ಅನುದಿನ ಕವನ-೭೭೧, ಕವಿ: ಸಂಗಮೇಶ ಎಸ್.‌ ಗಣಿ, ಹೊಸಪೇಟೆ, ಕವನದ ಶೀರ್ಷಿಕೆ: ಬಾಳಿನರಿವು

ಬಾಳಿನರಿವು

ಹರವಿಕೊಳ್ಳಲೇಬೇಕು
ಸಾರವ ಹೀರಿಕೊಳ್ಳಲುಬೇಕು
ಭಾರವಲ್ಲವಿದು ಬದುಕು

ಸಂಕಟಗಳ ಸಾವರಿಸಬೇಕು
ಸಂಬಂಧಗಳ ಸಲುಹಬೇಕು
ಸಂಶಯಗಳು ಸುಳಿಯದಿರಬೇಕು

ಹರಿದು ತಿನ್ನುವವರಿರಬೇಕು
ಹುರಿದು ಮುಕ್ಕುವವರಿಬೇಕು
ಮುರಿದುದ ಕಟ್ಟಿಕೊಳ್ಳಲೇಬೇಕು

ಹೊಂಚನೆಲ್ಲ ಕೊಂಚ ಸರಿಸಬೇಕು
ಕಿಂಚಿತ್ತು ಸಹಿಸಿ ಸುಮ್ಮನಿರಬೇಕು
ಹಂಚಿ ತಿನ್ನುವ ಮನಸಿರಬೇಕು

ಹಾಳಗೆಡುವುದ ಬಿಡಬೇಕು
ಬಾಳದೋಣಿಯ ನಡೆಸಬೇಕು
ಒಳಗಣರಿವು ಮೂಡುತಿರಬೇಕು


-ಡಾ. ಸಂಗಮೇಶ ಎಸ್.‌ ಗಣಿ, ಹೊಸಪೇಟೆ
*****

Leave a Reply

Your email address will not be published. Required fields are marked *