ಹಂಪಿ ಕನ್ನಡ ವಿವಿ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ಬಸವಸೇವಾ ಪುರಸ್ಕಾರ ಪ್ರದಾನ

ಹಂಪಿ ಕನ್ನಡ‌ವಿವಿ, ಡಿ.26: ಸಂಡೂರು ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ ಹಾಗೂ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ಆಯೋಜಿಸಲಾದ ಬಸವ ಬೆಳಗು ಹಾಗೂ ಬಸವ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳ ಆಪ್ತಕಾರ್ಯದರ್ಶಿ ಎ.ಎಂ. ಕೃಪಾಶಂಕರ ಅವರಿಗೆ ೨೦೨೫ರ ಬಸವಸೇವಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.
ಪುಸ್ತಕ ವಿನ್ಯಾಸ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಕನ್ನಡ ಸಾಹಿತ್ಯದ ಪ್ರಕಟಣಾ ಗುಣಮಟ್ಟ ಹೆಚ್ಚಿಸುವಲ್ಲಿ ಅವರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಮಠದ ವಕ್ತಾರರು ತಿಳಿಸಿದರು. ರಾಣೀಬೆನ್ನೂರು ತಾಲ್ಲೂಕಿನ ಶಾಸಕರಾದ ಪ್ರಕಾಶ ಕೋಳಿವಾಡ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.


ಬಸವಣ್ಣನವರ ಮಾನವೀಯತೆ, ಸೇವಾ ಮನೋಭಾವ ಹಾಗೂ ಸಮಾನತೆಯ ತತ್ವಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎ.ಎಂ. ಕೃಪಾಶಂಕರ ಅವರು, ಈ ಗೌರವವನ್ನು ಪುಸ್ತಕ ವಿನ್ಯಾಸ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲರಿಗೂ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪ್ರಭುದೇವರ ವಿರಕ್ತಮಠ ಸೇವಾಸಮಿತಿ, ಸಂಡೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಹಾವೇರಿ ಇದರ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭ ಬಸವಣ್ಣನವರ ಮಾನವೀಯತೆ, ಸೇವಾ ತತ್ವ ಹಾಗೂ ಸಾಮಾಜಿಕ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವಲ್ಲಿ ಯಶಸ್ವಿಯಾಯಿತು.