ನಡೆ ಕೊಂಚವೇ ದೂರ ಮೌನವಾಗಿ ಏನೂ ಹೇಳದೇ ಅರಿಯದ ಹಾದಿಯಲ್ಲಿ ಕಾಲು ನಡಿಗೆಯಲ್ಲಿ ಸಾಗಿ ಬಿಡೋಣ ನಮ್ಮ ನಮ್ಮ ಒಂಟಿತನವನ್ನು ಹೊತ್ತು ಸವಾಲುಗಳ ಎಲ್ಲೇ ಮೀರಿ ಸಂಪ್ರದಾಯಗಳ ಗಡಿಯ ದಾಟಿ… ನಾವು ಹೀಗೆಯೇ ಮೌನವಾಗಿ ಸಾಗುತ್ತಲೇ ಇರೋಣ.. ನೀ ನಿನ್ನ ಗತದ…
Category: ಅನುದಿನ ಕವನ
ಅನುದಿನ ಕವನ-೧೬೧೫, ಕವಿ: ✍️ಡಾ. ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ: ಭವ ಸಾಗರ
ಜೂ. 1, ‘ಕರ್ನಾಟಕ ಕಹಳೆ ಸಾಹಿತ್ಯ ಬಳಗ’ ದ ಹೆಮ್ಮೆಯ ಕವಿ ಮಹೇಂದ್ರ ಕುರ್ಡಿ ಅವರ ಜನ್ಮದಿನ. ಈ ಹಿನ್ನಲೆಯಲ್ಲಿ ಕುರ್ಡಿ ಅವರ ಭವ ಸಾಗರ ಕವಿತೆ ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದೆ. (ಸಂಪಾದಕ)…
ಅನುದಿನ ಕವನ-೧೬೧೪, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ
ಬದುಕಿನುದ್ದಕ್ಕೂ ಬರಿ ಜಂಜಾಟಗಳೇ ನಿನ್ನ ಪ್ರೇಮವೂ ಹಾಗೆ ಬಾರಿ ಜಂಜಾಟಕ್ಕೆ ಸಿಕ್ಕ ವ್ರತ… ಓದುವಾಗಲೂ ನಾನು ಜ್ಞಾಪಿಸಿಕೊಳ್ಳುವುದು ಮತ್ತೆ ನಿದಿರೆ ಬರುವಾಗಲೂ ನಾನು ಧ್ಯಾನಿಸುವುದು ನಿನ್ನನ್ನೇ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸಲು ಒದ್ದಾಡುತ್ತೇನೆ… ಅಂತದ್ದೇನು ಗೊಂದಲವಿಲ್ಲ ನನಗೆ ನನ್ನ ಎಲ್ಲ…
ಅನುದಿನ ಕವನ-೧೬೧೩, ಕವಯಿತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ
ಮುಂಜಾವಿನಲಿ ಅಂತರಂಗದ ಕದ ತೆರೆಯಲು ಮನದ ಮೈಗೆ ತಾಗಿದ ಬಿಸಿಗಾಳಿಯಲೇ ನಿನ್ನುಸಿರ ಕಲರವ ಕಂಡು ಬಾಗಿಲ ಮುಚ್ಚಿದೆ ತೂರಿ ಹೊಗದಂತೆ, ಒಡಲ ತುಂಬಿಕೊಳಲು. ಹೃದಯ ಗೂಡನು ಜಾಡಿಸಿ ಗುಡಿಸುವಾಗ ಕಂಡ ಹೆಜ್ಜೆಯ ಗುರುತುಗಳು ನಿನ್ನವೆಂದು ಅರಿತಾದ ಮೇಲೆ ಗುಡಿಸದೇ ಶೃಂಗರಿಸಿ ಕಾದಿರುವೆ…
ಅನುದಿನ ಕವನ-೧೬೧೨, ಹಿರಿಯ ಕವಿ: ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಕವನದ ಶೀರ್ಷಿಕೆ: ಬೆಳಗಾದರೆ ಸಾಕು
ಇಂದು(ಮೇ 30) ವಿಧಿವಶವಾಗಿರುವ ಪ್ರಸಿದ್ಧ ಕವಿ ಡಾ. ಎಚ್ ಎಸ್ ವೆಂಕಟೇಶ್ ಮೂರ್ತಿ ಅವರು ಕಳೆದ ವರ್ಷ ಹೃದಯ ಚಿಕಿತ್ಸೆ ಯಶಸ್ವಿಯಾಗಿ ಮನೆಗೆ ಮರಳಿದಾಗ ಕವಿತೆಯೊಂದನ್ನು ಅಚಾನಕ್ಕಾಗಿ ರಚಿಸಿದ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಸಂತೋಷದಿಂದ ಹಂಚಿಕೊಂಡಿದ್ದರು. ಕರ್ನಾಟಕ ಕಹಳೆ…
ಅನುದಿನ ಕವನ-೧೬೧೧, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಬೆಳಕು
“ಇದು ಬುವಿಯ ಬದುಕಿನ ನಿತ್ಯ ಸತ್ಯ-ಸತ್ವಗಳ ಅನಾವರಣದ ಕವಿತೆ. ಇಳೆಯ ಬೆಳಕಿನ ಚಿರಂತನ ತತ್ವ-ಮಹತ್ವಗಳ ರಿಂಗಣಗಳ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನದ ಅರಿವಿದೆ. ಅರ್ಥೈಸಿದಷ್ಟೂ ಬದುಕು-ಬೆಳಕಿನ ಸಾರಗಳ ಹರಿವಿದೆ. ತನ್ನೊಳಗೆ ಬೆಳಕಿದ್ದವನಷ್ಟೇ ಜಗಕೆ ಬೆಳಕಾಗಬಲ್ಲ. ತನ್ನ ತಾ ಸುಟ್ಟುಕೊಂಡು ಜ್ಯೋತಿಯಾದವನಷ್ಟೇ ಜಗತ್ತನ್ನು…
ಅನುದಿನ ಕವನ-೧೬೧೦, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಪ್ರೀತಿಯ ತೀರ್ಪು!
