ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಎಂದಿಗೂ ಅರ್ಥವಾಗದ ಒಗಟಾಗಿ ಕಾಡುವ ನಮ್ಮದೇ ಮನಸ್ಥಿತಿಗಳ ಕತೆ. ನಾವೆಲ್ಲರೂ ಶಾಲಾದಿನಗಳಲ್ಲಿ ಅನುಭವಿಸಿರುವ ಒಂದು ನಿತ್ಯದ ಘಟನೆಯ ಸುತ್ತ ಸುತ್ತುವ ಈ ಕವಿತೆಯಲ್ಲಿ ಅರಿಯಲಾಗದ ಎಷ್ಟೆಲ್ಲಾ ಬದುಕಿನ ಸತ್ಯಗಳಿವೆ. ಅರ್ಥೈಸಲಾಗದ ಮನಸಿನ ತತ್ವಗಳಿವೆ. ಏನಂತೀರಾ..?…
Category: ರಾಜ್ಯ
ಮಾನವೀಯತೆಯ ಮಹಾಕವಿ ಡಾ.ಸಿದ್ಧಲಿಂಗಯ್ಯ -ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್
ಶಿವಮೊಗ್ಗ, ಸೆ. 26: ವಿರೂಪಗೊಂಡಿರುವ ಸಾಮಾಜಿಕ ಸಂರಚನೆಯನ್ನು ಸುಸ್ವರೂಪಕ್ಕೆ ಪರಿವರ್ತನೆ ಮಾಡುವ ಶಕ್ತಿ ಸಿದ್ಧಲಿಂಗಯ್ಯ ಅವರ ಬರಹ ಮತ್ತು ಬದುಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ಸಂಘ ಶನಿವಾರ ಏರ್ಪಡಿಸಿದ್ದ ತಿಂಗಳ ಅತಿಥಿ…
ಅನುದಿನ ಕವನ-೨೬೭, ಕವಿ: ಡಾ. ಸದಾಶಿವ ದೊಡಮನಿ, ಇಲಕಲ್ಲು, ಕವನದ ಶೀರ್ಷಿಕೆ: ಮುನಿಸಿನ ದಿರಿಸು ಎಂದೂ ತೊಡದಿರು ಚೆಲುವೆ….
ಮುನಿಸಿನ ದಿರಿಸು ಎಂದೂ ತೊಡದಿರು ಚೆಲುವೆ ಮುನಸಿನ ದಿರಿಸು ಎಂದೂ ತೊಡದಿರು ಚೆಲುವೆ ಜೀವನ ತಾಳ, ಲಯಗಳು ತಪ್ಪುವವು ಒಲವೆ ಹಗೆತನ ಹೊಗೆಯನು ಎಂದೂ ಹರಡದಿರು ಚೆಲುವೆ ಬಾಳಿನ ಉಸಿರನು, ಹಸಿರನು ನುಂಗುವುದು ಒಲವೆ ನಗು ನಗುತ್ತಲೇ ಇರು, ನಲಿವನು ಹೆರು…
ಲೈಂಗಿಕ, ಲಿಂಗತ್ವ ಅಲ್ಪಸಂಖ್ಯಾತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಡಾ. ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹ
ಬೆಂಗಳೂರು, ಸೆ.25: ಶೋಷಣೆಗೆ ಒಳಗಾದ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ಕೇಂದ್ರ, ರಾಜ್ಯ ಸರಕಾರಗಳು ಈಡೇರಿಸಬೇಕು ಎಂದು ಮೈಸೂರಿನ ಉರಿ ಲಿಂಗಿ ಪೆದ್ದಿ ಮಹಾ ಸಂಸ್ಥಾನ ಮಠದ ಡಾ. ಜ್ಞಾನ ಪ್ರಕಾಶ ಸ್ವಾಮೀಜಿ ಅವರು ಒತ್ತಾಯಿಸಿದರು. ಅನೇಕ,…
ಅನುದಿನ ಕವನ-೨೬೬, ಕವಿ: ಜಿ ಟಿ ಆರ್ ದುರ್ಗ, ಜಿ ಹೆಚ್ ಎಲ್, ಬಂಗಾರಪೇಟೆ, ಕವನದ ಶೀರ್ಷಿಕೆ: ಕಣ್ಣಾಮುಚ್ಚಾಲೆ
ಕಣ್ಣಾಮುಚ್ಚಾಲೆ ನ್ಯಾಯುತವಾಗಿ ಬದುಕುವವನಿಗೆ ಸತ್ಯದ ಬಾಗಿಲು ತೆರೆದಿರುತ್ತದೆ ಅನ್ಯಾಯ ಮಾಡುವವನಿಗೆ ಘೋರ ಶಿಕ್ಷೆಯು ಆಹ್ವಾನಿಸುತ್ತದೆ ಕೆಟ್ಟತನವು ಮುಳ್ಳು ತುಳಿದಂತೆ ಸುಲಭವಾಗಿ ರಕ್ತ ಸುರಿಸುತ್ತದೆ ಒಳ್ಳೆತನವು ಕಠಿಣ ಬಂಡೆಗಲ್ಲಿನಂತೆ ಶಿಲೆಯ ಕೆತ್ತಿದ ಶಿಲ್ಪಿಗೆ ಹರುಷವಾದಂತೆ ಮೋಸ ವಂಚಕನಿಗೆ ತನ್ನಾತ್ಮ ಹೇಳುವುದು ನಾನು ಇಷ್ಟೊಂದು…
ಅನುದಿನ ಕವನ-೨೬೫, ಕವಯತ್ರಿ: ಹೆಚ್. ಆರ್. ಸುಜಾತಾ, ಬೆಂಗಳೂರು, ಕವನದ ಶೀರ್ಷಿಕೆ: ಚಂದಿರನೊಂದಿಗೆ ಕೊಳದ ಮಾತು…..
