ಕೆನ್ನೆಯ ಮೊಡವೆಗಳು ಕವಿತೆಗೆ ರೂಪಕಗಳು! ಬರೆದ ಪತ್ರಗಳನ್ನೆಲ್ಲ ಹರಿಯಬಹುದು; ಕೊಟ್ಟ ಮಾತುಗಳನ್ನೆಲ್ಲ ಮರೆಯಬಹುದು; ಮನದಲ್ಲಿ ನಿಂತಿರುವ ಭಾವನೆಗಳ ಹರಿಯಲಾದೀತೆ? ನಿನ್ನೆಡೆಗಿನ ನನ್ನ ಒಲವನ್ನಿಡಿದು ಮುರಿಯಲಾದೀತೆ? ಈ ನನ್ನೆದೆಯ ಹಾಡುಗಳ ಹೂಳಲಾದೀತೆ? ನಿನ್ನೆಸರ ಜಪಿಸುವ ಹೃದಯಕಂಪನ ತಡೆಯಲಾದೀತೆ? ನಿನ್ನ ಮದರಂಗಿ ಪಾದಗಳ ಹೆಜ್ಜೆ…
Category: ರಾಜ್ಯ
ಅನುದಿನ ಕವನ-೧೪೦೯, ಕವಿ: ಪ್ರಕಾಶ ಕೋನಾಪುರ, ಶಿವಮೊಗ್ಗ, ಕವನದ ಶೀರ್ಷಿಕೆ:ಪ್ರೀತಿ ಅಂದರೆ ಮತ್ತೇನಿಲ್ಲ
ಪ್ರೀತಿ ಅಂದರೆ ಮತ್ತೇನಿಲ್ಲ ಪ್ರೀತಿ ಅಂದರೆ ಮತ್ತೇನಿಲ್ಲ ಸ್ವಾತಂತ್ರ ಕಳೆದುಕೊಳ್ಳುವುದು ಬಯಲಲ್ಲಿ ಅವಳ ಜೊತೆ ಸೇರಿ ಆಲಯವಾಗುವುದು ಪ್ರೀತಿ ಆಂದರೆ ಮತ್ತೇನಿಲ್ಲ ನಾನು ಆವಿಯಾಗಿ ಆಕಾಶದೊಳಗೆ ಲೀನವಾಗುವುದು ಕಡಲೊಳಗೆ ಬೆರೆತ ಹನಿಯಾಗುವುದು ಪ್ರೀತಿ ಅಂದರೆ ಮತ್ತೇನಿಲ್ಲ ನಾನು ಕೆಳಗಿಳಿಯುವುದು ಅವಳ ಜೊತೆ…
ಅನುದಿನ ಕವನ-೧೪೦೮, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ
ಭೃಂಗದ ಭ್ರಮರಕ್ಕೇನು ಅರ್ಥ ಹೂವಿನ ಮಕರಂದವಿಲ್ಲದಿರಲು ಮಧುವಿನ ಮಧುರ ಗಾನಕ್ಕೇನು ಅರ್ಥ ಪುಷ್ಪಗಳಲಿ ಮಾಧುರ್ಯವಿರದಿರಲು ಹೂವಿನ ಅಂದಕ್ಕೇನು ಅರ್ಥ ಪತಂಗವ ಆಕರ್ಷಿಸದಿರಲು ಮನುಜನ ಜೀವನಕ್ಕೇನು ಅರ್ಥ ಪ್ರೀತಿಯೆಂಬ ರಸವಿಲ್ಲದಿರಲು ಉಲಿವ ಹಕ್ಕಿಗಳ ಚಿಲಿಪಿಲಿಗೇನು ಅರ್ಥ ಆಲಿಸುವ ಕಿವಿಗಳಿರದಿರಲು ಆಡುವ ಮಾತಿಗೇನುಂಟು ಅರ್ಥ…
ಅನುದಿನ ಕವನ-೧೪೦೭, ಕವಯಿತ್ರಿ: ರಜನಿ ಅಶೋಕ ಜೀರಗ್ಯಾಳ, ಗೋಕಾಕ
