
ಬಳ್ಳಾರಿ, ಸೆ.8: ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಮಂಗಳವಾರ ನಗರದ ವಿವಿಧೆಡೆ ಭೂಮಿ ಪೂಜೆ ನೆರವೇರಿಸುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಗರದ ವಾರ್ಡ್ ಸಂಖ್ಯೆ 21ರ ವ್ಯಾಪ್ತಿಯ ಸುಷ್ಮಾ ಸ್ವರಾಜ್ ಬಡಾವಣೆಯ ಹೆಚ್.ಲಕ್ಷ್ಮೀಕಾಂತ್ ಅವರ ನಿವಾಸದಿಂದ ಬಿ.ಶ್ರೀನಿವಾಸ ಅವರ ನಿವಾಸದವರೆಗೆ ರಸ್ತೆ ಹಾಗೂ 4ನೇ ಅಡ್ಡ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ (ಅಂದಾಜು 90 ಲಕ್ಷ ರೂ.ಗಳು) ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ವಾರ್ಡಿನ ಮುಖಂಡರಾದ ಚಾನಾಳ್ ಶೇಖರ್, ವಾಸು ರೆಡ್ಡಿ, ಬಂಡ್ರಾಳು ಮೃತ್ಯುಂಜಯ ಸ್ವಾಮಿ ಮತ್ತಿತರರು ಹಾಜರಿದ್ದರು.
ಅದೇ ರೀತಿ ನಗರದ ವಾರ್ಡ್ ಸಂಖ್ಯೆ 24ರ ವ್ಯಾಪ್ತಿಯ ಕಪ್ಪಗಲ್ ರಸ್ತೆಯ 7ನೇ ಅಡ್ಡ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ (ಅಂದಾಜು 1 ಕೋಟಿ ರೂ.ಗಳು) ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಾರ್ಡಿನ ಮುಖಂಡರಾದ ಹನುಮಂತ ರೆಡ್ಡಿ (ಪೋಲಕ್), ಮಂಜು ಬೆಳ್ಳಿಗಾರ್ ಮತ್ತು ಹಿರಿಯರಾದ ಲೋಹಿಯಾ ಪ್ರಕಾಶನದ
ಸಿ.ಚನ್ನಬಸವಣ್ಣ, ನೂತನಗೌಡ, ರಾಜಗೋಪಾಲ ರೆಡ್ಡಿ, ರವೀಂದ್ರನಾಥ, ಜೆ.ಎಂ.ಶಶಿಧರ್, ಗುರುಲಿಂಗಪ್ಪ, ಬೈಲಪ್ಪ, ನಂದಾ ನಟರಾಜ್ ಮತ್ತಿತರರು ಹಾಜರಿದ್ದರು.
ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 17 ಹಾಗೂ 18ನ್ನು ಸಂಪರ್ಕಿಸುವ ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ (ಅಂದಾಜು 1 ಕೋಟಿ ರೂ.ಗಳ ವೆಚ್ಚ) ಹನುಮಾನ ನಗರದ ರಮ್ಯಾ ಬಡಾವಣೆಯ ಬಳಿ ಇಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿಯವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್, ಪಾಲಿಕೆಯ ಸದಸ್ಯ ಮುಲ್ಲಂಗಿ ನಂದೀಶ್, ಹೊನ್ನಪ್ಪ, ಸುರೇಶ್, ಅಸುಂಡಿ ಹೊನ್ನೂರಪ್ಪ, ಕವಿತಾ, ವೆಂಕಟ ನಾಯ್ಡು, ಹೊನ್ನೇಶ್, ಚಂದ್ರ, ಸುಬ್ಬರಾಯುಡು ಮತ್ತಿತರರು ಇದ್ದರು.
ಅದೇ ರೀತಿ ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 9ರ ವ್ಯಾಪ್ತಿಯ ವೆಂಕಟರಮಣ ನಗರದಲ್ಲಿ ಇಂದು ವಿವಿಧ ರಸ್ತೆಗಳನ್ನು ಸಂಪರ್ಕಿಸುವ ರಸ್ತೆ ಕಾಮಗಾರಿಗೆ (ಅಂದಾಜು ವೆಚ್ಚ 1 ಕೋಟಿ ರೂ.ಗಳು) ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯ ಜಬ್ಬಾರಸಾಬ, ಮುಖಂಡರಾದ ಹೊನ್ನಪ್ಪ, ಅಸುಂಡಿ ಹೊನ್ನೂರಪ್ಪ, ಸೀತಾರಾಮ್, ಶಿವರಾಜ್, ರಾಮುಡು, ಮೈನುದ್ದೀನ್ ಮತ್ತಿತರರು ಇದ್ದರು.

ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 34ರ ವಿದ್ಯಾ ನಗರದ 6ನೇ ಮುಖ್ಯ ರಸ್ತೆಯ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ (ಅಂದಾಜು 1 ಕೋಟಿ ರೂ.ಗಳು) ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯರು, ಮಾಜಿ ಮೇಯರ್ ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಎಂ.ಸುಬ್ಬರಾಯುಡು, ವಿಷ್ಣು ಬೋಯಪಾಟಿ, ವಿಜಯಕುಮಾರ್, ಶಾಂತಿನಗರ ಮಲ್ಲಿ, ಕಾರ್ತಿಕ್, ಸತೀಶ್, ಅವಿನಾಶ್, ಪ್ರದೀಪ್, ರಾಕೇಶ್, ಕಂಠ, ನೀಲಕಂಠ ಮತ್ತಿತರರು ಉಪಸ್ಥಿತರಿದ್ದರು.