ಪ್ರೀತಿಯ ತೀರ್ಪು.! ಅವನೊಲವಲಿ ನಾ ತೋರಿದ ಸಿಟ್ಟು,ಸೆಡವು, ಅಸಹನೆಯ ಅಪರಾಧಕ್ಕೆ.. ಏಕಾಂತದ ಸೆರೆಮನೆಯಲಿ ನೆನಪುಗಳ ಜೀವಾವಧಿ ಶಿಕ್ಷೆ ಅನುಭವಿಸುವ ನಲ್ಮೆಯ ಖೈದಿ ನಾ! ಬಿಡುಗಡೆಯಿಲ್ಲದ ಜೀವಾವಧಿ ಶಿಕ್ಷೆಯಿದು..! ಇದಕ್ಕಿಂತ ಅವನ ಬಾಹುಬಂಧನದಿ ನಲಿವಿಂದ ಗಲ್ಲಿಗೇರುವ (??) ಶಿಕ್ಷೆ ನೀಡೆಂದು ಮನದ ಸುಪ್ರೀಂ…
ಅನುದಿನ ಕವನ-೧೬೦೯, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ಮುಂಗಾರ ಮಳೆಯಂತೆ ನೀನು
ಮುಂಗಾರ ಮಳೆಯಂತೆ ನೀನು ಮುಂಗಾರ ಮಳೆಯಂತೆ ನೀನು ಬರಲು ನನ್ನಲ್ಲಿ ಗುಡುಗು ಸಿಡಿಲು ಬಿಡದೆ ಸುರಿ ತಂಪಾಯ್ತು ಧಗೆ ಬಿಸಿಲು ಮನದಿ ಮಣ್ಣ ಘಮಲು ಮಳೆ ನಿಂತರು ನಿನ್ನ ನೆನಪು ತುಂತುರು ಮನಸೆಲ್ಲ ಮಾಗಿ ಮುಗಿಲು ಇಳೆ ತೃಪ್ತಿಯಾಗಿ ಸಮೃದ್ಧ ಹಸಿರ…
ಅನುದಿನ ಕವನ-೧೬೦೮, ಕವಯಿತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕವನದ ಶೀರ್ಷಿಕೆ: ಆ ಎಲೆ
ಆ ಎಲೆ ಉದುರಿತು… ಗಾಳಿಗೋ ತೊಟ್ಟು ತೊಟ್ಟ ಗಾಯಕೋ ಬಿಡುಗಡೆಯ ಆಸೆಗೋ ಇರುವೆಯನು ದಡ ಸೇರಿಸುವ ಹಕ್ಕಿಯ ಹಂಬಲಕೋ ಎಲೆಯೊಂದು ಉದುರಿತು… ಕಣ್ಣಮಾತು ಕೇಳಿಸದಷ್ಟು ಕಿವುಡು ಈ ಹುಡುಕಾಟದ ಹೆಜ್ಜೆಗಳಿಗೆ ಕ್ಷಣ ನಿಂತು ಗಮನಿಸದ ಜರೂರತ್ತೂ! ಏನಾಗಿರಬಹುದು ಎಲೆ? ಗಾಳಿಯ ಕೈ…
ಅನುದಿನ ಕವನ-೧೬೦೭, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ಇಲ್ಲವೇನೊ ಹೆಸರು..!!
*ಇಲ್ಲವೇನೊ ಹೆಸರು ..!! ಯಾಕೊ ಅದಕೊಂದು ಯೋಚನೆ ಎಲ್ಲವೂ ಬಲು ವಿಚಿತ್ರ ಬಿಡು ಇಲ್ಲಿ ಒಮ್ಮೆ ಇದ್ದಂತೆ ಇಲ್ಲ ಇನ್ನೊಂದು ಚಣ ಒಂದರಂತಿಲ್ಲ ಇನ್ನೊಂದು ಮತ್ತೊಂದು ನೂರು ಆಕಾರ ಏನಿದರ ಹೆಸರು ನಗುವಿನ ಹೊನಲ ಬಗಲಲ್ಲೆ ಕಣ್ಣೀರಿನಲೆ ಎದೆದುಂಬಿದ ಸಮಾಧಾನ ಸುಸ್ತು…
