ಯುವ ಮುಖಂಡ ಜೆ ಎಸ್ ಶ್ರೀನಿವಾಸುಲುಗೆ ಧಮ್ಮಸೇವಾರತ್ನ ಪ್ರಶಸ್ತಿ ಪ್ರದಾನ

ಬಳ್ಳಾರಿ,‌ನ.2: ನಗರದ ಯುವ ಮುಖಂಡ, ಭೀಮವಾದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಜೆ ಎಸ್ ಶ್ರೀನಿವಾಸುಲು ಅವರಿಗೆ ಧಮ್ಮಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರಿನ ತನುಮನ ಸಂಸ್ಥೆ ಆಯೋಜಿಸಿದ್ದ 68ನೇ ಧಮ್ಮದೀಕ್ಷಾ ವರ್ಷಾಚರಣೆ ಅಂಗವಾಗಿ ಧಮ್ಮ ಸಂಗೀತೋತ್ಸವ ಮತ್ತು…

ಅನುದಿನ ಕವನ-೧೪೦೨, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಮತ್ತೆ ಹುಟ್ಟುವುದಾದರೆ….

ಮತ್ತೆ ಹುಟ್ಟುವುದಾದರೆ…. ಮತ್ತೆ  ಹುಟ್ಟುವುದಾದರೆ ಈ ನೆಲವೇ ಇರಲಿ ಹುಟ್ಟಿದ ಮೇಲೆನ್ನ ನುಡಿಯು ಕನ್ನಡವೇ ಆಗಿರಲಿ. ತುಂಗೆಯಲಿ ನಾನಿರಲು ಗಂಗೆಯೂ ಬರಲಿ ಕೃಷ್ಣೆ-ಗೋದಾವರಿ ಗೆಳತಿಯರು ಸಿಗಲಿ. ಹಿಮಾಲಯವು ಮುಡಿಯಲ್ಲಿ ಸಹ್ಯಾದ್ರಿಯು ಅಡಿಯಲ್ಲಿ ಅಲ್ಲಲ್ಲಿಯೇ ಇರಲಿ. ಕಲ್ಕತ್ತೆಯ ಕಾಳಿ ಶೃಂಗೇರಿ ಶಾರದೆಗೆ ಹೂವು-ಕುಂಕುಮ…

ಚಿತ್ರದುರ್ಗದ ನೆಲ್ಲಿಕಟ್ಟೆಯಲ್ಲಿ ಕನ್ನಡರಾಜ್ಯೋತ್ಸವ

ಚಿತ್ರದುರ್ಗ, ನ.2: ಕನ್ನಡ ನಾಡುನುಡಿಗೆ ಅಪೂರ್ವವಾದ ಇತಿಹಾಸ ಮತ್ತು ಪರಂಪರೆಯಿದೆ. ಕನ್ನಡನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನೆಲ್ಲ ಸ್ಮರಿಸುತ್ತಾ, ಕನ್ನಡನಾಡುನುಡಿಯ ಪ್ರಗತಿಗಾಗಿ ನಮ್ಮದೇ ಆದ ಕಾಣ್ಕೆ ಕೊಡುವಂತಹ ಸೇವೆ ಮಾಡೋಣ ಎಂದು ಖ್ಯಾತ ಸಾಹಿತಿ ಯುಗಧರ್ಮರಾಮಣ್ಣ ಅವರು ಹೇಳಿದರು.       …

ಬೆಂಗಳೂರು: 69 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಿಎಂ‌ ಸಿದ್ಧರಾಮಯ್ಯ ಚಾಲನೆ

ಬೆಂಗಳೂರು, ನ.1: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 69 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶುಕ್ರ್ರವಾರ ಸಂಜೆ ಉದ್ಘಾಟಿಸಿದರು.        ವಿಧಾನಸೌಧದ ಭವ್ಯ ಮೆಟ್ಡಿಲುಗಳ ಮೇಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,…

ಕನ್ನಡ ಕಲಿಯುವ ವಾತಾವರಣ ನಿರ್ಮಿಸಿದಾಗ ಭಾಷೆ ಬೆಳೆಯಲು ಸಾಧ್ಯ. -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು,  ನ.1:  ಕನ್ನಡೇತರರು ಕನ್ನಡವನ್ನು ಕಲಿಯುವ ವಾತಾವರಣವನ್ನು ನಾವು ನಿರ್ಮಿಸಿದಾಗ ಮಾತ್ರ , ನಮ್ಮ ಭಾಷೆ ಎತ್ತರಕ್ಕೆ ಬೆಳೆಯಲು ಸಾಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.               ಅವರು ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಸಮಿತಿ ನೃಪತುಂಗ…

ಅನುದಿನ‌ ಕವನ-೧೪೦೧, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಕನ್ನಡವೆಂದರೆ….

