ ಶೀರ್ಷಿಕೆ: ಬಸ್ಸು
ಬಸ್ಸು ಬಸ್ಸಲ್ಲಿ ಕುಳಿತ ನಮ್ ಜನ ಹೇಗೊ ಅಡ್ಜಸ್ಟ್ ಮಾಡ್ಕೊತಾರೆ ಮಾಡಿಕೊಂಡು ಸಮಾಧಾನ ಒಬ್ಬರ ಮೇಲೆ ಒಬ್ಬರು ಕುಳಿತುಕೊಂಡು ಮೂರ್ರಲ್ಲಿ ನಾಲಕ್ ಕುಳಿತುಕೊಂಡು ಡ್ರೈವರ್ ಪಕ್ಕದ ನೆಲವನ್ನು ಬಿಡದೆ ಹೇಗೊ ಹೋಯ್ತಾರೆ ಸಾವಧಾನ ಇಲ್ಲಿ ಸೀಟು ಸಿಕ್ಕವನೆ ರಾಜ ನಿಂತುಕೊಂಡವನೆ ಸೇವಕ…
ಅನುದಿನಕವನ-೧೪೭೧, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ: ಜಾಗೃತ ಅಪ್ಪ
ಜಾಗೃತ ಅಪ್ಪ… ಅಪ್ಪ ನೋವುಂಡ ಒಬ್ಬ ಸಂತ ಮುಖದ ಬರೆಯಂತ ಗೆರೆಗಳೆ ಅವನ ಕಷ್ಟದ ಕುರಿತು ಹೇಳುತ್ತವೆ… ಅವನು ಬೆವರ ಬಸಿದಷ್ಟು ಇನ್ನಾರು ಕೂಡ ಬೆವರ ಬಸಿದಿಲ್ಲ ಮನೆಯಲ್ಲಿ ಅಕ್ಕಿ ಬೇಯುತ್ತಿತ್ತು ಅಂದರೆ ಅವನ ಬೆವರ ಹನಿಗಳೆ ಅನ್ನವಾಗಿ ಕುದಿಯುತಿದೆ ಎಂದರ್ಥ……
ಅನುದಿನ ಕವನ-೧೪೭೦, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು
1 ಅವಳು ಹಾಡುವುದನ್ನು ನಿಲ್ಲಿಸಿದಳು ಗಂಟಲು ಕಟ್ಟಿಯೇ ಹೋಯಿತು ಅವಳು ನರ್ತಿಸುವುದನ್ನು ನಿಲ್ಲಿಸಿದಳು ಕಾಲು ಜಡಗೊಂಡಿತು ಅವಳು ಬರೆಯುವುದನ್ನು ನಿಲ್ಲಿಸಿದಳು ಪದಗಳು ಪೆನ್ನಿನಲ್ಲಿ ಸಿಕ್ಕಿಕೊಂಡವು ಅವಳು ತನ್ನ ನುಡಿಯನ್ನೇ ಮರೆತಳು ಮಾತುಗಳು ಎಲ್ಲೋ ಹೂತು ಹೋದವು ವೀಣೆ ನುಡಿಸುವುದನ್ನು ನಿಲ್ಲಿಸಿದಳು ತುಕ್ಕು…
ಅನುದಿನ ಕವನ-೧೪೬೯, ಕವಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಅವಸ್ಥೆ
ಅವಸ್ಥೆ ತೂಕಡಿಸುವ ಅವಸ್ಥೆಯಲಿ ನ್ಯಾಯದ ವ್ಯವಸ್ಥೆ ತಲೆ ಕೆಡಿಸಿ ಸೋತಿದೆ… ಇದಕೆ ಲಂಗು ಲಗಾಮಿಲ್ಲದ ಸುತ್ತಲಿನ ಅವಸ್ಥೆ ಎಲ್ಲವನು ತಿರುಗಿಸಿ ಆಟವ ನೋಡುತಿದೆ… ಬೆಂಬಿಡದ ಕುತಂತ್ರ ಸಿದ್ಧಾಂತ ವನು ಎಳೆದು ತಳ್ಳಿ ಕಣ್ ಪ ಟ್ಟಿಯಲಿ ಕೊಂದು ಹಾಕಿ ವ್ಯಂಗ್ಯ ನಗೆಯಲಿ…
