ಮಳೆ ಬಿದ್ದ ನೆಲದ ಆರಂಭ ಮುಂಗಾರು ಭರಣಿ ಮಳೆ ಹೆಜ್ಜೆಯೂರಿ ಧರಣಿ ಮೈಮೇಲೆ ನೇಗಿಲ ಕುಳದ ಕಚಗುಳಿ ! ಹೆಗಲುಗೊಟ್ಟು ಆರು ಎಳಿಯೋ ಆರಂಬದೆತ್ತುಗಳು ಕೊಟ್ಟಿಗೆ ರಂಜಣಿಗೆ ಕಣ್ಗೂಟ ಕಣ್ಣಿ ಕಳೆದುಕೊಂಡಿವೆ ಟಿಲ್ಲರ್ ಟ್ರಾಕ್ಟರ್ ಎದುರು ! ಬೀಜ ಬಿತ್ತಲು ಬೆವಸಾಯದ…
Category: ಅನುದಿನ ಕವನ
ಅನುದಿನ ಕವನ-೮೫೮, ಕವಿ: ಕೆ. ಬಿ. ವೀರಲಿಂಗನಗೌಡ್ರ, ಬಾದಾಮಿ ಕವನದ ಶೀರ್ಷಿಕೆ: ದಾರಿ ತೋರುವವ
ದಾರಿ ತೋರುವವ ನೀ ಕಳೆದು ಹೋಗುವವನಲ್ಲ ಕೂಡಿಸಿ ಪ್ರೀತಿ ಹಂಚುವ ಸಂಚಾರಿ ನೀ ಆರುವವನಲ್ಲ ನಂದಾದೀಪವಾಗಿ ಉರಿವ ಅರಿವು ನೀ ಕಣ್ಮರೆಯಾಗುವವನಲ್ಲ ಕಣ್ಣೊಳಗಡಗಿರುವ ಚೆಂಬೆಳಕು ನೀ ಸಾಯುವವನಲ್ಲ ಸತ್ತೂ ಬದುಕುವ ದಾರಿ ತೋರುವವ -ಕೆ. ಬಿ. ವೀರಲಿಂಗನಗೌಡ್ರ, ಬಾದಾಮಿ *****
ಅನುದಿನ ಕವನ-೮೫೭, ಕವಿಯಿತ್ರಿ:ಶ್ರೀ…., ಮಂಗಳೂರು, ಕಾವ್ಯ ಪ್ರಕಾರ:ಗಜಲ್
ಗಜಲ್ ಭಾವಗಳ ಕಡಲ ಅಲೆಗಳು ಹುಚ್ಚೆದ್ದಿವೆ ಇಂದವನು ಬರುವನೋ ಏನೋ ಕನಸುಗಳು ಕಂಗಳಲಿ ನಲಿಯುತ್ತಿವೆ ಇಂದವನು ಬರುವನೋ ಏನೋ ಒಡಲ ವಿರಹದ ಚಡಪಡಿಕೆಗೆ ಉರಿವ ದಿನಪನಿಗೂ ಒಳಗೊಳಗೇ ನಗು ಇರುಳು ಮುಸುಕು ಹಾಸಲು ಕಾದಿರುವೆ ಇಂದವನು ಬರುವನೋ ಏನೋ ನೆಟ್ಟ ನೋಟದೊಳಗೆ…
ಅನುದಿನ ಕವನ-೮೫೬, ಕವಿಯಿತ್ರಿ: ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಬೆಳಗಾವಿ ಕವನದ ಶೀರ್ಷಿಕೆ:ವ್ಯೋಮದೊಳಗಿನ ಆತ್ಮ
ವ್ಯೋಮದೊಳಗಿನ ಆತ್ಮ ಸಾರಾನಾಥದ ಸ್ತೂಪದ ಹೂದೋಟದಲ್ಲಿ , ದಮ್ಮನ ಪರಿಮಳ. ಜಗವ ಕಂಡರಿಯದ ಧನ್ಯತೆ, ಕಾಲಿರಿಸಿದ ನೆಲದಲ್ಲೆಲ್ಲ ಪುಳಕ. ಯಾರದೋ ಧ್ವನಿ ನಿಶ್ಶಬ್ದದೊಳಗೆ, ಹೊರಳಿದೆ, ಹುಡುಕಿದೆ ,ಬೆಚ್ಚಿದೆ. ಅದು ಬಯಲೊಳಗಿನ ಆತ್ಮ. ಜ್ಞಾನ ಭ್ರೂಣ ಹೊತ್ತ ಅದಕ್ಕೆ ನನ್ನೊಳಗೆ ಗರ್ಭೀಕರಿಸಿಕೊಳ್ಳುವ ಧಾವಂತ.…
ಅನುದಿನ ಕವನ-೮೫೫, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್, ಕವನದ ಶೀರ್ಷಿಕೆ:ಬುದ್ದ ಎಲ್ಲರೂ ನಿನ್ನಂತಾಗುವದಿಲ್ಲ…!
