ಮನಸೆಂದರೆ ಹೀಗೇ ಮನಸೆಂದರೆ ಹೀಗೇ ಒಮ್ಮೆ ಹೂದೋಟದಲ್ಲಿನ ಫಳ್ಳನೆ ಅರಳಿ ನಗುವ ಹೂಗಳಂತೆ ಮಗದೊಮ್ಮೆ ಗತಕಾಲದ ಮಸಣದೊಳಗೆ ಕುಣಿವ ನೆನಪುಗಳ ಭೂತಗಣದಂತೆ ಮಗದೊಮ್ಮೆ ಧೋ ಧೋ ಎಂದು ಸುರಿವ ಮುಂಗಾರಿನ ಮಳೆಗೆ ಘಮ್ಮನೆ ಮೂಗರಳಿಸುವ ನವಿರೇಳಿಸುವ ಮಣ್ಣಿನ ವಾಸನೆಯ ತೋಂತನನ ನಾದದಂತೆ…
Category: ಅನುದಿನ ಕವನ
ಅನುದಿನ ಕವನ-೧೦೪೮, ಕವಿಯಿತ್ರಿ:ಮಾನಸಗಂಗೆ, ತಿಪಟೂರು
ಹಸಿವನ್ನ ನೀಗಿಸುವ ಒಂದು ಕವಿತೆ ಬರೆದು ಕೊಡಿ, ಎರಡ್ಹೊತ್ತು ತಿಂದು ನಾಳೆಗೊಂದಿಷ್ಟು ಉಳಿಸಿಕೊಳ್ಳುವೆ ಸಸ್ಯದ್ದೊ ,ಮಾಂಸದ್ದೊ ಬೆಂದದ್ದೊ ,ಹಸಿ ಹಸಿಯೋ ಯಾವುದೋ ಒಂದು ನಾಲ್ಕು ಸಾಲು ಗೀಚಿ ಬಿಡಿ ನನಗೀಗ ತುಂಬಾ ಹಸಿವಿದೆ ನೀವು ಬರೆದು ಕೊಟ್ಟ ಕವಿತೆಗಳ ಕೊನೆಯಲ್ಲಿ ನಿಮ್ಮ…
ಅನುದಿನ ಕವನ-೧೦೪೭, ಕವಿ:ಎಂ.ವಿ. ಶಶಿಭೂಷಣ ರಾಜು, ಪೆನ್ಸಿಲ್ವೇನಿಯ, ಅಮೇರಿಕ, ಕವನದ ಶೀರ್ಷಿಕೆ: ದೀಪಾವಳಿ
ದೀಪಾವಳಿ ದೀಪಗಳೆಂದರೆ ಬರೀ ಬೆಳಕಲ್ಲ ಜ್ಞಾನದ ಗುರಿಯ ಹಾದಿಯದು ರೂಪ ಕುರೂಪಗಳ ಭೇದವ ಮೀಟಿ ಸುಂದರ ಜಗ ತೋರುವ ಜ್ಯೋತಿಯದು ಸೇರುವ ಜೊತೆಯಲಿ ಬೆಳಗಲು ದೀಪ ಸಾರಲು ಹರುಷದಿ ಪ್ರೀತಿ ಸ್ವರೂಪ ಎರಗಲು ಬರುವ ನರಕನ ಭಾವಕೆ ಸುರಿಯುವ ಅಗ್ನಿಯ ಕುಹುಕದ…
ಅನುದಿನ ಕವನ-೧೦೪೬, ಕವಿ: ಪಿ ಬಿ ಕೋಟೂರ, ಬೆಂಗಳೂರು, ಕವನದ ಶೀರ್ಷಿಕೆ: ದೀಪಾವಳಿ ಎಂದರೆ
ದೀಪಾವಳಿ ಎಂದರೆ ಬರೀ ಹಚ್ಚಿರುವ ಹಣತೆಯಲ್ಲ ಪ್ರಜ್ವಲಿಸುವ ಪ್ರಣತೆಯಷ್ಟೇ ಅಲ್ಲ; ಒಳಗೊಳಗಿನ ಬೆಳಗು ಹೊರ ಹೊರಗಿನ ಮೆರಗು ಬದುಕಿನ ಭವ್ಯ ದಿವ್ಯ ಬೆರಗು ನಾನು ದೀಪಾವಳಿಗೆ ಅಂಗಡಿಯಿಂದ ದೀಪ ಕೊಳ್ಳುವದಿಲ್ಲ – ಎಣ್ಣೆ ಬತ್ತಿಯ ಚಿಂತೆಯಿಂದಲ್ಲ; ಮಗಳೇ ಹೊಂಬೆಳಕು ಮಡದಿಯೇ ಚೆಂಬೆಳಕು…
ಅನುದಿನ ಕವನ-೧೦೪೫, ಕವಿ: ಎ.ಎನ್.ರಮೇಶ್. ಗುಬ್ಬಿ., ಕವನದ ಶೀರ್ಷಿಕೆ: ಅರಿಕೆ..!