ಅನುದಿನ ಕವನ-೧೪೬೮, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
ಬೀದಿಯ ಗೋಡೆಗೊರಗಿದ ಅವಳು ಅದೆಷ್ಟು ಭಾವಗಳನ್ನು ಬಿತ್ತುತಾಳೆ ಹದವರಿತ ಇವನೆದೆಯಲ್ಲಿ ಆತ್ಮೀಯತೆಯ ಮೊಳಕೆ ತೋರಲು ಬಹು ಸಮಯ ತೆಗೆದುಕೊಂಡಿಲ್ಲ ನೆನಪುಗಳು ಬದಲಾಗುತ್ತವೆ ಕನಸುಗಳು ಹರಿದಾಡುತ್ತವೆ ಅವಳಿಷ್ಟದ ಬಣ್ಣ ಇವನಿಷ್ಟದ ಹೂವು ಕೊನೆಗೆ ಆಗಸದ ತಾರೆಗಳೂ ಸಾಗರನ ಅಲೆಗಳಲ್ಲಿ ಪಾದ ತೋಯಿಸಿಕೊಳ್ಳುವ ಮಾತು…
ಅನುದಿನ ಕವನ-೧೪೬೭, ಕವಿ: ರವೀ ಜಿ ಹಂಪಿ, ಕವನದ ಶೀರ್ಷಿಕೆ: ಇಂತಿ ನಿನ್ನ ಗುಲಾಮ
ಇಂತಿ ನಿನ್ನ ಗುಲಾಮ ಪ್ರೀತಿಸಿದ ಹೊಸತರಲ್ಲಿ ನಾನು ಪ್ರತಿ ಪತ್ರವನ್ನೂ “ಇಂತಿ ನಿನ್ನ ಗುಲಾಮ” ಎಂಬ ಒಕ್ಕಣಿಕೆಯಿಂದಲೇ ಮುಗಿಸುತ್ತಿದ್ದರಿಂದಲೋ ಏನೋ. ನಿನ್ನ ಕಣ್ಣುಗಳಿಗೆ ನನ್ನ ಪ್ರೀತಿ ಚಷ್ಮಾ ತೊಡಿಸಿ ಹಗಲಿರುಳೂ ನಿನ್ನ ಜಗತ್ತನ್ನು ಗುಲಾಬಿಯಾಗಿರಿಸಿದ್ದ- ಕಾರಣದಿಂದಲೋ ಏನೋ ಸಮಯ ಕಳೆದಂತೆ ಗುಲಾಮಗಿರಿ…
ಅನುದಿನ ಕವನ-೧೪೬೬, ಕವಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಇಳಕಲ್, ಕವನದ ಶೀರ್ಷಿಕೆ:ಅವನೆಂದೂ ಕವಿತೆಯಾಗಲಾರ
ಅವನೆಂದೂ ಕವಿತೆಯಾಗಲಾರ ನನ್ನಂತೆ ಪ್ರೀತಿಸುವ ಪ್ರೀತಿಯ ಧಾರೆಯನ್ನೆ ಹರಿಸುವ ತಾ ಕವಿಯಾಗಿ ಖುಷಿಯಿಂದ ನನ್ನ ಕವಿತೆಯಾಗಿಸುತಲಿರುವ ಆದರೂ ಅವ ಎಂದೂ ಕವಿತೆಯಾಗಲಾರ ಉಕ್ಕುಕ್ಕಿ ಬರುವ ಭಾವಗಳ ಹೆಕ್ಕಿ ಹೆಕ್ಕಿ ತೋರಿಸುತಿರುವ ಕ್ಷಣ ಕಾಲ ಅಗಲಿ ಇರೆನೆಂದು ಗುಕ್ಕುತಲೆ ತಡವರಿಸುತಿರುವ ಆದರೂ ಕವಿತೆಯಾಗಲಾರ…