ಬುದ್ದ ಪೌರ್ಣಿಮೆ ಶುಭಾಶಯಗಳೊಂದಿಗೆ, ಬುದ್ದ ಎಲ್ಲರೂ ನಿನ್ನಂತಾಗುವದಿಲ್ಲ…! ನೀನೋ ವಿಶ್ವಶಾಂತಿಗಾಗಿ ಮಾನಸಿಕ ತುಮುಲಗಳ ಹೊಯ್ದಾಟದಲಿ ಸಿಲುಕಿ ನರಳಿದವನು… ನಡುರಾತ್ರಿಯಲಿ ಸುಖಭೋಗಗಳ ತೊರದವನು… ಬುದ್ದ….ಎಲ್ಲರೂ ನಿನ್ನಂತಾಗುವುದಿಲ್ಲ….! ಭವಬಂಧನಗಳ ಕಳಚಿ ಇಹದ ಭೋಗಲಾಲಸೆಗಳ ಬದಿಗಿಟ್ಟು ಸತಿಸುತರ ಆಸೆಯನು ಬಿಟ್ಟವನು ಮನೋವ್ಯಾಕುಲಗಳ ಅದುಮಿಟ್ಟು ಬುದ್ದನಾದವನು ಬುದ್ದ….…
ಅನುದಿನ ಕವನ-೮೫೪, ಕವಿ:ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ:ಗಜ಼ಲ್
ಗಜ಼ಲ್ ಹೋದವರನ್ನೇ ನೆನೆದುಕೊಂಡು ಏಕೆ ಕೊರಗುತ್ತೀರಿ ಇನ್ನವರು ಮರಳಿ ಬರುವುದಿಲ್ಲ ಮರೆಯಾದವರನ್ನೇ ಸ್ಮರಿಸಿಕೊಂಡು ಏಕೆ ವ್ಯಥೆ ಪಡುತ್ತೀರಿ ಇನ್ನವರು ಮರಳಿ ಬರುವುದಿಲ್ಲ ಜೊತೆ ನಡೆಯುವ ಹೆಜ್ಜೆಗಳು ಒಂದಲ್ಲ ಒಂದು ದಿನ ಕಣ್ಮರೆಯಾಗುತ್ತವೆ ತಿಳಿದು ತಿಳಿದು ಏಕೆ ದುಃಖ ಪಡುತ್ತೀರಿ ಇನ್ನವರು ಮರಳಿ…
ಅನುದಿನ ಕವನ-೮೫೩, ಕವಿ: ರಾಘವೇಂದ್ರ ಕೆ. ತೋಗರ್ಸಿ, ಬೆಂಗಳೂರು
ಜಾತಿ ಮೀರುವ ಸಾಧ್ಯತೆ ಅವಕಾಶವನ್ನೂ ಹೊಸಕಿ ಆ ಮೋಹದಲ್ಲಿ ವಿಜಾತಿಯನ್ನು ನಡೋರಾತ್ರಿಯಲಿ ಕೈ ಬಿಟ್ಟು ಸಜಾತಿಗೆ ಒಲಿದ ಕಾಂತೆ ಆಕೆಗೀಗ ದೇವರು ಮೈದುಂಬುತ್ತಿದೆ ಮೈದುಂಬಿದಾಗ ಸನಾತನ ಕೊಳಚೆ ಆಗಲೇಬೇಕು ಶುದ್ಧ! ಬರಗಾಲ ನೀರಿನ ಬೇಗೆಯಲಿ ತೊಳೆಯಲಾದರೂ ಆಗಬೇಕು ಶುದ್ಧೀಕರಣ ಅದಕ್ಕೀಗ ಬೇಕು…