“ಇದು ಬರಿದೆ ದ್ವಿರುಕ್ತಿ, ದ್ವಿಪದಿಗಳ ಕವಿತೆಯಲ್ಲ. ಆಂತರ್ಯ ಬೆಳಗುವ ಬಾಳಸೂಕ್ತಿಗಳ ನಿತ್ಯ ಸತ್ಯ ಭಾವಗೀತೆ. ಪ್ರತಿ ಸಾಲಿನಲ್ಲೂ ಜೀವಸೂತ್ರ ಹಿಡಿದ ವಿಧಾತನಿಗೊಂದು ವಿನಂತಿಯಿದೆ. ಅರಿವಿನಾ ಹರಿವಿಟ್ಟು ಜೀವನಯಾನ ದಡ ಸೇರಿಸಲೆಂಬ ಆರ್ದ್ರ ಪ್ರಾರ್ಥನೆಯಿದೆ. ಆ ಅಗೋಚರನೆದುರು ಜೀವಭಾವಗಳ ಬೇಡಿಕೆಯಿದು. ಆ ಅಚ್ಯುತನೆದುರು…
ಅನುದಿನ ಕವನ-೧೦೪೪, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ. ದಾವಣಗೆರೆ
ನದಿ ಹರಿಯುತ್ತಲೇ ಇದೆ ಪಾತ್ರ ಹಸಿಯಾಗುತ್ತಿಲ್ಲ. ಈ ದಾರಿ ಬೇಡಿ ಪಡೆದದ್ದಲ್ಲ. ಹಿಂತಿರುಗುವುದು ಸಾಧ್ಯವೇ ಇಲ್ಲ. ಕಾಡೊಳಗೆ ಕತ್ತಲಾಗಿ, ಎಲೆಗಳ ಮಿದುವಲಿ ಬೆರೆತು ಹಸಿರಾಗಿ, ಹಗಲಿಗೆ ಕಣ್ ಮಿಟುಕಿಸಿ ಕಾಮನಬಿಲ್ಲಾಗಿ, ತುಂಬು ತೋಳುಗಳ ನಡುವೆ ಉಕ್ಕೇರುವ ಕಾಲ ಬರದೆ ಹರಿಯುತ್ತಿದೆ ನೀರಾಗಿ…
ಅನುದಿನ ಕವನ-೧೦೪೩, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ಕವಿಯೀಗ ಕಾಣೆಯಾಗಿದ್ದಾನೆ!
