ಮೈಸೂರು, ಏ.26: ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಿದರು. ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಸಿದ್ದರಾಮನಹುಂಡಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
Category: ರಾಜ್ಯ
ಅನುದಿನ ಕವನ-೧೨೧೧, ಕವಿ: ಡಾ. ಗೋವಿಂದರಾಜ ಆಲ್ದಾಳ, ಕವನದ ಶೀರ್ಷಿಕೆ:ಮೈ ಮನದ ಸುಳಿಯಲ್ಲಿ…..
ಮೈ ಮನದ ಸುಳಿಯಲ್ಲಿ….. ಶಶಿ ತೋರುಬೆರಳು ಮೊಗ್ಗಿನ ಮೈಸವರಿದಾಗ ಹೂವಿನ ಘಮಲು ಮೂಡುತ್ತಿತ್ತು ! ಕನ್ಯೆಯ ಕುಡಿನೋಟ ಬೆಳದಿಂಗಳ ಬಿದ್ಹಾಂಗ ಬೆವರಿನ ಪರಿಮಳ ಹರಡುತ್ತಿತ್ತು ! -೧ – ಕೆನ್ನೆಯ ಕನ್ನಡಿಗೆ ಹರೆಯ ನಸುನಗೆ ಕಾಡಿದರೆ ಕಣ್ಣಾನ ಗೊಂಬೆ ಮರಗುತ್ತಿತ್ತು !…
ಅನುದಿನ ಕವನ-೧೨೧೦, ಕವಿ: ಶ್ರೀ…. ಬೆಂಗಳೂರು, ಕವನದ ಶೀರ್ಷಿಕೆ: ನಾನಂತೂ .. ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ…..
ನಾನಂತೂ .. ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ . ಕೆದರಿದ ಕೂದಲನ್ನು ಸುಮ್ಮನೆ ಹಾಗೆ ಹಿಂದೆ ಸರಿಸಿ ಮುಡಿ ಕಟ್ಟುತ್ತಾಳೆ ಕಣ್ಣು ಕಾಡಿಗೆ ಮರೆತು ಯಾವ ಕಾಲವಾಯ್ತೊ ? ತುಟಿಗಂಟಿದ ಬಣ್ಣ ಎಲ್ಲಿ ಕಳೆದು ಹೋಯ್ತೊ ? ಕೆನ್ನೆ…
ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ: ಕೆಯುಡಬ್ಲ್ಯುಜೆ ಕಂಬನಿ
ಬೆಂಗಳೂರು, ಏ.24: ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್ ದೇವ್ (92) ಅವರು ಕೆಂಗೇರಿ ಉಪನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇಬ್ಬರು ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾಯಿನಾಡು ಪತ್ರಿಕೆ, ಸಂಯುಕ್ತ ಕರ್ನಾಟಕ,…
ಅನುದಿನ ಕವಿ-೧೨೦೯, ಹಿರಿಯ ಕವಿ: ಎಚ್.ಡುಂಡಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಬೇಸಿಗೆ ಹೈಕುಗಳು
ಬೇಸಿಗೆ ಹೈಕುಗಳು -೧- ಬೇಸಿಗೆ ಕಾಲ ನಿನ್ನೆದೆಯ ಫ್ರಿಜ್ಜಲ್ಲಿ ತಣ್ಣಗಿರುವೆ -೨- ಬಳ್ಳಾರಿಯಲ್ಲೂ ಸೆಖೆ ಆಗುವುದಿಲ್ಲ ಸಖಿ ಇದ್ದರೆ -೩- ಕಾಯಿಸುವುದು ಪ್ರೀತಿಯ ಮಳೆಯಲ್ಲಿ ತೋಯಿಸಲಿಕ್ಕೆ -೪- ಸಹಿಸಲಾರೆ ಅವಳ ಬೆಂಕಿ ಮಾತು ಬೇಸಿಗೆ ವಾಸಿ -೫- ಅವಳು ಜೀವ ನದಿ…
ಕಾವ್ಯ ಕಹಳೆ(೨೩-೦೪-೨೦೨೪), ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ದೃವತಾರೆ
ಏ.24 ವರನಟ, ಪದ್ಮಭೂಷಣ, ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಅವರ ೯೫ನೇ ಹುಟ್ಟುಹಬ್ಬ! ಈ ಹಿನ್ನಲೆಯಲ್ಲಿ ಕವಯಿತ್ರಿ ಹೂವಿನ ಹಡಗಲಿಯ ಶೋಭ ಮಲ್ಕಿಒಡೆಯರ್ ಅವರು ಡಾ. ರಾಜಕುಮಾರ್ ಅವರು ಅಭಿನಯಿಸಿದ ಚಲನಚಿತ್ರಗಳ ಹೆಸರುಗಳನ್ನೇ ಬಳಸಿ ‘ದೃವತಾರೆ’ ಕವನ ರಚಿಸುವ ಮೂಲಕ ಮೇರು…
ಅನುದಿನ ಕವನ-೧೨೦೮, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ:ಅಮ್ಮಾ ಎಂದರೆ…
ಅಮ್ಮಾ ಎಂದರೆ… ಎಣ್ಣಿ ಹಚ್ಚಿ ತಲೆ ತಟ್ಟಿ ಮೆದುಳನು ಹದಮಾಡಿದವಳು ಕಣ್ಣು ಹುಬ್ಬನು ತೀಡಿ ದೃಷ್ಟಿಗೆ ಸೃಷ್ಟಿ ತೋರಿಸಿದವಳು. ಅಮ್ಮಾ ಎಂದರೆ.. ಜೋಗುಳ ಕಿವಿಗೆ ಕೇಳಿಸಿ ಜಗಕೆ ಜ್ಯೋತಿಯಾಗೆಂದವಳು ನಾಲಿಗೆಗೆ ನುಡಿವುದ ಕಲಿಸಿ ಅದಕೆ ಹಿತ ಮಿತದ ಮದ್ದಿಟ್ಟವಳು ಅಮ್ಮಾ ಎಂದರೆ..…
ಅನುದಿನ ಕವನ-೧೨೦೭, ಕವಯಿತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ: ಇದಲ್ಲವೇ ಪ್ರೀತಿ?