ಅನುದಿನ ಕವನ-೮೫೨, ಕವಿಯಿತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ: ಅಪ್ಪ-ಅವ್ವ
ಯಾರದೋ ಜಮೀನಿಗೆ ಬೆವರು ಸುರಿದ ಅಪ್ಪ ಕಣ್ಣೀರಷ್ಟೇ ಕುಡಿದ! ಎಷ್ಟೊಂದು ಮನೆಗಳಿಗೆ ಸುಣ್ಣ ಬಣ್ಣ ಬಳಿದ ಅವ್ವ ತನ್ನ ಮನೆಯ ಗೋಡೆಯ ಬಿರುಕಿಗೆ ಮಣ್ಣು ಮೆತ್ತುತ್ತಿದ್ದಳು! ಯಾರ್ಯಾರದೋ ಅಲ್ಲಂಡೆಗಳಿಗೆ ಸಲ್ಲುತ್ತ ತನ್ನವರಿಗೇ ‘ಇಲ್ಲ’ವಾಗುತ್ತ ಹೋದ ಅಪ್ಪನಿಗೆ ಊರಿಗೆ ಕೇಡಾಗದ ಕನಸು! ಕರೆದವರ…
ಅನುದಿನ ಕವನ-೮೫೧, ಕವಿ: ಗೀತೇಶ್ (ವಿ.ಆರ್. ಮುರಲೀಧರ್), ಬೆಂಗಳೂರು, ಕವನದ ಶೀರ್ಷಿಕೆ: ಮೊದಲ ಮಳೆ – ಜೀವ ಕಳೆ
ಮೊದಲ ಮಳೆ – ಜೀವ ಕಳೆ ಬಿರು ಬಿಸಿಲಿಗೆ ಬೆಂದ ಊರು, ಕಾದು ಬಳಲಿದ ಪ್ರತೀ ಸೂರು, ಬಳಲಿ ನಿಂತಿಹ ಗಿಡ ಮರಗಳು. ಸೊರಗಿ ಒಣಗಿಹ ಬೆಳೆ ಪೈರುಗಳು. ಚೆಲುವ ಮರೆತ ಪ್ರಕೃತಿಯು, ಕನಲಿ ಕುಳಿತ ಭೂಮಾತೆಯು, ಮರೆತು ಹೋದ ಖುಷಿಯದು,…
ಅನುದಿನ ಕವನ-೮೫೦, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶ್ರಮಿಕರು
ಕಾರ್ಮಿಕ ದಿನಾಚರಣೆಯ ಶುಭಾಶಯಗಳೊಂದಿಗೆ🍀💐 ಶ್ರಮಿಕರು ಶ್ರಮಿಸುವ ಶ್ರಮಿಕರು ನೆನಪಿಗೆ ಬರುವರು ಇಂದು ಅದುವೇ ಕಾರ್ಮಿಕರ ದಿನಾಚರಣೆ ವಿಶೇಷವಿಹುದು ಮೇ ಒಂದು || ಹಸಿವು ಬಾಯಾರಿಕೆಯ ಹಂಗಿಲ್ಲದ ದುಡಿತ ಅಹೋರಾತ್ರಿ, ಬದುಕಿನ ಗಂಜಿಗಾಗಿ ಪುಡಿಗಾಸು ಗಳಿಕೆಯಲ್ಲೇ ತೃಪ್ತಿ ಪಡುವ ಜೀವ ನಿತ್ಯ ನಿಂತಿದೆ,…
