
ಬಳ್ಳಾರಿ: ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಇತ್ತೀಚೆಗೆ ನಿಧನರಾದ ಪತ್ರಿಕಾ ಛಾಯಗ್ರಾಹಕ ವೇಣಿ ಲೋಕನಾಥ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಂಘದ ಅಧ್ಯಕ್ಷ ಎನ್ ವೀರಭದ್ರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೋಕನಾಥ ಅವರ ಭಾವಚಿತ್ರಕ್ಕೆ ಪುಷ್ಮ ನಮನ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ವಿಶ್ರಾಂತ ವಾರ್ತಾಧಿಕಾರಿ ಚೋರನೂರು ಟಿ.ಕೊಟ್ರಪ್ಪ, ವಾರ್ತಾ ಸಹಾಯಕ ವಿ.ಸಿ.ಗುರುರಾಜ್, ಹಿರಿಯ ಪತ್ರಕರ್ತರಾದ ಜಿ.ಪ್ರಭಾಕರ್, ಎಂ.ಅಹಿರಾಜ್, ಪತ್ರಕರ್ತರಾದ ಹೆಚ್.ಎಂ.ಮಹೇಂದ್ರಕುಮಾರ್, ಹನುಮೇಶರಾವ್, ಹೆಚ್.ಬಸವರಾಜ್, ಮೊದಲಾದವರು ಮಾತನಾಡಿ ಲೋಕನಾಥ ಅವರೊಂದಿಗಿನ ಒಡನಾಟ, ಅವರ ಪೋಟೋಗ್ರಫಿ, ಸುದ್ದಿಗೆ ಸೂಕ್ತವಾದ ಪೋಟೋ ವನ್ನು ಸಕಾಲಕ್ಕೆ ನೀಡುವಲ್ಲಿ ಅವರ ಕರ್ತವ್ಯ ಪ್ರಜ್ಞೆ, ಅಖಂಡ ಬಳ್ಳಾರಿ ಜಿಲ್ಲೆಯ ಪ್ರಮುಖ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದರು ಎಂದು ಹೇಳಿದರು.

ಮುಖ್ಯ ಮಂತ್ರಿಗಳಾದಿಯಾಗಿ ಯಾರೇ ಗಣ್ಯ ವ್ಯಕ್ತಿಗಳನ್ನು ಉತ್ತಮ ಪೋಟೋಗಾಗಿ ಸರಿಯಾಗಿ ನಿಲ್ಲುವಂತೆ ಕೂಗಿ ಹೇಳುತ್ತಿದ್ದರು. ಅಷ್ಟೇ ಅಲ್ಲ ಅವರು ಪೋಟೋ ಲೈಬ್ರರಿಯಾಗಿದ್ದರು. ಮಾಧ್ಯಮ ಕ್ಷೇತ್ರದವರ ಯಾವುದೇ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ಮನೋಭಾವ ಹೊಂದಿದ್ದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದ ಎನ್.ಗುರುಶಾಂತ, ನಂದೀಶ್, ಜಿ.ಚಂದ್ರಶೇಖರಗೌಡ, ಮಾರೆಪ್ಪ ನಾಯಕ, ವೆಂಕೋಬಿ ಸಂಗನಕಲ್ಲು, ವೆಂಕಟೇಶ ದೇಸಾಯಿ,
ಮಲ್ಲಿಕಾರ್ಜುನ ಚಿಲಕರಾಗಿ, ತಾಳೂರು ಎರ್ರಿಸ್ವಾಮಿ, ಜಂಭುನಾಥ, ಮಲ್ಲಿಕಾರ್ಜುನ, ಗೋವರ್ಧನರೆಡ್ಡಿ, ಖಲಂದರ್, ಗಿರಿಯಾದವ್, ವಾರ್ತಾ ಇಲಾಖೆಯ ಹನುಂಮತಪ್ಪ ಮೊದಲಾದವರು ಇದ್ದರು.