ಚಂದಿರನೊಂದಿಗೆ ಕೊಳದ ಮಾತು ನಗೆಯ ಸೊಗಕೆ ಸೋತ ಚಂದಿರನೇ ಗರ್ಭದಾಳಕಿಳಿದಿಳಿದು, ಬೆಳ್ಳಿ ಬೆಳಕಿನ ಬಳ್ಳಿ ಬಳುಕಿ ಬೇರಿಳಿದು ಹೊಕ್ಕುಳಬಳ್ಳಿಯ ಕೊಳದೊಳಗಿಳಿಬಿಟ್ಟ. ಛಂದದ ಹೂವಾಯಿತು ಕೊಳವೇ ತನ್ನ ಬಿಂಬವ ಮೋಹಿಸುವಂತೆ, ಚಂದಿರನ ಮುಗುಳ್ನಗೆಯ ಚೆಲ್ಲಿದವು ಬಿರಿದ ಕೆಂದಾವರೆ ಹರಳುಗಳು ಸಣ್ಣ ಗಾಳಿಯಲೆಯ ಅಲುಗಿಗೆ…
ಅನುದಿನ ಕವನ-೨೬೪, ಹಿರಿಯ ಕವಿ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಚಪ್ಪಲಿ ಮತ್ತು ನಾನು…..
ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ. ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ಉನ್ನತ ಆಡಳಿತಾಧಿಕಾರಿಯಾಗಿ ನಿವೃತ್ತಿಯಾಗಿದ್ದಾರೆ. ಪ್ರಗತಿಪರ ಚಿಂತಕ, ಲೇಖಕ, ಉಪನ್ಯಾಸಕರಾಗಿ ಕಳೆದ ನಾಲ್ಕೂವರೆ ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ಗಮನಸೆಳೆದಿದ್ದಾರೆ. ವಿಶೇಷವಾಗಿ ಕಾವ್ಯಲೋಕಕ್ಕೆ ಡಾ. ಮೂಡ್ನಾಕೂಡು…
ಅನುದಿನ ಕವನ-೨೬೩, ಕವಿ: ಸುಬ್ಬು ಹೊಲೆಯಾರ್, ಬೆಂಗಳೂರು, ಕವನದ ಶೀರ್ಷಿಕೆ:ಮಳೆ ಬರಲಿ ಲೋಕದ ಎಲ್ಲರ ಮನೆಯ ಮೇಲೆ
ಕನ್ನಡದ ಬಹುಮುಖ್ಯ ಕವಿ ಸುಬ್ಬು ಹೊಲೆಯಾರ್ ಅವರು ಇಂದು ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರ ಲೇಖನಿ ಸದಾ ಸಮ ಸಮಾಜಕ್ಕಾಗಿ ಮಿಡಿಯುತ್ತಿರುತ್ತದೆ. ಅಸಮಾನತೆ, ಅಸ್ಪೃಶ್ಯತೆ,ಲಿಂಗ ತಾರತಮ್ಯ, ಜಾತಿ ಶೋಷಣೆ ವಿರುದ್ಧ ನಿರಂತರ ಸಾತ್ವಿಕ ಪ್ರತಿರೋಧ ಒಡ್ಡುತ್ತಿರುವ ಸುಬ್ಬಣ್ಣ ಅವರ ‘ಮಳೆ…
ಹಂಪಿಯಲ್ಲಿ ಅ. 17, 18 ಮತ್ತು 19 ರಂದು ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಭೆ -ಸಚಿವ ಆನಂದ್ ಸಿಂಗ್
ಬೆಂಗಳೂರು, ಸೆ.21: ವಿಕಾಸಸೌಧದಲ್ಲಿ ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಸಚಿವ ಆನಂದ್ ಸಿಂಗ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಹಂಪಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ…
ಅನುದಿನ ಕವನ-೨೬೨, ಕವಿ: ಬಾವಾಖಾನ ಎಂ.ಡಿ. ಸುತಗಟ್ಟಿ. ಕಾವ್ಯ ಪ್ರಾಕಾರ: ಗಜಲ್
ಗಜ಼ಲ್ ಸ್ವರ್ಗಸ್ಥರಾದವರು ಸ್ವರ್ಗದ ಬಗ್ಗೆ ಎಲ್ಲಿಯೂ ಹೇಳಲಿಲ್ಲ ಯಾಕಂದರೆ ಸ್ವರ್ಗ ಇರೋದು ಅವ್ವನ ಪಾದದ ಕೆಳಗಂತ ಗೊತ್ತಾತು|| ಜನನೀ ಜನ್ಮಭೂಮಿ ಜನ್ನತ ಆಗಿರುವಾಗ ಮನಸ್ಸಿನೊಳಗೆ ಮಾಡಿಕೊಂಡ ಮನ್ನತಗಳೆಲ್ಲ ಈಡೇರತಾವಂತ ಗೊತ್ತಾತು|| ಮೆತ್ತನೆ ಹಾಸಿಗೆ ಮೇಲೆ ಎಷ್ಟ್ಹೊತ್ತು ಹೊರಳಾಡಿದರೂ ಇತ್ತಿತ್ತಲಾಗ ಕಣ್ರೆಪ್ಪೆಗಳು…
