ಅರ್ಥ ಪೂರ್ಣ ಬದುಕಿಗೆ ‘ಕನ್ನಡ ಭಾರತಿ’ ಪ್ರೇರಕ -ಡಾ. ನೆಲ್ಲಿಕಟ್ಟೆ ಸಿದ್ದೇಶ್, ಪ್ರಾಧ್ಯಾಪಕರು ಹಾಗೂ ಹಳೇ ವಿದ್ಯಾರ್ಥಿ, ಕನ್ನಡ ಭಾರತಿ, ಕುವೆಂಪು ವಿವಿ, ಶಂಕರ ಘಟ್ಟ

ಅರ್ಥ ಪೂರ್ಣ ಬದುಕಿಗೆ ‘ಕನ್ನಡ ಭಾರತಿ’ ಪ್ರೇರಕ

ಕನ್ನಡ ಭಾರತಿ ಎಂದರೆ ಅರ್ಥ ಪೂರ್ಣವಾದ ಬದುಕಿಗೆ ದಾರಿ ತೋರಿದ ಅಧ್ಯಯನ ಸಂಸ್ಥೆ. ಇಲ್ಲಿ ಅಧ್ಯಯನ ಮಾಡಿದವರೆಲ್ಲ ಸಮಾಜಮುಖಿಯಾಗಿ, ಜನಪರವಾಗಿ ಬಾಳುತ್ತಿದ್ದಾರೆ. 1995ರಲ್ಲಿ ಕನ್ನಡ ಎಂ.ಎ. ಅಧ್ಯಯನ ಮಾಡಿದವರೆಲ್ಲ ಇಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದಲ್ಲಿ ಸೇರಿ ತಮ್ಮ ಮೇಷ್ಟ್ರುಗಳಿಗೆಲ್ಲ ಗುರು ಗೌರವ(ವಂದನೆ) ಸಲ್ಲಿಸಿದರು.
ಸ್ನೇಹವೆಂದರೆ ಮನುಷ್ಯನ ಜೀವನದ ಅತ್ಯಂತ ಸುಂದರ ಮತ್ತು ಅಮೂಲ್ಯವಾದ ಬಂಧ. ಪವಿತ್ರವಾದ ಏಕೈಕ ಸಂಬಂಧ. ಪರಸ್ಪರ ನಂಬಿಕೆಯ ಮೇಲೆ ನಿಂತಿರುವುದೇ ನಿಜವಾದ ಗೆಳೆತನ. ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವ ಗೆಳೆತನದಲ್ಲಿ ಸ್ವಾತಂತ್ರ್ಯ ಮತ್ತು ಸಹಜತೆ ಇರುತ್ತದೆ. ಸ್ನೇಹಿತರ ಬಳಿ ಯಾವುದೇ ಮುಖವಾಡವಿಲ್ಲದೆ ಇರುವುದಕ್ಕೆ ಸಾಕ್ಷಿಯಾಗಿ ಕನ್ನಡ ಭಾರತಿ ನಿರ್ದೇಶಕರಾದ ಪ್ರೊ ನೆಲ್ಲಿಕಟ್ಟೆ ಎಸ್ ಸಿದ್ದೇಶ್, ಚಳ್ಳಕೆರೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಶಿಕ್ಷಣಾಧಿಕಾರಿ ರಂಗನಾಯ್ಕ, ಪ್ರಾಧ್ಯಾಪಕರಾದ ಡಾ ಅನಿತಾ, ವೀರೇಂದ್ರ, ಸವಿತಾ, ತೇಜವತಿ, ಗಿರಿಜಾ, ಶಿವಣ್ಣ, ಮಂಜು, ರಮೇಶ್ , ಗಿರಿ, ಅಧ್ಯಾಪಕರಾದ ಸತೀಶ್, ಸುರೇಶ್, ರುಕ್ಮಿಣಿ, ಷಣ್ಮುಖ, ಗೋವಿಂದ ಕೃಷಿಕರಾದ ಈಶ್ವರ್ , ಪ್ರಭು, ಮಲ್ಲಿಕಾರ್ಜುನ, ಸುಮಾ, ಎನ್ ಸುರೇಶ್, ಪತ್ರಾಂಕಿತ ಅಧಿಕಾರಿ ಸುಭಾಷ್, ಜಗದೀಶ್, ಬೋರಣ್ಣ, ವೆಂಕಟೇಶ್ ಮೊದಲಾದವರುಗಳು ಭಾಗವಹಿಸಿ ಔಚಿತ್ಯಪೂರ್ಣ ಬದುಕಿಗೆ ಸಾಕ್ಷಿಯಾಗಿರುವರು.    ನೊಂದ ಬೆಂದವರಿಗೆ ಬೆಳಕಾಗಿರುವ ಬಗೆಯನ್ನು ಹಂಚಿಕೊಂಡರು. ತಮ್ಮ ಗುರುಗಳಾದ ಪ್ರೊ ಶ್ರೀಕಂಠಕೂಡಿಗೆ, ಕುಮಾರ್ ಚಲ್ಯ, ಬಸವರಾಜ್ ನೆಲ್ಲಿಸರ, ಕೇಶವ ಶರ್ಮ, ಸಣ್ಣ ರಾಮ, ಚಂದ್ರಶೇಖರಯ್ಯ ಅವರುಗಳನ್ನು ಅಭಿನಂದಿಸಿದರು. ಸುಶ್ರಾವ್ಯವಾಗಿ ಹಾಡಿದರು. ಮನದಾಳದ ಸಂಕಟ ಸಂತೋಷಗಳನ್ನು ಹಂಚಿಕೊಳ್ಳುವ ಮೂಲಕ ಆಯುಷ್ಯ ಮತ್ತು ಆರೋಗ್ಯವನ್ನು ಸಂವರ್ಧಿಸಿಕೊಂಡರು. ಭಾವನೆಗಳು, ಕಲ್ಪನೆಗಳು ಮತ್ತು ಭಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸ್ನೇಹ ಅವಕಾಶ ನೀಡುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಮತ್ತು
​ಮಾರ್ಗದರ್ಶಿ. ನಾವೇನಾದರೂ ತಪ್ಪು ಹಾದಿ ಹಿಡಿದಾಗ ತಿದ್ದಿ, ಸರಿಯಾದ ದಾರಿ ತೋರಿಸುವವನೇ ನಿಜವಾದ ಗೆಳೆಯರು ಎಂದು ಸಾರಿದೆ. ಎಲ್ಲಾ ಗುರುಗಳ ಹಾರೈಕೆಗೆ ಪಾತ್ರವಾದ ಶಿಷ್ಯರ ಸಂತಸ ಮುಗಿಲು ಮುಟ್ಟಿತ್ತು.

-ಡಾ. ನೆಲ್ಲಿಕಟ್ಟೆ ಸಿದ್ದೇಶ್, ಪ್ರಾಧ್ಯಾಪಕರು ಹಾಗೂ ಹಳೇ ವಿದ್ಯಾರ್ಥಿ, ಕನ್ನಡ ಭಾರತಿ, ಕುವೆಂಪು ವಿವಿ, ಶಂಕರ ಘಟ್ಟ, ಶಿವಮೊಗ್ಗ

Leave a Reply

Your email address will not be published. Required fields are marked *