ಪ್ರಶಾಂತವಾಗಿ ಹರಿವ ನದಿಯ ಒಳಗಿನ ರಭಸದಂತೆ ನೀನು ಮುನ್ನುಗ್ಗಿ ಮುನ್ನುಗ್ಗಿ ಓಡಿ ನನ್ನೆದೆಯಲ್ಲಿ ಅವಿತು ಗುಪ್ತಗಾಮಿನಿಯಾದೆ ಎದೆಯೊಳಗೆ ಅವಿತು ಪಿಸುದನಿಯಲ್ಲಿ ಹೆಸರಿಡಿದು ಕರೆದು ಕೆಣಕುವೆಯಲ್ಲ ಎದೆಯಾಳದಿಂದ ಹೊರಗೆದ್ದು ಬಾ ಕಣ್ತುಂಬ ನೋಡಬೇಕು ನಿನ್ನ ಬರಸೆಳೆದು ಅಪ್ಪಬೇಕು ಮನಸಾರೆ ಮಾತನಾಡಬೇಕು ತಗ್ಗಿಗೆ ಹರಿಯುವ…
Category: ಅನುದಿನ ಕವನ
ಅನುದಿನ ಕವನ-೯೮೧, ಕವಿ:ಎಸ್.ಕೌಸ್ತುಭ ಭಾರದ್ವಾಜ್, ಬಳ್ಳಾರಿ, ಕವನದ ಶೀರ್ಷಿಕೆ: ನಾಡು-ನುಡಿ
ನಾಡು–ನುಡಿ ಕನ್ನಡ ತಾಯಿಯ ಪುತ್ರರು ನಾವು ನಮ್ಮೀ ಭಾಷೆಯ ಬೆಳೆಸೋಣ ಜಾತಿಯ ಮರೆತು ಭಾಷೆಯ ನೆನೆದು ಕನ್ನಡ ಆಸ್ತಿಯ ಬೆಳೆಸೋಣ ಸ್ವಾಭಿಮಾನ ಮೆರೆದು ನನ್ನೀ ನಾಡು ಬೆಳೆಯಬೇಕೆಂಬಂತೆ ಕನ್ನಡ ಜಾಗೃತಿ ಮಾಡೋಣ ಭಾಷೆಯು ನಮ್ಮದು ಬೆಳೆಯಲೆಂದು, ಕನ್ನಡ ಬಳಸಿ ಕನ್ನಡ ಉಳಿಸಿ…
ಅನುದಿನ ಕವನ-೯೮೦, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಬುದ್ಧ…
ಬುದ್ದ… ಬುದ್ದ ನಮ್ಮ ನಿದ್ದೆಯನ್ನು ಕದ್ದ ಬದುಕನ್ನು ಗೆದ್ದ… ಸದಾ ಚಲನಶೀಲ ಲವಲವಿಕೆ ನಮ್ಮ ಇರುವಿಕೆ ಗುರುತಿಸುವಿಕೆ ಬುದ್ದ… ಎಲ್ಲವೂ ಶೂನ್ಯ ನಗಣ್ಯ ನಮಗೆ ನಾವೇ ಧನ್ಯ- -ರಾಗಬೇಕಾದರೆ ಬೇಕು ನಿತ್ಯಸತ್ಯದ ದಾರಿಗೆ ಬುದ್ದ… ಕಾರುಣ್ಯ ಹೃದಯ, ತೇಜಸ್ಸು ಮೊಗ, ಹೊಳೆಯುವ…
ಅನುದಿನ ಕವನ-೯೭೯, ಕವಿಯಿತ್ರಿ: ಡಾ. ಸುಮ ವೈ, ಬಳ್ಳಾರಿ, ಕವನದ ಶೀರ್ಷಿಕೆ: ನಾನು ಕಾರ್ಮಿಕಳಲ್ಲ
ನಾನು ಕಾರ್ಮಿಕಳಲ್ಲ ಪ್ರತಿ ದಿನ ಸೂರ್ಯೋದಯಕೆ ಮೊದಲೇ ಆರಂಭವಾಗುವದು ನನ್ನ ದಿನ ಪ್ರತಿನಿತ್ಯವೂ ಉಳಿದವರು ಏಳುವುದು ಆಮೇಲೇನಾ ಪ್ರತಿ ಕೆಲಸವೂ ಆಗಬೇಕು ಬಹುಬೇಗ ಪ್ರತಿ ಕೆಲಸ ನಂತರ ಮತ್ತೊಂದು ಕೆಲಸದ ಉದ್ವೇಗ ಪ್ರತಿ ಕೃತಿಗೂ ಹೀಯಾಳಿಕೆಯ ಮಾತು ಪ್ರತಿಬಾರಿಗೂ ಇದೇ ಆತು…
ಅನುದಿನ ಕವನ-೯೭೮, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ: ಶಿಕ್ಷಕನ ಆತಂಕ!
