ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ ಪುರಸ್ಕೃತೆ ತಾಳೂರು ಮುಖ್ಯ ಶಿಕ್ಷಕಿ ಗೀತಾ ಸಾಗರ

ಸಿರುಗುಪ್ಪ, ಫೆ.5:ತಾಲೂಕಿನ ತಾಳೂರು ಗ್ರಾಮದ ಸರಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಗೀತಾ ಸಾಗರ್ ರವರ ಸಮಾಜ ಮುಖಿ ಕಾರ್ಯಗಳನ್ನು ಗುರುತಿಸಿ ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ  ಲಭಿಸಿದೆ.

ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕ ಬೆಂಗಳೂರು ವತಿಯಿಂದ ಬಿಜಾಪುರದ ಕಂದಗಲ್ ಹಣುಮಂತರಾಯ ರಂಗಮಂದಿರದಲ್ಲಿ ಈಚೆಗೆ ನಡೆದ 192 ನೇ ಅಕ್ಷರದ ಅವ್ವ ಸಾವಿತ್ರಿ ಬಾಯಿಪುಲೆ ಜಯಂತಿ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಶಿಕ್ಷಕಿಯಿರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.   ಮಾಜಿ ಸಚಿವ, ಯಮಕನ ಮರಡಿ ಶಾಸಕ ಸತೀಶ್ ಜಾರಕಿಹೊಳಿ, ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ,  ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಶ್ರೀನಾಥ ಪೂಜಾರಿ ಮತ್ತಿತರ ಗಣ್ಯರು ಪ್ರಶಸ್ತಿ ನೀಡಿ ಸನ್ಮಾನಿಸಿದರು ಎಂದು ದಲಿತ ವಿದ್ಯಾರ್ಥಿ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದ  ಅಧ್ಯಕ್ಷ ಲಕ್ಷ್ಮಣ ಭಂಡಾರಿ ತಿಳಿಸಿದರು.    ಈ ಸಂದರ್ಭದಲ್ಲಿ ಉಮಾಪತಿ,  ಉಮೇಶ್, ಹುಲುಗಪ್ಪ, ಚಂದ್ರ, ರಾಜ ಸಂತೋಷ ಕುಮಾರ್ ಇದ್ದರು.                    *****

Leave a Reply

Your email address will not be published. Required fields are marked *