ಕನ್ನಡವೆಂದರೆ…. ಕನ್ನಡವೆಂದರೆ ಅದು ತೋಟದ ಹಾದಿ ತುಳಿದಷ್ಟು ಅಂಗಾಂಗ ಪುಳಕ ಅನುಭವಿಸಿದಷ್ಟು ನವರಸಗಳ ಜಳಕ ಕನ್ನಡವೆಂದರೆ ಅದು ನಿಸರ್ಗಧಾಮ ಆಸ್ವಾದಿಸಿದಷ್ಟು. ಕೋಗಿಲೆಗಳ ಇಂಪಿದೆ ನಯನಿಸಿದಷ್ಟು ನವಿಲುಗಳ ನಾಟ್ಯವಿದೆ. ಕನ್ನಡವೆಂದರೆ ಅಮ್ಮನ ಅಡಿಗೆಮನೆ ಉಂಡಷ್ಟೂ ರಸ ಕವಳದ ರುಚಿಯಿದೆ ಕುಡಿದಷ್ಟೂ ಅಮೃತದ ಸವಿ…

ಅಲೆಮಾರಿ ಕಲಾವಿದ ಅಶ್ವರಾಮಣ್ಣಗೆ ರಾಜ್ಯೋತ್ಸವ ಪ್ರಶಸ್ತಿ ಗರಿ:ಅಲೆಮಾರಿ ಕಲಾವಿದರು ಮತ್ತು ಸೋದರತ್ತೆ ನಾಡೋಜ ಬುರ್ರಕಥಾ ದರೋಜಿ ಈರಮ್ಮ ಅವರಿಗೆ ಅರ್ಪಣೆ

ಬಳ್ಳಾರಿ, ಅ.31: ಅಲೆಮಾರಿ ಹಗಲುವೇಷ ಹಿರಿಯ ಕಲಾವಿದ ಹಳೇ ದರೋಜಿ ಅಶ್ವ ರಾಮಣ್ಣ ಅವರಿಗೆ 2024ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಆರೇಳು ವರ್ಷದಲ್ಲೇ ಬಣ್ಣ ಹಚ್ಚಲು ಆರಂಭಿಸಿದ ರಾಮಣ್ಣ ತಮ್ಮ ಅರವತ್ತೆಂಟನೇ ಹರೆಯದಲ್ಲೂ ಹಗಲುವೇಷ ಹಾಕುವಾಗ‌ ಮಗುವಾಗುತ್ತಾರೆ. ತಮ್ಮ ತಂದೆ ತಾತಾ…

ಅನುದಿನ ಕವನ-೧೪೦೦, ರಾಷ್ಟ್ರಕವಿ ಡಾ.‌ಜಿ ಎಸ್ ಶಿವರುದ್ರಪ್ಪ, ಕವನದ ಶೀರ್ಷಿಕೆ: ನನ್ನ ಹಣತೆ

🪔ದೀಪಾವಳಿ ಹಬ್ಬದ ಶುಭಾಶಯಗಳು🪔 ನನ್ನ ಹಣತೆ ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಹಣತೆ ಹಚ್ಚುತ್ತೇನೆ ನಾನೂ; ಈ…

ಕುವೆಂಪು ವಿವಿಯಲ್ಲಿ ರಾಷ್ಟ್ರೀಯ ಏಕತಾ ದಿವಸ ಆಚರಣೆ: ರಾಷ್ಟ್ರದ ಸಮಗ್ರತೆ, ಐಕ್ಯತೆಗಾಗಿ ಹೋರಾಡಿದ ಧೀಮಂತ ಸರ್ದಾರ್ ವಲ್ಲಭಭಾಯ್ ಪಟೇಲ್ -ಕುಲಪತಿ ಪ್ರೊ.ಶರತ್ ಅನಂತ್ ಮೂರ್ತಿ

ಶಂಕರ ಘಟ್ಟ (ಶಿವಮೊಗ್ಗ), ಅ.31: ಸ್ವತಂತ್ರ ಭಾರತದ ಪ್ರಪ್ರಥಮ ಉಪ ಪ್ರಧಾನಮಂತ್ರಿ, ಗೃಹ ಸಚಿವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ರಾಷ್ಟ್ರದ ಸಮಗ್ರತೆಗಾಗಿ, ಐಕ್ಯತೆಗಾಗಿ ಮತ್ತು ಭದ್ರತೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್…

ಅನುದಿನ‌ ಕವನ-೧೩೯೯, ಕವಯಿತ್ರಿ:ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ: ಆಗಿನ್ನೂ ಹಚ್ಚಿದ ಹಣತೆ

ಆಗಿನ್ನೂ ಹಚ್ಚಿದ ಹಣತೆ ಬಯಲ ಅಂಚಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಂತಿದ್ದ ಅವಳು ಗ್ರಾಮ ದೇವಿಯಂತೆ ಕಂಡಳು ಊರ ಜನರ ಕಣ್ಣಿಗೆ ಘಾಸಿಯಾಗಿ ಚುರುಗುಡುತ್ತಿತ್ತು ಅವಳ ಬೆನ್ನ ಮೇಲಿನ ಗಾಯ ಬೀಸುವ ಗಾಳಿಗೆ ತಗುಲಿ ಅವಳ ಅಸ್ಪೃಶ್ಯ ಬೆರಳುಗಳು ಬೆವರಿ ನಡುಗುತ್ತಿದ್ದವು…