ಗುಡಿ ಕಟ್ಟಿ ಪೂಜೆಯಮಾಡಿ ಏನು ಸಾಧಿಸಿದೆ ಅಣ್ಣ ಹಸಿದ ಹೊಟ್ಟೆ ಅಳುತಲಿದೆ ಒಂದು ಚೂರು ಕೂಳು ಹಾಕಿ ಪುಣ್ಯ ಕಟ್ಟಿ ಕೊಳ್ಳಣ್ಣ ಅತಿವೃಷ್ಟಿ ಅನಾವೃಷ್ಟಿ ಕಾಡುತಿದೆ ಪರಿಹಾರ ಹುಡುಕಣ್ಣ ಕೆಲಸವಿಲ್ಲದೆ ಬೀದಿಗೆ ಬಿದ್ದವರಿಗೆ ಕೆಲಸ ಕೊಡಿಸಬೇಕಣ್ಣ ರಸ್ತೆಯೆಲ್ಲ ಹಳ್ಳಕೊಳ್ಳಗಳಾಗಿವೆ ದುರಸ್ತಿ ಮಾಡಿಸಣ್ಣ…
ಅನುದಿನ ಕವನ-೧೪೦೬, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಉಸಿರಿನ ಅಲೆಗಳು ಮೌನವಾಗುವುದರೊಳಗೆ ಕಡಲನು ಅರಿಯಬೇಕಿದೆ ಸಮಯದ ಮುಳ್ಳಿನ ಗತಿ ನಿಲ್ಲುವುದರೊಳಗೆ ಕಾಲವನು ತಿಳಿಯಬೇಕಿದೆ ಸುತ್ತೆಲ್ಲ ಹಸಿರಿದ್ದರೂ ಬಿಸಿಗಾಳಿಯ ಹೊದ್ದ ಮರುಭೂಮಿಯಾಗಿದೆ ಮನ ಅಲೆಯುವ ಕಾಲುಗಳು ಕುಸಿಯುವುದರೊಳಗೆ ನಿಜ ಬದುಕನು ನೋಡಬೇಕಿದೆ ಆಗಸದ ತುಂಬೆಲ್ಲ ಒಣಮಾತು ಅಹಮಿಕೆಯ ಬಂಜೆ ಮೋಡಗಳ…
ಅನುದಿನ ಕವನ-೧೪೦೫, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ:ಗಂಡಸರಾದ ನಮಗೆ…
ಗಂಡಸರಾದ ನಮಗೆ… ಅವಳ ನೋವ ಕುರಿತು ಹೇಳುವುದು ಎರಡು ಸಾಲಿನ ಪದ್ಯ ಗೀಚಿದಷ್ಟು ಸುಲಭವಲ್ಲ… ಪ್ರತಿ ತಿಂಗಳು ಋತುಸ್ರಾವದಿ ಅವಳು ಅನುಭವಿಸುವ ನರಕ ಸದೃಶ ನೋವು ಗಂಡಸರಾದ ನಮಗೆ ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ… ಆಗಾ ಅವಳಿಗೆ ವಿಶ್ರಾಂತಿ ಬೇಕು ಸಾಂತ್ವನಬೇಕು ಹಾರೈಕೆ…
ಕುಶಾಲನಗರದ ಜಾನಪದ ಗ್ರಾಮದಲ್ಲಿ ನ. 9 ರಂದು ಡಾ. ಹಿ.ಚಿ. ಬೋರಲಿಂಗಯ್ಯ ಅಭಿನಂದನಾ ಸಮಾರಂಭ -ಜರಗನಹಳ್ಳಿ ಕಾಂತರಾಜು
