ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳ್ಳಾರಿ ನೂತನ ಮೇಯರ್ ಡಿ. ತ್ರಿವೇಣಿ

ಬಳ್ಳಾರಿ/ಬೆಂಗಳೂರು, ಏ.7: ಬಳ್ಳಾರಿ ಮಹಾನಗರ ಪಾಲಿಕೆ ನೂತನ ಮೇಯರ್ ಡಿ. ತ್ರಿವೇಣಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಮೇಯರ್ ಆಗಿ ಆಯ್ಕೆಯಾದ ಬಳಿಕ ತಮ್ಮ ಪಕ್ಷದ ಕಾರ್ಪೋರೇಟರ್ ಅವರೊಂದಿಗೆ ಬೆಂಗಳೂರಿಗೆ ತೆರಳಿ ಹಿರಿಯ ಮುಖಂಡರನ್ನು ಭೇಟಿ ಮಾಡಿದರು.
ಸಿದ್ಧರಾಮಯ್ಯ ಅವರು ಮಾತನಾಡಿ, ರಾಜ್ಯದ ಮೊದಲ ಚಿಕ್ಕ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆ ಪಾತ್ರರಾಗುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೆಸರು ತಂದಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದರು.


ಉತ್ತಮ‌ ಭವಿಷ್ಯವಿದ್ದು, ಪಾಲಿಕೆಯಲ್ಲಿ ಉತ್ತಮ ಆಡಳಿತ ನೀಡಿ ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಪೊರೇಟರುಗಳಾದ ಮುಲ್ಲಂಗಿ ನಂದೀಶ್, ಮಂಡ್ಲೂರು ಪ್ರಭಂಜನ್, ಮಂಡ್ಲೂರ್ ವಿವೇಕ್, ರಾಮಾಂಜನೇಯ, ಪಿ. ಗಾದೆಪ್ಪ, 5ನೇ ವಾರ್ಡಿನ ರಾಜು, ಕಾಂಗ್ರೆಸ್ ಮುಖಂಡ ಡಿ. ಸೂರಿ ಉಪಸ್ಥಿತರಿದ್ದರು.
*****

Leave a Reply

Your email address will not be published. Required fields are marked *