ಶಿಕ್ಷಕನ ಆತಂಕ! ವರ್ಗದೊಳಗೆ ವರ್ಣಭೇದವಿರುವಾಗ ಪೂರ್ಣತೆಯನ್ಹೇಗೆ ವರ್ಣಿಸಲಿ? ಮೂರ್ತವನ್ನಷ್ಟೇ ಅರಗಿಸಿಕೊಳ್ಳುವವರಿಗೆ ಅಮೂರ್ತವನ್ಹೇಗೆ ಅರ್ಥೈಸಲಿ? ಸುರಕ್ಷತೆಯನ್ನರಸಿ ಬಂದಿರುವವರ ಮುಂದೆ ಹೋರಾಟವನ್ಹೇಗೆ ಚಿತ್ರಿಸಲಿ? ಮಿಥ್ಯವನ್ನಷ್ಟೇ ಒಪ್ಪಿಕೊಂಡವರೆದಿರು ಸತ್ಯದ ಪಾಠವನ್ಹೇಗೆ ಮಾಡಲಿ? ಒಡೆಯುವ ವಾರಸುದಾರರಿಗೆ ಕಟ್ಟುವದನ್ಹೇಗೆ ಕಟ್ಟಿಕೊಡಲಿ? ಚಾಡಿಯ ಬುತ್ತಿ ತಂದವರಿಗೆ ಎದೆಯ ಹಾಡನ್ಹೇಗೆ ಉಣಿಸಲಿ?…
ಅನುದಿನ ಕವನ-೯೭೭, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ, ಕವನದ ಶೀರ್ಷಿಕೆ: ಗುರು
ಗುರು ಅರಿಯಲಾರದ್ದನ್ನೆಲ್ಲ ಅರ್ಥೈಸಿ ಹೇಳಿದ ಗುರು ಉಳಿದರು ಎಲ್ಲರ ಮನದಲ್ಲಿ|| ಕಲಿಯಲಾರದವರನ್ನೆಲ್ಲ ಕಲಿಕೆಗೆ ತಂದ ಗುರು ಉಳಿದರು ಎಲ್ಲರ ಮನದಲ್ಲಿ|| ಇಂದಿಗೂ ಅಳಿಯದೇ ಉಳಿದಿವೆ ಮೇಲು ಕೀಳು ಎಂಬ ವಿಷಕಾರುವ ಮನಗಳು| ಬಡವ ಬಲ್ಲಿದರೆಂದು ಭೇದ ಮಾಡದ ಗುರು ಉಳಿದರು ಎಲ್ಲರ…
ಅನುದಿನ ಕವನ-೯೭೬, ಕವಿಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು
ತಾಯಿ, ತಂದೆ, ಗುರು ಋಣಗಳು ಬದುಕಿನಲಿ ತೀರಿಸಲಾರದ ಋಣಗಳು ಇಬ್ಬನಿಯ ಒಡೆಯಾ. ತಾಯಿಪ್ರೀತಿಗೆ ಕೊಡಲೇನೂ ಇಲ್ಲ. ಮುಗುಳುನಗುವಿಗೇ ಆಕೆ ಸಂತೃಪ್ತೆ. ಮಕ್ಕಳು ಸುಖದಲಿರುವರೆಂಬ ಭಾವವೇ ತಂದೆಗೆ ಪರಮಸುಖ. ಶಿಷ್ಯರು ತನ್ನನು ಮೀರಿ ಬೆಳೆದರೆ ಸಾಕು. ಗುರುವಿಗೆ ಅದೇ ಕಾಣಿಕೆ. ಈ ಮೂವರ…
ಅನುದಿನ ಕವನ-೯೭೫, ಕವಿ: ಚಾಮರಾಜ ಸವಡಿ, ಕೊಪ್ಪಳ, ಕವನದ ಶೀರ್ಷಿಕೆ: ಮರೆಯಬೇಕಿದೆ ಎಲ್ಲಾ…
ಮರೆಯಬೇಕಿದೆ ಎಲ್ಲಾ… ಎಲ್ಲಾ ಮರೆಯಬೇಕಿದೆ ಹಾಗಂತ ಪದೆ ಪದೆ ನೆನಪಿಸಿಕೊಳ್ಳುತ್ತೇನೆ ಅಲಾರಾಂ ಅದುಮಿದ್ದೇನೆ ಕರೆಗಂಟೆ ಕಿತ್ತಿದ್ದೇನೆ ಗೇಟಿಗೆ ಹಾಕಿದ್ದ ಪತ್ರದ ಡಬ್ಬವನ್ನೂ ಬಿಚ್ಚಿಟ್ಟಾಗಿದೆ ಯಾರೂ ಬರಬೇಡಿ ನಾನು ಒಳಗಿಲ್ಲ ಮುಚ್ಚಿದ ಬಾಗಿಲೊಳಗಿನ ಮನೆಯಲ್ಲಿ ಬೆಳಕಿಲ್ಲ; ದೀಪ ಹಾಕುವಂತಿಲ್ಲ ಫ್ಯಾನು, ಫೋನು, ಕುಕ್ಕರ್…
ಅನುದಿನ ಕವನ-೯೭೪, ಕವಿ: ಡಾ. ಆನಂದ್ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ: ಏಸೊಂದು ರಾಧೆಯರಿಲ್ಲಿ. ….!?
ಏಸೊಂದು ರಾಧೆಯರಿಲ್ಲಿ. ….!? 1. ಮತ್ತೆ ಮತ್ತೆ ಬದಲಾಗುವ ಋತು ಬೀಸಿ ಸುಯ್ಯುವ ಗಾಳಿ ಗಿಡ ಗಂಟೆ ತೂಗಿ ನಿನಾದ ಹೊಮ್ಮಿ ಜುಳು ಜುಳು ಹರಿವ ಯಮುನೆಯ ಈ ದಿನನಿತ್ಯ – ವರ್ತಮಾನದ ಹಾಗೆ ಹಿಂದೆಂದೂ ಗೋಕುಲವಿರಲಿಲ್ಲ! ಇಲ್ಲಿಗೆ ಒಳ ಬಂದ…
ಅನುದಿನ ಕವನ-೯೭೩, ಪ್ರಸಿದ್ಧ ಕವಿಯಿತ್ರಿ: ಅಮೃತಾ ಪ್ರಿತಮ್, ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ
ಪ್ರಸಿದ್ಧ ಕವಿಯಿತ್ರಿ ಅಮೃತಾ ಪ್ರಿತಮ್ ಅವರ ಜನುಮದಿನ ಇಂದು(ಆ.31). ಈ ಹಿನ್ನಲೆಯಲ್ಲಿ ಅವರ ಕವಿತೆಯನ್ನು ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಅವರಿಗೆ ಗೌರವ ಪೂರ್ವಕವಾಗಿ ಶುಭಾಶಯಗಳನ್ನು ತಿಳಿಸುತ್ತಿದೆ!🍀🎂💐👇🌸 ಅವ ಹೇಳುತ್ತಿದ್ದ ಇವಳು ಕೇಳುತ್ತಿದ್ದಳು ಜಾರಿಯಲ್ಲಿತ್ತು ಆಟ ಹೇಳು, ಕೇಳುವುದು…
