ಲಿಂಗೈಕ್ಯರಾದ ಶ್ರೀ ಎನ್. ತಿಪ್ಪಣ್ಣ ಅವರಿಗೆ ‘ಕರ್ನಾಟಕ ಕಹಳೆ’ಯ ಅಕ್ಷರ ನಮನ, ಲೇ: ಎ ಎಂ ಪಿ ವೀರೇಶಸ್ವಾಮಿ, ಹೊಳಗುಂದಿ

ಶ್ರೀ ಎನ್. ತಿಪ್ಫಣ್ಣ ಅವರು ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದ ಶರಣ ದಂಪತಿಗಳಾದ ಶ್ರೀರುದ್ರಣ್ಣ ಮತ್ತು ಶ್ರೀಮತಿ ಹಂಪಮ್ಮ ಇವರ ಪ್ರೀತಿಯ ಕಂದನಾಗಿ ೧೯೨೮ ರ ನವೆಂಬರ್ ಮಾಹೆಯಲ್ಲಿ ಜನಿಸಿದರು. ಶ್ರೀಯುತರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ತುರುವನೂರಿನ ಸರ್ಕಾರಿ…

ಕಂಪ್ಲಿಯಲ್ಲಿ ಗಮನಸೆಳೆದ ಅರ್ಥಪೂರ್ಣ ‘ಪ್ರತೀ ಹುಣ್ಣಿಮೆ ಬುದ್ಧ ಪೂರ್ಣಿಮೆ’ ಕಾರ್ಯಕ್ರಮ

  ಕಂಪ್ಲಿ, ಜು.11:  ಕರ್ನಾಟಕ ಬೌದ್ಧ ಸಮಾಜ ಆಯೋಜಿಸುತ್ತಿರುವ “ಪ್ರತೀ ಹುಣ್ಣಿಮೆ ಬುದ್ಧ ಪೂರ್ಣಿಮೆ” ಕಾರ್ಯಕ್ರಮವನ್ನು ಕಂಪ್ಲಿ ಯಲ್ಲಿ ಅರ್ಥಪೂರ್ಣ ಗುರುಪೂರ್ಣಿಮೆ ಯಾಗಿ ಆಚರಿಸಲಾಯಿತು. ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯರು ಶಿಕ್ಷಣ ತಜ್ಞರು, ಜೀವಪರ ಚಿಂತಕರೂ ಡಾ.ಹೆಚ್.ಸಿ.ರಾಘವೇಂದ್ರ ಸರ್…

ವಿಧಾನ ಪರಿಷತ್ತ ಮಾಜಿ ಸಭಾಪತಿ, ಅಖಿಲಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎನ್ ತಿಪ್ಪಣ್ಣ ನಿಧನ

ಬಳ್ಳಾರಿ, ಜು.11:  ವಿಧಾನ ಪರಿಷತ್ತ ಮಾಜಿ ಸಭಾಪತಿ,ಅಖಿಲಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎನ್ ತಿಪ್ಪಣ್ಣ  ಅವರು ಇಂದು ಬೆಳಗಿನ ಜಾವ ಇಹಲೋಕ ತ್ಯಜಸಿದ್ದಾರೆ.        ವಯೋಸಹಜ ಖಾಯಿಲೆಯಿಂದ ಕೆಲವು ದಿನಗಳಿಂದ ಬಳಲುತ್ತಿದ್ದರು ಬಳ್ಳಾರಿಯ ನಿವಾಸದಲ್ಲಿ ಇಂದು ಬೆಳಗಿನ…

ಅಲೆಮಾರಿ ನಿಗಮದ ಅಧ್ಯಕ್ಷ ಸ್ಥಾನದಿಂದ ಪಲ್ಲವಿ ಅವರನ್ನು ವಜಾಗೊಳಿಸಲು ಒತ್ತಾಯಿಸಿ ಬಳ್ಳಾರಿಯಲ್ಲಿ ಎಸ್‌ಸಿ, ಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಪ್ರತಿಭಟನೆ

ಬಳ್ಳಾರಿ, ಜು.8: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು ಅಲೆಮಾರಿ ಸಮುದಾಯದವರ ಮೇಲಿನ ದೂರುಗಳನ್ನು ಹಿಂಪಡೆಯಬೇಕು. ಅವರ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ…

ಬಳ್ಳಾರಿಯಲ್ಲಿ ಪತ್ರಿಕಾ ದಿನಾಚರಣೆ: ಪತ್ರಕರ್ತರು ಸಂವಿಧಾನದ ಮೌಲ್ಯಗಳನ್ನು ಬೆಸೆಯುವ ನೇಕಾರರಾಗಬೇಕಿದೆ -ಸಿ.ಎಂ. ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

