Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಬಳ್ಳಾರಿ ರಾಘವ ಪ್ರಶಸ್ತಿಗೆ ಅರ್ಜಿ ಆಹ್ವಾನ - Karnataka Kahale

ಬಳ್ಳಾರಿ ರಾಘವ ಪ್ರಶಸ್ತಿಗೆ ಅರ್ಜಿ ಆಹ್ವಾನ


ಬಳ್ಳಾರಿ, ಜೂ.28: ಬರುವ ಆ. 2ಮತ್ತು3 ರಂದು  ಬಳ್ಳಾರಿ ರಾಘವ ಅವರ 143ನೇ ಜಯಂತಿ ಅಂಗವಾಗಿ ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್ ರಾಜ್ಯ  ಮತ್ತು ಜಿಲ್ಲಾ ಮಟ್ಟದ ರಾಘವ ಪ್ರಶಸ್ತಿಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.                                            ಕಳೆದ 14 ವರ್ಷಗಳಿಂದ ನಿರಂತರವಾಗಿ ಕನ್ನಡ ಮತ್ತು ತೆಲುಗು ರಂಗಭೂಮಿ ಕಲಾವಿದರಿಗೆ ರಾಜ್ಯ  ಮತ್ತು ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಪ್ರಶಸ್ತಿ ನೀಡುತ್ತಾ ಬಂದಿದೆ.      ಈ ವರ್ಷವೂ  ಕನ್ನಡ ಮತ್ತು ತೆಲುಗು ರಂಗಭೂಮಿ ಕಲಾವಿದರಿಗೆ ಒಂದು ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾ ಮಟ್ಟದಲ್ಲಿ ಎರಡು ಪ್ರಶಸ್ತಿಗಳನ್ನು ನೀಡಲಾಗುವುದು. ಈ ಹಿನ್ನಲೆಯಲ್ಲಿ ರಾಜ್ಯ ಹಾಗೂ ಬಳ್ಳಾರಿ ಜಿಲ್ಲಾ ರಂಗಭೂಮಿ ಕಲಾವಿದರು ನಾಟಕದಲ್ಲಿ ನಟನೆ ಕಲಾ ಸೇವೆಯನ್ನು ಪ್ರತಿಬಿಂಬಿಸುವ ದಾಖಲೆಯ(ಬಯೋಡೇಟಾ) ವಿವರವನ್ನು ಜು.  15 ರೊಳಗೆ ಅಧ್ಯಕ್ಷರು/ಕಾರ್ಯದರ್ಶಿ, ರಾಘವ ಕಲಾ ಮಂದಿರ, ಡಾ.  ರಾಜಕುಮಾರ್ ರಸ್ತೆ, ಬಳ್ಳಾರಿ ಈ ವಿಳಾಸಕ್ಕೆ ಕಳುಹಿಸಿಲು ಸಂಸ್ಥೆ ಮನವಿ ಮಾಡಿದೆ.                 ಕಲಾವಿದರ ವಯೋಮಿತಿ 50 ವರ್ಷ ಮೇಲ್ಪಟ್ಟಿರಬೇಕು.ಕಲಾವಿದರು ಕನಿಷ್ಠ 20 ವರ್ಷಗಳ ಕಾಲ ರಂಗಭೂಮಿಯಲ್ಲಿ ಕಲಾ ಸೇವೆಯನ್ನು ಸಲ್ಲಿಸಿರ ಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392230050, ಅಥವಾ  ಎನ್ ಪ್ರಕಾಶ್, ಗೌರವ ಕಾರ್ಯದರ್ಶಿ (9448124243) ಇವರನ್ನು ಸಂಪರ್ಕಿಸ ಬಹುದು.