ಬೆಂಗಳೂರು: ಕರ್ನಾಟಕದ ಬುಡಕಟ್ಟು ಜಾನಪದ ಅಧ್ಯಯನ, ಸಂಶೋಧನೆ, ಉಳಿವಿಗಾಗಿ ತಮ್ಮ ಬದುಕನ್ನೇ ಮುಡಿಪಿಟ್ಟ ನಾಡಿನ ಖ್ಯಾತ ವಿದ್ವಾಂಸ ಪ್ರೊ. ಹಿ.ಚಿ ಬೋರಲಿಂಗಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ “ಹಿ.ಚಿ ಸಂಭ್ರಮ, ಬುಡಕಟ್ಟು ಜಾನಪದ ಸಂಪತ್ತಿಗೆ 70 ವರ್ಷ” ಎಂಬ ಧ್ಯೇಯದಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು…
ಕವಿ ವಾಸ್ತವ ಮರೆತರೆ ಕವಿತ್ವಕ್ಕೆ ದ್ರೋಹ -ಸಾಹಿತಿ ಸಾಹೇಬಗೌಡ ಬಿರಾದಾರ
ವಿಜಯಪುರ, ನ.5: ಕಲ್ಪನೆಯ ಲೋಕದಲ್ಲಿ ವಿಹರಿಸಿ,ರವಿಗೆ ಕಾಣದ್ದು ಕವಿ ಕಂಡಿದೆ ಎಂದು ವಾಸ್ತವ ಮರೆತರೆ ಕವಿತ್ವಕ್ಕೆ ದ್ರೋಹ ಬಗೆದಂತೆ ಹೀಗಾಗಿ ಕವಿ ವಾಸ್ತವದ ಪ್ರತಿಬಿಂಬ ಎಂದು ಬೆನಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕ, ಸಾಹಿತಿ ಸಾಹೇಬಗೌಡ ಬಿರಾದಾರ ಅವರು ಹೇಳಿದರು. ರವಿವಾರ ಜಿಲ್ಲೆಯ…
ಅನುದಿನ ಕವನ-೧೪೦೪, ಕವಿ: ಟಿ.ಪಿ. ಉಮೇಶ, ಹೊಳಲ್ಕೆರೆ
ನನ್ನ ಸಾವಿನೊಂದಿಗೆ ನಿನ್ನ ನೆನಪುಗಳ ಸಾವು! ನಮ್ಮ ಪ್ರೀತಿಗಿಲ್ಲವೇ ಸಾವು?! ನಿನ್ನ ನೆನಪುಗಳ ಚೈತನ್ಯಕ್ಕಿಲ್ಲವೇ ಸಾವು! ನಿನ್ನ ಪ್ರೀತಿಸುವುದಷ್ಟೆ ನನಗೆ ಗೊತ್ತು! ನಿನ್ನ ಒಪ್ಪಿಗೆಯದು ಕಣ್ಗಳ ಕಂಬನಿಯಲ್ಲಿ ಇತ್ತು! ಮತ್ತೇಕೆ ಮಾತಿನ ವ್ಯರ್ಥಾಲಾಪ; ಹಾಡುವೆನು ಜೀವವಿರುವವರೆಗು ಸುಮ್ಮನೇ ಕೇಳು; ನಮ್ಮ ಅಮರ…
ಅನುದಿನ ಕವನ-೧೪೦೩, ಕವಯಿತ್ರಿ: ಉಷಾ ಗೊಬ್ಬೂರ, ಕಲಬುರಗಿ, ಕವನದ ಶೀರ್ಷಿಕೆ: ತಾಯ್ನುಡಿ
ತಾಯ್ನುಡಿ ಹಚ್ಚ ಬನ್ನಿ ಕನ್ನಡದ ಹಣತೆಯ ಎಲ್ಲ ಮನೆ ಮನಗಳಲ್ಲಿ ಉಸಿರನೀವ, ಬದುಕನೀವ ಸಂಜೀವಿನಿ ಈ ನುಡಿಯು ಬರಿ ಭಾಷೆಯಲ್ಲ, ಕನ್ನಡ ಮಗುವಿನ ಸ್ವಚ್ಛಂದ ನಗು, ಅರಳುವ ಸುಮದ ಚೆಲುವು, ಮುಂಜಾವಿನ ಮಂಜ ಹನಿ, ಪರಿಶುದ್ಧ ತಿಳಿ ಎಳನೀರಂತೆ ಉಸಿರನಿತ್ತ ತಾಯ್ನುಡಿಯ…