ಕವಿಯೀಗ ಕಾಣೆಯಾಗಿದ್ದಾನೆ! ರವಿ ಕಾಣದ್ದನ್ನು ಕಂಡು ಬೆರಳ ತುದಿಯಲ್ಲೇ ಭಾವಗಳ ಬಸಿದು ಅಕ್ಷರಗಳಲ್ಲಿ ಅಭಿವ್ಯಕ್ತಿಸುವ ಕವಿ ಮಹಾಶಯನೀಗ ಕಣ್ಮರೆ ಜನರ ಬೇಗುದಿಗಳಿಗೆ ಮಡಿಲಾಗಿ ಒಡಲ ಕಿಚ್ಚುಗಳಿಗೆ ಸಿಡಿಲಾಗಿ ಕಡಲಂತೆ ಅಬ್ಬರಿಸಬೇಕಿದ್ದ ಕವಿಯೀಗ ಎಲ್ಲಿ ಮಾಯವಾದನೊ? ಬಹುಶಃ….. ಕವಿಗೋಷ್ಠಿಯ ಲಿಸ್ಟಿನಲ್ಲಿ ತನ್ನ ಹೆಸರು…
ಅನುದಿನ ಕವನ-೧೦೪೨, ಕವಿ: ಡಾ.ಆನಂದ್ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ: ಕವಿ ಸತ್ತ ದಿನ!
ಕವಿ ಸತ್ತ ದಿನ! ಕವಿ ಸತ್ತ ದಿನ; ಅವನ ಅಮಾಯಕ ಪತ್ನಿ ತನಗಿದ್ದ ಗಂಟು ಜಡೆಗೇ ತುರುಬುಗಟ್ಟಿ ಇಟ್ಟು ನಾಗರಬಿಲ್ಲೆ ಮುಡಿದು ಮಲ್ಲಿಗೆ ಮಾಲೆ ದೊಡ್ಡ ಕುಂಕುಮ ಹಣೆಗೆ ಇಳಿದು ಬೈತಲೆಯ ಠೀಕು ಟಾಕು.. ಮುಗುಳ್ನಗೆಯ ಧರಿಸಿದ್ದು – ಸುದ್ದಿ! ಅರೆ!…
ಅನುದಿನ ಕವನ-೧೦೪೧, ಕವಿ:ಡಾ.ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ತರಹೀ ಗಜಲ್
ತರಹೀ ಗಜಲ್ ಮಿಸ್ರಾ : ಅರುಣಾ ನರೇಂದ್ರ (ಹೃದಯದ ಖಾನೆಯಲಿ…) ಹೃದಯದ ಖಾನೆಯಲಿ ನನ್ನ ಬಂಧಿಸು ತೋಳಿನ ಬಿಸುಪಿನಲಿ ನನ್ನ ಮರೆಸು. ತುಂಟ ಮಾತಲಿ ಕೆನ್ನೆ ಸವರು ಇಬ್ಬನಿಯ ಹಾದಿಯಲಿ ನನ್ನ ಕುಣಿಸು . ಮುನಿದು ಪ್ರತಿ ಗಳಿಗೆಯನು ಆಳಬೇಡ ಅಧರಗಳ…
ಅನುದಿನ ಕವನ-೧೦೪೦, ಕವಿ: ಕಿರಣ್ ಗಿರ್ಗಿ, ,ಚಾಮರಾಜನಗರ, ಕವನದ ಶೀರ್ಷಿಕೆ: ಆಟ
ಆಟ ಏನಾದರಾಗಲಿ ಇದ್ದು ಬಿಡಬೇಕು ನಾ ಮಗುವಿನಂತೆ, ಆಡಿಕೊಂಡು! ಮತ್ತೊಬ್ಬನ ಸೋಲಿಸಿ ಗೆದ್ದು ಬೀಗುವ ಓಟ ಬೇಕಿಲ್ಲ ನನಗೆ, ಎಂದೂ ಬೇಕು ಆಟ – ಆಡುವುದಕ್ಕಾಗಿ ಮಕ್ಕಳಂತೆ, ಕೂಡಿ ಆಡಲೇ ಬೇಕು ಆಟ ಘಳಿಗೆ ಘಳಿಗೆಗಳ ಪ್ರೀತಿಸುವುದಕ್ಕಾಗಿ ಅವ್ವ ಕರೆದ ದನಿಯ…