ಬಳ್ಳಾರಿ ಜು 7: ನಮ್ಮ ಸಂವಿಧಾನ ಪ್ರತ್ಯೇಕವಾಗಿ “ಪತ್ರಿಕಾ ಸ್ವಾತಂತ್ರ್ಯ” ಕೊಟ್ಟಿಲ್ಲ. ವಾಕ್ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವಾಗಿದೆ. ಹೀಗಾಗಿ ಸಂವಿಧಾನ ಉಳಿದರೆ ಮಾತ್ರ ಪತ್ರಿಕಾ ಸ್ವಾತಂತ್ರ್ಯವೂ ಉಳಿಯುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು. ರಾಜ್ಯ ಮತ್ತು ಜಿಲ್ಲಾ…

ಬಳ್ಳಾರಿ: ರಂಜಿಸಿದ ತುಂಗಾ ಆಷಾಡ ನಾಟ್ಯ ವೈಭವ

ಬಳ್ಳಾರಿ: ಭಾರತೀಯ ಕಲಾ ಸಂಪತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮುಂದುವರೆಯಬೇಕು ಎಂದು ನಗರದ ಶ್ರೀ ಪಾಂಡುರಂಗ ದೇವಸ್ಥಾನದ ಕಾರ್ಯದರ್ಶಿ ವೆಂಕೋಬ ರಾವ್ ತೇಳಿಸಿದರು. ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಶ್ರೀ ಪಾಂಡುರಂಗ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ತುಂಗಾ…

ಜು.7 ರಂದು ಬಳ್ಳಾರಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ಬಳ್ಳಾರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಸಮಿತಿ ಸೋಮವಾರ ಬೆಳಿಗ್ಗೆ 10.30 ಕ್ಕೆ ನಗರದ  ಹಳೇ ಡಿಸಿ ಕಚೇರಿ ಆವರಣದ ಗಾಂಧಿ ಭವನದಲ್ಲಿ 2025 ನೇ ಸಾಲಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮವನ್ನು ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ…

ಹಂದ್ಯಾಳ್ ಶ್ರೀ ಮಹಾದೇವ ಕಲಾ ಸಂಘದಿಂದ ನಾಟಕ ಹಬ್ಬ-2025: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವುದು ಅಗತ್ಯ -ಎಚ್.ಕೆ.ಸಿದ್ದಯ್ಯ ಸ್ವಾಮಿ

ಬಳ್ಳಾರಿ,ಜು.4: ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ನಮ್ಮದಾಗಬೇಕು ಎಂದು ಹಚ್ಚೋಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎಚ್.ಕೆ.ಸಿದ್ದಯ್ಯ ಸ್ವಾಮಿ ಅವರು ಹೇಳಿದರು. ನಗರದ ಹಂದ್ಯಾಳು ಮಹಾದೇವ ತಾತ ಕಲಾ ಸಂಘ ವತಿಯಿಂದ ಸಿರುಗುಪ್ಪ ತಾಲೂಕಿನ ಕುಡುದರಹಾಳ ಗ್ರಾಮದ…

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿದ  2024-25ನೇ ಸಾಲಿನ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಜಿಲ್ಲಾಧ್ಯಕ್ಷ ಡಾ. ಟಿ.‌ದುರುಗಪ್ಪ ಒತ್ತಾಯ

ಬಳ್ಳಾರಿ, ಜು.3:  ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25 ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಯುಜಿಸಿ- ನಾನ್‌ ಯುಜಿಸಿ ಅತಿಥಿ ಉಪನ್ಯಾಸಕರನ್ನು ತಾರತಮ್ಯ ಮಾಡದೇ ಮುಂದುವರೆಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ…

ವಯೋ ನಿವೃತ್ತಿ ಹೊಂದಿದ ಪ್ರಾಚಾರ್ಯ ಡಾ.‌ಸಿ. ಎಚ್ ಸೋಮನಾಥ್ ಅವರಿಗೆ ಛಲವಾದಿ ನೌಕರರ ಕಲ್ಯಾಣ ಸಂಘದಿಂದ ಹೃದಯಸ್ಪರ್ಶಿ ಸನ್ಮಾನ

ಬಳ್ಳಾರಿ, ಜು.2: ವಯೋ ನಿವೃತ್ತಿ ಹೊಂದಿದ ಸರಳಾದೇವಿ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿ.‌ಎಚ್. ಸೋಮನಾಥ್ ಅವರನ್ನು ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಪದಾಧಿಕಾರಿಗಳು ಸನ್ಮಾನಿದ ಕ್ಷಣ ಹೃದಯಸ್ಪರ್ಶಿ ಯಾಗಿತ್ತು. ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಸೋಮವಾರ…