ಅನುದಿನ‌ ಕವನ-೬೦೭, ಕವಿ: ನಾಗೇಶ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಮಹಾ ಸಭ್ಯಸ್ಥನ ಪ್ರವರ

ಮಹಾ ಸಭ್ಯಸ್ಥನ ಪ್ರವರ ಬಾಯಿ ಬಿಟ್ಟರೆ ಆದರ್ಶ-ತತ್ವಗಳನ್ನೇ ಶಂಕ ಜಾಗಟೆ ಹೊಡೆಯುವ ಮಹಾ ಸಭ್ಯಸ್ಥ….. ಅನ್ಯಾಯಕ್ಕೆ ಕಾವಲಿರುತ್ತಾನೆ ಕುತಂತ್ರಿಗಳ ಬೆನ್ನು ತಟ್ಟುತ್ತಾನೆ ಬೆನ್ನ ಹಿಂದಿನ ಟೀಕೆಗಳನ್ನು ನಗುತ್ತಲೇ ಕೊಡವಿಕೊಳ್ಳುತ್ತಾನೆ ತಪ್ಪು ಎತ್ತಿ ತೋರಿಸಿದವರ ಮೇಲೆಯೇ ಧುತ್ತೆಂದು ಮುಗಿಬೀಳುತ್ತಾನೆ ಧರ್ಮ ಸಂದೇಶಗಳನ್ನು ಪುಕ್ಕಟೆಯಾಗಿ…

ಅನುದಿನ ಕವನ-೬೦೬, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ:ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು

ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು ವಿವಿಧ ವಿಶಯಗಳ ವಿಶ್ವವಿದ್ಯಾಲಯಗಳಲ್ಲಿ ಕಲಿತವಳಲ್ಲ ಜನಮನವ ತಿಳಿದು ವಿಶ್ವಾಸದಿ ವಿಶ್ವವನ್ನೆ ಅರಿತವಳು ನನ್ನ ಮನದ ಆಳ ಅಗಲಗಳ ಇಂಚಿಂಚೂ ಅಳೆದವಳು ನನ್ನ ಕಾವ್ಯಕನ್ನಿಕೆ ಸಕಲರೊಳು ಎದ್ದು ನಿಲ್ಲುವವಳು…

ಅನುದಿನ ಕವನ-೬೦೫, ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅವಳ‌ ನೆನಪು… ಚಿತ್ರ: ಆಶಾ ಎಸ್

ಅವಳ ನೆನಪು…….. ಅವಳ ನೆನಪುಗಳೇ ಹಾಗೆ- ಆಗಸದಿಂದ ಬಿಡದೆ ಸುರಿವ ಹನಿಗಳಂತೆ ! ಅಡಿಯಿಂದ ಮುಡಿಯವರೆಗೆ ತೋಯ್ದರೂ ಬೆಚ್ಚನೆ ರೋಮಾಂಚನ ಮೈಯ ಪ್ರತಿ ಕಣದೊಳಗೂ ಮೋಡಗಳ ಸ್ಪರ್ಶ ಮೊದಲ ಮಳೆಗೆ ನೆಲದಿಂದ ಮೇಲೆದ್ದ ಘಮಲಿನ ಹೂಬನ ನೆಲಕೆ ತಾಕುವ ಹನಿಗಳ ತಂತನನ…

ಅನುದಿನ ಕವನ-೬೦೪, ಕವಯತ್ರಿ: ಅನ್ನಪೂರ್ಣ ಪದ್ಮಶಾಲಿ, ಕೊಪ್ಪಳ, ಕವನದ ಶೀರ್ಷಿಕೆ: ವಾಸ್ತು ತೊರೆದ ವಾಸ್ತವ

ವಾಸ್ತು ತೊರೆದ ವಾಸ್ತವ ವಿಜ್ಞಾನ ಜಗತ್ತು ಜ್ಞಾನವಂತರ ಸೊತ್ತು ಬಿಡು ನೀ ವಾಸ್ತು… ವಾಸ್ತು. ವೈಜ್ಞಾನಿಕ ಮನೋಭಾವ ಅರಿತು! ಸಿಲುಕದಿರು, ಅಂಜದಿರು ವಾಸ್ತುವಿನ ಭಯಕ್ಕೆ.,! ಭೂಗೋಳವಿದು, ಭೂಮ್ಯಾಕಾರವಾಗಿದೆ..!!! ಭೂಮಿಗಿದೆಯೇ ವಾಸ್ತು..?? ದಿನದಿನವೂ ಕ್ಷೀಣಿಸುತ್ತಿದೆ ಶಾಂತಿಯ ಮನಸ್ಸು ಜನಮನದಿ ಬರಿ ಒಳಸಂಚು ವೈಮನಸ್ಸು…

ಅನುದಿನ ಕವನ-೬೦೩, ಕವಿ: ಹೊಳಗುಂದಿ ಎ.ಎಂ.ಪಿ ವೀರೇಶಸ್ವಾಮಿ, ಬಳ್ಳಾರಿ, ಕವನದ ಶೀರ್ಷಿಕೆ: ಬಿಕ್ಷುಕರು ನಾವು

ಬಿಕ್ಷುಕರು ನಾವು. ಪರಿಸರದ ಸಿರಿಯ ಅಂಗಳದಿ ದುರಾಸೆಯ ಗಂಗಾಳ ಹಿಡಿದ ಬಿಕ್ಷುಕರು ನಾವು ಕಾಮಧೇನುವದುವೆಂದು ಬಗೆದು ಹಾಲು ಮುಗಿದರು ರಕ್ತ ಹಿಂಡುವ ಖೂಳ ರಕ್ಕಸರು ನಾವು ಕಲ್ಪವೃಕ್ಷದ ಹೂ ಹಣ್ಣು ಕಾಯಿ ಎಲೆ ಕಿತ್ತು ಬರಿದಾದರು ಬಿಡದೆ ಬೇರ ಕೀಳುವ ಮಹಾ…