ಇದಲ್ಲವೇ ಪ್ರೀತಿ? ಯೋಚಿಸಿ ನೋಡಿ ಇದಲ್ಲವೇ ಪ್ರೀತಿಯ ರೀತಿ? ಸಾಮಾನ್ಯ ವಿಷಯಗಳಲ್ಲೂ ಇದು ದಕ್ಕುವ ರೀತಿ! ಪಿಂಗಾಣಿ ಕಪ್ಪು ಬಿಗಿಯಾಗಿ ಹಿಡಿದಿಟ್ಟುಕೊಂಡ ಕಾಫಿ ಹೆಜ್ಜೆ ಇಟ್ಟಾಗಲೆಲ್ಲ ತುಸುವೇ ತುಳುಕುತ್ತಾ ನಲಿವಂತೆ ನಾವು ಕುಳಿತಾಗಲೆಲ್ಲಾ ನಮಗಾಸರೆಯಾಗಿ ಕುರ್ಚಿಯ ನಾಲ್ಕುಕಾಲುಗಳು ಭದ್ರವಾಗಿ ನಿಲ್ಲುವಂತೆ ನಡೆದಾಡುವಾಗ…
ಅನುದಿನ ಕವನ-೧೨೦೬, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್, ಕವನದ ಶೀರ್ಷಿಕೆ: ಮಳೆಯ ಸದ್ದು
ಮಳೆಯ ಸದ್ದು ಇಡಿ ಆಗಸವೆಲ್ಲ ಉರಿವ ಕೆಂಡದ ಬಿಸಿಲು ಆಹಾ..! ಬಿಸಿಲೆ…! ಏನು ನಿನ್ನ ಲೀಲೆ..! ನಿನ್ನ ಝಳದ ಸಾಲೆ ಬೆವರು ತಂದಿತಲ್ಲೆ..! ಒಂದಿಷ್ಟು ಶಪಿಸಿದೆ ಮಳೆ ಛೇ…ಮಳೆ ಬರಬಾರದಿತ್ತೆ..? ಸಂಜೆಯಾಗಿತ್ತು..! ಆಗಸದ ಮೋಡಗಳು ಚದುರಿ ಮೋಡಗಳು ಕರಿಸೀರೆ ಹೊದ್ದಂತಿತ್ತು..! ಮನೆಯ…
ಅನುದಿನ ಕವನ-೧೨೦೫, ಕವಯಿತ್ರಿ: ಡಾ. ಸಿ. ನಂದಿನಿ, ಬೆಂಗಳೂರು, ಕವನದ ಶೀರ್ಷಿಕೆ: ಇಳೆಯ ತಪನೆ
ಇಳೆಯ ತಪನೆ ಹೇ ಗಂಗೆಯೇ….. ಅರೆಕ್ಷಣವಾದರೂ ಪರಶಿವನೊಂದಿಗೆ ಮುನಿದು ಧರೆಗಿಳಿಯಬಾರದೆ ಇಳೆಗೆ ತಂಪಾಗಿ ಸೊಂಪಾಗಿ… ಹಸಿರಾಗಿ… ಬಸಿರಾಗಿ… ಮಡಿಲು ತುಂಬಿಕೊಳ್ಳುವಾಸೆ ಈ ಇಳೆಗೋ ಸಿರಿ ಸಂಭ್ರಮ ಮಿಂಚನ್ನೇ ವಾಡ್ಯಾಣವಾಗಿಸಿ ವೈಯಾರಿಯಾಗಿಬಿಡುವ ಬಿರು ಅಹಮಿಕೆ ವರ್ಷದ ಹನಿಗಳು ಸ್ಪರ್ಶಸಿದರೆ ಮಾತ್ರವೇ ಅರಳುವ ಕಾನನ…