ಅನುದಿನ ಕವನ-೬೦೨, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಪ್ರೇಮದ ಪರಿ ಪರಿ…

“ಇದು ಪ್ರೇಮದ ಪರಿ ಪರಿ ಸ್ಫುರಣಗಳ ಸುಂದರ ಕವಿತೆ. ಅನುರಾಗದ ಅನುಪಮ ಸ್ವರಗಳ ಮಧುರ ಭಾವಗೀತೆ. ಓದಿ ನೋಡಿ.. ಮನವರಳಿಸಿ ಮುದನೀಡಿ ಮಾರ್ದನಿಸುತ್ತದೆ. ಏಕೆಂದರೆ ಇಲ್ಲಿ ಸೆಳೆಯುವ ಭಾವಕಿರಣಗಳ ಸೌಂದರ್ಯವಿದೆ. ಕಚಗಳಿಯಿಡುತ ಕುಣಿಸುವ ಜೀವಸಂವೇದನೆಗಳ ಮಾಧುರ್ಯವಿದೆ” ಎಂದು‌ ಹೇಳುತ್ತಾರೆ ಕವಿ ಎ.ಎನ್.ರಮೇಶ್.…

ಅನುದಿನ ಕವನ-೬೦೧, ಹಿರಿಯ ಕವಿ: ಲಿಂಗಾರೆಡ್ಡಿ ಶೇರಿ, ಸೇಡಂ, ಕವನದ ಶೀರ್ಷಿಕೆ: ಇವನು ಅವನಲ್ಲ…..

ಇವನು ಅವನಲ್ಲ ಅಂದು ಕಳೆದು ಹೋದವನು ಇಂದು ಸಿಕ್ಕಿದ್ದಾನೆ. ಆದರೆ ಇವನು ಅವನಲ್ಲ! ಅಂದು ಕಳೆದು ಹೋದವನ ಮುಖದಲ್ಲಿತ್ತು ಇಂದು ಕಳೆ. ಬೆಳ್ಳಗೆ ನಗುತ್ತಿದ್ದ, ಇಂಪಾಗಿ ಹಾಡುತ್ತಿದ್ದ, ಜಿಂಕೆಯಂತೆ ಓಡಾಡುತ್ತಿದ್ದ, ಹಕ್ಕಿಯಂತೆ ಹಾರಾಡುತ್ತಿದ್ದ. ಇವನು ಅವನಲ್ಲ. ಅವನಲ್ಲಿ ಕನಸುಗಳಿದ್ದವು ಹುಡುಕುತ್ತಿದ್ದ ಭರವಸೆಯಿಂದ.…

ಬೆಂಗಳೂರಿನಲ್ಲಿ ಮಾಧ್ಯಮ ಮಾನ್ಯತಾ ಸಮಿತಿ ನೂತನ ಸದಸ್ಯರಿಗೆ ಕೆಯುಡಬ್ಲ್ಯೂಜೆ ಅಭಿನಂದನೆ

ಬೆಂಗಳೂರು, ಆ.24: ನೈಜ ಪತ್ರಕರ್ತರನ್ನು ಒಳಗೊಂಡ ಮಾಧ್ಯಮ ಮಾನ್ಯತಾ ಸಮಿತಿ ರಚನೆಯಾಗಿರುವುದು ಆ ಸಮಿತಿ ಘನತೆ ಹೆಚ್ಚಿಸಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಇಂದು ಮಾಧ್ಯಮ ಮಾನ್ಯತಾ ಸಮಿತಿ (ಮೀಡಿಯಾ ಅಕ್ರಿಡಿಟೇಶನ್…

ಅನುದಿನ ಕವನ-೬೦೦, ಕವಯತ್ರಿ: ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ್, ಬೆಳಗಾವಿ ಕವನದ ಶೀರ್ಷಿಕೆ: ಅಲ್ಲಮನಾಗುವುದಾದರೆ….

ಅಲ್ಲಮನಾಗುವುದಾದರೆ……… ಅಂತರಂಗದ ಕತ್ತಲೆಗೆ ಬೆಳಕ ಶಬ್ದ ಬಿತ್ತುವ ದೇವಗುರು. ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ. ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹದ ತಾಪ. ಪ್ರಕಾಶದ ಮಹಾ ಶರೀರ ಕಣ್ಣ ಬೆಳಕಿನ ಜ್ಯೋತಿರ್ಲಿಂಗ . ಅನಂತದಲ್ಲಿನ ಆತ್ಮ, ಬಯಲ ಬೆಸುಗೆಗೆ…

ಅನುದಿನ ಕವನ-೫೯೯, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶಿಲಾಬಾಲಿಕೆ

ಶಿಲಾಬಾಲಿಕೆ ಏನೆಂದು ವರ್ಣಿಸಲಿ ! ನಿನ್ನ……. ಗೆಳತಿ ಯಾವ ಸೌಂದರ್ಯದ ಹೋಲಿಕೆ ಮಾಡಲಿ ! ನಿನ್ನ ಸುಂದರ ಮೊಗವನ್ನು ಬೆಳದಿಂಗಳ ಚಂದ್ರನಿಗೆ ಹೋಲಿಸಲೇ……? ಚಂದ್ರ ರಾತ್ರಿ ಕಳೆದು ಬೆಳಗು ಸರಿದು ಹೋಗುವುದು // ನಿನ್ನ ಸುಂದರ ನಗುವನ್ನು ಅರಳಿದ ಹೂಗಳಿಗೆ ಹೋಲಿಸಲೇ…..?…